ಮಕರ ರಾಶಿಗೆ ತಿರುಗಿ ಬಿದ್ದ ಗುರು! ಧನಸ್ಸಿಗೆ ಹೆಂಗೆ ಗುರೂ?
ಈಗಾಗಲೇ ಶನಿಬಲದ ಜೊತೆಗೆ ಗುರುಬಲವೂ ಇದ್ದುದ್ದರಿಂದ ಸ್ವಲ್ಪ ಬೀಗುತ್ತಿದ್ದ ಮಕರ ರಾಶಿಯವರಿನ್ನು ಎಚ್ಚರ ವಹಿಸಿಕೊಳ್ಳಬೇಕು. ಏಕೆಂದರೆ ಇಷ್ಟು ದಿನ ಅಂದರೆ ಕಳೆದ ಒಂದು ವರ್ಷದಿಂದ ಗೋಚಾರದಿಂದ ಏಳರಲ್ಲಿದ್ದು ಸಾಕಷ್ಟು ಪ್ರಮಾಣದಲ್ಲಿ ಶುಭಾಶುಭಗಳನ್ನು ಕೊಟ್ಟಿದ್ದಾನೆ ಗುರು. ಇಲ್ಲವೆಂದವರೂ ಆಗಿರುವ ತೊಂದರೆಗಳನ್ನು ತಿಳಿಸಬಹುದು. ಇನ್ನು ಧನಸ್ಸು ರಾಶಿಯವರು ಗುರುಬಲದಿಂದ ಜೀವನದಲ್ಲಿ ಸಂತೋಷದ ಸೆಲೆ ಕಾಣುತ್ತಾರೆ.
ಧನಸ್ಸು : ಕಳೆದ ವರ್ಷದಿಂದ ಗುರುಬಲವಿಲ್ಲದೇ ಜೀವನವನ್ನೇ ಗೊಂದಲವಾಗಿಸಿಕೊಂಡಿದ್ದ ಇವರಿಗೆ ಎಲ್ಲದಕ್ಕೂ ಕಾಲ ಕೂಡಿ ಬಂದಿದೆ ಎಂಬುದನ್ನು ಅರಿತುಕೊಳ್ಳುವ ಸಮಯ. ಏಕೆಂದರೆ ಈ ಹಿಂದೆ ಗೋಚಾರದಿಂದ ಅಷ್ಟಮನಾಗಿದ್ದ ಗುರುವು ಸಾಕಷ್ಟು ಅನಾನುಕೂಲತೆಗಳನ್ನು ನೀಡಿದ್ದಾನೆ. ಇದೂ ಸಾಲದೆಂಬಂತೆ ಸಾಡೇಸಾತಿ ಶನಿಕಾಟ ಬೇರೆ ಶುರುವಾಗಿದೆ. ಹೀಗಾಗಿ ಬೇಸರದ ದಿನಗಳನ್ನು ಕಳೆದಿದ್ದ ಇವರು ಇನ್ಮುಂದೆ ಗುರುಬಲದಲ್ಲಿ ಅಂದುಕೊಂಡ ಯೋಜನೆಗಳನ್ನು ಪೂರೈಸಿಕೊಳ್ಳಬಹುದು.
ಈಗಾಗಲೇ ನವಮ ಸ್ಥಾನದಲ್ಲಿದ್ದು ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿದ್ದ ಗುರು ಈಗ ಧನಸ್ಸು ರಾಶಿಯವರಿಗೆ 9ನೇ ಸ್ಥಾನಕ್ಕೆ ಬಂದು ಶುಭಫಲ ನೀಡಲಿದ್ದಾನೆ. [ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]

ಗುರುವಿನ ಈ ಗೋಚಾರದಿಂದ ಕೆಲಸದಲ್ಲಿದ್ದವರಿಗೆ ಉತ್ತಮ ಸಮಯವಾದರೆ, ಕೆಲಸ ಹುಡುಕುವವರಿಗೆ ಹೊಸ ಇಚ್ಛಿತ ಕೆಲಸ ಸಿಕ್ಕು ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳುವ ಯೋಗ ಆರಂಭವಾಗುತ್ತದೆ. ಕುಟುಂಬದವರೂ ಕೂಡ ಸಾಕಷ್ಟು ರೀತಿಯಲ್ಲಿ ಸಹಾಯ, ಸಹಕಾರ ನೀಡುತ್ತ ಬೆಂಬಲಕ್ಕೆ ನಿಲ್ಲುತ್ತಾರೆ. ಕಂಕಣಾಕಾಂಕ್ಷಿಗಳು ಹಸೆಮಣೆ ಏರುವ ಶುಭಯೋಗ ಹೊಂದುವರು. ಅದೃಷ್ಟವೆಂದರೆ ಇದೇ ಎನ್ನುವ ಅನುಭವ ಕೂಡ ಇವರಿಗಾಗುತ್ತದೆ. ಜೊತೆಗೆ ವಂಶವೃಕ್ಷಕ್ಕಾಗಿ ಪರಿತಪಿಸುತ್ತಿರುವವರಿಗೆ ಶುಭಕರ ಸುದ್ದಿ ಸಂತಸ ತರುತ್ತದೆ. ಹಣಕಾಸಿನ ವಿಷಯದಲ್ಲಂತೂ ಮತ್ತೊಬ್ಬರೂ ಕೂಡ ಕೈಚಾಚಿ ನಿಲ್ಲುವ ಪರಿಸ್ಥಿತಿ ನೋಡುವುದರಿಂದ ಮನಸ್ಸಿಗೆ ಖುಷಿ ತರುತ್ತದೆ.
ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದರೆ, ಅವು ಯಶಸ್ಸಾಗುವುದು ನಿಶ್ಚಿತವೇ. ಸ್ವಂತಕ್ಕೆಂದು ಏನಾದರೂ ಮಾಡಿಕೊಳ್ಳಬೇಕು ಎಂದು ಬಹಳಷ್ಟು ದಿನಗಳಿಂದ ಹಾತೊರೆಯುತ್ತಿರುವವರಿಗೆ ಈಗ ಶುಭ ಸಮಯ. ರಾಜಕೀಯವಾಗಿ ಮತ್ತು ಇತರ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ಸುಯೋಗದ ದಿನಗಳ ಆರಂಭ. ಇವರ ಏಳ್ಗೆಯನ್ನು ನೋಡಿದ ಕುಟುಂಬಸ್ಥರು ತುಂಬಾ ಸಂತಸ ವ್ಯಕ್ತಪಡಿಸಿ ಹುರಿದುಂಬಿಸುತ್ತಾರೆ.
ಆದರೆ, ಗುರುಬಲವಿದ್ದರೂ ಶನಿಬಲವಿಲ್ಲ. ಸಾಡೇಸಾತಿಯ ಶನಿಕಾಟ ಕೆಲವೊಮ್ಮೆ ಗುರುವಿನಿಂದಾದ ಅನುಕೂಲಗಳನ್ನು ತಪ್ಪಿಸಲಾರಂಭಿಸುತ್ತದೆ. ಆದ್ದರಿಂದ ಕೂಡಲೇ ಗುರುಬಲದ ಪ್ರಮಾಣವೆಷ್ಟು ಎಂಬುದನ್ನು ಜಾತಕದಿಂದ ತಿಳಿದುಕೊಂಡು ಮುನ್ನಡಿ ಇಡುವುದು ಧನಸ್ಸು ರಾಶಿಯವರಿಗೆ ಕಿವಿಮಾತು. [ಧನಸ್ಸು ರಾಶಿ ವರ್ಷ ಭವಿಷ್ಯ 2015]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications