Daily Horoscope: ಇಂದು ಈ ರಾಶಿಯವರ ಮೇಲಿದೆ ಲಕ್ಷ್ಮೀ ಕೃಪೆ! ಧನಲಾಭ, ಕೆಲಸದಲ್ಲಿ ಯಶಸ್ಸು
Daily Horoscope: ಇವತ್ತು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ ರಾತ್ರಿ 9.37 ರವರೆಗೆ ಇರುವುದು. ನಂತರ ಸರ್ವ ಪಿತೃ ಅಮಾವಾಸ್ಯ ತಿಥಿ ಪ್ರಾರಂಭವಾಗುತ್ತದೆ. ಉತ್ತರಾಫಲುನಿ ನಕ್ಷತ್ರವು ರಾತ್ರಿ 9:20 ರವರೆಗೆ ಇರುತ್ತದೆ, ನಂತರ ಹಸ್ತ ನಕ್ಷತ್ರ ಪ್ರಾರಂಭವಾಗುತ್ತದೆ. ಬ್ರಹ್ಮಯೋಗದ ಪರಿಣಾಮ ರಾತ್ರಿ 11.20 ರವರೆಗೆ ಇರುತ್ತದೆ. ನಂತರ ಇಂದ್ರ ಯೋಗದ ಸಂಯೋಗವು ರೂಪುಗೊಳ್ಳುತ್ತದೆ.
ಮೇಷ ರಾಶಿ
ಉದ್ಯಮಿಗಳಿಗೆ ಲಾಭವಾಗುವುದು. ಇವತ್ತು ತೆಗೆದುಕೊಳ್ಳುವ ನಿರ್ಧಾರ ಲಾಭಕ್ಕೆ ಕಾರಣವಾಗುವುದು.ನಿಂತು ಹೋಗಿರುವ ಕೆಲಸ ಮತ್ತೆ ಆರಂಭವಾಗುವುದು. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುವುದು. ಆದಾಯದ ದೃಷ್ಟಿಯಿಂದ ದಿನವು ಬಹಳ ಮಹತ್ವದ್ದಾಗಿದೆ.

ವೃಷಭ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಮೊದಲಿಗಿಂತ ಬಲವಾಗಿರುತ್ತದೆ. ಹೊಸ ಗಳಿಕೆಯ ಅವಕಾಶ ಸಿಗುವುದು. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಲಾಭವಾಗುವುದು. ಕುಟುಂಬ ಸದಸ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳಿ. ಹಳೆಯ ಹೂಡಿಕೆಯಿಂದ ದೊಡ್ಡ ಲಾಭವಾಗುವುದು.
ಮಿಥುನ ರಾಶಿ
ಹಣ ಹೂಡಿಕೆ ಮಾಡಲು ಸರಿಯಾದ ದಿನ. ಕೆಲಸದ ಹೊರೆ ಹೆಚ್ಚಾಗುವುದು. ಮಕ್ಕಳ ಭವಿಷ್ಯ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ದೊಡ್ಡ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಪ್ರೀತಿಪಾತ್ರರಿಗಾಗಿ ಉಡುಗೊರೆಯನ್ನು ಖರೀದಿಸಬಹುದು. ಆರ್ಥಿಕ ಲಾಭ ಪಡೆಯುವ ಸಾಧ್ಯತೆಗಳಿವೆ.
ಕಟಕ ರಾಶಿ
ಕೆಲಸದ ಸ್ಥಳ ಅಥವಾ ವ್ಯವಹಾರದಲ್ಲಿನ ಸಮಸ್ಯೆ ಬಗೆಹರಿಯುವುದು. ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗುತ್ತದೆ. ವಹಿಸಿಕೊಂಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಿರಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುವುದು. ಆರೋಗ್ಯದ ದೃಷ್ಟಿಯಿಂದ ದಿನ ತುಂಬಾ ಅನುಕೂಲಕರವಾಗಿರುತ್ತದೆ.
ಸಿಂಹ ರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ಭೂಮಿ ಅಥವಾ ಮನೆ ಖರೀದಿಸುವ ವಿಷಯದಲ್ಲಿ ಜಾಗರೂಕರಾಗಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯಾಗುವುದು. ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ದೂರವಾಗುವುದು. ಕೆಲಸದ ಹೊರ ಹೆಚ್ಚಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು.
ಕನ್ಯಾ ರಾಶಿ
ಕಚೇರಿಯಲ್ಲಿ ಕೆಲವು ಸಮಸ್ಯೆ ಎದುರಾಗಬಹುದು. ತಾಳ್ಮೆ ಮತ್ತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ಹಿರಿಯ ಅಧಿಕಾರಿಗಳಿಂದ ವಿಶೇಷ ಪ್ರೋತ್ಸಾಹ ಮತ್ತು ಮೆಚ್ಚುಗೆ ಸಿಗುತ್ತದೆ.ಆರ್ಥಿಕ ಪರಿಸ್ಥಿತಿ ಸಮತೋಲಿತ ಮತ್ತು ಅನುಕೂಲಕರವಾಗಿರುತ್ತದೆ.ಆದಾಯದ ಹೊಸ ಮಾರ್ಗ ಹುಟ್ಟಿಕೊಳ್ಳುವುದು. ಆರೋಗ್ಯ ಉತ್ತಮವಾಗಿರುತ್ತದೆ.
ತುಲಾ ರಾಶಿ
ನಿಂತು ಹೋಗಿರುವ ಕೆಲಸ ಮತ್ತೆ ಶುರುವಾಗುವುದು. ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುವುದು. ವೈವಾಹಿಕ ಜೀವನ ಸಂತೋಷದಿಂದ ಕೂಡಿರುವುದು. ದೂರದ ಸಂಬಂಧಿಕರಿಂದ ಕೆಲವು ಒಳ್ಳೆಯ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಬಹುದು.
ವೃಶ್ಚಿಕ ರಾಶಿ
ವ್ಯಾಪಾರದಲ್ಲಿ ಸ್ವಲ್ಪ ಏರಿಳಿತವಾಗಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಮನೆ ಮಾಡುವುದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ.ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ಹೊಸ ವಾಹನ ಖರೀದಿ ಮಾಡುವ ಆಸೆ ಈಡೇರಬಹುದು. ಆರೋಗ್ಯ ಉತ್ತಮವಾಗಿರುತ್ತದೆ.
ಧನು ರಾಶಿ
ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಖ್ಯಾತಿ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಕನಸು ನನಸಾಗುವುದು. ಅತ್ತೆ-ಮಾವನಿಂದ ಪ್ರಯೋಜನವಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ. ಮಾನಸಿಕ ಸಂತೋಷ ಹೆಚ್ಚಾಗುವುದು.
ಮಕರ ರಾಶಿ
ನಿಮ್ಮ ಪಾಲಿನ ಶುಭ ದಿನ ಇದು. ಆದರೂ ಕೆಲಸದ ಸ್ಥಳದಲ್ಲಿ ಅತಿಯಾದ ಕೆಲಸದಿಂದಾಗಿ ಸ್ವಲ್ಪ ಮಾನಸಿಕ ಒತ್ತಡ ಉಂಟಾಗಬಹುದು. ಹಳೆಯ ಸ್ನೇಹಿತನ ಭೇಟಿಯಿಂದ ಲಾಭವಾಗುವುದು. ಮಕ್ಕಳ ಯಶಸ್ಸು ಖುಷಿ ಕೊಡುವುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುವುದು.
ಕುಂಭ ರಾಶಿ
ಹೊಸ ಕೆಲಸ ಆರಂಭಿಸಲು ದಿನ ಉತ್ತಮವಾಗಿದೆ. ಪ್ರಭಾವಿ ವ್ಯಕ್ತಿಯ ಭೇಟಿಯಿಂದ ಸಂತೋಷ ಹೆಚ್ಚಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಆದಾಯ ಹೆಚ್ಚಾಗುವುದು.
ಮೀನ ರಾಶಿ
ಹೊಸ ಕೆಲಸ ಶುರು ಮಾಡುವ ಪ್ರಯತ್ನ ಯಶಸ್ವಿಯಾಗುವುದು. ಉದ್ಯೋಗಸ್ಥರ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗುವುದು. ಪರಿಶ್ರಮ ಮತ್ತು ಕಠಿಣ ಪರಿಶ್ರಮದ ಫಲ ಸಿಗುವುದು. ಕೆಲವು ಸಣ್ಣ ವಿಷಯಗಳ ಬಗ್ಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಬಡ್ತಿ ಮತ್ತು ಹೊಸ ಯೋಜನೆಗಳಿಂದ ಆದಾಯ ಸುಧಾರಿಸುತ್ತದೆ.


Click it and Unblock the Notifications
