Daily Horoscope: ಧೃತಿ ಯೋಗದಿಂದ ನಾಲ್ಕು ರಾಶಿಯವರಿಗೆ ಧನಲಾಭ ; ಬಡ್ತಿ ಭಾಗ್ಯ, ವ್ಯವಹಾರಲ್ಲೂ ಲಾಭ
Daily Horoscope: ಇವತ್ತು ಭಾದ್ರಪದ ಶುಕ್ಲ ಪಕ್ಷದ ತ್ರಯೋದಶಿ ತಿಥಿ ರಾತ್ರಿ 11.19 ರವರೆಗೆ ಇರುವುದು. ನಂತರ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ. ಧನಿಷ್ಠ ನಕ್ಷತ್ರವು ಬೆಳಿಗ್ಗೆ 10.35 ರವರೆಗೆ ಇರುತ್ತದೆ, ನಂತರ ಶತಭಿಷ ನಕ್ಷತ್ರವು ಪ್ರಾರಂಭವಾಗುತ್ತದೆ. ಗುರುವಾರವಾಗಿರುವುದರಿಂದ ಗುರುವಿನ ಆಶೀರ್ವಾದದೊಂದಿಗೆ, ಧೃತಿ ಯೋಗ, ಪಾರಿಜಾತ ಯೋಗ, ಬುಧಾದಿತ್ಯ ಯೋಗ , ಮತ್ತು ಮಾಲವ್ಯ ಮತ್ತು ಭದ್ರ ಯೋಗಗಳ ಉತ್ತಮ ಸಂಯೋಜನೆ ಕೂಡಾ ಇದೆ.
ಮೇಷ ರಾಶಿ (Aries)
ಮನೆಯಲ್ಲಿ ವಾತಾವರಣ ಸಕಾರಾತ್ಮಕ ಮತ್ತು ಸಾಮರಸ್ಯದಿಂದ ಕೂಡಿರುವುದು. ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ಬಿಡಿ. ತಾಳ್ಮೆಯಿಂದ ಇರಿ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ಪಾಲುದಾರಿಕೆ ಉದ್ಯಮದಲ್ಲಿ ಲಾಭವಾಗುವುದು. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ಅವಕಾಶ ಸಿಗುವುದು. ಆರೋಗ್ಯ ಸಾಮಾನ್ಯವಾಗಿರುವುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುವುದು.

ವೃಷಭ ರಾಶಿ (Taurus)
ಕುಟುಂಬ ಯೋಜನೆಗಳನ್ನು ಆಯೋಜಿಸಲು ದಿನ ಅನುಕೂಲಕರವಾಗಿದೆ. ಮನೆಯಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಸಾಮಾನ್ಯವಾಗಿರುವುದು. ಪ್ರಮುಖ ವೃತ್ತಿಜೀವನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಆರೋಗ್ಯ ಸಾಮಾನ್ಯವಾಗಿರುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು.
ಮಿಥುನ ರಾಶಿ (Gemini)
ಮನೆಯಲ್ಲಿನ ವಾತಾವರಣವು ಅನುಕೂಲಕರವಾಗಿರುವುದು. ಕೆಲಸದಲ್ಲಿ ಹೊಸ ಯೋಜನೆಗಳು ಅಥವಾ ಜವಾಬ್ದಾರಿ ಸಿಗಬಹುದು. ಒಂದೇ ಬಾರಿಗೆ ಹಲವು ಕೆಲಸಗಳಿಗೆ ಕೈ ಹಾಕಬೇಡಿ. ಮಾನಸಿಕ ಒತ್ತಡದಿಂದ ತಲೆನೋವು ಆಯಾಸ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿರುವುದು. ಹೆಚ್ಚುವರಿ ಆದಾಯದ ಅವಕಾಶಗಳು ಹುಟ್ಟಿಕೊಳ್ಳುವುದು.
ಕರ್ಕಾಟಕ ರಾಶಿ (Cancer)
ಕುಟುಂಬದ ಬೆಂಬಲವು ಭಾವನಾತ್ಮಕ ಶಕ್ತಿಯನ್ನು ನೀಡುವುದು. ಹೊಸ ಕೆಲಸಕ್ಕೆ ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ಕಾಣುವರು. ಅತಿಯಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಹೊಸ ಆದಾಯದ ಆಯ್ಕೆಗಳು ಹೊರಹೊಮ್ಮಬಹುದು.
ಸಿಂಹ ರಾಶಿ (Leo)
ನಿಮ್ಮ ಗೌರವ ಹೆಚ್ಚಾಗುವುದು. ಸಂಬಂಧಿಕರಿಂದ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುವುದು. ವ್ಯವಹಾರ ವಿಸ್ತರಣೆ ಬಗ್ಗೆ ಯೋಚಿಸಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕೆಲಸದ ಹೊರೆ ಆಯಾಸವನ್ನು ಹೆಚ್ಚಿಸುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ಕನ್ಯಾ ರಾಶಿ (Virgo)
ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುವುದು. ಕುಟುಂಬ ಸದಸ್ಯರ ಮಾತನ್ನು ಎಚ್ಚರಿಕೆಯಿಂದ ಆಲಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಎಲ್ಲದರಲ್ಲೂ ತಪ್ಪು ಹುಡುಕುವ ಅಭ್ಯಾಸವನ್ನು ಬಿಟ್ಟುಬಿಡಿ. ಕೆಲಸದಲ್ಲಿನ ಒತ್ತಡ ನಿವಾರಣೆಯಾಗುವುದು. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅವಿವಾಹಿತರಿಗೆ, ಮದುವೆ ಮಾತುಕತೆ ನಡೆಯುವುದು.
ತುಲಾ ರಾಶಿ (Libra)
ನಿಮ್ಮ ರಾಶಿಯಲ್ಲಿನ ಸೂರ್ಯನ ಪ್ರಭಾವವು ಸಕಾರಾತ್ಮಕ ಶಕ್ತಿಯನ್ನು ತರುವುದು. ಮನೆಯಲ್ಲಿ ಕೆಲವು ಶುಭ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಯಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿರುವುದು. ಆರೋಗ್ಯ ಚೆನ್ನಾಗಿರುವುದು.
ವೃಶ್ಚಿಕ ರಾಶಿ (Scorpio)
ನಿಮ್ಮ ಕುಟುಂಬದಲ್ಲಿ ಸಾಮರಸ್ಯ ನೆಲೆಯಾಗುವುದು. ವ್ಯವಹಾರ ತಂತ್ರವನ್ನು ಬದಲಾಯಿಸುವುದರಿಂದ ಪ್ರಯೋಜನಗಳಾಗುವುದು. ಅನುಭವಿ ಮತ್ತು ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಗಳನ್ನು ನೀಡಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಬಹುದು. ಹಳೆಯ ಹೂಡಿಕೆಗಳಿಂದ ಲಾಭವಾಗುವುದು.
ಧನು ರಾಶಿ (Sagittarius)
ಕುಟುಂಬದಲ್ಲಿ ಸಾಮರಸ್ಯ ಇರುವುದು. ಶುಭ ಕಾರ್ಯಗಳಿಗೆ ಹಣ ಖರ್ಚಾಗುವುದು. ಕೆಲಸದ ಹೊರೆ ಹೆಚ್ಚಾಗುವುದು. ವ್ಯಾಪಾರ ವಿಸ್ತರಣಾ ಯೋಜನೆಗಳಲ್ಲಿ ಆತುರಪಡಬೇಡಿ. ಉನ್ನತ ಶಿಕ್ಷಣ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಸಮಯ ಅನುಕೂಲಕರವಾಗಿರುವುದು. ಮಾನಸಿಕ ಒತ್ತಡ ಮತ್ತು ಆಯಾಸವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆರ್ಥಿಕ ಪರಿಸ್ಥಿತಿ ಏರುಪೇರಾಗಬಹುದು.
ಮಕರ ರಾಶಿ (Capricorn)
ಕುಟುಂಬದೊಳಗೆ ಸಾಮರಸ್ಯ ಇರುವುದು. ಪ್ರತಿಯೊಂದು ಸಮಸ್ಯೆಯನ್ನು ಏಕಾಂಗಿಯಾಗಿ ಪರಿಹರಿಸಲು ಹೋಗಬೇಡಿ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದು. ಹಳೆಯ ಸಂಪರ್ಕಗಳು ಹೊಸ ವ್ಯಾಪಾರ ಅವಕಾಶಗಳನ್ನು ನೀಡುವುದು. ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ಮನಸ್ಸಿನ ಸಂತೋಷ ಹೆಚ್ಚುವುದು. ಸಂಗಾತಿಯೊಂದಿಗಿನ ಭಾವನಾತ್ಮಕ ಸಂಬಂಧ ಬಲವಾಗಿರುವುದು.
ಕುಂಭ ರಾಶಿ (Aquarius)
ಮನೆಯಲ್ಲಿ ಸಾಮರಸ್ಯದ ವಾತಾವರಣವಿರುವುದು. ಸಹೋದ್ಯೋಗಿಗಳ ಬೆಂಬಲದಿಂದ ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು.ವ್ಯವಹಾರ ವಿಸ್ತರಿಸುವ ಬಗ್ಗೆ ಯೋಚಿಸಬಹುದು. ವೃತ್ತಿ ಅವಕಾಶಗಳು ಒಲಿದು ಬರುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಹಳೆಯ ಹೂಡಿಕೆಗಳಿಂದ ಕ್ರಮೇಣ ಲಾಭವಾಗುವುದು.
ಮೀನ ರಾಶಿ (Pisces)
ಕುಟುಂಬದ ವಾತಾವರಣವು ಸಾಮರಸ್ಯದಿಂದ ಕೂಡಿರುವುದು. ಕೆಲಸದಲ್ಲಿ ನಿಮ್ಮ ಆಲೋಚನೆಗಳಿಗೆ ಮೆಚ್ಚುಗೆ ಸಿಗುವುದು. ಉದ್ಯಮಿಗಳು ಹೊಸ ಗ್ರಾಹಕರಿಂದ ಪ್ರಯೋಜನ ಪಡೆಯುವರು. ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಒಳ್ಳೆಯ ದಿನ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದ ಫಲ ಪಡೆಯುವರು. ನಿಮ್ಮ ಆರೋಗ್ಯ ಚೆನ್ನಾಗಿರುವುದು.


Click it and Unblock the Notifications
