Daily Horoscope Sep 30: ಚಂದ್ರ ಸಂಚಾರದಿಂದ ಈ ರಾಶಿಯವರ ಅದೃಷ್ಟ ಹೆಚ್ಚಳ; ಹೊಸ ಅವಕಾಶ, ಇಂದಿನ ರಾಶಿಭವಿಷ್ಯ ಹೇಗಿದೆ?
Daily Horoscope: ಇವತ್ತು ಚಂದ್ರ ತನ್ನ ರಾಶಿ ಬದಲಾಯಿಸುತ್ತಾನೆ. ಬೆಳಿಗ್ಗೆ ಮೇಷ ರಾಶಿಯಲ್ಲಿದ್ದು ಮಧ್ಯಾಹ್ನ 1.13 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇವತ್ತು ಭರಣಿ ನಕ್ಷತ್ರ ಬೆಳಿಗ್ಗೆ 7.36 ರವರೆಗೆ ಇರುವುದು. ನಂತರ ಕೃತ್ತಿಕಾ ನಕ್ಷತ್ರ ಪ್ರಾರಂಭವಾಗುವುದು. ಇಂದಿನ ನಿತ್ಯ ಭವಿಷ್ಯ ಹೇಗಿರಲಿದೆ ನೋಡೋಣ.
ಮೇಷ ರಾಶಿ (Aries)
ಮಧ್ಯಾಹ್ನದ ನಂತರ ಹಣದ ಸಮಸ್ಯೆ ಕಾಡುವುದು. ನೀವು ಇವತ್ತು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುವುದು. ಬಾಕಿ ಉಳಿದಿರುವ ಕೆಲಸ ಸಾಧ್ಯವಾದಷ್ಟು ಬೇಗ ಮುಗಿಸಿಕೊಳ್ಳಿ. ಮಾತನಾಡುವಾಗ ತಾಳ್ಮೆ ಇರಲಿ. ನಿಮ್ಮ ಸಂಗಾತಿ ಸಹಾಯ ಮಾಡಬಹುದು.

ವೃಷಭ ರಾಶಿ (Taurus)
ಸೋಮಾರಿತನದಿಂದಲೇ ದಿನದ ಆರಂಭವಾಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸೂಕ್ತ ದಿನ ಅಲ್ಲ. ಮಧ್ಯಾಹ್ನ 1.13 ಕ್ಕೆ ಚಂದ್ರನು ನಿಮ್ಮ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಹಳೆಯ ಆದಾಯದ ಮಾರ್ಗ ಮತ್ತೆ ತೆರೆದುಕೊಳ್ಳಬಹುದು
ಮಿಥುನ ರಾಶಿ (Gemini)
ಬೆಳಿಗ್ಗೆ ಗಳಿಕೆಯ ಅವಕಾಶ. ಮಧ್ಯಾಹ್ನ ಖರ್ಚುಗಳನ್ನು ನಿರ್ವಹಿಸಿ. ದಿನದ ಮೊದಲಾರ್ಧ ಹೆಚ್ಚು ಉತ್ಸಾಹದಿಂದ ಕೂಡಿರುವುದು. ಹೊಸ ಜವಾಬ್ದಾರಿಯನ್ನು ತಕ್ಷಣ ಒಪ್ಪಿಕೊಳ್ಳುವ ಮೊದಲು ನಿಮ್ಮ ಸಮಯ ಮತ್ತು ಕೆಲಸದ ಹೊರೆ ಎಷ್ಟಿದೆ ನೋಡಿಕೊಳ್ಳಿ.
ಕರ್ಕಾಟಕ ರಾಶಿ (Cancer)
ಉದ್ಯೋಗ ಮತ್ತು ಗಳಿಕೆ ಎರಡರಲ್ಲೂ ಅವಕಾಶ ಸಿಗುವುದು. ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿನ. ಧನಲಾಭವಾಗುವುದು. ಬಾಕಿ ಹಣ ನಿಮ್ಮ ಕೈ ಸೇರುವುದು. ಬಡ್ತಿ ಸಿಗುವ ಸಾಧ್ಯತೆ ಇದೆ. ಮನೆಯಲ್ಲಿ ಸಣ್ಣ ಮನಸ್ತಾಪ ಮೂಡಬಹುದು. ನಿಧಾನವಾಗಿ ಸರಿ ಹೋಗುವುದು.
ಸಿಂಹ ರಾಶಿ (Leo)
ವೃತ್ತಿ ಬದುಕು ಹೊಸ ದಿಕ್ಕಿನತ್ತ ಸಾಗುವುದು. ಜವಾಬ್ದಾರಿ ಹೆಚ್ಚಾಗಬಹುದು. ನಿಮ್ಮ ಕೆಲಸಕ್ಕೆ ಬಾಸ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ತಿ ಮಾಡಲು ಪ್ರಯತ್ನಿಸಿ. ಪ್ರಯಾಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿ ಬರಬಹುದು. ಹೊಸ ಕೆಲಸ ಹುಡುಕುತ್ತಿರುವವರೊಗೆ ಸಿಹಿ ಸುದ್ದಿ ಸಿಗುವುದು.
ಕನ್ಯಾ ರಾಶಿ (Virgo)
ಬೆಳಿಗ್ಗೆ ಯಾವುದೇ ಪ್ರಮುಖ ಆರ್ಥಿಕ ನಿರ್ಧಾರ ತೆಗೆದುಕೊಳ್ಳಬೇಡಿ.ಕನ್ಯಾ ರಾಶಿಯವರು ಇವತ್ತು ಹೆಚ್ಚು ಜಾಗರೂಕರಾಗಿರಬೇಕು. ಹಣ, ಹೂಡಿಕೆ, ತೆರಿಗೆ, ವಿಮೆ ಅಥವಾ ಯಾವುದೇ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರ ಬೇಡ. ಹೂಡಿಕೆ ಮಾಡುವ ಮೊದಲು ನಿಯಮ ಷರತ್ತುಗಳನ್ನು ತಿಳಿದುಕೊಳ್ಳಿ.
ತುಲಾ ರಾಶಿ (Libra)
ನಿಮ್ಮ ರಾಶಿಯಲ್ಲಿ ಬುಧ ಮತ್ತು ಶುಕ್ರ ಇರುವುದರಿಂದ ನಿಮ್ಮ ಮಾತಿನ ತೂಕ ಹೆಚ್ಚುವುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಿರಿ. ಮಕ್ಕಳಿಂದ ಶುಭ ಸುದ್ದಿ ಸಿಗುವುದು.
ವೃಶ್ಚಿಕ ರಾಶಿ (Scorpio)
ಬೆಳಿಗ್ಗೆ ಕೆಲಸದ ಹೊರೆ ಹೆಚ್ಚಾಗಿರುವುದು. ಮುಂದೂಡಿದ್ದ ಕೆಲಸವನ್ನು ಇವತ್ತೇ ಮುಗಿಸಿಕೊಳ್ಳಿ. ಬಾಕಿ ಇರುವ ಕೆಲಸ ಕೂಡಾ ಮೊದಲು ಮುಗಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಅನಗತ್ಯ ವೆಚ್ಚಗಳಾಗುವುದು.
ಧನು ರಾಶಿ (Sagittarius)
ಇವತ್ತು ಕೆಲಸದ ಹೊರೆ ಹೆಚ್ಚಾಗುವುದು. ಹೊಸ ಕೆಲಸ ಶುರು ಮಾಡುವುದಕ್ಕೆ ಸಮಯ ಸೂಕ್ತವಾಗಿರುವುದು. ಜವಾಬ್ದಾರಿ ಹೆಚ್ಚಾಗುವುದು. ಬಾಕಿ ಕೆಲಸ ಪೂರ್ಣವಾಗುವುದು. ಆಹಾರದ ಬಗ್ಗೆ ಸರಿಯಾದ ಗಮನ ಹರಿಸಿ. ಆರೋಗ್ಯದ ಕಾಳಜಿ ವಹಿಸಿ.
ಮಕರ ರಾಶಿ (Capricorn)
ಕೆಲಸ ಬದಲಾಯಿಸುವವರಿಗೆ ದಿನ ಉತ್ತಮವಾಗಿರುವುದು. ವೃತ್ತಿ ಸಂಬಂಧಿತ ಕೆಲಸ ಹೆಚ್ಚಾಗಬಹುದು. ಬುಧ ಮತ್ತು ಶುಕ್ರನ ಪ್ರಭಾವ ನಿಮ್ಮ ಕೆಲಸದ ಮೇಲೆ ಹೆಚ್ಚು ಬೀರುವುದು. ಸಂವಹನ, ಮಾಧ್ಯಮ, ಮಾರಾಟ, ಕ್ಷೇತ್ರಗಳಲ್ಲಿರುವವರಿಗೆ ಲಾಭವಾಗುವುದು. ಆದಾಯ ಸ್ಥಿರವಾಗಿರುವುದು.
ಕುಂಭ ರಾಶಿ (Aquarius)
ಮನೆಯ ಖರ್ಚುಗಳು ಹೆಚ್ಚಾಗುವುದು. ಆದಾಯಕ್ಕೆ ತಕ್ಕಂತೆ ಖರ್ಚು ಇರಲಿ. ನಿಮಗೆ ವಹಿಸಿರುವ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಿ. ಹೊಸ ಕೌಶಲ್ಯ ಅಥವಾ ದೂರದ ಸಂಪರ್ಕದಿಂದ ಪ್ರಯೋಜನವಾಗುವುದು. ಮನೆ, ವಾಹನ, ದುರಸ್ತಿ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಖರ್ಚುಗಳು ಉಂಟಾಗಬಹುದು.ಅನಿರೀಕ್ಷಿತ ಖರ್ಚುಗಳಿಗಾಗಿ ಸ್ವಲ್ಪ ತೆಗೆದಿಡಿ.
ಮೀನ ರಾಶಿ (Pisces)
ಕೆಲಸಗಳು ಅರ್ಧಕ್ಕೇ ನಿಲ್ಲುವುದು. ಖರ್ಚು ಮತ್ತು ಉಳಿತಾಯದ ಬಗ್ಗೆ ಸಮತೋಲನ ಕಾಪಾಡಿಕೊಳ್ಳಿ. ಸಾಲ ತೀರಿಸುವತ್ತ ಗಮನ ಹರಿಸಿ. ಮಧ್ಯಾಹ್ನದ ಹೊತ್ತಿಗೆ ಶುಭ ಸುದ್ದಿ ಕೇಳುವಿರಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.


Click it and Unblock the Notifications
