ಜ್ಯೋತಿಷ್ಯ: ದಗ್ಧಯೋಗದ ಅವಿಶ್ವಾಸ ನಿರ್ಣಯ ಮಂಡನೆ, ಬಿಜೆಪಿ ಬಲವರ್ಧನೆ

Recommended Video

      No-Confidence Motion day in Parliament: ಅವಿಶ್ವಾಸ ನಿರ್ಣಯ ಮಂಡನೆ, ಬಿಜೆಪಿಯ ಭವಿಷ್ಯ?

      ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಆಯ್ಕೆ ಮಾಡಿಕೊಂಡ ದಿನ ಹೇಗಿದೆ? ಈ ದಿನದ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಈಗಲೇ ತಿಳಿದುಕೊಳ್ಳುವಂತೆ ಮಾಡಿವೆ ವಿಪಕ್ಷಗಳು.

      ಅವಿಶ್ವಾಸ ಗೊತ್ತುವಳಿಗೆ ಆಯ್ಕೆ ಮಾಡಿಕೊಂಡ ಶುಕ್ರವಾರ ಹಾಗೂ ಅಷ್ಟಮಿ ತಿಥಿಯು ಏನನ್ನು ಸೂಚಿಸುತ್ತದೆ ಅಂದರೆ, 2019 ರ ಲೋಕಸಭೆಯ ಸ್ಥಾನ ಗಳಿಕೆಯ ನಿರ್ಣಯ ಇವತ್ತಿನಿಂದಲೇ ಶುರು ಎಂಬುದು ಗೊತ್ತಾಗುತ್ತದೆ.

      ಅಷ್ಟಮೀ ಬೃಗುವಾಸರ ಯುಕ್ತೇ ದಗ್ಧ ಯೋಗಃ ಎಂದು ಶಾಸ್ತ್ರ ವಚನ. ದಗ್ಧ ಎಂದರೆ ಸುಟ್ಟು ಹೋದ, ದೋಷಯುಕ್ತ ದಿನ ಎಂದರ್ಥ. ಇವತ್ತು ಅಷ್ಟಮಿಯೂ ಶಕ್ರವಾರವೂ ಆಗಿದ್ದು, ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ! ನೋಡೋಣ ಇದರ ಫಲ ಹೇಗಿರುತ್ತದೆ? ಇವತ್ತಿನ ಫಲಿತಾಂಶವೇ ಮುಂದಿನ ಫಲಿತಾಂಶದ ಕೈಮರ.

      ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಆದರೂ ಒಂದು ಪ್ರಯತ್ನ ಮಾಡೇ ಮಾಡ್ತೀವಿ ಅನ್ನೋ ಛಲ. ಮುಂದಿನ ಸಲದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸುತ್ತದೆ ಎಂಬುದಕ್ಕಿಂತ ವಿರೋಧ ಪಕ್ಷದಲ್ಲಿ ಎಷ್ಟು ಸಂಸದರು ಪವಡಿಸುತ್ತಾರೆ ಎಂಬುದೇ ಇಂದಿನ ಅವಿಶ್ವಾಸ ಗೊತ್ತುವಳಿಯ ಉದ್ದೇಶ. ಈ ದಿನ ಪ್ರಕಾರ ಭವಿಷ್ಯ ನುಡಿಯುವುದಾದರೆ, ವಿಪಕ್ಷಗಳು ದುರ್ಬಲವಾಗುವ, ಅವುಗಳ ಮಧ್ಯೆಯೇ ಒಡಕು ಮೂಡುವ ಸ್ಥಿತಿ ಏರ್ಪಡುವುದು ಖಾತ್ರಿ ಆಗುತ್ತದೆ.

      ದೌರ್ಬಲ್ಯ ಇಡೀ ದೇಶಕ್ಕೆ ತೋರಿಸಿದಂತಾಯಿತು

      ದೌರ್ಬಲ್ಯ ಇಡೀ ದೇಶಕ್ಕೆ ತೋರಿಸಿದಂತಾಯಿತು

      ಇವತ್ತು ಶುಕ್ರವಾರ. ಅಷ್ಟಮೀ ತಿಥಿ. ಇದು ದಗ್ಧಯೋಗದ ದಿನ. ಇವತ್ತು ಯಾವ ಘನ ಕಾರ್ಯ ಮಾಡಿದರೂ ಅದು ನಿಷ್ಪ್ರಯೋಜಕವೇ. ಉಳಿದ ದಿನಗಳನ್ನು ಆಯ್ಕೆ ಮಾಡಬಹುದಿತ್ತು. ಆದರೆ ಇವತ್ತಿನ ದಿನವನ್ನೇ ಆಯ್ಕೆ ಮಾಡಿಕೊಂಡರು ಎಂದರೆ ಇದು ತಮ್ಮ ದುರ್ಬಲತೆಯನ್ನು ಇಡೀ ದೇಶಕ್ಕೇ ಎತ್ತಿಹಿಡಿದಂತಾಗುತ್ತದೆ ಅಲ್ಲದೆ ಬೇರೇನೂ ಪ್ರಯೋಜನವಾಗದು.

      ಆನೆಯ ಪೃಷ್ಠಕ್ಕೆ ಸಣ್ಣ ಕಡ್ಡಿಯಿಂದ ಚುಚ್ಚಿದಂತೆ

      ಆನೆಯ ಪೃಷ್ಠಕ್ಕೆ ಸಣ್ಣ ಕಡ್ಡಿಯಿಂದ ಚುಚ್ಚಿದಂತೆ

      ಆನೆಯನ್ನು ಇದಿರಿನಿಂದ ಹೊಡೆದುರುಳಿಸಲಾಗದ್ದಕ್ಕೆ, ಅದರೆ ಪೃಷ್ಠಕ್ಕೆ ಸಣ್ಣ ಕಡ್ಡಿಯನ್ನು ಚುಚ್ಚಿದಂತಾದೀತಷ್ಟೆ. ಲೋಕಸಭೆ ಚುನಾವಣೆ ಹತ್ತಿರ ಬಂದಾಗ ವಿರೋಧ ಪಕ್ಷಗಳು ಇದೊಂದು ಕೊನೆಯ ಪ್ರಯೋಗ ಎಂದು ಹೊರಟ ಹಾಗಿದೆ. ಇಷ್ಟು ಹೊಸ ಹೊಸ ವಿಚಾರಗಳ ಮಂಡನೆಗಳಾದವು. ಆಗ ಇವರು ಅವಿಶ್ವಾಸ ನಿರ್ಣಯಕ್ಕೆ ಹೊರಟಿದ್ದರೆ ಇದನ್ನು ದೇಶದ ಬಗೆಗಿರುವ ಉತ್ತಮ ಪ್ರಜ್ಞೆ ಎನ್ನಬಹುದಿತ್ತು.

      ಸಂಖ್ಯಾಬಲ ಪತನದ ಸೂಚನೆ

      ಸಂಖ್ಯಾಬಲ ಪತನದ ಸೂಚನೆ

      ಶುಕ್ರವಾರದ ದಿನದ ನಿರ್ಣಯವು ಮುಂದಿನ ಲೋಕಸಭಾ ಚುನಾವಣೆಯ ನಿರ್ಣಯವಾಗುತ್ತದೆ. ಯಾಕೆಂದರೆ ಮೋದಿ ಅವರ ಆಳ್ವಿಕೆಯ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಅವಿಶ್ವಾಸ ಗೊತ್ತುವಳಿಗೆ ವಿರೋಧ ಪಕ್ಷಗಳು ಮುಂದಾಗದೆ ಇವತ್ತಿನ ದಗ್ಧ ಯೋಗದ ದಿನದಲ್ಲೇ ಮುಂದಾಗಿವೆ ಎಂದರೆ ಇದು ಅವರ ಮುಂದಿನ ಪತನದ ಸಂಖ್ಯಾ ನಿರ್ಣಯ ಎನ್ನಬಹುದು.

      ಬಿಜೆಪಿಯ ಸಂಖ್ಯಾ ವೃದ್ಧಿಗೆ ಸಹಾಯ

      ಬಿಜೆಪಿಯ ಸಂಖ್ಯಾ ವೃದ್ಧಿಗೆ ಸಹಾಯ

      ಅಂತೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸಲಿದೆ ಎಂದು ತಲೆ ಕೆರೆದುಕೊಳ್ಳುವ ಬದಲು, ವಿರೋಧ ಪಕ್ಷದೊಳಗೆ ಎಷ್ಟು ಸ್ಥಾನ ಗಣನೀಯವಾಗಿ ಇಳಿಯಲಿದೆ ಎಂಬ ಸೂಚನೆಯಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಜಾಪ್ರಭುತ್ವದ ಹಕ್ಕು. ಆದರೆ ಯಾವಾಗ, ಏನು, ಎತ್ತ ಎಂಬ ಆಲೋಚನೆ ಇಲ್ಲದೆ ಕೈಗೊಂಡ ಈ ಕಾರ್ಯದಿಂದಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾವೃದ್ಧಿಗೆ ಸಹಾಯ ಮಾಡಿದಂತಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+