Horoscope August 3: ಪಂಚಕ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವ ದಿನ

Horoscope August 3: ಸಾಮಾನ್ಯವಾಗಿ ಬೆಳಗ್ಗೆ ಆಯಿತೆಂದರೆ ಸಾಕು ಬಹುತೇಕ ಮಂದಿ ತಮ್ಮ ದಿನನಿತ್ಯದ ಬದುಕನ್ನ ಹೇಗೆ ಆರಂಭಿಸಬೇಕು ಎನ್ನುವ ಚಿಂತೆಯಲ್ಲಿರುತ್ತಾರೆ. ಹಾಗಾದ್ರೆ ಚಿಂತೆ ಯಾಕೆ.. ಇಂದಿನ ದಿನದ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇಂದಿನ ದಿನವು ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Horoscope August 3 2026 Aries to Pisces Astrology Predictions in Kannada Know Complete details

ಮೇಷ ರಾಶಿ

ಆತ್ಮವಿಶ್ವಾಸ ಹೆಚ್ಚುವುದು. ಕಠಿಣ ಪರಿಶ್ರಮವು ಉತ್ತಮ ಫಲ ನೀಡುವುದು. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಗುವುದು. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು.

ವೃಷಭ ರಾಶಿ

ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗುವುದು. ಸಹೋದ್ಯೋಗಿಗಳ ಬೆಂಬಲದಿಂದ ಕೆಲಸಗಳು ಪೂರ್ಣಗೊಳ್ಳುವುದು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ

ಹಳೆಯ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಹೊಸ ಆಲೋಚನೆಗಳು ಮತ್ತು ಬುದ್ಧಿವಂತ ನಿರ್ಧಾರಗಳು ನಿಮ್ಮ ಕೆಲಸವನ್ನು ಸುಲಭವಾಗಿಸುವುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುವುದು.

ಕರ್ಕಾಟಕ ರಾಶಿ

ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹಣಕಾಸಿನ ವಿಷಯಗಳಲ್ಲಿ ಆತುರಪಡಬೇಡಿ. ಹೊಸ ಕೆಲಸ ಪ್ರಾರಂಭಿಸುವ ಯೋಚನೆ ಇದ್ದರೆ ಇದು ಸೂಕ್ತ ಸಮಯ. ಮಾನಸಿಕ ಶಾಂತಿ ಕಾಪಾಡಿಕೊಳ್ಳಿ.

ಸಿಂಹ ರಾಶಿ

ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಹೆಚ್ಚುವುದು. ಮಾಡುವ ಕೆಲಸಕ್ಕೆ ಉತ್ತಮ ಮನ್ನಣೆ ಸಿಗುವುದು. ಕುಟುಂಬ ಸದಸ್ಯರೊಂದಿಗೆ ಮನಬಿಚ್ಚಿ ಮಾತನಡುವುದರಿಂದ ಸಂಬಂಧ ಗಟ್ಟಿಯಾಗುವುದು. ಆರೋಗ್ಯ ಉತ್ತಮವಾಗಿರುವುದು.

ಕನ್ಯಾ ರಾಶಿ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರಬೇಕು. ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.

ತುಲಾ ರಾಶಿ

ಆತ್ಮವಿಶ್ವಾಸ ಹೆಚ್ಚಾಗುವುದು. ಕೆಲಸದಲ್ಲಿ ತಂಡವಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗುವುದು. ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯದತ್ತ ಕೂಡಾ ಗಮನ ಹರಿಸಿ.

ವೃಶ್ಚಿಕ ರಾಶಿ

ಹೊಸ ಕೆಲಸಗಳನ್ನು ಪ್ರಾರಂಭಿಸಲು ಒಳ್ಳೆಯ ದಿನ. ಸಹೋದ್ಯೋಗಿಗಳೊಂದಿಗೆ ವಾದಕ್ಕೆ ಇಳಿಯಬೇಡಿ. ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುವುದು.

ಧನು ರಾಶಿ

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ನಿಮಗೆ ವಹಿಸಿರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಆಶಾವಾದಿ ಮನೋಭಾವದಿಂದ ಮುನ್ನಡೆದರೆ, ಯಶಸ್ಸು ನಿಮ್ಮದಾಗುವುದು.

ಮಕರ ರಾಶಿ

ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುವುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ. ಖರ್ಚುಗಳನ್ನು ನಿಯಂತ್ರಿಸಿ. ಹೂಡಿಕೆಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕುಂಭ ರಾಶಿ

ಹೊಸ ಕೆಲಸ ಆರಂಭಿಸಲು ಸಮಯ ಉತ್ತಮವಾಗಿದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು.ವಿದ್ಯಾರ್ಥಿಗಳಿಗೆ ಸಮಸಯ ಅನುಕೂಲಕರವಾಗಿರಲಿದೆ.ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ ರಾಶಿ

ಪ್ರಮುಖ ವ್ಯಕ್ತಿಯೊಂದಿಗಿನ ಭೇಟಿಯು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+