Horoscope Today: ದಿನ ಭವಿಷ್ಯ ಜನವರಿ 11- ಈ ರಾಶಿಗೆ ಹನುಮನ ಆಶೀರ್ವಾದದಿಂದ ವರ್ಷಪೂರ್ತಿ ಹಣ
ಶನಿವಾರ ಜನವರಿ 11 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಗ್ರಹಗಳ ಸ್ಥಾನದ ಪ್ರಕಾರ ಮೇಷ, ಸಿಂಹ, ತುಲಾ, ಮಕರ ಮತ್ತು ಮೀನ ರಾಶಿಯ ಜನರು ಈ ದಿನ ಶನಿ ದೇವನ ಆಶೀರ್ವಾದ ಪಡೆಯಲಿದ್ದಾರೆ. ಈ ರಾಶಿಗಳಿಗೆ ವೃತ್ತಿ, ಶಿಕ್ಷಣ ಮತ್ತು ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳು ಸಿಗಲಿವೆ.
ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳನ್ನು ಇಂದು ಪಡೆಯುತ್ತಾರೆ. ಈ ದಿನ ಹೊಸ ಉದ್ಯೋಗ ಅವಕಾಶಗಳು ಸಿಗಲಿದೆ. ಜೊತೆಗೆ ಕುಟುಂಬದಲ್ಲಿ ವಾತಾವರಣ ಸಂತೋಷದಿಂದ ತುಂಬಿರುತ್ತದೆ. ಹಾಗಾದರೆ 12 ರಾಶಿಗಳ ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿ ಈ ದಿನದ ಅದೃಷ್ಟ ರಾಶಿಗಳು ಎಂದು ತಿಳಿಯೋಣ.

ಮೇಷ ರಾಶಿ
ಜನವರಿ 11 ಗಜಕೇಸರಿ ಯೋಗ ರೂಪಗೊಳ್ಳುತ್ತದೆ. ಈ ದಿನ ಮೇಷ ರಾಶಿಯವರಿಗೆ ಮಂಗಳಕರವಾಗಿದೆ. ಮೇಷ ರಾಶಿಯವರಿಗೆ ಈ ದಿನ ಸಾಮಾಜಿಕ ಪ್ರತಿಷ್ಠೆಯನ್ನು ನೀಡುತ್ತದೆ. ಮನಸ್ಸಿನಲ್ಲಿ ಸಂತೋಷ ನೆಲೆಸಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ ಮತ್ತು ಮಂಗಳ ದೇವನ ಮಂತ್ರವನ್ನು ಪಠಿಸಿ.
ವೃಷಭ ರಾಶಿ
ಆರ್ಥಿಕ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸದಲ್ಲಿ ಒತ್ತಡವನ್ನು ಅನುಭವಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ. ಮನಸ್ಸು ಪ್ರಕ್ಷುಬ್ಧವಾಗಿ ಇರುತ್ತದೆ. ಉದ್ಯೋಗ ಅವಕಾಶಗಳು ಹೆಚ್ಚಾಗಲಿದೆ. ಆದರೆ ಆರೋಗ್ಯ ಸಂಬಂಧಿಸಿ ಸಮಸ್ಯೆಗಳು ಎದುರಾಗಬಹುದು. ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಬೆಳಿಗ್ಗೆ ಶನಿದೇವನನ್ನು ಪೂಜಿಸಿ, ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಇದರಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಜನವರಿ 11 ಶುಭ ತರಲಿದೆ. ಈ ದಿನ ಮಿಥುನ ರಾಶಿಯವರ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶಿಕ್ಷಕರನ್ನು ಭೇಟಿ ಮಾಡುವಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಉದ್ಯಮದಲ್ಲಿ ಆದಾಯ ಹೆಚ್ಚಾಗಲಿದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ತಿನ್ನಿಸಿ ಪೂಜೆ ಮಾಡಿ. ಶನಿ ಮಂತ್ರವನ್ನು ಪಠಿಸಿ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಜನವರಿ 11 ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ಸಂಗಾತಿಗೆ ಉಡುಗೊರೆಗಳನ್ನು ನೀಡುವುದರಿಂದ ಸಂಬಂಧ ಗಟ್ಟಿಯಾಗಲಿದೆ. ನೀವು ಶಿಕ್ಷಕರನ್ನು ಸನ್ಮಾನಿಸಬಹುದು. ನಿಮ್ಮ ಮೇಲಿನ ಕೆಲಸದ ಒತ್ತಡ ಇಂದು ಕಡಿಮೆಯಾಗಲಿದೆ. ಸಂಗಾತಿಯಿಂದ ಬೆಂಬಲ ನಂಬಿಕೆ ಹೆಚ್ಚಾಗಲಿದೆ. ಪರಸ್ಪರ ಪ್ರೀತಿಯ ಜೀವನ ನಡೆಸುವಿರಿ. ಆಲದ ಗಿಡವನ್ನು ನೆಟ್ಟು ಪೋಷಣೆ ಮಾಡುವುದರಿಂದ ಅದು ಬೆಳದಂತೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ.
ಸಿಂಹ ರಾಶಿ
ಸಿಂಹ ರಾಶಿಯವರ ಮೇಲೆ ಶನಿ ದೇವರ ಆಶೀರ್ವಾದ ಇರಲಿದೆ. ಸಿಂಹ ರಾಶಿಯವರಿಗೆ ಈ ದಿನ ಕಠಿಣ ಪರಿಶ್ರಮದ ಫಲವನ್ನು ತರಲಿದೆ. ನೀವು ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಲಾಭವನ್ನು ಗಳಿಸಬಹುದು. ಹಳೆಯ ಯೋಜನೆಯಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸಲು ಅನುವು ಮಾಡಿಕೊಡುತ್ತದೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಇರಬಹುದು. ಬೆಳಿಗ್ಗೆ ಸೂರ್ಯನಿಗೆ ನೀರನ್ನು ಅರ್ಪಿಸಿ, ಮಂತ್ರವನ್ನು ಪಠಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಜನವರಿ 11 ಮಿಶ್ರ ಫಲ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಈ ದಿನ ಜಗಳಗಳನ್ನು ತಪ್ಪಿಸಿ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಉದ್ಯೋಗ ಪರೀಕ್ಷೆಗಳಲ್ಲಿನ ಸಂದರ್ಶನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಸ್ನೇಹಿತರೊಂದಿಗೆ ಎಲ್ಲೋ ಹೊರಗೆ ಹೋಗಬಹುದು. ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಿಗ್ಗೆ ಹಸುವಿಗೆ ಆಹಾರ ನೀಡಿ ಮತ್ತು ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಿ. ಇದರಿಂದ ನಿಮ್ಮ ಪುಣ್ಯದ ಫಲ ಹೆಚ್ಚಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಜನವರಿ 11 ಅಷ್ಟೊಂದು ಉತ್ತಮವಾಗಿಲ್ಲ. ಈ ದಿನ ನೀವು ದೂರದ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು. ಅಪಘಾತವಾಗುವ ಸಾಧ್ಯತೆಗಳು ಇವೆ. ತಾಳ್ಮೆ ಬೆಳೆಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯವಹಾರದಲ್ಲಿ ಮೋಸ ಹೋಗಬಹುದು. ಲಾಭ ಕೈ ಸೇರುವುದಿಲ್ಲ. ಆರ್ಧಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ.
ವೃಶ್ಚಿಕ ರಾಶಿ
ಇನ್ನೂ ವೃಶ್ಚಿಕ ರಾಶಿಯವರಿಗೆ ಶನಿವಾರ ಶುಭವಾಗಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೊಸ ವ್ಯವಹಾರ ಪ್ರಾರಂಭ ಮಾಡುವುದನ್ನು ಮುಂದೂಡಿ. ನಿಮ್ಮವರು ನಿಮಗೆ ಮೋಸ ಮಾಡಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ ಮತ್ತು ಕೋತಿಗೆ ಬೆಲ್ಲ, ಕಡಲೆ ಅಥವಾ ಬಾಳೆಹಣ್ಣನ್ನು ತಿನ್ನಿಸಿ.
ಧನು ರಾಶಿ
ಧನು ರಾಶಿಯವರ ಮಹಿಳೆಯರಿಗೆ ಜನವರಿ 11 ರಂದು ಮಂಗಳಕರ ದಿನವಾಗಿದೆ. ನಿಮ್ಮ ಅತ್ತೆ-ಮಾವರಿಂದ ನಿಮಗೆ ಬೆಂಬಲ ಸಿಗುತ್ತದೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷದ ಭಾವನೆ ಇರುತ್ತದೆ. ಉದ್ಯೋಗದಲ್ಲಿ ನಿಮಗೆ ಸಂಬಂಧಪಟ್ಟ ಅಧಿಕಾರಿಯ ಬೆಂಬಲ ಸಿಗುತ್ತದೆ. ಹೆಚ್ಚು ಓಡಾಡುವುದು ಇರುವುದರಿಂದ ಸುಸ್ತಾಗಬಹುದು. ಸಣ್ಣ ಪುಟ್ಟ ನೋವುಗಳು ಖಾಣಿಸಿಕೊಳ್ಳಬಹುದು. ಇದಕ್ಕೆ ಧೈರ್ಯ ಕಳೆದುಕೊಳ್ಳುವುದು ಒಳ್ಳೆಯದಲ್ಲ. ಸಮಸ್ಯೆಗಳಿಗೆ ಪರಿಹಾರವಾಗಿ ಹನುಮಾನ್ ಅಥವಾ ಶನಿ ದೇವನ ದೇವಸ್ಥಾನಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಸಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ಈ ದಿನ ಮಕರ ರಾಶಿಯವರಿಗೆ ಹೊಸ ಜವಾಬ್ದಾರಿಗಳು ಹೆಚ್ಚಾಗಬಹುದು. ಹನುಮನ ಆಶೀರ್ವಾದ ಮಕರ ರಾಶಿಯವರ ಮೇಲೆ ಇರಲಿದೆ. ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ನೀವು ಹೊಸ ಯೋಜನೆಯನ್ನು ಮಾಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನೀವು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುವ ಸಮಯ ನಿಮಗೆ ಬಂದಿದೆ.
ಕುಂಭ ರಾಶಿ
ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಕೆಲಸದಲ್ಲಿ ನಿಮಗೆ ಕೆಲವು ಹೆಚ್ಚುವರಿ ಜವಾಬ್ದಾರಿಗಳು ಸಿಗಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ನಿಮ್ಮ ನಿಯತ್ತಿನ ಗುಣ ನಿಮ್ಮ ಆತ್ಮಿವಿಶ್ವಾಸವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಶನಿಯ ಮಂತ್ರವನ್ನು ಪಠಿಸಿ. ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪವನ್ನು ಬೆಳಗಿಸಿ.
ಮೀನ ರಾಶಿ
ಮೀನ ರಾಶಿಯವರಿಗೆ ಜನವರಿ 11 ಬಹಳ ಶುಭ ದಿನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ನೀವು ಯಾವುದೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಉತ್ತಮ ಫಲಿತಾಂಶಗಳ ಸೂಚನೆಗಳಿವೆ. ಇದಲ್ಲದೆ ನಿಮಗೆ ಹೊಸ ಉದ್ಯೋಗ ಅವಕಾಶಗಳು ಸಿಗಬಹುದು. ಅದು ನಿಮ್ಮ ಭವಿಷ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)
-
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
ಅಕ್ಷಯ ತೃತೀಯದಂದೇ ಸೂರ್ಯನ ನಕ್ಷತ್ರಕ್ಕೆ ಚಂದ್ರನ ಪ್ರವೇಶ: ನಾಲ್ಕು ರಾಶಿಯವರಿಗೆ ಒಲಿದು ಬರುವುದು ಸಂಪತ್ತು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications