Daily Horoscope September 11: ಈ ಮೂರು ರಾಶಿಯವರ ಮೇಲೆ ಲಕ್ಷ್ಮೀ ಕಟಾಕ್ಷ; ವೃತ್ತಿಯಲ್ಲಿ ಪ್ರಗತಿ, ಸಮಸ್ಯೆಗಳಿಗೆ ಪರಿಹಾರ

Daily Horoscope September 11: ಇಂದು ಅಮವಾಸೆಯ ತಿಥಿ ಬೆಳಿಗ್ಗೆ 8.57 ರವರೆಗೆ ಇರುತ್ತದೆ, ನಂತರ ಪ್ರತಿಪದ ತಿಥಿ ಪ್ರಾರಂಭವಾಗುವುದು. ಪೂರ್ವ ಫಾಲ್ಗುಣಿ ನಕ್ಷತ್ರವು ಮಧ್ಯಾಹ್ನ 1.16 ರವರೆಗೆ ಇರುತ್ತದೆ. ನಂತರ ಉತ್ತರ ಫಾಲ್ಗುಣಿ ನಕ್ಷತ್ರವು ಬರುತ್ತದೆ. ಚಂದ್ರನು ಸಂಜೆ 7.08 ರವರೆಗೆ ಸಿಂಹ ರಾಶಿಯಲ್ಲಿದ್ದು ನಂತರ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ.

ಲಕ್ಷ್ಮಿ ದೇವಿಯ ಆಶೀರ್ವಾದದ ಜೊತೆಗೆ, ಸಾಧಿ ಯೋಗ, ಬುಧಾದಿತ್ಯ ಯೋಗ, ಮಾಲವ್ಯ ಮತ್ತು ಭದ್ರ ಯೋಗದ ಪ್ರಭಾವವು ನಿರ್ದಿಷ್ಟ ರಾಶಿಯವರಿಗೆ ಶುಭ ಫಲ ಸಿಗುವುದು.

ಮೇಷ ರಾಶಿ (Aries)

ಕುಟುಂಬ ಜೀವನಕ್ಕೆ ದಿನವು ಅತ್ಯಂತ ಶುಭವಾಗಿರುತ್ತದೆ. ವ್ಯವಹಾರದಲ್ಲಿಯೂ ಉತ್ತಮ ಲಾಭವಾಗುವುದು. ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವುದು ಪ್ರಯೋಜನಕಾರಿಯಾಗಿರುವುದು. ನಿಮ್ಮ ಹೊಸ ಆಲೋಚನೆಗಳು ಜನರ ಮೆಚ್ಚುಗೆ ಗಳಿಸುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ ಪರಿಸ್ಥಿತಿ ಬಲವಾಗಿರುವುದು. ಉಳಿತಾಯ ಹೆಚ್ಚಾಗಬಹುದು.

Daily Horoscope September 11 Lakshmi s Blessings for These 3 Zodiac Signs Career Growth Ahead

ವೃಷಭ ರಾಶಿ (Taurus)

ಕುಟುಂಬ ಮತ್ತು ಸಹೋದ್ಯೋಗಿಗಳು ಇವತ್ತು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವರು. ಮನೆಯಲ್ಲಿನ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕುಟುಂಬ ಸದಸ್ಯರು ಪ್ರತಿಯೊಂದು ನಿರ್ಧಾರದಲ್ಲೂ ನಿಮ್ಮನ್ನು ಬೆಂಬಲಿಸುವರು. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಬೆಳೆಯುವಿರಿ. ಅತಿಯಾದ ಆಲೋಚನೆಯಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಆದಾಯದ ಮೂಲಗಳು ಹೆಚ್ಚಾಗುವುದು.

ಮಿಥುನ ರಾಶಿ (Gemini)

ನಿಮ್ಮ ಕಠಿಣ ಪರಿಶ್ರಮಕ್ಕೆ ಕೆಲಸದ ಸ್ಥಳದಲ್ಲಿ ತಕ್ಕ ಫಲ ಸಿಗುವುದು. ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುವರು. ವೃತ್ತಿಯ ದೃಷ್ಟಿಯಿಂದ ನೋಡುವುದಾದರೆ ಸಕಾರಾತ್ಮಕ ಫಲಿತಾಂಶ ಸಿಗುವುದು. ಹಿಂದಿನ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ.

ಕರ್ಕಾಟಕ ರಾಶಿ (Cancer)

ಕೌಟುಂಬಿಕ ಸಂತೋಷ ಮತ್ತು ಶಾಂತಿ ಹೆಚ್ಚಾಗುವ ದಿನ. ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗುವುದು. ಹಿಂದಿನ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ವೃತ್ತಿ ಪ್ರಗತಿಗೆ ಅತ್ಯುತ್ತಮ ಅವಕಾಶಗಳು ಸಿಗುವುದು.

ಸಿಂಹ ರಾಶಿ (Leo)

ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಸಾಮಾಜಿಕ ಮತ್ತು ಕೌಟುಂಬಿಕ ಗೌರವ ಹೆಚ್ಚಾಗುವುದು. ಹೊಸ ಜವಾಬ್ದಾರಿ ಸಿಗುವುದು. ಹೊಸ ಕೆಲಸದ ಆಫರ್‌ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಸಕಾರಾತ್ಮಕ ಫಲಿತಾಂಶಗಳನ್ನು ಸಿಗುವುದು. ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಬೇಡಿ. ಕೆಲಸದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಆದಾಯ ಹೆಚ್ಚಾಗುವುದು. ಜೊತೆಗೆ ಕೆಲವು ಹೆಚ್ಚುವರಿ ವೆಚ್ಚಗಳು ಹುಟ್ಟಿಕೊಳ್ಳುವುದು.

ಕನ್ಯಾ ರಾಶಿ (Virgo)

ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಉದ್ಯಮಿಗಳಿಗೆ ಲಾಭದಾಯಕ ದಿನವಾಗಿರುವುದು. ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಲಾಭವಾಗುವುದು. ಆರೋಗ್ಯ ಸಾಮಾನ್ಯವಾಗಿರುವುದು.ಆದಾಯ ಮತ್ತು ಖರ್ಚು ಸಮತೋಲನದಲ್ಲಿರುವುದು. ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ.

ತುಲಾ ರಾಶಿ (Libra)

ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ವಾತಾವರಣ ಸಂತೋಷದಿಂದ ಕೂಡಿರುವುದು. ಹಳೆಯ ವಿವಾದಗಳಿಂದ ಮುಕ್ತಿ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ವೃಶ್ಚಿಕ ರಾಶಿ (Scorpio)

ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿ ಹೆಚ್ಚುವುದು. ಮನೆಯಲ್ಲಿ ಶಾಂತಿ ನೆಲೆಸುವುದು. ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಕೊಡಿ.ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ದೈಹಿಕ ಮತ್ತು ಮಾನಸಿಕ ಆಯಾಸವನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದು.

ಧನು ರಾಶಿ (Sagittarius)

ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಉದ್ಯಮಿಗಳಿಗೆ ಉತ್ತಮ ಲಾಭವಾಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆತುರಪಡಬೇಡಿ. ಆರೋಗ್ಯ ಸಾಮಾನ್ಯವಾಗಿರಲಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ಮಕರ ರಾಶಿ (Capricorn)

ಇದು ಕುಟುಂಬ ಸಂಬಂಧಗಳನ್ನು ಬಲಪಡಿಸುವ ದಿನ.ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಹೊಸ ಜವಾಬ್ದಾರಿಗಳು ಸಿಗಬಹುದು. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಉತ್ತಮ ಫಲಿತಾಂಶ ಪಡೆಯುವರು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಕುಂಭ ರಾಶಿ (Aquarius)

ಕುಟುಂಬ ಜೀವನ ಸಂತೋಷದಿಂದ ಕೂಡಿರುವುದು. ಮನೆಯಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮ ನಡೆಯಬಹುದು. ವ್ಯವಹಾರ ವಿಸ್ತರಣೆಗೆ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಮಾನಸಿಕ ಶಕ್ತಿ ಹೆಚ್ಚಾಗುವುದು. ಆದರೆ ಅತಿಯಾಗಿ ಯೋಚಿಸುವುದರಿಂದ ಆಯಾಸ ಉಂಟಾಗಬಹುದು.

ಮೀನ ರಾಶಿ (Pisces)

ಕುಟುಂಬ ಸದಸ್ಯರೊಂದಿಗೆ ಭಾವನಾತ್ಮಕ ಬಾಂಧವ್ಯವು ಗಾಢವಾಗುವುದು.ಹಳೆಯ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವಿರಿ. ಆರೋಗ್ಯ ಉತ್ತಮವಾಗಿರುವುದು. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಯಾರಿಗೂ ಸಾಲ ನೀಡಲು ಹೋಗಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+