Daily Horoscope Aug 20: ಉದ್ಯೋಗ, ವ್ಯವಹಾರದಲ್ಲಿ ಈ ರಾಶಿಯವರಿಗೆ ಶುಭ ಸುದ್ದಿ, ಬಹುಕಾಲದ ಆಸೆ ಈಡೇರುವ ದಿನ

Daily Horoscope Aug 20: ಜನ್ಮ ರಾಶಿಗೆ ಅನುಗುಣವಾಗಿ ಪ್ರತಿಯೊಬ್ಬರ ಜಾತಕ ಫಲ ಬೇರೆ ಬೇರೆಯಾಗಿರುವುದು. ಕೆಲವು ರಾಶಿಯವರು ಆರ್ಥಿಕ ಲಾಭವನ್ನು ಗಳಿಸುವುದರ ಜೊತೆಗೆ ವೃತ್ತಿಜೀವನದಲ್ಲಿಯೂ ಯಶಸ್ಸನ್ನು ಕಾಣಬಹುದು. ಇನ್ನು ಕೆಲವರು ಆರೋಗ್ದ ಬಗ್ಗೆ ಜಾಗರೂಕರಾಗಿರಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. 12 ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೋಣ.

ಮೇಷ ರಾಶಿ (Aries)

ಭವಿಷ್ಯದಲ್ಲಿ ಉತ್ತಮ ಲಾಭವನ್ನು ನೀಡುವ ಯೋಜನೆಯನ್ನು ಇಂದು ಪ್ರಾರಂಭಿಸಬಹುದು.ಇಂದು ನಿಮ್ಮ ಪಾಲಿನ ಸಂತೋಷದ ದಿನವಾಗಿರುವುದು. ಬಹಳ ದಿನಗಳ ಆಸೆ ಇವತ್ತು ನೆರವೇರುವುದು.

ವೃಷಭ ರಾಶಿ (Taurus)

ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ನಿರುದ್ಯೋಗಿಗಳಿಗೆ ಅಥವಾ ಹೊಸ ಕೆಲಸ ಹುಡುಕುತ್ತಿದ್ದವರ ಹುಡುಕಾಟ ಕೊನೆಯಾಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಆರೋಗ್ಯ ಉತ್ತಮವಾಗಿರುವುದು.

Daily Horoscope Aug 20

ಮಿಥುನ ರಾಶಿ (Gemini)

ನಿಮ್ಮ ಪಾಲಿಗೆ ಒಳ್ಳೆಯ ದಿನವಾಗಿರಲಿದೆ. ನೀವು ಇಷ್ಟಪಡುವ ವಸ್ತು ನಿಮ್ಮ ಕೈ ಸೇರುವುದು. ಜೀವನ ಸಂತೋಷ ಹೆಚ್ಚಾಗುವುದು. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುವುದು. ಕೆಲಸದಲ್ಲಿ ಪ್ರಮುಖ ಗುರಿಯನ್ನು ಸಾಧಿಸುವಿರಿ.

ಕರ್ಕಾಟಕ ರಾಶಿ (Cancer)

ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಯಾಗುವುದು. ಸಂಬಳ ಹೆಚ್ಚಾಗಬಹುದು.

ಸಿಂಹ ರಾಶಿ (Leo)

ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ನಿಮಗೆ ಕೆಲಸ ತೆಗೆಸಿ ಕೊಡುವಲ್ಲಿ ಸ್ನೇಹಿತ ಸಹಾಯ ಮಾಡಬಹುದು. ಯಾವುದೇ ವಿಚಾರ ಇರಲಿ ಹೊರಗಿನವರ ಸಲಹೆ ಪಡೆಯಬೇಡಿ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು.

ಕನ್ಯಾ ರಾಶಿ (Virgo)

ನಿಮಗೆ ಉತ್ತಮ ದಿನವಾಗಿರಲಿದೆ. ಮನೆಗಾಗಿ ನಿಮಗೆ ಇಷ್ಟವಾದ ಕೆಲವು ಸಾಮಗ್ರಿಗಳನ್ನು ಖರೀದಿಸಬಹುದು. ಹೊಸ ಕೆಲಸ ಅಥವಾ ವ್ಯವಹಾರವನ್ನು ಆರಂಭಿಸಬಹುದು. ಮಕ್ಕಳ ಮಾತನ್ನು ಎಚ್ಚರಿಕೆಯಿಂದ ಕೇಳಿ.

ತುಲಾ ರಾಶಿ (Libra)

ಇವತ್ತು ನಿಮಗೆ ಲಾಭದಾಯಕ ದಿನವಾಗಿರುವುದು. ಆನ್‌ಲೈನ್‌ ವ್ಯವಹಾರ ಆರಂಭಿಸಿದರೆ ಲಾಭವಾಗುವುದು. ಕಚೇರಿ ಕೆಲಸದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗುವುದು. ವಿಜ್ಞಾನದಲ್ಲಿ ತೊಡಗಿರುವವರಿಗೆ ಗೌರವ ಸಿಗುವುದು. ಆರೋಗ್ಯ ಉತ್ತಮವಾಗಿರುವುದು.

ವೃಶ್ಚಿಕ ರಾಶಿ (Scorpio)

ಬಾಕಿ ಇರುವ ಕೆಲಸಗಳನ್ನು ಮಾಡಿ ಮುಗಿಸುವಿರಿ. ಸಂತೋಷ ಹೆಚ್ಚಾಗುವುದು. ಜೀವನದಲ್ಲಿ ಕೆಲವೊಂದು ಬದಲಾವಣೆಯನ್ನು ತರುವಿರಿ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕಾರು ಖರೀದಿ ಬಗ್ಗೆ ಯೋಚಿಸುವಿರಿ.

ಧನು ರಾಶಿ (Sagitarius)

ನಿಮ್ಮ ಪಾಲಿನ ಲಾಭದಾಯಕ ದಿನ. ವ್ಯವಹಾರ ಒಪ್ಪಂದದಲ್ಲಿ ಆರ್ಥಿಕ ಲಾಭವಾಗುವುದು. ಹೊಸಬರನ್ನು ಭೇಟಿಯಾಗುವಿರಿ. ಹೊಸಬರ ಭೇಟಿಯಿಂದ ನಿಮಗೆ ಪ್ರಯೋಜನವಾಗುವುದು. ಬಹಳ ಸಮಯದಿಂದ ತೊಂದರೆ ನೀಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದು.

ಮಕರ ರಾಶಿ (Capricorn)

ಬಾಕಿ ಇರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ವಿಶೇಷ ಸಂಬಂಧಿಯೊಬ್ಬರು ಮನೆಗೆ ಬರುವ ಮೂಲಕ ಸಂತೋಷ ಹೆಚ್ಚಾಗುವುದು. ಸರ್ಕಾರಿ ಕೆಲಸದಲ್ಲಿರುವವರಿಗೆ ಬಡ್ತಿ ಸಿಗುವುದು. ವೈವಾಹಿಕ ಜೀವನದಲ್ಲಿ ಹೊಸ ಸಂತೋಷ ಬರುವುದು.

ಕುಂಭ ರಾಶಿ (Auarius)

ಅನಿರೀಕ್ಷಿತವಾಗಿ ಹಣ ಸಿಗುವುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಅವಕಾಶ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ ರಾಶಿ (Pisces)

ಎಲ್ಲಾ ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಅನಗತ್ಯ ಖರ್ಚುಗಳಾಗದಂತೆ ನೋಡಿಕೊಳ್ಳಿ. ಕೆಲಸ, ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಮಕ್ಕಳಿಂದ ಶುಭ ಸುದ್ದಿ ಸಿಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+