ಮಾರಕ ಶನಿ ತೊಂದರೆಯಿಂದ 'ಅಮ್ಮ' ತಪ್ಪಿಸಿಕೊಳ್ಳೋದು ಕಷ್ಟಕಷ್ಟ!

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜ್ಯೋತಿಷ್ಯ, ಸಂಖ್ಯಾ ಶಾಸ್ತ್ರದ ಮೇಲೆ ವಿಪರೀತವಾದ ನಂಬಿಕೆ. ಆ ಕಾರಣಕ್ಕೆ ತಮ್ಮ ಹೆಸರಿಗೆ ಇಂಗ್ಲಿಷಿನ ಎ ಅಕ್ಷರವನ್ನು ಸೇರಿಸಿಕೊಂಡರು. ಅದಿರಲಿ, ಸದ್ಯಕ್ಕೆ ಜಯಲಲಿತಾ ಅವರ ಗ್ರಹ ಸ್ಥಿತಿ ಹೇಗಿದೆ? ಈಗಿನ ತೊಂದರೆಯಿಂದ ಅವರು ಹೊರಬರುತ್ತಾರಾ?

ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ ಖ್ಯಾತ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್. ಫೆಬ್ರವರಿ 24, 1948ರಲ್ಲಿ ಮಂಡ್ಯದಲ್ಲಿ ಹುಟ್ಟಿರುವ ಜಯಲಿಲತಾ ಅವರದು ಮಖಾ ನಕ್ಷತ್ರ ಸಿಂಹ ರಾಶಿ. ಚಂದ್ರನ ಸ್ಥಿತಿಯನ್ನು ಆಧರಿಸಿ ಅವರ ಭವಿಷ್ಯವನ್ನು ಹೇಳಿದ್ದಾರೆ ಪಂಡಿತರು. ತುಂಬ ಕುತೂಹಲಕರ ಅಂಶವನ್ನು ತೆರೆದಿಟ್ಟಿದ್ದಾರೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ರಾಹು ದಶೆ ನಂತರ ಗುರು ದಶೆ ಆರಂಭವಾಗುತ್ತದೆ. ಆ ವೇಳೆ ರಾಹು-ಬೃಹಸ್ಪತಿ ಸಂಧಿ ಶಾಂತಿ ಮಾಡಿಸಿಕೊಳ್ಳುವುದು ತುಂಬ ಮುಖ್ಯ. ಜಯಲಲಿತಾ ಅವರನ್ನು ಕಾಡುತ್ತಿರುವುದು ಬಾಕಿ ಉಳಿಸಿಕೊಂಡ ಆ ಸಂಧಿ ಶಾಂತಿಯೇ. ರಾಹು ದಶೆ ನಡೆಯುವಾಗ ಯಾವುದೇ ವ್ಯಕ್ತಿ ತೂಕ ಹೆಚ್ಚಾಗುತ್ತದೆ. ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಅ ಎಲ್ಲ ಲಕ್ಷಣಗಳು ಗೋಚರಿಸಿದ್ದವು.[ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ]

ಶನಿ ಕಾಟ

ಶನಿ ಕಾಟ

ಜಯಲಲಿತಾ ಅವರದು ಸಿಂಹ ರಾಶಿ. ಆ ರಾಶಿಯಿಂದ ನಾಲ್ಕರಲ್ಲಿ ಶನಿ ಸ್ಥಿತನಾಗಿದ್ದಾನೆ. ಜ್ಯೋತಿಷ್ಯದಲ್ಲಿ ಅದನ್ನು ಅರ್ಧಾಷ್ಟಮ ಎನ್ನುತ್ತೇವೆ. ಏಕೆಂದರೆ ಅಷ್ಟಮದಲ್ಲಿ ಶನಿ ಇದ್ದರೆ ಕ್ರೂರ. ಅದರ ಅರ್ಧದಷ್ಟಾದರೂ ಕೆಟ್ಟ ಫಲವನ್ನು ಈ ಸ್ಥಾನದಲ್ಲಿ ನೀಡುತ್ತಾನೆ. ಇನ್ನು ಜನವರಿ ನಂತರ ಧನು ರಾಶಿ ಪ್ರವೇಶಿಸುವುದರಿಂದ ಅದು ಕೂಡ ಉತ್ತಮ ಸಮಯವಲ್ಲ.

ರಾಹು-ಬೃಹಸ್ಪತಿ ಸಂಧಿ

ರಾಹು-ಬೃಹಸ್ಪತಿ ಸಂಧಿ

ಜಯಲಲಿತಾ ಅವರಿಗೆ ಹದಿನೆಂಟು ವರ್ಷಗಳ ಕಾಲ ರಾಹು ಮಹರ್ದಶೆ ನಡೆದಿದೆ. ಅದಾದ ನಂತರ ಗುರುವಿನ ಮಹರ್ದಶೆ ಅರಂಭವಾಗುತ್ತದೆ. ಈ ರೀತಿ ದೊಡ್ಡ ದಶೆಯ ಬದಲಾವಣೆ ವೇಳೆ ಸಂಧಿ ಶಾಂತಿ ಮಾಡಿಸಲೇ ಬೇಕು. ಅದನ್ನು ತಪ್ಪಿಸಿದ್ದರೂ ಇಂಥ ಅನಾರೋಗ್ಯ ಸಂದರ್ಭಗಳು ಎದುರಾಗುತ್ತವೆ.

ಶುಕ್ರನ ಆಶೀರ್ವಾದ

ಶುಕ್ರನ ಆಶೀರ್ವಾದ

ಜಯಲಲಿತಾ ಅವರ ಜಾತಕದಲ್ಲಿ ಶುಕ್ರ ಉಚ್ಚನಾಗಿರುವುದರಿಂದಲೇ ಅಂಥ ಉತ್ತಮ ಹೆಸರು ಪಡೆಯಲು, ಕೀರ್ತಿ ಗಳಿಸಲು ಸಾಧ್ಯವಾಯಿತು.

ಗುರು ಆಶೀರ್ವಾದ

ಗುರು ಆಶೀರ್ವಾದ

ಗುರುವಿನ ಆಶೀರ್ವಾದವೂ ಚೆನ್ನಾಗಿದ್ದ ಕಾರಣಕ್ಕೆ ರಾಜ ವೈಭೋಗವನ್ನು ಅನುಭವಿಸಿದ್ದಾರೆ ಜಯಲಲಿತಾ. ಆದರೆ ಅವರಿಗೆ ರಾಹುವಿನಿಂದ ಆರೋಗ್ಯ ಹಾನಿಯಾಗಿದೆ.

ಶಾಂತಿ ಹೋಮವೊಂದೇ ಮಾರ್ಗ

ಶಾಂತಿ ಹೋಮವೊಂದೇ ಮಾರ್ಗ

ಸದ್ಯದ ಸ್ಥಿತಿಯಲ್ಲಿ ಅವರ ಜಾತಕವನ್ನು ಪರಾಮರ್ಶಿಸಿದರೆ ಅನುಕೂಲಕರವಾದ ಅಂಶಗಳು ಯಾವುವೂ ಇಲ್ಲ. ಇರುವ ಭರವಸೆ ಅಂದರೆ ಶನಿ ಹಾಗೂ ರಾಹು-ಬೃಹಸ್ಪತಿ ಸಂಧಿ ಶಾಂತಿ ಮಾತ್ರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Will Jayalalithaa manage to come out from ill effect of Saturn? Astrologer Pandit Vittal Bhat explains planetary position of Amma.
Please Wait while comments are loading...