Horoscope Today: ದಿನ ಭವಿಷ್ಯ ಜನವರಿ 26- ಈ ರಾಶಿಗೆ ಸೂರ್ಯ ದೇವನ ಕೃಪೆಯಿಂದ ಭಾಗ್ಯೋದಯ

ಕಾಲ ಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ಗ್ರಹಗಳ ಸ್ಥಾನ ಬದಲಾವಣೆ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜನವರಿ 26 ಗಣರಾಜ್ಯೋತ್ಸವದಂದು ಕೆಲ ರಾಶಿಯವರ ಜೀವನ ಬದಲಾಗಲಿದೆ. ಈ ದಿನ ಕೆಲ ರಾಶಿಯವರ ಆರ್ಥಿಕ, ವೃತ್ತಿ, ವ್ಯವಹಾರ, ಸಂಪತ್ತು, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಸೂರ್ಯ ದೇವನ ಆಶೀರ್ವಾದವನ್ನು ಕೆಲ ರಾಶಿಯವರು ಪಡೆಯಲಿದ್ದಾರೆ. ಹಾಗಾದರೆ ಜನವರಿ 26ರಂದು 12 ರಾಶಿಗಳ ಭವಿಷ್ಯ ಹೇಗಿದೆ? ಈ ದಿನದ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಜನವರಿ 26 ದೇಶಾದ್ಯಂತ ಪ್ರಯಾಣಿಸುವ ಅವಕಾಶಗಳು ಸಿಗಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ನೀವು ಸಂಬಂಧಿಕರು ಮತ್ತು ಉದ್ಯೋಗಿಗಳಿಂದ ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದ ಪ್ರತಿಷ್ಠೆ ನಿಮ್ಮ ಆತ್ಮವಿಶ್ವಾಸ ಈ ಸಮಯದಲ್ಲಿ ಹೆಚ್ಚಾಗಲಿದೆ. ಈ ದಿನ ಸೂರ್ಯ ದೇವನಿಗೆ ಪೂಜೆಯನ್ನು ಸಲ್ಲಿಸಿ. ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

Dstrology dina bhavishya january 26 12 zodiac signs today prediction

ವೃಷಭ ರಾಶಿ

ಜನವರಿ 26 ವೃಷಭ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಈ ದಿನ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುವುದು. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವ ಪ್ರಯತ್ನಗಳು ಫಲ ನೀಡುತ್ತವೆ. ವ್ಯವಹಾರದ ಖ್ಯಾತಿ ಹೆಚ್ಚಾಗುತ್ತದೆ. ಬೆಳಿಗ್ಗೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸಿ. ಪ್ರಸಾದವನ್ನು ಎಲ್ಲರಿಗೂ ಹಂಚಿ ತಿನ್ನಿ.

ಮಿಥುನ ರಾಶಿ

ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಭೌತಿಕ ಸಂತೋಷದಲ್ಲಿ ಹೆಚ್ಚಳ ಇರುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಒಡಹುಟ್ಟಿದವರು ಅಥವಾ ನೆರೆಹೊರೆಯವರೊಂದಿಗೆ ವಾದಗಳು ಉಂಟಾಗಬಹುದು. ಬುದ್ಧಿವಂತಿಕೆಯಿಮದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸರ್ಕಾರದಿಂದ ಹಣಕಾಸಿನ ಬೆಂಬಲ ದೊರೆಯಲಿದೆ. ಬೆಳಿಗ್ಗೆ ಸೂರ್ಯ ದೇವನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಪುಣ್ಯದ ಕಾರ್ಯಗಳನ್ನು ಮಾಡಿ.

ಕರ್ಕಾಟಕ ರಾಶಿ

ಜನವರಿ 26 ಕರ್ಕಾಟಕ ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಈ ದಿನ ಅದೃಷ್ಟ ರಾಶಿಗಳಲ್ಲಿ ಕರ್ಕಾಟಕ ರಾಶಿ ಒಂದಾಗಿದೆ. ಇಂದು ಸ್ನೇಹಿತರು ಅಥವಾ ಸಂಬಂಧಿಕರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುತ್ತೀರಿ. ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ನೀವು ಸೃಜನಶೀಲ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಕಟಕ ರಾಶಿಯ ಉದ್ಯೋಗಿಗಳಿಗೆ ದಿನ ಉತ್ತಮವಾಗಿದೆ. ವ್ಯವಹಾರವನ್ನು ಮುನ್ನಡೆಸಲು ನೀವು ಹೊಸ ಯೋಜನೆಯನ್ನು ಮಾಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಜನವರಿ 26 ಅಶುಭವಾಗಿದೆ. ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ಸಾಮಾಜಿಕ ಖ್ಯಾತಿಗೆ ಕಳಂಕ ಬರಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆರ್ಥಿಕ ನಷ್ಟವಾಗುವ ಸಾಧ್ಯತೆಗಳಿವೆ. ಧಾರ್ಮಿಕ ನಾಯಕನ ಆದೇಶಗಳನ್ನು ಪಾಲಿಸಿ. ಇಲ್ಲದಿದ್ದರೆ ನಷ್ಟವಾಗುತ್ತದೆ. ಈ ದಿನ ಸೂರ್ಯ ಮಂತ್ರವನ್ನು ಪಠಿಸಿ ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ.

ಕನ್ಯಾ ರಾಶಿ

ಈ ದಿನ ಕನ್ಯಾ ರಾಶಿಯವರು ಮಾಡಿದ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕುಟುಂಬದ ಜವಾಬ್ದಾರಿಗಳು ದ್ವಿಗುಣವಾಗುತ್ತವೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಜೀವನದಲ್ಲಿ ಬರುವ ಅಡೆತಡೆಗಳ ನಿವಾರಣೆಗೆ ಈ ದಿನ ಸೂರ್ಯ ದೇವನಿಗೆ ಪೂಜೆ ಮಾಡಿ, ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಅಗತ್ಯ ಇರುವವರಿಗೆ ಆಹಾರ ನೀಡಿ.

ತುಲಾ ರಾಶಿ

ಜನವರಿ 26 ತುಲಾ ರಾಶಿಯ ಜನರಿಗೆ ಉತ್ತಮ ದಿನವಾಗಿದೆ. ಈ ದಿನ ಅದೃಷ್ಟ ರಾಶಿಗಳಲ್ಲಿ ತುಲಾ ರಾಶಿಯೂ ಒಂದಾಗಿದೆ. ಮನೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಭವಿಷ್ಯದಲ್ಲಿ ನಿಮಗೆ ಯಶಸ್ಸನ್ನು ತರುವ ಹೊಸ ಕೆಲಸವನ್ನು ನೀವು ಪ್ರಾರಂಭಿಸಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಮನಸ್ಸು ಹೆಚ್ಚು ಸಂತೋಷವಾಗಿರಲಿದೆ.

ವೃಶ್ಚಿಕ ರಾಶಿ

ಈ ದಿನ ವೃಶ್ಚಿಕ ರಾಶಿಯವರಿಗೆ ಮಿಶ್ರ ದಿನವಾಗಿದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಅತ್ತೆ-ಮಾವನ ಮನೆಯಲ್ಲಿ ನಿಮಗೆ ಗೌರವ ಹೆಚ್ಚಾಗಲಿದೆ. ಕೆಲವು ಧಾರ್ಮಿಕ ಸಮ್ಮೇಳನದ ಭಾಗವಾಗಿರುತ್ತೀರಿ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಅದು ಪ್ರಯೋಜನಕಾರಿಯಾಗುತ್ತದೆ. ಸಮಸ್ಯೆಗಳ ನಿವಾರಣೆಗೆ ಹಸಿದ ಪ್ರಾಣಿಗಳಿಗೆ ಆಹಾರ ನೀಡಿ.

ಧನು ರಾಶಿ

ಜನವರಿ 26 ಧನು ರಾಶಿಯವರಿಗೆ ಪ್ರಯೋಜನಕಾರಿ ದಿನವಾಗಿದೆ. ಗಂಡ ಹೆಂಡತಿಯ ನಡುವಿನ ಸಂಬಂಧ ಸುಧಾರಿಸುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಣಕ್ಕೆ ಸಂಬಂಧಿಸಿದ ಕೆಲಸಗಳು ಆಗುತ್ತವೆ. ಅನಗತ್ಯ ಒತ್ತಡ ದೂರವಾಗುತ್ತದೆ. ಪರಸ್ಪರ ಸಂಬಂಧಗಳು ಮೊದಲಿಗಿಂತ ಬಲವಾಗಿರುತ್ತವೆ. ಸಾಮಾಜಿಕ ಗೌರವ ಹೆಚ್ಚಾಗುತ್ತದೆ.

ಮಕರ ರಾಶಿ

ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಮಕ್ಕಳ ಬಗೆಗಿನ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಸಹೋದರ ಸಹೋದರಿಯರಿಂದ ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಎಲ್ಲಾ ಸಮಸ್ಯೆಗಳು ದೂರವಾಗಲು ಬೆಳಗ್ಗೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸಿ.

ಕುಂಭ ರಾಶಿ

ಜನವರಿ 26 ಕುಂಭ ರಾಶಿಯವರಿಗೆ ಶುಭ ದಿನವಾಗಿದೆ. ಈ ದಿನದ ಅದೃಷ್ಟ ರಾಶಿಗಳಲ್ಲಿ ಕುಂಭ ರಾಶಿಯೂ ಒಂದಾಗಿದೆ. ಇಂದು ನೀವು ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತದೆ. ಅದೃಷ್ಟದ ನಕ್ಷತ್ರಗಳು ನಿಮ್ಮೊಂದಿಗಿವೆ. ಮನಸ್ಸು ಪ್ರಸನ್ನವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುವುದು. ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ. ಪ್ರೇಮ ಜೀವನ ಬಲಗೊಳ್ಳುವುದು. ಉದ್ಯೋಗಿಗಳು ಮತ್ತು ಉದ್ಯಮಿಗಳಿಗೆ ಈ ದಿನ ಉತ್ತಮವಾಗಿದೆ.

ಮೀನ ರಾಶಿ

ಜನವರಿ 26 ಮೀನ ರಾಶಿಯವರಿಗೆ ಪ್ರಯೋಜನಕಾರಿ ದಿನವಾಗಿದೆ. ಅದೃಷ್ಟದ ನಕ್ಷತ್ರಗಳು ಮೀನ ರಾಶಿಯವರ ಜೀವನ ಬೆಳಗಿವೆ. ಈ ದಿನ ನೀವು ಏನು ಬೇಕಾದರೂ ಪಡೆಯುತ್ತೀರಿ. ಆದರೆ ತಾಳ್ಮೆಯಿಂದ ಇರಿ. ಎಲ್ಲಾ ರೀತಿಯ ವಿವಾದಗಳಿಂದ ದೂರವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ನಿಮ್ಮ ಮಕ್ಕಳಿಂದ ನೀವು ಸಂತೋಷವನ್ನು ಪಡೆಯಬಹುದು. ಬಾಕಿ ಇರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳೂ ಇವೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+