Daily Horoscope: ಶುಭ ಯೋಗದಿಂದ ಮೂರು ರಾಶಿಯವರಿಗೆ ಇವತ್ತು ಭರ್ಜರಿ ಸಕ್ಸಸ್; ಅನಿರೀಕ್ಷಿತ ಆರ್ಥಿಕ ಲಾಭ
ಇವತ್ತು ಅಶ್ವಿನಿ ಕೃಷ್ಣ ಪಕ್ಷದ ದ್ವಾದಶಿ ತಿಥಿ. ಈ ತಿಥಿ ರಾತ್ರಿ 11.17 ರವರೆಗೆ ಇರುತ್ತದೆ. ನಂತರ ತ್ರಯೋದಶಿ ತಿಥಿ ಪ್ರಾರಂಭವಾಗುತ್ತದೆ. ಮಾಘ ನಕ್ಷತ್ರವು ರಾತ್ರಿ 9. 40 ರವರೆಗೆ ಇರುವುದು. ನಂತರ ಪೂರ್ವಾಫಲ್ಗುಣಿ ನಕ್ಷತ್ರವು ಪ್ರಾರಂಭವಾಗುತ್ತದೆ. ಚಂದ್ರನು ದಿನವಿಡೀ ಸಿಂಹದಲ್ಲಿ ಸಾಗುತ್ತಾನೆ, ಅಲ್ಲಿ ಚಂದ್ರ-ಕೇತುವಿನ ಗ್ರಹಣ ದೋಷವು ಸಹ ಪರಿಣಾಮಕಾರಿಯಾಗಿರುತ್ತದೆ. ವಿಶೇಷ ಗ್ರಹ ಜೋಡಣೆಯು ಶುಭ ಯೋಗ, ಲಕ್ಷ್ಮಿನಾರಾಯಣ ಯೋಗ, ಪಾರಿಜಾತ ಯೋಗ, ಬುಧಾದಿತ್ಯ ಯೋಗ, ವಾಶಿ ಯೋಗ, ಸುನಫ ಯೋಗ ಮತ್ತು ಮಾಲವ್ಯ ಯೋಗದ ಪ್ರಬಲ ಸಂಯೋಜನೆಯನ್ನು ಸೃಷ್ಟಿಸಲಿದೆ .
ಮೇಷ ರಾಶಿ (Aries)
ಮನೆಯಲ್ಲಿನ ವಾತಾವರಣ ಶಾಂತವಾಗಿರುವುದು. ಶುಭ ಕಾರ್ಯಕ್ರ ನಡೆಯಬಹುದು. ಹಿರಿಯರ ಆಶೀರ್ವಾದದಿಂದ ಯಶಸ್ಸು ಸಿಗುವುದು. ಹೊಸ ಗ್ರಾಹಕರಿಂದ ಉದ್ಯಮಿಗೆ ಗಣನೀಯ ಲಾಭವಾಗುವುದು. ವ್ಯಾಪಾರಕ್ಕಾಗಿ ಪ್ರಯಾಣ ಮಡುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸುವವರಿಗೆ ಉತ್ತಮ ಅವಕಾಶ ಸಿಗುವುದು. ಹೊಸ ಜವಾಬ್ದಾರಿ ಪ್ರಗತಿಗೆ ದಾರಿ ಮಾಡಿಕೊಡುವುದು. ಹಣ ಸಿಗುವ ಲಕ್ಷಣಗಳಿವೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವುದು.

ವೃಷಭ ರಾಶಿ (Taurus)
ಮನೆಯಲ್ಲಿ ಸಾಮರಸ್ಯ ಇರುವುದು. ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವುದು. ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗುವುದು. ಯಾರನ್ನೂ ಅತಿಯಾಗಿ ನಂಬಬೇಡಿ. ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಲ ಕೊಟ್ಟಿರುವ ಹಣ ವಾಪಸ್ ಬರುವುದು.
ಮಿಥುನ ರಾಶಿ (Gemini)
ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಅನಗತ್ಯ ವಾದಗಳಿಂದ ದೂರವಿರಿ. ಕೆಲಸದಲ್ಲಿ ನಿಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಡಿ ಮುಗಿಸುವಿರಿ. ಹೊಸ ಜವಾಬ್ದಾರಿ ಸಿಗುವುದು. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ದೇಹದ ಜೊತೆ ಮನಸ್ಸಿಗೂ ವಿಶ್ರಾಂತಿಯ ಅಗತ್ಯವಿದೆ. ಆದಾಯದ ಮೂಲ ಹೆಚ್ಚಾಗುವುದು.
ಕರ್ಕಾಟಕ ರಾಶಿ (Cancer)
ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ಹಿರಿಯರ ಮಾರ್ಗದರ್ಶನದಿಂದ ಮನಸ್ಸಿಗೆ ಶಾಂತಿ ಸಿಗುವುದು. ಹಳೆಯ ಗ್ರಾಹಕರಿಂದ ಲಾಭ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗುವುದು. ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು.
ಸಿಂಹ ರಾಶಿ (Leo)
ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುವುದು. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು. ಭಿನ್ನಾಭಿಪ್ರಾಯ ಬಗೆಹರಿಯುವುದು. ಉದ್ಯೋಗಿಗಳಿಗೆ ಬಡ್ತಿ ಅಥವಾ ಹೆಚ್ಚಿನ ಜವಾಬ್ದಾರಿ ಸಿಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗುವುದು. ಕೆಲಸದ ಹೊರೆ ಹೆಚ್ಚಾಗುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುವುದು.
ಕನ್ಯಾ ರಾಶಿ (Virgo)
ಸಂಬಂಧಿಕರನ್ನು ಭೇಟಿಯಾಗುವುದರಿಂದ ಸಂತೋಷ ಹೆಚ್ಚಾಗುವುದು. ಹೊಸ ವ್ಯವಹಾರ ಯೋಜನೆಯಿಂದ ಪ್ರಯೋಜನವಾಗುವುದು. ಯಾರನ್ನೂ ಕುರುಡಾಗಿ ನಂಬಬೇಡಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಭಾವನೆಗಿಂತ ತರ್ಕಕ್ಕೆ ಆದ್ಯತೆ ನೀಡಿ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು.
ತುಲಾ ರಾಶಿ (Libra)
ಕುಟುಂಬ ಸಾಮರಸ್ಯ ಹೆಚ್ಚಾಗುವುದು. ಹಳೆಯ ಸಮಸ್ಯೆ ದೂರವಾಗುವುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವುದು. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಿದರೆ ಒಳ್ಳೆಯದು. ಮಾನಸಿಕ ಒತ್ತಡ ಹೆಚ್ಚಾಗುವುದು. ಆದಾಯದ ಜೊತೆಗೆ ಖರ್ಚು ಕೂಡಾ ಹೆಚ್ಚಾಗುವುದು.
ವೃಶ್ಚಿಕ ರಾಶಿ (Scorpio)
ಕುಟುಂಬದೊಳಗೆ ಶಾಂತಿ ನೆಲೆಯಾಗುವುದು. ಹಳೆಯ ಭಿನ್ನಾಭಿಪ್ರಾಯ ದೂರವಾಗುವುದು. ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವುದು. ಉದ್ಯಮಿಗಳಿಗೆ ಲಾಭವಾಗುವುದು. ಸರ್ಕಾರಿ ಮತ್ತು ಕಾನೂನು ವಿಷಯಗಳಲ್ಲಿ ಸಕಾರಾತ್ಮಕ ಪ್ರಗತಿಯಾಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಅನಗತ್ಯ ಖರ್ಚು ಕಡಿಮೆ ಮಾಡಿದರೆ ಒಳ್ಳೆಯದು.
ಧನು ರಾಶಿ (Sagittarius)
ಮನೆಯಲ್ಲಿ ಶುಭ ಅಥವಾ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ವ್ಯಾಪಾರ ವಿಸ್ತರಣೆಗೆ ಅವಕಾಶ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಾಗುವುದು. ಆರೋಗ್ಯ ಉತ್ತಮವಾಗಿರುವುದು. ಸಂಗಾತಿಯೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ.
ಮಕರ ರಾಶಿ (Capricorn)
ನಿಮ್ಮ ಕಷ್ಟದಲ್ಲಿ ಸಂಗಾತಿ ಜೊತೆ ನಿಲ್ಲುವರು. ಹಳೆಯ ಬಾಕಿ ವಾಪಸ್ ಸಿಗುವುದು. ಕಚೇರಿ ರಾಜಕೀಯದಿಂದ ದೂರವಿಡಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಕಚೇರಿಯಲ್ಲಿ ಪ್ರಶಂಸೆ ಸಿಗುವುದು. ಕೀಲು ನೋವು ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು. ಭವಿಷ್ಯದ ಯೋಜನೆಗಳ ಕುರಿತು ಸಂಗಾತಿಯೊಂದಿಗೆ ಚರ್ಚೆ ನಡೆಸುವಿರಿ.
ಕುಂಭ ರಾಶಿ (Aquarius)
ಮನೆಯಲ್ಲಿ ಸಾಮರಸ್ಯ ಹೆಚ್ಚಾಗುವುದು. ನಿಮ್ಮ ಮಾತಿನಲ್ಲಿ ಸ್ಪಷ್ಟವಾಗಿರಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ವೃತ್ತಿಜೀವನದ ದಿಕ್ಕು ಬದಲಾಗುವುದು. ಇವತ್ತು ನಿಮ್ಮ ಪಾಲಿನ ಅತ್ಯುತ್ತಮ ದಿನ. ಸಾಕಷ್ಟು ನಿದ್ರೆ ಮಾಡಿ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುವುದು.
ಮೀನ ರಾಶಿ (Pisces)
ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವುದು. ಹಳೆಯ ಸಮಸ್ಯೆ ಕೊನೆಯಾಗುವುದು. ಮನಸ್ಸಿನ ಸಂತೋಷ ಹೆಚ್ಚಾಗುವುದು. ಸೃಜನಶೀಲ ಚಿಂತನೆಗೆ ಮೆಚ್ಚುಗೆ ಸಿಗುವುದು. ಹೊಸ ಕೆಲಸ ಸಿಗುವುದು. ಹೊಸ ಜವಾಬ್ದಾರಿ ಸಿಗಬಹುದು. ಹೊಟ್ಟೆಯ ಸಮಸ್ಯೆ ಕಾಡುವುದು.


Click it and Unblock the Notifications
