ಗುರು ಪೆಡಂಭೂತವಲ್ಲ, ಮಹಾ ಅದೃಷ್ಟದ ಸಂಕೇತ: ಈ 3 ರಾಶಿಯವರಿಗೆ ಒಲಿಯಲಿದೆ ಲಕ್

ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಗ್ರಹ, ಜ್ಞಾನ, ಸಂಪತ್ತು ಮತ್ತು ಸಂತಾನಕಾರಕ ಎಂದು ಕರೆಯಲ್ಪಡುವ ಗುರು ಭಗವಂತನು (ಬೃಹಸ್ಪತಿ) ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಾಲಿನ ಅತ್ಯಂತ ಪ್ರಮುಖ ಖಗೋಳ ಹಾಗೂ ಜ್ಯೋತಿಷ್ಯ ವಿದ್ಯಮಾನವಾದ 'ಗುರು ಸಂಚಾರ 2026' ಇದೇ ಜೂನ್ 2ರಂದು ಸಂಭವಿಸಲಿದೆ. ದೃಕ್ ಪಂಚಾಂಗದ (ತೃಕ್ಕಣಿಧ ಪಂಚಾಂಗ) ಪ್ರಕಾರ, ಆ ದಿನ ಗುರು ಗ್ರಹವು ಮೀನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸಲಿದೆ. ಕಟಕ ರಾಶಿಯು ಚಂದ್ರನ ಆಡಳಿತಕ್ಕೆ ಒಳಪಟ್ಟ ಮನೆಯಾಗಿದೆ.

ಜ್ಯೋತಿಷ್ಯದ ನಿಯಮಗಳ ಪ್ರಕಾರ, ಚಂದ್ರನ ಮನೆಯಲ್ಲಿ ಗುರುವು 'ಉಚ್ಚ ಸ್ಥಾನ' ಅಂದರೆ ತನ್ನ ಅತ್ಯಂತ ಶಕ್ತಿಶಾಲಿ ಮತ್ತು ಬಲಿಷ್ಠವಾದ ಸ್ಥಿತಿಯನ್ನು ತಲುಪುತ್ತಾನೆ. ಹೀಗೆ ಅತ್ಯಂತ ಬಲಿಷ್ಠನಾಗುವ ಗುರುವು ಇಡೀ ರಾಶಿ ಚಕ್ರದ ಮೇಲೆ ಪ್ರಭಾವ ಬೀರಲಿದ್ದರೂ, ಮುಖ್ಯವಾಗಿ ವೃಶ್ಚಿಕ, ಮಕರ ಮತ್ತು ಮೀನ ರಾಶಿಯವರಿಗೆ ರಾಜಯೋಗವನ್ನು ತಂದುಕೊಡಲಿದ್ದಾನೆ. ಜ್ಯೋತಿಷ್ಯದಲ್ಲಿ "ಗುರು ನೋಡಿದರೆ ಕೋಟಿ ಪುಣ್ಯ" ಎಂಬ ನಾಣ್ಣುಡಿಯಿದೆ. ಗುರು ತಾನಿರುವ ಜಾಗಕ್ಕಿಂತಲೂ ತಾನು ನೋಡುವ ಜಾಗಕ್ಕೆ ಅತಿ ಹೆಚ್ಚು ಶುಭ ಫಲಗಳನ್ನು ನೀಡುತ್ತಾನೆ. ಈ ಸಂಚಾರದಲ್ಲಿ ಗುರುವು ತನ್ನ 5, 7 ಮತ್ತು 9ನೇ ವಿಶೇಷ ದೃಷ್ಟಿಗಳಿಂದ ಈ ಮೂರು ರಾಶಿಗಳನ್ನು ನೋಡಲಿದ್ದಾನೆ. ಇದರ ಸಂಪೂರ್ಣ ವಿವರವಾದ ವರದಿ ಇಲ್ಲಿದೆ.

Guru Transit 2026

ವೃಶ್ಚಿಕ ರಾಶಿಯವರಿಗೆ ಕಷ್ಟಗಳೆಲ್ಲ ಮುಗಿದು ಯಶಸ್ಸಿನ ಸುವರ್ಣ ಯುಗ ಆರಂಭ

ವೃಶ್ಚಿಕ ರಾಶಿಯವರಿಗೆ ಗುರು ಭಗವಂತನು ತನ್ನ 5ನೇ ಪವಿತ್ರ ದೃಷ್ಟಿಯಿಂದ ವೀಕ್ಷಿಸಲಿದ್ದಾನೆ. ದೀರ್ಘಕಾಲದ ನಂತರ ವೃಶ್ಚಿಕ ರಾಶಿಯವರಿಗೆ ಅತ್ಯಂತ ಸಕಾರಾತ್ಮಕ ಮತ್ತು ದೊಡ್ಡ ಬದಲಾವಣೆಗಳನ್ನು ತರಲು ಈ ಸಂಚಾರ ಸಜ್ಜಾಗಿದೆ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ, ಪ್ರಶಂಸೆ ಮತ್ತು ಬಡ್ತಿ ಸಿಗಲಿದೆ. ವ್ಯಾಪಾರಸ್ಥರಿಗೆ ಹಳೆಯ ನಷ್ಟಗಳು ವಾಪಸ್ ಬಂದು ಲಾಭದ ಹಳಿ ಏರಲಿದ್ದಾರೆ. ತುಂಬಾ ದಿನಗಳಿಂದ ಕೈಗೆ ಬಾರದೆ ಸಿಲುಕಿಕೊಂಡಿದ್ದ ಹಣ ನಿಮ್ಮದಾಗಲಿದೆ.

ಪಿತ್ರಾರ್ಜಿತ ಆಸ್ತಿ ಅಥವಾ ಜಮೀನು ವಿವಾದಗಳು ಕೋರ್ಟ್ ಮೆಟ್ಟಿಲೇರಿದ್ದರೆ, ಅವು ಸೌಹಾರ್ದಯುತವಾಗಿ ಬಗೆಹರಿಯಲಿವೆ. ಕುಟುಂಬದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಧೈರ್ಯ ದುಪ್ಪಟ್ಟಾಗಲಿದೆ. ಈ ಸಮಯದಲ್ಲಿ ನಿಮ್ಮ ತಂದೆ-ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಿ. ದೂರದ ಪ್ರಯಾಣ ಬೆಳೆಸುವಾಗ ಹೊಸಬರನ್ನು ಅಥವಾ ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಅನಗತ್ಯ ವಾದ-ವಿವಾದಗಳಿಂದ ದೂರವಿರಿ.

ನಂಬಿದವರಿಂದ ಮೋಸವಾಗುವುದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ ದ್ವಾದಶ ರಾಶಿಗಳ ನಿತ್ಯ ಭವಿಷ್ಯ
ನಂಬಿದವರಿಂದ ಮೋಸವಾಗುವುದು, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮಕರ ರಾಶಿಯವರಿಗೆ ಅಡೆತಡೆಗಳು ನಿವಾರಣೆ

ಮಕರ ರಾಶಿಯವರಿಗೆ ಗುರುವು 7ನೇ ಮನೆಯಲ್ಲಿ (ಸಮಸಪ್ತಕ ದೃಷ್ಟಿ) ಕುಳಿತು ನೇರವಾಗಿ ನಿಮ್ಮ ರಾಶಿಯನ್ನು ನೋಡಲಿದ್ದಾನೆ. ಜೀವನದಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ಹಿನ್ನಡೆಗಳಿಗೆ ಇದು ಪೂರ್ಣವಿರಾಮ ಇಡಲಿದೆ. ಆದರೆ, ಪ್ರಸ್ತುತ ರಾಹು-ಕೇತುಗಳ ಸ್ಥಾನವೂ ಪ್ರಭಾವ ಬೀರುವುದರಿಂದ ಮಿಶ್ರ ಫಲಗಳಿದ್ದರೂ ಯಶಸ್ಸು ನಿಮ್ಮದೇ ಆಗಿರುತ್ತದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಸಂಸ್ಥೆಗಳಿಂದ ಆಫರ್ ಸಿಗಲಿದೆ. ಸ್ವಂತ ಉದ್ಯೋಗ ಅಥವಾ ಬಿಸಿನೆಸ್ ಮಾಡುವವರಿಗೆ ಹೊಸ ಒಪ್ಪಂದಗಳು ಸಿಕ್ಕಿ ಆರ್ಥಿಕವಾಗಿ ಸದೃಢರಾಗಲಿದ್ದೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

ಪತಿ-ಪತ್ನಿ ನಡುವೆ ಇದ್ದ ಸಣ್ಣಪುಟ್ಟ ಕಹಿ ನೆನಪುಗಳು ಮರೆತುಹೋಗಿ, ಪ್ರೀತಿ ಮತ್ತು ಬಾಂಧವ್ಯ ಗಟ್ಟಿಯಾಗಲಿದೆ. ಅವಿವಾಹಿತರಿಗೆ ಯೋಗ್ಯ ಜೋಡಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ವಿಶೇಷವಾಗಿ ನರಗಳ ದೌರ್ಬಲ್ಯ ಅಥವಾ ರಕ್ತದೊತ್ತಡ ಸಮಸ್ಯೆ ಇರುವವರು ಎಚ್ಚರದಿಂದ ಇರಬೇಕು. ವಾಹನ ಚಲಾಯಿಸುವಾಗ ವೇಗಕ್ಕೆ ಬ್ರೇಕ್ ಹಾಕಿ. ಕುಟುಂಬದ ಆಂತರಿಕ ನಿರ್ಧಾರಗಳಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ.

ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್

ಮೀನ ರಾಶಿಯ ಅಧಿಪತಿಯೇ ಗುರು ಭಗವಂತ. ಈಗ ನಿಮ್ಮ ರಾಶ್ಯಾಧಿಪತಿಯೇ ಅತ್ಯಂತ ಬಲಿಷ್ಠವಾದ ಉಚ್ಚ ಸ್ಥಾನಕ್ಕೆ ಹೋಗಿ, ಅಲ್ಲಿಂದ ತನ್ನ 9ನೇ ಅಮೃತ ದೃಷ್ಟಿಯಿಂದ ನಿಮ್ಮ ರಾಶಿಯನ್ನೇ ನೋಡಲಿದ್ದಾನೆ. ಹಾಗಾಗಿ, ಈ ಮೂರು ರಾಶಿಗಳಲ್ಲಿ ಮೀನ ರಾಶಿಯವರಿಗೆ ಇದು ಅತ್ಯಂತ "ಸುವರ್ಣ ಕಾಲ" ಎನ್ನಬಹುದು. ಅದೃಷ್ಟ ನಿಮ್ಮ ಹೆಜ್ಜ ಹೆಜ್ಜೆಗೂ ಸಾಥ್ ನೀಡಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ಸಡಗರದಿಂದ ನೆರವೇರಲಿವೆ. ಬಹುದಿನಗಳಿಂದ ಸಂತಾನ ಭಾಗ್ಯಕ್ಕಾಗಿ ಕಾಯುತ್ತಿದ್ದ ದಂಪತಿಗಳಿಗೆ ಮನೆಗೆ ಮಗುವಿನ ಆಗಮನವಾಗುವ ಶುಭ ವಾರ್ತೆ ಸಿಗಲಿದೆ.

ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸ ಕೈಗೊಳ್ಳಲು ಬಯಸುವವರಿಗೆ ಅಥವಾ ವಿದೇಶಿ ಕಂಪನಿಗಳೊಂದಿಗೆ ವ್ಯವಹಾರ ನಡೆಸುವವರಿಗೆ ಭಾರಿ ಧನಲಾಭ ಕಾದಿದೆ. ಹೊರಗಿನ ಊಟದ ವಿಷಯದಲ್ಲಿ ಜಾಗರೂಕರಾಗಿರಿ, ಹೊಟ್ಟೆಗೆ ಸಂಬಂಧಿಸಿದ ಇನ್ಫೆಕ್ಷನ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಡಬಹುದು. ಹಣಕಾಸಿನ ವ್ಯವಹಾರದಲ್ಲಿ ಹೊಸ ವ್ಯಕ್ತಿಗಳನ್ನು ನಂಬುವಾಗ ಪರೀಕ್ಷಿಸಿ ನಿರ್ಧಾರ ತಗೊಳ್ಳಿ. ನಿಮ್ಮ ಮಕ್ಕಳ ಸ್ನೇಹಬಳಗ ಮತ್ತು ಅವರ ದಿನನಿತ್ಯದ ಹವ್ಯಾಸಗಳ ಮೇಲೆ ನಿಗಾ ಇಡುವುದು ಒಳ್ಳೆಯದು.

ಈ ಗುರು ಸಂಚಾರದ ಸಂಪೂರ್ಣ ಶುಭ ಫಲಗಳನ್ನು ಪಡೆಯಲು ಮತ್ತು ದೋಷಗಳನ್ನು ನಿವಾರಿಸಿಕೊಳ್ಳಲು, ಗುರುವಾರಗಳಂದು ದಕ್ಷಿಣಾಮೂರ್ತಿ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ, ಕಡಲೆಕಾಳಿನ ಮಾಲೆಯನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠ ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+