ಜೀವನದ ಲೆಕ್ಕ ತಪ್ಪದ ಮಿಥುನ ರಾಶಿಯವರ ಬಗ್ಗೆ ನಿಮಗೆಷ್ಟು ಗೊತ್ತು?

Posted By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

'ಬುಧ' ಗ್ರಹವನ್ನು ಅಧಿಪತಿಯಾಗಿ ಪಡೆಯುವ ಮಿಥುನ ರಾಶಿಯವರು ಅತ್ಯಂತ ಚಾಣಾಕ್ಷ ಬುದ್ದಿ ಹಾಗೂ ಉತ್ತಮ ಮಾತುಗಾರರಾಗಿರುತ್ತಾರೆ. ನಿತ್ಯ ತಮ್ಮ ಜೀವನದಲ್ಲಿ ಎದುರಾಗುವ ಎಲ್ಲ ತೊಂದರೆಗಳನ್ನು ಅತ್ಯಂತ ಬುದ್ಧಿವಂತಿಕೆಯಿಂದ ಎದುರಿಸಿ ಜಯಶೀಲರಾಗುತ್ತಾರೆ. ಇವರ ಮಾತುಗಳು ಅತ್ಯಂತ ಹಾಸ್ಯಭರಿತವಾಗಿರುತ್ತದೆ. ಮಾತಿನಲ್ಲಿ ಮೋಡಿ ಮಾಡುವುದರಲ್ಲಿ ಮಿಥುನ ರಾಶಿಯವರದು ಎತ್ತಿದ ಕೈ ಎಂದೇ ಹೇಳಬೇಕು.

ಧನು ರಾಶಿ ಮಕ್ಕಳೆಂದರೆ ನಡೆದಾಡುವ ಕ್ವೆಶ್ಚನ್ ಮಾರ್ಕ್

ಆಚರಣೆಯಲ್ಲಿ ಇರಲಿ ಇಲ್ಲದಿರಲಿ ಮಾತುಗಳಲ್ಲಿ ಹಾಗೂ ತೋರಿಕೆಯಲ್ಲಿ ಮಾತ್ರ ತಾವು ಅತ್ಯಂತ ಶುದ್ಧರು ಹಾಗೂ ಪವಿತ್ರದಂತೆ ಗೋಚರಿಸುತ್ತಾರೆ. ಆದರೆ ಇದರ ಆರ್ಥ ಅವರು ದುಷ್ಟರು- ದುರುಳರು ಎಂದಲ್ಲ. ಆದರೆ ಆಚರಣೆಗಿಂತಲೂ ಆಶ್ವಾಸನೆ ಹೆಚ್ಚು ಇರುತ್ತದೆಂದು ತಿಳಿಯಬಹುದು.

ಇವರಲ್ಲಿ ಮೆಚ್ಚ ಬೇಕಾದ ಅಂಶ ಎಂದರೆ ಇವರು ಯಾರನ್ನೂ ಶತ್ರುಗಳನ್ನಾಗಿಸಿಕೊಳ್ಳಲು ಇಚ್ಚಿಸುವುದಿಲ್ಲ! ಹಾಗೂ ಶತ್ರುಗಳಾಗಿಬಿಟ್ಟರೆ ಅವರ ಕಣ್ಣಿಗೆ ಬೀಳಲು ಇಚ್ಚಿಸುವುದಿಲ್ಲ. ನಾನು ಎಲ್ಲೇ ಇರಲಿ ಅತ್ಯಂತ ಸುಖವಾಗಿ ಸೌಖ್ಯವಾಗಿ ಇರಬೇಕೆಂದು ಪ್ರಯತ್ನಿಸುವವರು. ಮಿಥುನ ರಾಶಿ ಮೂಲತಃ ದ್ವಿಸ್ವಭಾವ ರಾಶಿ ಆಗಿರುವುದರಿಂದಾಗಿ ಇವರು ತಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದ ನಿರ್ಧಾರಗಳಿಂದ ಪ್ರಾರಂಭಿಸಿ, ಅತ್ಯಂತ ಚಿಕ್ಕ ಪುಟ್ಟ ದಿನ ನಿತ್ಯದ ವ್ಯವಹಾರಗಳ ತನಕ ಆಯ್ಕೆ ಮಾಡುವುದರಲ್ಲಿ ಬಹಳ ಗೊಂದಲದಲ್ಲಿ ಇರುತ್ತಾರೆ.

ಸಿಂಹಿಣಿಯ ಬೆನ್ನು ತಾಗಿಸಿ ಉತ್ತೇಜನ ನೀಡಿದರೆ ಸುಖದ ಹಾದಿ

ರಾಶ್ಯಾಧಿಪತಿ ಬುಧನ ಪ್ರಭಾವದಿಂದಾಗಿ ಸ್ವಲ್ಪ ವ್ಯಾಪಾರಿ ಬುದ್ಧಿ ಅಂದರೆ ಸ್ವಂತ ಲಾಭದ ಬಗ್ಗೆ ಚಿಂತಿಸುವ ಬುದ್ಧಿ ಹೊಂದಿರುತ್ತಾರೆ. ಯಾವುದೇ ವ್ಯಾಪಾರ ಇರಲಿ, ಅದರ ಲಾಭದ ಲೆಕ್ಕಾಚಾರ ಹಾಕಿಬಿಡುತ್ತಾರೆ ಹಾಗೂ ಲಾಭದ ಪ್ರಮಾಣ ಇಷ್ಟೇ ಇದೆಯೆಂದು ತಿಳಿದಿಕೊಂಡುಬಿಡುತ್ತಾರೆ.

ಪರೀಕ್ಷೆಯಲ್ಲಿ ಲೆಕ್ಕ ತಪ್ಪಿದ್ದರೂ ಜೀವನದ ಲೆಕ್ಕ ತಪ್ಪಲ್ಲ

ಪರೀಕ್ಷೆಯಲ್ಲಿ ಲೆಕ್ಕ ತಪ್ಪಿದ್ದರೂ ಜೀವನದ ಲೆಕ್ಕ ತಪ್ಪಲ್ಲ

ವಿದ್ಯಾರ್ಥಿ ಜೀವನದಲ್ಲಿ ಲೆಕ್ಕದ ಪರೀಕ್ಷೆಯಲ್ಲಿ ಎಷ್ಟೇ ಹಿಂದಿದ್ದರೂ ಜೀವನದ ಪರೀಕ್ಷೆಯ ಲೆಕ್ಕಾಚಾರದಲ್ಲಿ ಅತ್ಯಂತ ಮುಂದಿದ್ದು, ಯಶಸ್ವಿಯಾಗುತ್ತಾರೆ! ರಾಶ್ಯಾಧಿಪತಿ ಬುಧ ಗ್ರಹ ಶುಭ ಗ್ರಹವಾಗಿರುವುದರಿಂದ ಮಿಥುನ ರಾಶಿಯವರು ಮೂಲತಃ ಸಜ್ಜನರು, ದಾನ ಧರ್ಮ ಇತ್ಯಾದಿಗಳಲ್ಲಿ, ದೇವತಾರಾಧನೆಯಲ್ಲಿ ಅತ್ಯಂತ ಭಕ್ತಿ- ಶ್ರದ್ಧೆ ಉಳ್ಳವರಾಗಿರುತ್ತಾರೆ.

ರಹಸ್ಯ ಕಾಪಾಡಿಕೊಳ್ಳುವಲ್ಲಿ ನಿಸ್ಸೀಮರು

ರಹಸ್ಯ ಕಾಪಾಡಿಕೊಳ್ಳುವಲ್ಲಿ ನಿಸ್ಸೀಮರು

ಸ್ವತಃ ಬುಧಗ್ರಹ ವಿದ್ಯಾಕಾರಕ ಗ್ರಹವಾಗಿರುವುದರಿಂದ ಮಿಥುನ ರಾಶಿಯವರಿಗೆ ಉತ್ತಮ ವಿದ್ಯಾ ಪ್ರಾಪ್ತಿ ಇರುತ್ತದೆ. ಒಂದು ಪಕ್ಷ ಬೇರೆ ಗ್ರಹಗಳ ದುಷ್ಪ್ರಭಾವಗಳಿಂದ ವಿದ್ಯೆ ಕಡಿಮೆ ಆದರೂ ಆ ವಿಷಯ ಅನ್ಯರಿಗೆ ಗೊತ್ತಾಗದಂತೆ ನೋಡಿಕೊಳ್ಳುವುದರಲ್ಲಿ ಮಿಥುನ ರಾಶಿಯವರು ನಿಸ್ಸೀಮರೇ ಬಿಡಿ!

ಕೃಷ್ಣ ಪಕ್ಷದ ಷಷ್ಠಿಯೊಳಗೆ ಜನಿಸಿದವರಿಗೆ ಅನುಕೂಲ

ಕೃಷ್ಣ ಪಕ್ಷದ ಷಷ್ಠಿಯೊಳಗೆ ಜನಿಸಿದವರಿಗೆ ಅನುಕೂಲ

ಇನ್ನು ಚಂದ್ರ ಗ್ರಹ ಇವರಿಗೆ ಕುಟುಂಬ ಧನಾಧಿಪತಿ ಆಗುವುದರಿಂದ ಶುಕ್ಲ ಪಕ್ಷದಲ್ಲಿ ಅಥವಾ ಕೃಷ್ಣಪಕ್ಷ ಪಂಚಮಿ ಅಥವಾ ಷಷ್ಠಿ ಒಳಗೆ ಹುಟ್ಟಿದ ಮಿಥುನ ರಾಶಿಯವರಿಗೆ ಒಳ್ಳೆ ಕುಟುಂಬ ದೊರೆಯುತ್ತದೆ ಹಾಗೂ ಜೀವನದಲ್ಲಿ ಒಳ್ಳೆ ಧನ ಪ್ರಾಪ್ತಿ ಇರುತ್ತದೆ. ಇನ್ನು ರವಿ ಗ್ರಹ ಇವರಿಗೆ ತೃತೀಯಾಧಿಪತಿ ಆಗುವುದರಿಂದ ಸಾಮಾನ್ಯವಾಗಿ ಆಗಸ್ಟ್ ಹದಿನೈದರ ನಂತರ ಸೆಪ್ಟೆಂಬರ್ ಹದಿನೈದರ ಒಳಗೆ ಸಿಂಹ ಮಾಸದಲ್ಲಿ ಹುಟ್ಟಿದ ಮಿಥುನ ರಾಶಿಯವರಿಗೆ ತಮ್ಮ ತಂದೆಯಿಂದ ಬಹಳ ಸಹಾಯ ಹಾಗೂ ಸ್ವತಃ ತಂದೆಗೆ ಮಿಥುನ ರಾಶಿಯ ಮಗನಿಂದ ಒಳ್ಳೆ ಪ್ರೀತಿ- ವಾತ್ಸಲ್ಯ ಸಿಗುತ್ತದೆ.

ಭೂಮಿ ವ್ಯವಹಾರದಲ್ಲಿ ಎಚ್ಚರ

ಭೂಮಿ ವ್ಯವಹಾರದಲ್ಲಿ ಎಚ್ಚರ

ಕುಜ ಗ್ರಹವು ಮಿಥುನ ರಾಶಿಯವರಿಗೆ ಷಷ್ಠ ಹಾಗೂ ಲಾಭಾಧಿಪತಿ ಆಗುವುದರಿಂದ ಭೂಮಿ ಯೋಗ ಹಾಗೂ ಶರೀರದಲ್ಲಿ ರಕ್ತ ಪ್ರಕೃತಿ ಜಾತಕದಲ್ಲಿನ ಕುಜನ ಸ್ಥಿತಿಯಮೇಲೆ ಅವಲಂಬಿತವಾಗಿರುತ್ತದೆ. ಕರ್ಕ ರಾಶಿಯಲ್ಲಿ ಆಗಲಿ ಅಥವಾ ವೃಶ್ಚಿಕ ರಾಶಿಯಲ್ಲಿ ಆಗಲಿ ಕುಜ ಇದ್ದರೆ ಅಂತಹ ಮಿಥುನ ರಾಶಿಯವರು ಭೂಮಿಯ ವ್ಯವಹಾರಗಳಲ್ಲಿ ಹಾಗೂ ಶರೀರದಲ್ಲಿ ರಕ್ತ ಸಂಬಂಧಿತ ಕಾಯಿಲೆಗಳಿಂದ ಪೀಡೆಗೆ ಒಳಗಾಗಬಹುದು, ಎಚ್ಚರದಿಂದಿರ ಬೇಕು.

ಉತ್ತಮ ಉದ್ಯೋಗ ವಿವಾಹಕ್ಕೆ ಗುರು ಗ್ರಹ ಚೆನ್ನಾಗಿರಬೇಕು

ಉತ್ತಮ ಉದ್ಯೋಗ ವಿವಾಹಕ್ಕೆ ಗುರು ಗ್ರಹ ಚೆನ್ನಾಗಿರಬೇಕು

ಮಿಥುನ ರಾಶಿಯವರಿಗೆ ಉತ್ತಮ ಉದ್ಯೋಗ ಕೊಡಿಸಿ, ಉತ್ತಮ ರೀತ್ಯಾ ವಿವಾಹ ಆಗಬೇಕೆಂದರೆ ಜಾತಕದಲ್ಲಿ ಗುರು ಗ್ರಹ ಚೆನ್ನಾಗಿ ಇರಬೇಕು. ಮಕರ ರಾಶಿಯಲ್ಲಿ ಗುರು ಇರುವ ಮಿಥುನ ರಾಶಿಯವರಿಗೆ ಉತ್ತಮ ಉದ್ಯೋಗ ಹಾಗೂ ವಿವಾಹ ಈ ಎರಡೂ ಸಿದ್ದಿಸುವುದಿಲ್ಲ! ಕಾರಣ ಈ ಎರಡನ್ನೂ ಮಿಥುನ ರಾಶಿಗೆ ಕರುಣಿಸುವ ಗುರು ಗ್ರಹ ಸ್ವತಃ ನೀಚಾವಸ್ಥೆಯಲ್ಲಿ ಇರುವುದು. ಈ ಪರಿಸ್ಥಿಯನ್ನು ಬಿಟ್ಟು ಇನ್ನುಳಿದ ಮಿಥುನ ರಾಶಿಯವರಿಗೆ ಅವರ ಯೋಗ್ಯತೆಗಿಂತಲೂ ಉತ್ತಮ ಬಾಳ ಸಂಗಾತಿ ಸಿಗುವುದರಲ್ಲಿ ಸಂಶಯ ಬೇಡ.

ಅಧ್ಯಾಪಕ, ವಕೀಲಿಕೆ, ಪೌರೋಹಿತ್ಯ ವೃತ್ತಿ

ಅಧ್ಯಾಪಕ, ವಕೀಲಿಕೆ, ಪೌರೋಹಿತ್ಯ ವೃತ್ತಿ

ಗುರುಗ್ರಹ ಮಿಥುನ ರಾಶಿಯವರಿಗೆ ಕರ್ಮಾಧಿಪತಿ ಆಗುವುದರಿಂದ ಅಧ್ಯಾಪಕ ವೃತ್ತಿ, ವಕೀಲಿಕೆ ವೃತ್ತಿ, ಪೌರೋಹಿತ್ಯ ಇತ್ಯಾದಿ ಬಹಳ ಗೌರವಾನ್ವಿತ ವೃತ್ತಿಗಳೇ ಇವರನ್ನು ಅರಸುತ್ತಾ ಬರುತ್ತವೆಯೆಂಬುದೇ ವಿಶೇಷ. ಇನ್ನು ಶುಕ್ರನ ವಿಚಾರಕ್ಕೆ ಬಂದರೆ ಶುಕ್ರಗ್ರಹ ಮಿಥುನ ರಾಶಿಯವರಿಗೆ ಪಂಚಮ ವ್ಯಯಾಧಿಪತಿಯಾಗುತ್ತಾನೆ. ಆದುದರಿಂದ ಶುಕ್ರನ ಪ್ರಾಬಲ್ಯ ಜಾತಕದಲ್ಲಿ ಹೆಚ್ಚಾಗಿದ್ದರೆ ಮಿಥುನ ರಾಶಿಯವರಿಗೆ ಹೆಣ್ಣು ಸಂತಾನ ಸಾಧ್ಯತೆ ಹೆಚ್ಚಿರುತ್ತದೆ ಹಾಗೂ ಪ್ರೀತಿ ಪ್ರೇಮ ಪ್ರಣಯಾದಿ ವಿಚಾರಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಅದೇ ಕಾರಣದಿಂದಾಗಿ ಆಂಗ್ಲ ಭಾಷೆಯಲ್ಲಿ ಹೇಳುವಂತೆ ಈ ಫ್ಲರ್ಟಿಂಗ್ ನೇಚರ್ ಹೆಚ್ಚು ಇರುತ್ತದೆ. ಸ್ತ್ರೀಯರ ವಿಚಾರದಲ್ಲಿ ಮಿಥುನ ರಾಶಿಯ ಪುರುಷರಿಂದ ಅತಿಯಾದ ನಿಷ್ಠೆ ಬಯಸುವುದು ಮೂರ್ಖತನವಾದರೆ ಆಶ್ಚರ್ಯವಿಲ್ಲ !

ಹೆಚ್ಚು ಹಟ ಮಾಡಲ್ಲ

ಹೆಚ್ಚು ಹಟ ಮಾಡಲ್ಲ

ಇನ್ನು ಜಾತಕದಲ್ಲಿನ ಗುರು ಇತ್ಯಾದಿ ಗ್ರಹಗಳ ಸ್ಥಾನ, ದೃಷ್ಟಿ ಇತ್ಯಾದಿಗಳ ಬಲಗಳ ಮೇಲೆ ಆ ವಿಚಾರಗಳಲ್ಲಿ ಸ್ವಲ್ಪ ವ್ಯತ್ಯಾಸ ಹಾಗೂ ನಿಷ್ಠೆ ಅಪರೂಪದಲ್ಲಿ ಕಾಣಬಹುದಾಗಿದೆ. ಮಿಥುನ ರಾಶಿಯವರು ಅತಿಯಾಗಿ ಹಟ ಮಾಡಲು ಹೋಗುವುದಿಲ್ಲ ಪರಿಸ್ಥಿತಿ ಹೇಗೆ ಬರುತ್ತದೋ ಹಾಗೆ ತಮ್ಮನ್ನು ತಾವು ಹೊಂದಾಣಿಕೆ ಮಾಡಿಕೊಂಡುಬಿಡುತ್ತಾರೆ ಆದುದರಿಂದಲೇ ಏನೋ ಎಲ್ಲೆಡೆ ಎಲ್ಲ ಪರಿಸ್ಥಿತಿಗಳಲ್ಲಿ ಸಂತೋಷವಾಗಿರುತ್ತಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಸಂತೃಪ್ತರಾಗಿರುವುದಿಲ್ಲ. ಎಲ್ಲಾ ವಿಚಾರಗಳಲ್ಲಿ ಒಂದು ಚಿಕ್ಕ ಅಸಂತೃಪ್ತಿ ಅವರಿಗೆ ಒಳಗೊಳಗೇ ಇದ್ದೇ ಇರುತ್ತದೆ.

ಪಂಚಮಾರಿಷ್ಠ ಶಾಂತಿ ಮಾಡಿಸಬೇಕು

ಪಂಚಮಾರಿಷ್ಠ ಶಾಂತಿ ಮಾಡಿಸಬೇಕು

ಇನ್ನೊಂದು ಅಂಶ ಎಂದರೆ ಮಿಥುನ ರಾಶಿಯವರಿಗೆ ದಿನವೂ ಹೊಸತು ವಿಷಯಗಳು ಹಾಗೂ ವಿಚಾರಗಳು ಬೇಕಾಗುತ್ತವೆ. ಕಾರಣ ಅವರಿಗೆ ಎಲ್ಲಾ ಹೊಸ ವಿಷಯಗಳು, ವಿಚಾರಗಳು, ವಸ್ತುಗಳು ಬೇಗ ನೀರಸವೆನಿಸಿಬಿಡುತ್ತವೆ. ಇನ್ನೇನು ಹೊಸದಿದೆ ಎಂಬ ತುಡಿತ ಸದಾ ಅವರಲ್ಲಿ ಕಾಣಬಹುದು. ಇನ್ನು ಶನಿಗ್ರಹ ಮಿಥುನ ರಾಶಿಯವರಿಗೆ ಅಷ್ಟಮ ಹಾಗೂ ಭಾಗ್ಯಾಧಿಪತಿ ಆಗುವುದರಿಂದ ತುಲಾ ರಾಶಿಯಲ್ಲಿ ಶನಿ ಇರುವಾಗ (ಅಂದರೆ ಸಾಮಾನ್ಯ 1953/54 ಹಾಗೂ 1983/84 ಹಾಗೂ 2012/13ರಲ್ಲಿ ಹುಟ್ಟಿದ ಮಿಥುನ ರಾಶಿಯವರಿಗೆ ಪಂಚಮ ಅರಿಷ್ಟ ಜನನ ಶಾಂತಿ ಹವನ ಮಾಡಿಸಿದರೆ ಅವರ ಎಷ್ಟೋ ಪೀಡೆಗಳು ಕಷ್ಟಗಳು ಪರಿಹಾರವಾಗುತ್ತವೆ. ಅವರಿಗೆ ಅಷ್ಟಮಾಧಿಪತಿ ಶನಿ ಗ್ರಹದಿಂದಾಗುತ್ತಿದ್ದ ನಷ್ಟಗಳು ಪರಿಹಾರವಾಗಿ ದೀರ್ಘಾಯುಷ್ಯವನ್ನು ಹಾಗೂ ಭಾಗ್ಯಾಧಿಪತಿ ಸ್ವರೂಪದಲ್ಲಿ ಶನಿ ಗ್ರಹದ ಅನುಗ್ರಹ ಪಡೆದು ಶುಭವನ್ನು ಹಾಗೂ ಲಾಭವನ್ನು ಪಡೆಯುತ್ತಾರೆ.

ಪಚ್ಚೆ ಧರಿಸಿದರೆ ಉತ್ತಮ

ಪಚ್ಚೆ ಧರಿಸಿದರೆ ಉತ್ತಮ

ಇನ್ನು ಉತ್ತಮ ಗುಣ ಮಟ್ಟದ ಪಚ್ಚೆ ರತ್ನವನ್ನು ಬೆಳ್ಳಿಯಲ್ಲಿ ಉಂಗುರವನ್ನಾಗಿಸಿ ಅಥವಾ ಕುತ್ತಿಗೆಯಲ್ಲಿ ಧರಿಸಲು ಅನುಕೂಲವಾಗುವಂತೆ ಬೆಳ್ಳಿಯಲ್ಲಿ ತಯಾರಿಸಿಕೊಂಡು ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ ಮಾಡಿಸಿ ಪುರುಷಸೂಕ್ತದಿಂದ ಅಭಿಷೇಕ ಹಾಗೂ ಅಭಿಮಂತ್ರಿಸಿ ಧಾರಣೆ ಮಾಡುವುದರಿಂದ ಸಾಲ ಬಾಧೆಗಳಿಂದ, ಮಾನಸಿಕ ವ್ಯಥೆಗಳಿಂದ ಹೊರಬಂದು ಸುಖವಾಗಿ, ನೆಮ್ಮದಿಯಿಂದ ಇರಬಹುದು.

ಪಂಡಿತ್ ವಿಠ್ಠಲ ಭಟ್, ಸಂಪರ್ಕ ಸಂಖ್ಯೆ 9845682380

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the complete details about Gemini zodiac sign Well known astrologer Pandit Vittal Bhat explains according to Vedic astrology.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ