April 20 Horoscope: ಇಂದು ಈ ರಾಶಿಯವರನ್ನು ಕಾಡುವುದು ಆರೋಗ್ಯ ಸಮಸ್ಯೆ : ಹಣಕಾಸಿನ ಸಮಸ್ಯೆ ಕೂಡಾ ಕಾಡುವುದು

Horoscope April 20: ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಸೋಮವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 7:30 ರಿಂದ 9:00 ರವರೆಗೆ ಇರುತ್ತದೆ. ಏಪ್ರಿಲ್ 20 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಸಾಮಾಜಿಕ ಕಾರ್ಯಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಸಣ್ಣ ವಿಚಾರಕ್ಕೂ ಕೋಪ ಮಾಡುವುದನ್ನು ನಿಲ್ಲಿಸಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Horoscope April 20

ವೃಷಭ ರಾಶಿ:

ಯಾರಿಂದಲೂ ಪ್ರಭಾವಿತರಾಗಬೇಡಿ.ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ.

ಮಿಥುನ ರಾಶಿ:

ಸಾಮಾಜಿಕ ಸ್ಥಾನಮಾನದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ಸಮಸ್ಯೆಗಳು ತಕ್ಕಮಟ್ಟಿಗೆ ಸುಧಾರಣೆಯಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಈ ದಿನ ಬೇಡ. ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಕರ್ಕಾಟಕ ರಾಶಿ:

ಸಾಮಾಜಿಕ ಕ್ಷೇತ್ರದಲ್ಲಿ ಹೊಸಬರ ಪರಿಚಯವಾಗುವುದು.ಬಹಳ ಸಮಯದಿಂದ ಬಾಕಿ ಉಳಿದುಕೊಂಡಿದ್ದ ಕೆಲಸಗಳು ಪೂರ್ಣಗೊಳ್ಳುವುದು.

ಸಿಂಹ ರಾಶಿ:

ಕೆಲಸದಲ್ಲಿ ಏರಿಳಿತಗಳು ಕಂಡುಬರುತ್ತವೆ.ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆದಾಯ ಹೆಚ್ಚಾಗುವುದರ ಜೊತೆಗೆ ವೆಚ್ಚಗಳು ಕೂಡಾ ಏರಿಕೆ ಕಾಣುವುದು. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ:

ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ಲಾಭವಾಗುವುದು. ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಿ.

ತುಲಾ ರಾಶಿ:

ಹಣಕಾಸಿನ ಲಾಭವಾಗುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿರಂಗದಲ್ಲಿ ಹೊಸ ಯಶಸ್ಸು ಸಿಗುವುದು.

ವೃಶ್ಚಿಕ ರಾಶಿ:

ಹಣಕಾಸಿನ ವಿಷಯಗಳಲ್ಲಿ ವಿಶೇಷವಾಗಿ ಜಾಗರೂಕರಾಗಿರಿ.ಕಚೇರಿಯಲ್ಲಿ ವಿರೋಧಿಗಳಿಂದ ತೊಂದರೆ ಉಂಟಾಗಬಹುದು.

ಧನು ರಾಶಿ:

ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೈವಾಹಿಕ ಜೀವನದಲ್ಲಿ ಏರುಪೇರು ಕಂಡುಬರಬಹುದು.ಮಾತನಾಡುವ ವೇಳೆ ಎಚ್ಚರಿಕೆ ಇರಲಿ.

ಮಕರ ರಾಶಿ:

ಆದಾಯ ಇದ್ದಷ್ಟೇ ಇರುವುದು. ಆದರೆ ವೆಚ್ಚಗಳು ಹೆಚ್ಚಾಗಬಹುದು.ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಕಾರ್ಯಕ್ಷಮತೆ ಕ್ರಮೇಣ ಸುಧಾರಿಸುತ್ತದೆ.

ಕುಂಭ ರಾಶಿ:

ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.

ಮೀನ ರಾಶಿ:

ಭಾವನಾತ್ಮಕ ಏರಿಳಿತಗಳು ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಹಣಕಾಸಿನ ವಿಷಯಗಳಲ್ಲಿಯೂ ಎಚ್ಚರಿಕೆ ಅಗತ್ಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+