ಮಣ್ಣು ಮುಟ್ಟಿದರೂ ಚಿನ್ನವಾಗುವ ಕಾಲ; ಅಕ್ಟೋಬರ್‌ನಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಗ್ರಹಗಳ ರಾಶಿ, ನಕ್ಷತ್ರ ಬದಲಾವಣೆ ಸಾಮಾನ್ಯ. ಅಕ್ಟೋಬರ್‌ನಲ್ಲಿ ಗುರು ತನ್ನ ಸ್ಥಾನ ಬದಲಾಯಿಸಲಿದ್ದಾನೆ. ಸದ್ಯಕ್ಕೆ ಗುರು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾನೆ. ಅಕ್ಟೋಬರ್ 8ರ ಸಂಜೆ 7.3ಕ್ಕೆ, ಗುರುವು ಆಶ್ಲೇಷ ನಕ್ಷತ್ರದ ನಾಲ್ಕನೇ ಪಾದ ಪ್ರವೇಶಿಸುವನು. ಅಕ್ಟೋಬರ್ 31 ರವರೆಗೆ ಇಲ್ಲೇ ಗುರವಿನ ಸಂಚಾರ. ಅಕ್ಟೋಬರ್ 31ಕ್ಕೆ ಆಶ್ಲೇಷ ನಕ್ಷತ್ರವನ್ನು ಬಿಟ್ಟು ಮಘ ನಕ್ಷತ್ರದ ಮೊದಲ ಪಾದಕ್ಕೆ ಗುರವಿನ ಪ್ರವೇಶವಾಗುತ್ತದೆ. ಗುರುವಿನ ನಕ್ಷತ್ರ ಸ್ಥಾನದ ಈ ಬದಲಾವಣೆಗೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ.

ಗುರು ಆಶ್ಲೇಷ ನಕ್ಷತ್ರದ ನಾಲ್ಕನೇ ಪಾದದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಅಕ್ಟೋಬರ್ 31ರ ಮಧ್ಯಾಹ್ನ 12.50ಕ್ಕೆ ಮಾಘ ನಕ್ಷತ್ರದ ಮೊದಲ ಪಾದಕ್ಕೆ ಪ್ರವೇಶ ವಾಗುತ್ತದೆ. ಅಂದರೆ ಅಕ್ಟೋಬರ್ 8 ರಿಂದ ಅಕ್ಟೋಬರ್ 31 ರವರೆಗೆ ಗುರುವು ನಾಲ್ಕನೇ ಪಾದದಲ್ಲಿಯೇ ಇರುತ್ತಾನೆ.

Jupiter Star Transit 2026 Guru Enters Fourth Face Of Ashlesha Nakshathra Will Bring Luck And Success

ಮೇಷ ರಾಶಿ (Aries)

ಗುರುವಿನ ನಕ್ಷತ್ರ ಪಾದದ ಬದಲಾವಣೆ ವೃತ್ತಿ, ಕೆಲಸದ ದೃಷ್ಟಿಯಿಂದ ನೋಡುವುದಾದರೆ ಮಹತ್ವದ್ದು. ದೀರ್ಘಕಾಲದಿಂದ ಪಡುತ್ತಿರುವ ಶ್ರಮಕ್ಕೆ ಅರ್ಥ ಸಿಗುವುದು. ಜೀವನದ ದಿಕ್ಕು ಬದಲಾಗುವ ಕಾಲ ಇದು. ಹೊಸ ಜವಾಬ್ದಾರಿ ಸಿಗಬಹುದು. ಮಾಡುವ ಕೆಲಸಕ್ಕೆ ಹಿರಿಯರ ಬೆಂಬಲ, ಆಶೀರ್ವಾದ ಸಿಗುವುದು. ಕೆಲಸ ಬದಲಾಯಿಸುವ ಯೋಚನೆ ಇದ್ದರೆ ಈ ಸಮಯದಲ್ಲಿ ಮುಂದುವರಿಯಬಹುದು. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆಯೂ ಇದೆ. ಉದ್ಯಮಿಗಳು ಹೊಸ ಯೋಜನೆ ಕೈಗೆತ್ತಿಕೊಳ್ಳಬಹುದು. ಅಥವಾ ಹಳೆಯ ಯೋಜನೆಯನ್ನು ಹೊಸ ರೀತಿಯಲ್ಲಿ ಪುನರಾರಂಭಿಸುವ ಅವಕಾಶವೂ ಸಿಗಬಹುದು. ಹಣದ ಸಮಸ್ಯೆ ಪರಿಹಾರವಾಗುವುದು. ಪರಿಸ್ಥಿತಿ ಕ್ರಮೇಣ ಸುಧಾರಿಸುವುದು.

ಮಿಥುನ ರಾಶಿ (Gemini)

ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುವುದು.ಗುರಿವಿನ ಸಂಚಾರ ಬದಲಾವಣೆ ನಿಮ್ಮ ಜಾತಕದ ಎರಡನೇ ಮನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಪ್ರಭಾವ ಬೀರುತ್ತಾನೆ. ಇದು ಹಣ, ಉಳಿತಾಯ, ಕುಟುಂಬ ಮತ್ತು ಮಾತಿಗೆ ಸಂಬಂಧಿಸಿದ್ದು. ಕೆಲಸಕ್ಕೆ ಹೋಗುತ್ತಿರುವವ ಸಂಬಳ ಹೆಚ್ಚಾಗುವುದು. ಹೊಸ ಜವಾಬ್ದಾರಿ ಸಿಗುವುದು. ಆದಾಯ ಹೆಚ್ಚಾಗುವುದು.ಆದಾಯದ ಹೊಸ ಮೂಲ ತೆರೆದುಕೊಳ್ಳುವುದು. ಮಾತುಕತೆ ಮತ್ತು ಮನವೊಲಿಸುವ ಕೌಶಲ್ಯ ವ್ಯವಹಾರದಲ್ಲಿ ಪ್ರಯೋಜನಕ್ಕೆ ಬರುವುದು. ಕುಟುಂಬದಲ್ಲಿ ಹಣದ ವಿಚಾರವಾಗಿ ಉಂಟಾಗಿರುವ ಕಿರಿ ಕಿರಿ ಕಡಿಮೆಯಾಗುವುದು. ಹಳೆಯ ಸಂಪರ್ಕಗಳು, ಸಂಬಂಧಗಳು ಪ್ರಯೋಜನಕ್ಕೆ ಬರುವುದು.

ಕರ್ಕಾಟಕ ರಾಶಿ (Cancer)

ಗುರು ಈಗ ಕರ್ಕಾಟಕ ರಾಶಿಯಲ್ಲಿಯೇ ಸಂಚಾರ ಮಾಡ್ತಾ ಇರುವ ಕಾರಣ ಸದ್ಯದ ಸ್ಥಿತಿ ನಿಮಗೆ ಬಹಳ ವಿಶೇಷವಾಗಿರುವುದು.ಆಶ್ಲೇಷ ನಕ್ಷತ್ರದ ನಾಲ್ಕನೇ ಪಾದಕ್ಕೆ ಪ್ರವೇಶಿಸುವ ಮೂಲಕ ಗುರುವಿನ ಸ್ಥಾನವು ಹೆಚ್ಚು ಪರಿಣಾಮಕಾರಿಯಾಗಿರುವುದು. ಈ ಸಮಯ ಆತ್ಮವಿಶ್ವಾಸ ಹೆಚ್ಚಾಗುವುದು. ಮನೆಯಿರಲಿ, ಕಚೇರಿಯಲ್ಲಾಗಲಿ ನಿಮ್ಮ ಮಾತಿಗೆ ಪ್ರಾಮುಖ್ಯ ಸಿಗುವುದು. ಬಹಳ ಸಮಸಯದಿಂದ ನಿರೀಕ್ಷಿಸುತ್ತಿದ್ದ ಯಶಸ್ಸು ಈ ಅವಧಿಯಲ್ಲಿ ಸಿಗುವುದು. ಜವಾಬ್ದಾರಿಗಳು ಹೆಚ್ಚಾಗಬಹುದು. ಹೊಸಬರ ಪರಿಚಯದಿಂದಲೂ ಲಾಭವಾಗುವುದು. ವೈಯಕ್ತಿಕ ಬದುಕಿನಲ್ಲಿ ಎದುರಾಗಿರುವ ಸಮಸ್ಯೆ ಮಾತುಕತೆ ಮೂಲಕ ಪರಿಹಾರವಾಗುವುದು.

ಕನ್ಯಾ ರಾಶಿ (Virgo)

ಗುರುವಿನ ನಕ್ಷತ್ರ ಸಂಚಾರ ಬದಲಾವಣೆ ಲಾಭ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಣಾಮ ಬೀರಬಹುದು. ಹೊಸ ಜನರ ಪರಿಚಯ ಉತ್ತಮ ಭವಿಷ್ಯ ರೂಪಿಸುವುದಕ್ಕೆ ಕಾರಣವಾಗುವುದು. ಬಡ್ತಿ ಸಿಗುವ ಮೂಲಕ ಆದಾಯ ಹೆಚ್ಚಾಗುವುದು. ಹೊಸ ಜವಾಬ್ದಾರಿ ಸಿಗುವುದು. ಮಾಧ್ಯಮ, ಶಿಕ್ಷಣ, ಹಣಕಾಸು ಮತ್ತು ಡಿಜಿಟಲ್ ವಲಯದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶ ಸಿಗುವುದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಸಮಯ ಅನುಕೂಲಕರವಾಗಿರುವುದು.

ತುಲಾ ರಾಶಿ (Libra)

ಗುರುವಿನ ಸಂಚಾರ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಮಹತ್ವದ್ದಾಗಿರಬಹುದು. ಭವಿಷ್ಯದಲ್ಲಿ ಅನುಕೂಲವಾಗುವಂತೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಯ ಬೆಂಬಲ ಇರುವುದು. ಹೊಸ ಕೆಲಸಕ್ಕೆ ಕೈ ಹಾಕಲು ಸರಿಯಾದ ಸಮಯ. ಬಹಳ ಸಮಯದಿಂದ ಕಠಿಣ ಪರಿಶ್ರಮದ ಫಲಕ್ಕಾಗಿ ಕಾಯುತ್ತಿರುವವರಿಗೆ ಈಗ ಆ ಸುದ್ದಿ ಸಿಗುವುದು. ಆದರೂ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸುವುದು ಬಹಳ ಮುಖ್ಯ.

Jupiter Star: ಮೀನ ರಾಶಿ (Pisces)

ಗುರುವು ಮೀನ ರಾಶಿಯ ಅಧಿಪತಿ. ಹಾಗಾಗಿ ನಿಮಗೆ ಈ ಸಂಚಾರ ಬದಲಾವಣೆ ಮಹತ್ವದ್ದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಂದುವರಿಯುವ ಅವಕಾಶ ಸಿಗುವುದು. ಮಕ್ಕಳು ಸಹಿ ಸುದ್ದಿ ನೀಡುವರು. ಮಕ್ಕಳ ಸಾಧನೆ ಖುಷಿ ತರುವುದು. ಹೊಸ ಆಲೋಚನೆಯ ಜೊತೆ ಮುಂದುವರಿದರೆ ಗೆಲುವು ಸಿಗುವುದು.

Jupiter Star: ಅಕ್ಟೋಬರ್ 31ಕ್ಕೆ ಮತ್ತೆ ಗುರುವಿನ ಚಲನೆಯಲ್ಲಿ ಬದಲಾವಣೆ

ಆಶ್ಲೇಷ ನಕ್ಷತ್ರದ ನಾಲ್ಕನೇ ಚರಣದಲ್ಲಿ ಗುರುವಿನ ಸಂಚಾರ ಅಕ್ಟೋಬರ್ 8 ರಿಂದ ಅಕ್ಟೋಬರ್ 31, 2026 ರವರೆಗೆ ಇರುತ್ತದೆ. ನಂತರ ಗುರು ಮಾಘ ನಕ್ಷತ್ರದ ಮೊದಲ ಚರಣಕ್ಕೆ ಕಾಲಿಡುತ್ತಾನೆ. ಅದೇ ದಿನ ಗುರುವಿನ ರಾಶಿ ಬದಲಾವಣೆಯೂ ಆಗುವುದು. ಅಕ್ಟೋಬರ್ ಕೊನೆಯ ವಾರ ಗುರುವಿನ ಚಲನೆಗೆ ನಿರ್ಣಾಯಕ. ಒಂದೆಡೆ, ನಕ್ಷತ್ರದ ಚರಣ ಬದಲಾವಣೆ ಮತ್ದು ಕಡೆ ರಾಶಿ ಬದಲಾವಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+