Horoscope Today: ದಿನ ಭವಿಷ್ಯ ಜನವರಿ 14; 2025ನೇ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯಂದು 12 ರಾಶಿಗಳ ಜಾತಕ
ದೇಶದೆಲ್ಲೆಡೆ ಜನವರಿ 14 ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಮಕರ ರಾಶಿಯಲ್ಲಿ ಸೂರ್ಯ ಗ್ರಹ ಸಂಚಾರ ಮಾಡಲಿದೆ. ಇದರಿಂದಾಗಿ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನದ ಮಕರ ರಾಶಿಯಲ್ಲಿ ಸೂರ್ಯ ಸಂಕ್ರಮಣ ಹಲವಾರು ರಾಶಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ. ಮಂಗಳವಾರ ಹನುಮಂತನ ಪೂಜೆಗೆ ವಿಶೇಷ ದಿನವಾಗಿದೆ. ಹಾಗಾದರೆ ಈ ದಿನ 12 ಭವಿಷ್ಯ ಹೇಗಿದೆ? ಯಾವ ರಾಶಿಯವರು ಈ ದಿನದ ಅದೃಷ್ಟ ರಾಶಿಗಳು? ಯಾವ ರಾಶಿಯವರ ಮೇಲೆ ಸೂರ್ಯ ದೇವನ ಅನುಗ್ರಹವಿದೆ ಎಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ 2025ನೇ ವರ್ಷದ ಮೊದಲ ಹಬ್ಬ ಅದೃಷ್ಟವನ್ನು ತಂದು ಕೊಡಲಿದೆ. ಉದ್ಯೋಗದಲ್ಲಿ ಅಭಿವೃದ್ಧಿ, ಸಂಪತ್ತಿನಲ್ಲಿ ಹೆಚ್ಚಳ, ಜೀವನದಲ್ಲಿ ಸಂಪೂರ್ಣ ಬದಲಾವಣೆಯ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣವನ್ನು ನೀವು ಆನಂದಿಸುವಿರಿ. ಸಂಬಂಧಗಳಲ್ಲಿ ಆತ್ಮೀಯತೆ ಉಲ್ಬಣಗೊಳ್ಳಲಿದೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಈ ದಿನ ಮಾಡಿದ ದಾನ ಕಾರ್ಯಗಳು ಜೀವನದುದ್ದಕ್ಕೂ ನಿಮ್ಮ ಕೈ ಹಿಡಿಯಲಿವೆ.

ವೃಷಭ ರಾಶಿ
ವೃಷಭ ರಾಶಿಯವರ ಜೀವನದಲ್ಲಿ ಮಕರ ಸಂಕ್ರಾಂತಿ ಹಬ್ಬ ಶುಭ ದಿನಗಳನ್ನು ಪ್ರಾರಂಭಿಸಲಿದೆ. ಎಲ್ಲಾ ಕಾರ್ಯಗಳಲ್ಲೂ ವೃಷಭ ರಾಶಿಯವರಿಗೆ ಯಶಸ್ಸು ಸಿಗಲಿದೆ. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಕೆಲಸದಲ್ಲಿನ ಅಡೆತಡೆಗಳು ದೂರವಾಗಿ ನಿಮ್ಮ ಜೀವನ ಉಜ್ವಲವಾಗುವ ಸಮಯ. ಮಾತಿನಲ್ಲಿ ಮಾಧುರ್ಯ, ನೋಟದಲ್ಲಿ ಆಕರ್ಷಣೆ, ನಡೆಯಲಿ ನಯ ಎಲ್ಲದರ ಬದಲಾವಣೆಯನ್ನು ನೀವು ಗಮನಿಸುವಿರಿ. ಮಕರ ಸಂಕ್ರಾಂತಿಯಂದು ನೀವು ಮಾಡುವ ಒಳ್ಳೆಯ ಕಾರ್ಯಗಳು ಜೀವದಲ್ಲಿ ಬರುವ ಸಮಸ್ಯೆಗಳನ್ನು ತಡೆ ಹಿಡಿಯಲು ಸಹಾಯ ಮಾಡುತ್ತವೆ.
ಮಿಥುನ ರಾಶಿ
ಮಕರ ಸಂಕ್ರಾಂತಿ ಮಿಥುನ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಉದ್ಯೋಗದಲ್ಲಿ ಅನಾವಶ್ಯಕ ಕಿರಿಕಿರಿ, ಒತ್ತಡ ಎಲ್ಲವೂ ದೂರವಾಗಲಿದೆ. ನಿಮ್ಮ ಶತ್ರುಗಳು ಮಿತ್ರರಾಗುವ ಸಮಯ. ಹಣಕಾಸಿನ ವಿಷಯಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಲಾಭದಾಯಕ ಹುದ್ದೆಗೆ ಇಂದು ಅವಕಾಶ ಬರಬಹುದು. ಆಸ್ತಿ, ವಾಹನ, ಮನೆ ಖರೀದಿಗೆ ಪೂಜೆಗೆ ನಿಮಗಿದು ಅದ್ಭುತ ಸಮಯಯವಾಗಿದೆ. ಈ ದಿನ ಸೂರ್ಯ ದೇವನನ್ನು ಪೂಜಿಸಿ, ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ. ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇದು ಶುಭ ದಿನವಾಗಿದೆ. ಮಕರ ರಾಶಿಯಂದು ಸೂರ್ಯ ದೇವರನ್ನು ಪೂಜಿಸುವುದರಿಂದ ತುಂಬಾ ಶುಭ ಫಲಗಳನ್ನು ನೀವು ಪಡೆಯುವಿರಿ. ರಾಜಕೀಯ ಆಕಾಂಕ್ಷೆಗಳು ಈಡೇರುತ್ತವೆ. ಕುಟುಂಬದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಅನಗತ್ಯವಾಗಿ ಓಡಾಡಬೇಕಾಗಬಹುದು. ಆದರೆ ಇಂದು ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಹನುಮನ ಕೃಪೆಯಿಂದ ಯಾವುದೇ ಸಮಸ್ಯೆಗಳು ಶುಭ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ನಿಮ್ಮ ಪ್ರಯತ್ನದ ಫಲವನ್ನು ಇಂದು ನೀವು ಪಡೆಯುವಿದಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ 2025ನೇ ವರ್ಷದ ಮೊದಲ ಹಬ್ಬ ಮಂಗಳಕರವಾಗಿದೆ. ವ್ಯವಹಾರದಲ್ಲಿ ಲಾಭ, ಸಂಪತ್ತಿನಲ್ಲಿ ಹೆಚ್ಚಳ, ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಪಡೆಯುವ ಸುವರ್ಣ ಕಾಲವಿದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಏಕಾಂಗಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಕರ ಸಂಕ್ರಾಂತಿ ಮಿಶ್ರ ಫಲ ನೀಡಲಿದೆ. ಮಾಡಿದ ತಪ್ಪುಗಳನ್ನು ನೀವು ತಿದ್ದಿಕೊಳ್ಳುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಆರ್ಥಿಕ ಜೀವನ ಬಲವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಮನೆಯ ಹಿರಿಯರ ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಇಂದು ಸೂರ್ಯ ದೇವನಿಗೆ ಪೂಜೆ ಮಾಡಿ. ಬಡವರಿಗೆ ದಾನ ಮಾಡಿ. ಇದರಿಂದ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ತುಂಬಾ ಸಂತೋಷದ ದಿನವನ್ನು ಆನಂದಿಸುತ್ತಾರೆ. ಮಕರ ಸಂಕ್ರಾಂತಿಯ ದಿನ ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ಜನವರಿ 14 ನೀವಂದುಕೊಂಡಂತೆ ಇರುತ್ತದೆ. ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಆಸೆ ಈಡೇರುವ ಸಮಯ ಇದಾಗಿದೆ. ನಿಮ್ಮ ಶತ್ರುಗಳು ಮಿತ್ರರರಾಗುವ ಸಮಯವಿದು. ಸೂರ್ಯ ದೇವನಿಗೆ ಇಂದು ಪೂಜೆ ಸಲ್ಲಿಸಿ, ಎಲ್ಲರೊಂದಿಗೆ ಹಬ್ಬವನ್ನು ಆಚರಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಅದ್ಭುತವಾಗಿರುತ್ತದೆ. ಮಕರ ಸಂಕ್ರಾಂತಿ ವೃಶ್ಚಿಕ ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಯನ್ನು ತರಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಸಹೋದರರು ಮತ್ತು ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ದಾಂಪತ್ಯದಲ್ಲಿ ಸಂತೋಷ ಹೆಚ್ಚಾಗುವುದು. ನಾನಾ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಬೆಳಗ್ಗೆ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ, ಸಾಧ್ಯವಾದರೆ ಅಗತ್ಯ ಇರುವವರಿಗೆ ಆಹಾರ ನೀಡಿ.
ಧನು ರಾಶಿ
ಮಕರ ಸಂಕ್ರಾಂತಿ ಹಬ್ಬದಂದು ಧನು ರಾಶಿಯವರಿಗೆ ಸಂಪತ್ತು, ಖ್ಯಾತಿ, ಆತ್ಮಗೌರವ ಹೆಚ್ಚಳವಾಗುತ್ತದೆ. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ನೀವು ಆರ್ಥಿಕ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಮನೆಯಲ್ಲಿ ಎಲ್ಲಾ ಸಂಬಂಧಿಕರೊಂದಿಗೆ ಅತ್ಯಂತ ಸಂತೋಷದಿಂದ ಹಬ್ಬವನ್ನು ಆಚರಿಸುವಿರಿ. ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಈ ದಿನ ಮಾಡಿದ ಪುಣ್ಯದ ಕಾರ್ಯಗಳು ನಿಮ್ಮೊಂದಿಗೆ ಸದಾ ಇರುತ್ತವೆ.
ಮಕರ ರಾಶಿ
ಮಕರ ಸಂಕ್ರಾಂತಿಯಂದು ಮಕರ ರಾಶಿಯವರಿಗೆ ಸಾಕಷ್ಟು ಫಲಪ್ರದವಾಗಿರುತ್ತದೆ. ಜೀವನದಲ್ಲಿ ಅಂದುಕೊಮಡ ಕಾರ್ಯಗಳೆಲ್ಲವೂ ನೀವಂದುಕೊಂಡಂತೆ ನಡೆಯಲಿದೆ. ಮನೆಯಲ್ಲಿ ಸಂಪತ್ತಿನ ಮಳೆಯಾಗಲಿದೆ. ದುಬಾರಿ ವಸ್ತುಗಳು ಉಡುಗೊರೆಯಾಗಿ ಬರಲಿದೆ. ಆಸ್ತಿ, ವಾಹನ, ಮನೆ ಖರೀದಿ ಮಾಡುವಿರಿ. ಲಾಭದಾಯ ಹುದ್ದೆಗಳನ್ನು ಇಂದು ಆರಂಭಿಸುವಿರಿ. ಎಲ್ಲಾ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಈ ದಿನ ಸೂರ್ಯ ದೇವನನ್ನು ಪೂಜಿಸಿ. ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯಲು ನಿತ್ಯ ಸೂರ್ಯ ನಮಸ್ಕಾರ ಮಾಡಿ ಕೈಲಾದಷ್ಟು ದಾನದ ಕಾರ್ಯಗಳನ್ನು ಮಾಡಿ.
ಕುಂಭ ರಾಶಿ
ಜನವರಿ 14 ಮಕರ ಸಂಕ್ರಾಂತಿ ಹಬ್ಬ ಕುಂಭ ರಾಶಿಯವರಿಗೆ ಎಳ್ಳು ಬೆಲ್ಲದಂತೆ ಮಿಶ್ರವಾದ ದಿನವಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಆರ್ಥಿಕ ಜೀವನ ಸುಧಾರಣೆ ಕಾಣಲಿದೆ. ಬೆಳಿಗ್ಗೆ ತಂದೆಯಿಂದ ಆಶೀರ್ವಾದ ಪಡೆಯಿರಿ, ಸೂರ್ಯನಿಗೆ ನೈವೇದ್ಯ ಅರ್ಪಿಸಿ ಪೂಜೆ ಮಾಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಜನವರಿ 14 ಮಕರ ಸಂಕ್ರಾಂತಿ ಶುಭ ದಿನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಬೆಳಿಗ್ಗೆ ಬೆಳಿಗ್ಗೆ ಸೂರ್ಯ ದೇವರಿಗೆ ನೈವೇದ್ಯವನ್ನು ಅರ್ಪಿಸಿ ಪೂಜಿಸಿ. ಈ ವರ್ಷದ ಆರಂಭ ಒಳಿತಾಗಲೆಂದು ಮನೆ ದೇವರನ್ನು ಪೂಜಿಸಿ ಒಳಿತನ ಕಾರ್ಯದ ಮೂಲಕ ವರ್ಷವನ್ನು ಆರಂಭಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ಒದಗಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಸಿ)
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications