Horoscope Today: ದಿನ ಭವಿಷ್ಯ ಜನವರಿ 3; 12 ರಾಶಿಗಳ ಶುಕ್ರವಾರದ ಭವಿಷ್ಯ ಹೇಗಿದೆ? ಜಾತಕ, ಪರಿಹಾರ ತಿಳಿಯಿರಿ

ಹೊಸ ವರ್ಷ ಆರಂಭವಾಗಿದೆ. ಜನವರಿ 3 ವರ್ಷದ ಮೂರನೇ ದಿನ ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಶುಕ್ರವಾರ ರಾಹುಕಾಲ ಬೆಳಗ್ಗೆ 10:57ರಿಂದ ಮಧ್ಯಾಹ್ನ 12:23ರವರೆಗೆ ಇರುತ್ತದೆ, ಗುಳಿಕಕಾಲ ಬೆಳಿಗ್ಗೆ 7:30 ರಿಂದ 9:00ರವರೆಗೆ ಹಾಗೂ ಯಮಗಂಡ ಕಾಲ 3:00 ರಿಂದ 4:30ನಿಮಿಷಗಳವರೆಗೆ ಇರುತ್ತದೆ.

ಈ ದಿನ ಕುಂಭದಲ್ಲಿ ಚಂದ್ರ ಮತ್ತು ಶುಕ್ರನ ಸಂಯೋಗದಿಂದ ಕಲಾ ಯೋಗ ರೂಪುಗೊಳ್ಳುತ್ತದೆ. ಅಲ್ಲದೆ ಪೌಷ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಾಗಿದ್ದು, ಈ ದಿನ ಕಲಾಯೋಗದೊಂದಿಗೆ ರವಿಯೋಗ ಮತ್ತು ಧನಿಷ್ಠಾ ನಕ್ಷತ್ರದ ಶುಭ ಸಂಯೋಗ ಉಂಟಾಗಲಿದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

horoscope today astrological prediction january 3 2025 for 12 zodiac signs in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ತುಂಬಾ ವಿಶೇಷವಾಗಿದೆ. ಜೀವನದಲ್ಲಿ ಸಂತೋಷ ನೆಲೆಸಲಿದೆ. ನೀವು ಆಟಗಾರರಾಗಿದ್ದರೆ ಇಂದು ನಿಮಗೆ ವಿಶೇಷ ದಿನವಾಗಿರುತ್ತದೆ. ನಿಮ್ಮ ನೆಚ್ಚಿನ ಆಟದಲ್ಲಿ ನೀವು ಗೆಲುವು ಸಾಧಿಸುವಿರಿ. ನಿಮ್ಮ ಕಷ್ಟಗಳ ಪರಿಹಾರಕ್ಕಾಗಿ ಬೆಳಿಗ್ಗೆ ಹಸುವಿಗೆ ಆಹಾರ ನೀಡಿ. ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಿ, ಲಕ್ಷ್ಮೀ ದೇವಿ ಮಂತ್ರವನ್ನು ಪಠಿಸಿ ಈ ದಿನ ಚೆನ್ನಾಗಿರುತ್ತದೆ.

ವೃಷಭ ರಾಶಿ

ಈ ದಿನ ಯಾರೊಂದಿಗೂ ವಾದ ಮಾಡಬೇಡಿ. ಇಲ್ಲದಿದ್ದರೆ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಇತರ ಜನರೊಂದಿಗೆ ಮೃದುವಾಗಿ ಮಾತನಾಡಿ. ಇದರಿಂದ ನಿಮ್ಮ ದಿನವು ಉತ್ತಮವಾಗಿ ಸಾಗುತ್ತದೆ. ಹೆಚ್ಚು ಹಣ ಖರ್ಚು ಮಾಡುವುದನ್ನು ತಪ್ಪಿಸಿ. ಬೆಳಗ್ಗೆ ಕೋತಿಗೆ ಆಹಾರವನ್ನು ನೀಡಿ. ಬಡವರಿಗೆ ಅಕ್ಕಿಯನ್ನು ದಾನ ಮಾಡಿ. ಕುಬೇರನನ್ನು ಆರಾಧನೆ ಮಾಡಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಮಿಶ್ರ ದಿನ ಇದಾಗಿರುತ್ತದೆ. ಸಮಾಜದಲ್ಲಿ ಖ್ಯಾತಿಯನ್ನು ನೀವು ಹೊಂದುವಿರಿ. ನಿಮ್ಮ ಮಾತನ್ನು ಜನ ಕೇಳುತ್ತಾರೆ. ಆತ್ಮೀಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೀವು ಪ್ರಮುಖ ವ್ಯಕ್ತಿಗಳಾಗಿರುತ್ತೀರಿ. ಶುಭ ಕಾರ್ಯಗಳು ನಿಮ್ಮ ಸಮ್ಮುಖದಲ್ಲಿ ನೆರವೇರಲಿವೆ. ನಿಮ್ಮ ಗೌರವ ಹೆಚ್ಚಾಗಲಿದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ. ಸಿಹಿ ಅನ್ನ ತಯಾರಿಸಿ ಅಗತ್ಯವಿರುವವರಿಗೆ ಕೊಡುವುದರಿಂದ ಶತ್ರುಗಳ ಕೆಟ್ಟ ದೂರವಾಗುತ್ತದೆ.

ಕಟಕ ರಾಶಿ

ಕಟಕ ರಾಶಿಯವರಿಗೆ ಈ ದಿನ ಅಷ್ಟೊಂದು ಉತ್ತಮವಾಗಿರುವುದಿಲ್ಲ. ನೀವು ಸ್ನೇಹಿತರ ಅಥವಾ ಸಂಬಂಧಿಕರ ಮನೆಗೆ ಹಣಕಾಸಿನ ವಿಚಾರದಲ್ಲಿ ಅಲೆದಾಡಬಹುದು. ನಿಮ್ಮ ಮನಸ್ಸು ಎಲ್ಲೋ ಅಲೆದಾಡುತ್ತಲೇ ಇರುತ್ತದೆ. ಇದಕ್ಕೆ ಪರಿಹಾರವಾಗಿ ಬೆಳಿಗ್ಗೆ ಒಬ್ಬ ಬಡವನಿಗೆ ಅಕ್ಕಿಯನ್ನು ದಾನ ಮಾಡಿ. ಅರಿಶಿನ ಬೆರೆಸಿದ ಅನ್ನವನ್ನು ಸೂರ್ಯನಿಗೆ ಅರ್ಪಿಸಿ ಮತ್ತು ಗುರುವಿನ ಮಂತ್ರವನ್ನು ಪಠಿಸಿ. ಎಲ್ಲಾ ತೊಂದರೆಗಳು ದೂರವಾಗುತ್ತವೆ.

ಸಿಂಹ ರಾಶಿ

ಇಂದು ಸಿಂಹ ರಾಶಿಯವರಿಗೆ ಶಕ್ತಿ ತುಂಬಿದ ದಿನವಾಗಿರುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಕುಟುಂಬದ ಎಲ್ಲಾ ಸದಸ್ಯರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ನೀವು ದೀರ್ಘ ಪ್ರಯಾಣಕ್ಕೆ ಹೋದರೆ ಅದನ್ನು ನೀವು ಆನಂದಿಸುವಿರಿ. ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿಯಾಗಿ ನೀವು ತುಂಬಾ ಸಂತೋಷಪಡುತ್ತೀರಿ. ಬೆಳಿಗ್ಗೆ ಲಕ್ಷ್ಮೀ ದೇವಿಯ ಆರಾಧನೆ ಮಾಡಿ ಪೂಜಿಸಿ. ಬೆಳಗ್ಗೆ ತಿಂಡಿ ತಿನ್ನುವ ಮುನ್ನ ಹಸುವಿಗೆ ಆಹಾರ ನೀಡಿ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಸಂಬಂಧಿಕರಿಂದ ಇಂದು ಸಂತೋಷದ ಸುದ್ದಿಯನ್ನು ಪಡೆಯುವ ಸಾಧ್ಯತೆಗಳಿವೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವವನ್ನು ಪಡೆಯುವಿರಿ. ಇಂದು ಸಂಪತ್ತು ಗಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿ. ಈ ದಿನ ಹಸುವನ್ನು ಪೂಜಿಸುವುದು ತುಂಬಾ ಉತ್ತಮ ಫಲವನ್ನು ನೀಡಲಿದೆ. ಹಸಿದವರಿಗೆ ಆಹಾರ ನೀಡಿ.

ತುಲಾ ರಾಶಿ

ಅನಗತ್ಯವಾಗಿ ನಿಮ್ಮ ಆರೋಗ್ಯದೊಂದಿಗೆ ಆಟವಾಡಬೇಡಿ. ನಿಮ್ಮ ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ಅವರ ಆರೋಗ್ಯವನ್ನು ನೋಡಿಕೊಳ್ಳಿ. ವ್ಯಾಪಾರದಲ್ಲಿ ಏರಿಳಿತಗಳಿರುತ್ತವೆ ಆದರೆ ಭಯಪಡಬೇಡಿ. ಲಕ್ಷ್ಮೀ ದೇವಿಯ ಆಶೀರ್ವಾದದಿಂದ ಎಲ್ಲಾ ಸಂದರ್ಭಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗಲಿದೆ. ಬಟ್ಟೆ, ಅಕ್ಕಿ ದಾನ ಮಾಡುವುದು ತುಂಬಾ ಒಳ್ಳೆಯ ಫಲವನ್ನು ನೀಡುತ್ತದೆ.

ವೃಶ್ಚಿಕ ರಾಶಿ

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರೆ ಅದರಲ್ಲಿ ಉತ್ತಮ ಅಂಕ ಪಡೆಯುವಿರಿ. ಈ ದಿನ ನೀವಂದುಕೊಂಡಂತೆ ಇರಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪೂಜೆ ಹಾಗೂ ತಂದೆ ತಾಯಿಯ ಆಶೀರ್ವಾದದೊಂದಿಗೆ ಬೆಳಿಗ್ಗೆ ಮನೆಯಿಂದ ಹೊರಡಿ. ಅಗತ್ಯವಿರುವವರಿಗೆ ದಾನ ಮಾಡುವುದು ತುಂಬಾ ಒಳ್ಳೆಯ ಫಲ ನೀಡಲಿದೆ.

ಧನು ರಾಶಿ

ಧನು ರಾಶಿಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಬಂಧುಗಳ ಆಗಮನದಿಂದ ಮನೆಗೆ ಸಂತಸ ಮರಳಲಿದೆ. ಹಿಟ್ಟಿನಿಂದ ಮಾಡಿದ 4 ಪುಟ್ಟ ರೊಟ್ಟಿಯನ್ನುಹಸುವಿಗೆ ನೀಡಿ. ಬೆಳಿಗ್ಗೆ ಹಸುವಿಗೆ ಅರಿಶಿನವನ್ನು ಹಚ್ಚಿ ಪೂಜಿಸಿದ. ಇದರಿಂದ ಜೀವನದಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ.

ಮಕರ ರಾಶಿ

ವಕೀಲರು ಅಥವಾ ಪೋಲೀಸರಾಗಿ ಕೆಲಸ ಮಾಡುವ ಮಕರ ರಾಶಿಯ ಜನರಿಗೆ ಈ ದಿನ ಅತ್ಯಾದ್ಭುತವಾಗಿದೆ. ಯಾವುದೇ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ ಎಂಬುದನ್ನು ಗಮನಿಸಬೇಕು. ನಿಮ್ಮ ವೃತ್ತಿಯಲ್ಲಿ ನಿಮಗೆ ಖ್ಯಾತಿ ಸಿಗಲಿದೆ. ಬೆಳಿಗ್ಗೆ ಒಂದು ಹಸುವಿಗೆ 6 ಬಾಳೆಹಣ್ಣುಗಳನ್ನು ತಿನ್ನಿಸಿ. ಅರಿಶಿನ ಕುಂಕುಮ ಹಚ್ಚಿ ಪೂಜಿಸಿ. ನೀರಿನಲ್ಲಿ ಒಂದು ಹಿಡಿ ಅಕ್ಕಿ ಹಾಕಿ ಸೂರ್ಯನಿ ಅರ್ಪಿಸಿ ಪೂಜಿಸಿ. ಕಪ್ಪು ನಾಯಿಗೆ ಆಹಾರ ನೀಡಿ. ಇದರಿಂದ ನಿಮ್ಮ ಶತ್ರುಗಳ ಕಾಟ ದೂರವಾಗುತ್ತದೆ.

ಕುಂಭ ರಾಶಿ

ಕುಟುಂಬದ ಸದಸ್ಯರೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ ಸಂಬಂಧಗಳು ಸುಧಾರಿಸುತ್ತವೆ. ಕುಟುಂಬದಲ್ಲಿ ಶಾಂತಿ ನೆಲೆಸಲು ಈ ದಿನ ಉತ್ತಮವಾಗಿರುತ್ತದೆ. ಬೆಳಿಗ್ಗೆ ನಿಮ್ಮ ತಂದೆ ತಾಯಿಯರ ಆಶೀರ್ವಾದ ಪಡೆದು ಮನೆಯಿಂದ ಹೊರಡಿ, ಇದು ಸದಾ ಕಾಲ ನಿಮ್ಮನ್ನು ಕಾಪಾಡುತ್ತದೆ. ಸೂರ್ಯನಿಗೆ ಅಕ್ಕಿ ಮತ್ತು ಅರಿಶಿನ ಬೆರೆಸಿದ ನೀರನ್ನು ಅರ್ಪಿಸಿ. ಶನಿ ಮಂತ್ರವನ್ನು ಪಠಿಸಿ.

ಮೀನ ರಾಶಿ

ವ್ಯಾಪಾರ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನವಾಗಿದೆ. ದೂರ ಪ್ರಯಾಣದ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಬೆಳಿಗ್ಗೆ ಹಸು ಮತ್ತು ನಾಯಿಗೆ ಆಹಾರವನ್ನು ನೀಡಿ. ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+