• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶ ಮತ್ತು ರಾಜ್ಯದ ಆಗುಹೋಗುಗಳ 'ದೀಪಾವಳಿ ಭವಿಷ್ಯ' - 2021

By ರಾಧಾಕೃಷ್ಣ ಭಟ್
|
Google Oneindia Kannada News

ಇನ್ನೆರಡು ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ, ಜೊತೆಗೆ ಕಾರ್ತಿಕ ಮಾಸವೂ ಆರಂಭವಾಗಲಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಶಿವನ ಆರಾಧನೆ ಹೆಚ್ಚಾಗಿ ನಡೆಯುವುದು ಒಂದು ಕಡೆಯಾದರೆ, ದೇವಾಲಯಗಳ ವಾರ್ಷಿಕ ಲಕ್ಷದೀಪೋತ್ಸವೂ ನಡೆಯಲಿದೆ.

ಇದೇ ಬರುವ ಗುರುವಾರದಂದು (ನ 4) ದೀಪಾವಳಿ ಅಮವಾಸ್ಯೆ ಇರಲಿದೆ, ಅಂದೇ ಧನಲಕ್ಷ್ಮೀ ಪೂಜೆಯೂ ನಡೆಯಲಿದೆ. ಅದರ ಮರುದಿನ ಬಲಿಪಾಡ್ಯಮಿ, ದೇಶದ ವಿವಿಧ ಭಾಗಗಳಲ್ಲಿ ಆ ದಿನದಿಂದ ಹಿಂದೂ ಕ್ಯಾಲೆಂಡರ್ ಹೊಸ ವರ್ಷ ಶುರುವಾಗಲಿದೆ.

Daily Horoscope: ನವೆಂಬರ್ 02, ಮಂಗಳವಾರದ ದ್ವಾದಶ ರಾಶಿಗಳ ಭವಿಷ್ಯDaily Horoscope: ನವೆಂಬರ್ 02, ಮಂಗಳವಾರದ ದ್ವಾದಶ ರಾಶಿಗಳ ಭವಿಷ್ಯ

ಕಾರ್ತಿಕ ಶುಕ್ಲ ಪಕ್ಷದ ಆರಂಭದಿಂದ ಮುಂದಿನ ಅವಧಿಯವರೆಗೆ ದೇಶ ಮತ್ತು ವಿಶ್ವದ ಆಗು ಹೋಗುಗಳು ಹೇಗಿರಲಿದೆ ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿಯಾದಂತಹ ಆಶಿಶ್ ಮೆಹ್ತಾ ಅವರು ಭವಿಷ್ಯ ನುಡಿದಿದ್ದಾರೆ.

 2023ರಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಲಿದೆ?: ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ 2023ರಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಲಿದೆ?: ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ

ನಾರದ ಸಂಹಿತೆಯಲ್ಲಿ ಉಲ್ಲೇಖವಾದಂತೆ, ಈ ಅವಧಿಯಲ್ಲಿ ವಿಶ್ವದ ಪ್ರಮುಖ ನಾಯಕರ ಬೇಜವಾಬ್ದಾರಿ ಹೇಳಿಕೆಯಿಂದಾಗಿ ಯುದ್ದದ ವಾತಾವರಣ ಸೃಷ್ಟಿಯಾಗಲಿದೆ. ಇನ್ನು, ದೇಶದಲ್ಲೂ ರಾಜಕೀಯ ಮುಖಂಡರ ಹಗರಣಗಳಿಂದಾಗಿ ಸಾರ್ವಜನಿಕರು ಬೀದಿಗಿಳಿಯಲಿದ್ದಾರೆ.

 ಖ್ಯಾತ ಜ್ಯೋತಿಷಿಯಾದಂತಹ ಆಶಿಶ್ ಮೆಹ್ತಾ

ಖ್ಯಾತ ಜ್ಯೋತಿಷಿಯಾದಂತಹ ಆಶಿಶ್ ಮೆಹ್ತಾ

"ಕಶ್ಯಪ ಸಂಹಿತೆಯಲ್ಲಿ ಉಲ್ಲೇಖವಾದಂತೆ, ಈ ಅವಧಿಯಲ್ಲಿ ಫಸಲು ಉತ್ತಮವಾಗಿರಲಿದ್ದು ರೈತರು ಸಂತೋಷದಿಂದ ಇರಲಿದ್ದಾರೆ. ಆದರೆ, ಬೆಲೆ ಏರಿಕೆ ಮುಂದುವರಿಯಲಿದ್ದು, ಮುಂದಿನ ಒಂದು ವರ್ಷದವರೆಗೂ ರೋಗರುಜಿನದ ಭಯ ಜನರನ್ನು ಕಾಡಲಿದೆ. ಆಡಳಿತ ಪಕ್ಷಗಳಿಗೆ ಮುಂದಿನ ವರ್ಷ ಕಠಿಣ ಸವಾಲು ಎದುರಾಗಲಿದೆ. ಈ ಅವಧಿಯಲ್ಲಿ ಜನರಿಗೆ ಸಂತೋಷಕ್ಕಿಂತ ದುಃಖದ ಪರಿಸ್ಥಿತಿ ಹೆಚ್ಚಾಗಿ ಬರಲಿದೆ" ಎಂದು ಆಶಿಶ್ ಮೆಹ್ತಾ ಅವರು ಜ್ಯೋತಿಷ್ಯದ ವಿಡಿಯೋದಲ್ಲಿ ಹೇಳಿದ್ದಾರೆ.

 ಸಿಂಹ ಲಗ್ನ ಇರಲಿದೆ, ಸೂರ್ಯ ಮೂರನೇ ಸ್ಥಾನದಲ್ಲಿ ತುಲಾ ರಾಶಿ

ಸಿಂಹ ಲಗ್ನ ಇರಲಿದೆ, ಸೂರ್ಯ ಮೂರನೇ ಸ್ಥಾನದಲ್ಲಿ ತುಲಾ ರಾಶಿ

ಭಾರತದಲ್ಲಿ ನವೆಂಬರ್ 5ರ ತಡರಾತ್ರಿ 2.45ರ ಸಮಯಕ್ಕೆ ವಿಕ್ರಮ ಸಂವತ್ಸರ 2078 ಆರಂಭವಾಗಲಿದೆ. ಈ ಅವಧಿಯನ್ನು ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯ ಹೇಳುವುದಾದರೆ, ಈ ಅವಧಿಯಲ್ಲಿ ಸಿಂಹ ಲಗ್ನ ಇರಲಿದೆ, ಸೂರ್ಯ ಮೂರನೇ ಸ್ಥಾನದಲ್ಲಿ ತುಲಾ ರಾಶಿ ಜೊತೆಗೆ ಮೂರನೇ ಮನೆಯಲ್ಲಿ ಇರಲಿದ್ದಾನೆ, ರಾಹು ದಶಮ ಸ್ಥಾನದಲ್ಲಿ ಇರಲಿದ್ದಾನೆ. ಗೌತಮ ಸಂಹಿತೆಯಲ್ಲಿ ಉಲ್ಲೇಖವಾದಂತೆ, ದೇಶದ ದಕ್ಷಿಣದ ರಾಜ್ಯಗಳಲ್ಲಿ ಕಾಯಿಲೆಗಳು ಹೆಚ್ಚಾಗಲಿದೆ. ದೇಶದ ಮಧ್ಯದ ರಾಜ್ಯಗಳಲ್ಲಿ ರಾಜಕೀಯ ಅಸ್ಥಿರತೆ ಇರಲಿದೆ - ಖ್ಯಾತ ಜ್ಯೋತಿಷಿ ಆಶಿಶ್ ಮೆಹ್ತಾ.

 ಆಡಳಿತ ಪಕ್ಷದ ಮುಖಂಡರು ಸಾವನ್ನಪ್ಪಬಹುದು

ಆಡಳಿತ ಪಕ್ಷದ ಮುಖಂಡರು ಸಾವನ್ನಪ್ಪಬಹುದು

ಗುರು ನೀಚ ಸ್ಥಾನದಲ್ಲಿ ಇರುವುದರಿದ, ಆಡಳಿತ ಪಕ್ಷದ ಮುಖಂಡರು ಸಾವನ್ನಪ್ಪಬಹುದು. ಈ ರೀತಿಯ ಗ್ರಹಗತಿಗಳ ವೇಳೆ ಆಡಳಿತ ಪಕ್ಷಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಮತ್ತು ಅರಾಜಕತೆಯೂ ಉಂಟಾಗಬಹುದು. ಮುಂದಿನ ಒಂದು ವರ್ಷ ಭಾರತ ದೇಶ ಹಲವು ಚಾಲೆಂಜ್ ಅನ್ನು ಎದುರಿಸಬೇಕಾಗಿ ಬರಬಹುದು. ಗುರು, ಶನಿ ಮತ್ತು ರಾಹುವಿನ ಗ್ರಹಗತಿಗಳಿಂದಾಗಿ ಚೀನಾ, ರಷ್ಯಾ, ಪಾಕಿಸ್ತಾನ, ಮೆಕ್ಸಿಕೋ, ಅಮೆರಿಕಾ ಮತ್ತು ಭಾರತದ ಕರಾವಳಿಯಲ್ಲಿ ಹೆಚ್ಚಿನ ಸಮಸ್ಯೆ ಎದುರಾಗಲಿದೆ - ಖ್ಯಾತ ಜ್ಯೋತಿಷಿ ಆಶಿಶ್ ಮೆಹ್ತಾ.

 ಕೇರಳ, ಮಹಾರಾಷ್ಟ್ರ, ಗುಜರಾತ್ ಕರಾವಳಿಯಲ್ಲಿ ಪರಿಸ್ಥಿತಿ ವಿಕೋಪ

ಕೇರಳ, ಮಹಾರಾಷ್ಟ್ರ, ಗುಜರಾತ್ ಕರಾವಳಿಯಲ್ಲಿ ಪರಿಸ್ಥಿತಿ ವಿಕೋಪ

"ದೇಶದ ರಾಜಕೀಯದಲ್ಲಿ ಮುಂದಿನ ಒಂದು ವರ್ಷದಲ್ಲಿ ಹಲವು ಬದಲಾವಣೆಗಳಾಗಲಿವೆ. ಈ ಅವಧಿಯಲ್ಲಿ ಜನರು ಅಲ್ಪಬುದ್ದಿಗಳಾಗಲಿದ್ದಾರೆ, ಆಲಸ್ಯ ಹೆಚ್ಚಾಗಲಿದೆ. ಕೇರಳ, ಮಹಾರಾಷ್ಟ್ರ, ಗುಜರಾತ್ ಕರಾವಳಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲೂ ಪರಿಸ್ಥಿತಿ ಹದೆಗೆಡಲಿದೆ. ದೇವರ ನಾಮಸ್ಮರಣೆಯ ಮೂಲಕ ಎದುರಿಸಬಹುದಾದ ಸಮಸ್ಯೆಗಳಿಗೆ ಕೊಂಚ ಪರಿಹಾರವನ್ನು ಕಂಡುಕೊಳ್ಳಬಹುದು" ಎಂದು ಆಶಿಸ್ ಮೆಹ್ತಾ ದೀಪಾವಳಿ 2021ಕ್ಕೆ ಮುನ್ನ ಭವಿಷ್ಯವನ್ನು ನುಡಿದಿದ್ದಾರೆ. ಈ ಸಂಬಂಧ ಅವರು ವಿಡಿಯೋ ಮೂಲಕ ಭವಿಷ್ಯ ಹೇಳಿದ್ದಾರೆ.

English summary
Deepawali 2021 Horoscope in Kannada: Diwali 2021 to Diwali 2022 Prediction, Astrologer Ashish Mehta. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X