Horoscope Today: ದಿನ ಭವಿಷ್ಯ ಜನವರಿ 18- ಈ ರಾಶಿಗೆ ಆಂಜನೇಯನ ಆಶೀರ್ವಾದ: ಮುಟ್ಟಿದ್ದೆಲ್ಲ ಚಿನ್ನ
ಜನವರಿ 18 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಜ್ಯೋತಿಷ್ಯದ ಪ್ರಕಾರ ಈ ದಿನ ಕೆಲ ರಾಶಿಗಳ ಅದೃಷ್ಟ ಹೊಳೆಯಲಿದೆ. ಈ ರಾಶಿಯ ಜನರಿಗೆ ಆರ್ಥಿಕ ಲಾಭ, ವೃತ್ತಿ ಬೆಳವಣಿಗೆ ಮತ್ತು ಆಸ್ತಿ ಖರೀದಿಗೆ ಉತ್ತಮ ಸಮಯ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಸುವುದು. ಕಠಿಣ ಪರಿಶ್ರಮ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹನುಮಂತನ ಆಶೀರ್ವಾದ ಸಿಗಲಿದೆ. ಹಾಗಾದರೆ ಜನವರಿ 18 ಶನಿವಾರ 12 ರಾಶಿಗಳ ಭವಿಷ್ಯ ಹೇಗಿದೆ, ಯಾವ ರಾಶಿಯವರು ಅದೃಷ್ಟವಂತರು ಎಂದು ಈಗ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಜನವರಿ 18 ತುಂಬಾ ಶುಭವಾಗಿದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇದು ನಿಮಗೆ ಸರಿಯಾದ ಸಮಯ. ಹಣಕಾಸಿನ ಲಾಭದ ಸಾಧ್ಯತೆಗಳಿವೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ಎಲ್ಲರೂ ನಿಮ್ಮ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಅಲ್ಲದೆ ಈ ದಿನದ ಅದೃಷ್ಟ ರಾಶಿಗಳಲ್ಲಿ ಮೇಷ ರಾಶಿ ಕೂಡ ಒಂದಾಗಿದೆ. ಕಷ್ಟ ನಿವಾರಣೆಗಾಗಿ ಶನಿವಾರ ಹನುಮಂತದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.

ವೃಷಭ ರಾಶಿ
ವೃಷಭ ರಾಶಿ ಜನರಿಗೆ ಶನಿವಾರ ಪ್ರಗತಿಯ ದಿನ. ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನೀವು ಎಲ್ಲಾದರೂ ಹೂಡಿಕೆ ಮಾಡಿದ್ದರೆ ಅದರಿಂದ ಲಾಭ ಪಡೆಯುವಿರಿ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ಕೆಲಸದಲ್ಲಿ ಚೈತನ್ಯಶೀಲರಾಗಿರುತ್ತೀರಿ. ಹನುಮಂತನ ಕೃಪೆಯಿಂದ ಕೆಲಸದ ಒತ್ತಡ ಕಡಿಮೆಯಾಗಲಿದೆ. ಎಲ್ಲೋ ಸಿಕ್ಕಿಕೊಂಡ ಹಣ ನಿಮ್ಮ ಕೈ ಸೇರಿಲಿದೆ. ಧನಲಾಭವಾಗುವ ಲಕ್ಷಣವೂ ಇದೆ. ಈ ದಿನದ ಅದೃಷ್ಟ ರಾಶಿಗಳಲ್ಲಿ ವೃಷಭ ರಾಶಿಯೂ ಒಂದಾಗಿದ್ದು ತೊಂದರೆಗಳ ನಿವಾರಣೆ ಶನಿದೇವನ ಪೂಜೆ ಮಾಡಿ.
ಮಿಥುನ ರಾಶಿ
ಈ ದಿನ ಮಿಥುನ ರಾಶಿಯವರಿಗೆ ಕಠಿಣವಾಗಿರುತ್ತದೆ. ಮನೆಯಲ್ಲಿ ಒತ್ತಡ ಹೆಚ್ಚಾಗಬಹುದು. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಲು ಕಷ್ಟವಾಗಲಿದೆ. ಹಣಕಾಸಿನ ಏರಿಳಿತಗಳು ಇದ್ದೇ ಇರುತ್ತವೆ. ಕುಟುಂಬದ ಪ್ರತಿಷ್ಠೆಗೆ ಶತ್ರುಗಳು ಅಡ್ಡಿಯಾಗಬಹುದು. ನಿಮ್ಮ ಸಹೋದರ ಸಹೋದರಿಯರಿಂದ ನಿಮಗೆ ಬೆಂಬಲ ಸಿಗುವುದಿಲ್ಲ. ಇದರಿಂದ ಪರಿಹಾರ ಕಂಡುಕೊಳ್ಳಲು ಇಂದು ಬೆಳಿಗ್ಗೆ ನೀವು ಶನಿದೇವನ ಮಂತ್ರವನ್ನು ಪಠಿಸಿ. ನಾಯಿಗೆ ಆಹಾರ ನೀಡಿ. ಆಂಜನೇಯನ ದೇವಸ್ಥಾನಕ್ಕೆ ಬೇಟಿ ನೀಡಿ.
ಕರ್ಕಾಟಕ ರಾಶಿ
ಜನವರಿ 18 ಅದೃಷ್ಟ ರಾಶಿಗಳಲ್ಲಿ ಕರ್ಕಾಟಕ ರಾಶಿ ಒಂದಾಗಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶ ಸಿಗಲಿದೆ. ಅದು ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ. ಸೃಜನಶೀಲ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಮನಸ್ಸು ಪ್ರಸನ್ನವಾಗಿರಲಿದೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುವುದು. ಸಂಪತ್ತು ಮತ್ತು ಖ್ಯಾತಿ ದ್ವಿಗುಣವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಸುಧಾರಣೆ ಇರುತ್ತದೆ. ಇಂದು ವ್ಯವಹಾರ ಮತ್ತು ವೈಯಕ್ತಿಕ ಕೆಲಸಕ್ಕೆ ಒಳ್ಳೆಯ ದಿನವಾಗಿರುತ್ತದೆ. ಶನಿಯ ಮಂತ್ರವನ್ನು ಈ ದಿನ ಪಠಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಜನವರಿ 18 ಕಠಿಣ ಪರಿಶ್ರಮದ ಫಲವನ್ನು ತರುತ್ತದೆ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಹಠಾತ್ ಆರ್ಥಿಕ ಲಾಭವಾಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರಲಿದ್ದು, ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಅಧಿಕಾರಿಯಿಂದ ಬೆಂಬಲ ಸಿಗುತ್ತದೆ. ಆರ್ಥಿಕ ಪ್ರಗತಿಗೆ ಆಂಜನೇಯನ ಆಶೀರ್ವಾದ ಕೃಪೆ ಇರಲಿದೆ. ಕೆಲಸದ ಸ್ಥಳದಲ್ಲಿ ಪ್ರಗತಿ ಕಂಡುಬರಬಹುದು. ಜೀವನದಲ್ಲಿ ಬರುವ ಅಡೆತಡೆ ನಿವಾರಣೆಗೆ ಹಸುವಿಗೆ ಹಸಿರು ಮೇವು ತಿನ್ನಿಸಿ.
ಕನ್ಯಾ ರಾಶಿ
ಜನವರಿ 18 ಕನ್ಯಾ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಕೆಲಸದಲ್ಲಿ ಅಧಿಕಾರಿಯಿಂದ ಬೆಂಬಲ ಸಿಗುವುದು. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ಬೆಳವಣಿಗೆ ಇರುತ್ತದೆ. ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿ ಮಾಡುವುದರಿಂದ ನಿಮಗೆ ಆರ್ಥಿಕ ಲಾಭವಾಗಬಹುದು. ನಿತ್ಯ ಶನಿ ಮಂತ್ರವನ್ನು ಪಠಿಸಿ. ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ. ಇದರ ಫುಣ್ಯದ ಫಲ ನಿಮ್ಮೊಂದಿಗೆ ಕೊನೆಯವರೆಗೂ ಇರುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಜನವರಿ 18 ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಕಡಿಮೆಯಾಗುತ್ತವೆ. ದಾಂಪತ್ಯ ಜೀವನದಲ್ಲಿ ಸಂತೋಷ, ವೃತ್ತಿಯಲ್ಲಿ ಪ್ರಗತಿ, ಆಸ್ತಿಯಲ್ಲಿ ಹೆಚ್ಚಳವಾಗುವ ಸಮಯ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮ ಬೇಕಾಗುತ್ತದೆ. ಯಾಕೆಂದರೆ ಅದು ಲಾಭ ತರಲಿದೆ. ನೀವು ಬಡವರಿಗೆ ಅನ್ನ ಅಥವಾ ಸಿಹಿತಿಂಡಿಗಳನ್ನು ದಾನ ಮಾಡಬಹುದು.
ವೃಶ್ಚಿಕ ರಾಶಿ
ಜನವರಿ 18 ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಲಾಭ ತಂದುಕೊಡುವುದಿಲ್ಲ. ಪ್ರವಾಸಕ್ಕೆ ಅನುಕೂಲಕರ ವಾತಾವರಣ. ಅತಿಯಾದ ಕೋಪವನ್ನು ತಪ್ಪಿಸಿ. ಹಣಕಾಸಿನ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸವು ಪೂರ್ಣಗೊಳ್ಳುತ್ತದೆ. ಮನೆಯಲ್ಲಿ ಒತ್ತಡ ಹೆಚ್ಚಾಗಬಹುದು. ಹಸಿದ ಪ್ರಾಣಿಗಳಿಗೆ ಆಹಾರ ನೀಡುವುದು ಶುಭ ಫಲವನ್ನು ನೀಡುತ್ತದೆ.
ಧನು ರಾಶಿ
ಜನವರಿ 18 ಅದೃಷ್ಟ ರಾಶಿಗಳಲ್ಲಿ ಧನು ಕೂಡ ಒಂದು. ಈ ದಿನ ಧನು ರಾಶಿಯವರಿಗೆ ಶನಿ ದೇವನ ಕೃಪೆಯಿಂದ ಹಣ ಹರಿದು ಬರಲಿದೆ. ಧನು ರಾಶಿಯವರಿಗೆ ಈ ದಿನ ಹೊಸ ಉದ್ಯೋಗ ಅವಕಾಶ ಸಿಗಲಿದೆ. ನೀವು ಪ್ರವಾಸಕ್ಕೆ ಹೋಗುತ್ತಿದ್ದರೆ ಇದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಬಹಳ ಸಮಯದ ನಂತರ ನೀವು ಸ್ನೇಹಿತರನ್ನು ಭೇಟಿಯಾಗುವಿರಿ. ಇದು ನಿಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ. ಈ ದಿನ ಹನುಮನ ದೇವಸ್ಥಾನಕ್ಕೆ ತೆರಳಿ ತುಪ್ಪದ ದೀಪ ಹಚ್ಚಿ. ಇದರಿಂದ ನಿಮ್ಮ ಪಾಪಗಳು ದೂರವಾಗುತ್ತವೆ.
ಮಕರ ರಾಶಿ
ಶನಿವಾರ ಮಕರ ರಾಶಿಯವರಿಗೆ ಮಿಶ್ರ ಫಲ ಸಿಗಲಿದೆ. ದೇವರಲ್ಲಿ ನಂಬಿಕೆ ಹೆಚ್ಚಾಗುವುದು. ನೀವು ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗುತ್ತೀರಿ. ಸರ್ಕಾರದಿಂದ ಕೆಲಸದಲ್ಲಿ ಬೆಂಬಲ ಸಿಗಲಿದೆ. ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ನಿಮ್ಮ ಕೆಲಸಕ್ಕೆ ಸರಿಯಾಗಿ ಆದಾಯ ಇರುವುದಿಲ್ಲ. ಇದರಿಂದ ನೀವು ಯೋಚನೆ ಮಾಡಬಹುದು. ಇದರ ಪರಿಹಾರಕ್ಕಾಗಿ ಆಲದ ಮರ ನೆಟ್ಟು ಪೋಷಣೆ ಮಾಡಿ, ಹಸಿದ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಜನವರಿ 18 ಅಷ್ಟೊಂದು ಶುಭವಲ್ಲ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರಿಂದ ಸಹಕಾರ ಪಡೆಯುವಲ್ಲಿ ನೀವು ಮೋಸ ಹೋಗಬಹುದು. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಇಂದು ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪ ಹಚ್ಚಿ.
ಮೀನ ರಾಶಿ
ನೀವು ಅಪರಿಚಿತರ ಭಯಗಳಿಂದ ಬಳಲಬಹುದು. ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರಲು ಬಿಡಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಇರುತ್ತದೆ. ಆರೋಗ್ಯ ಮತ್ತು ಮಕ್ಕಳ ಕಾರಣದಿಂದಾಗಿ ನೀವು ಚಿಂತೆಯಲ್ಲಿರುತ್ತೀರಿ. ಬೆಳಿಗ್ಗೆ ಶನಿ ದೇವಸ್ಥಾನಕ್ಕೆ ತೆರಳಲಿ ಪೂಜೆ ಮಾಡಿ. ಇದರಿಂದ ಒಳಿತಾಗುವುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications