Daily Horoscope: ಈ ರಾಶಿಯವರ ಮೇಲಿದೆ ಲಕ್ಷ್ಮೀ ಕೃಪೆ: ಸಮಸ್ಯೆಗೆ ಮುಕ್ತಿ-ಹಣದ ಹರಿವು ಹೆಚ್ಚಳ

Daily Horoscope: ಜುಲೈ 25ರಂದು ಶನಿವಾರ ಎಲ್ಲ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಆಗಿದೆ. ಜುಲೈ 25ರ ದಿನ ಭವಿಷ್ಯದ ಪ್ರಕಾರ, 12 ರಾಶಿಗಳ ಗೋಚಾರ ಫಲ ಹೇಗಿರಲಿದೆ. ಈ ದಿನವು ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ಎಂದು ಇಲ್ಲಿ ತಿಳಿಯಿರಿ.

ಮೇಷ ರಾಶಿ (Aries):

ಇಂದು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ತರಲಿದೆ. ಗುರಿ ಸಾಧಿಸುವ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ಆದಾಯದ ಮೂಲಗಳು ಇಂದು ಹೆಚ್ಚಾಗುವ ನಿರೀಕ್ಷೆಯಿದೆ. ಅನಗತ್ಯ ವಾದಗಳಲ್ಲಿ ಭಾಗಿಯಾಗಬೇಡಿ. ವೈವಾಹಿಕ ಜೀವನದಲ್ಲಿ ಹೊಸ ಸಂತೋಷ ಸಿಗುವುದು.

Daily Horoscope July 25

ವೃಷಭ ರಾಶಿ (Taurus):

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಒಂದು ಪ್ರಮುಖ ಕಾರ್ಯವನ್ನು ಅನಿರೀಕ್ಷಿತವಾಗಿ ಪೂರ್ಣಗೊಳಿಸುವಿರಿ. ಹೂಡಿಕೆಯಲ್ಲಿ ಸಿಲುಕಿರುವ ಹಣವನ್ನು ಮರಳಿ ಪಡೆಯಬಹುದು. ವಿಮೆ ಮತ್ತು ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿರುವವರು ಎರಡು ಪಟ್ಟು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ಮಿಥುನ ರಾಶಿ (Gemini):

ಇಂದು ಉಲ್ಲಾಸಕರ ದಿನವಾಗಿರುತ್ತದೆ. ವಿಶೇಷ ಆಸೆ ಈಡೇರುವ ನಿರೀಕ್ಷೆಯಿದೆ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಪಡೆಯುವ ಬೆಂಬಲವು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ಮಕ್ಕಳಿಗೆ ಸಂಬಂಧಿಸಿದ ಪ್ರಮುಖ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ.

ಕರ್ಕಾಟಕ ರಾಶಿ (Cancer):

ಇಂದು ನಿಮಗೆ ಮಿಶ್ರ ಪ್ರತಿಕ್ರಿಯೆಗಳ ದಿನವಾಗಿರುತ್ತದೆ. ತಾಳ್ಮೆ ಮತ್ತು ತಿಳುವಳಿಕೆಯಿಂದ ಕೆಲಸ ಮಾಡಿದರೆ, ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ಹಳೆಯ ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಮಾನಸಿಕ ಆರೋಗ್ಯದತ್ತ ಗಮನ ಹರಿಸಿ.

ಸಿಂಹ ರಾಶಿ (Leo):

ಇಂದು ನಿಮಗೆ ಅದೃಷ್ಟದ ದಿನವಾಗಲಿದೆ. ಭವಿಷ್ಯಕ್ಕಾಗಿ ಮಾಡಿದ ಯೋಜನೆಗಳು ಪರಿಣಾಮಕಾರಿಯಾಗಿರುತ್ತವೆ. ಮಗುವಿನ ಸಾಧನೆ ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಹೊಸ ಅವಕಾಶಗಳು ಎದುರಾಗುವುದು.

ಕನ್ಯಾ ರಾಶಿ (Virgo):

ಇಂದು ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ನಿಮ್ಮ ಸಂಗಾತಿಯು ಕೆಲಸಗಳಲ್ಲಿ ನಿಮಗೆ ಸಹಾಯ ಮಾಡುವರು. ಪ್ರೀತಿಪಾತ್ರರು ಪರಸ್ಪರರ ಭಾವನೆಗಳನ್ನು ಮೆಚ್ಚುತ್ತಾರೆ.ಆರೋಗ್ಯದತ್ತ ಕಾಳಜಿ ವಹಿಸಿ.

ತುಲಾ ರಾಶಿ (Libra) :

ಇಂದು ನಿಮಗೆ ಸಕಾರಾತ್ಮಕ ದಿನವಾಗಿರುತ್ತದೆ. ದೈನಂದಿನ ಜಂಜಾಟ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದ ಆರಾಮ ಸಿಗುವುದು. ವೃತ್ತಿಪರ ಜವಾಬ್ದಾರಿಗಳನ್ನು ಚೆನ್ನಾಗಿ ಪೂರೈಸುವಿರಿ. ಇಂದು ನಿಮ್ಮ ಗೌರವ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಸರಿಯಾದ ಸಮಯ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ ರಾಶಿ (Scorpio) :

ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭ ಪಡೆಯಬಹುದು. ದೀರ್ಘಕಾಲದ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಹೆಚ್ಚಿನ ಮೆಚ್ಚುಗೆ ದೊರೆಯುತ್ತದೆ.

ಧನು ರಾಶಿ (Sagitarius):

ಇಂದು ನಿಮಗೆ ಅದ್ಭುತವಾದ ದಿನವಾಗಿರುತ್ತದೆ. ನಿಮ್ಮ ಕೆಲಸದ ಯೋಜನೆಗಳು ಸಕಾರಾತ್ಮಕ ತಿರುವು ಪಡೆಯುತ್ತವೆ. ಬಾಕಿ ಇರುವ ಕೆಲಸಗಳು ಇಂದು ಪೂರ್ಣವಾಗುವುದು. ಆರ್ಥಿಕ ಪರಿಸ್ಥಿತಿ ಇಂದು ಬಲವಾಗಿರುತ್ತದೆ.ಆರೋಗ್ಯಕ್ಕೆ ಪ್ರಯೋಜನವಾಗುವಂತೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವಿರಿ.

ಮಕರ ರಾಶಿ (Capricorn):

ಇಂದು ನಿಮ್ಮ ಜೀವನದಲ್ಲಿ ಹೊಸ ಸಾಧ್ಯತೆಗಳನ್ನು ತರಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುವುದು. ಸಮತೋಲನವನ್ನು ಕಾಯ್ದುಕೊಂಡರೆ, ಸಂಬಂಧವು ಬಲಗೊಳ್ಳುತ್ತದೆ. ತಾಯಿಯ ಆರೋಗ್ಯವು ಇಂದು ಸುಧಾರಿಸುತ್ತದೆ.

ಕುಂಭ ರಾಶಿ (Aquarius):

ಧಾರ್ಮಿಕ ಸಮಾರಂಭ ಅಥವಾ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಗುವುದು. ಖಾಸಗಿ ಉದ್ಯೋಗದಲ್ಲಿರುವವರು ತಮ್ಮ ನೆಚ್ಚಿನ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಶಿಕ್ಷಣ ಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಪೋಷಕರಿಂದ ಬೆಂಬಲ ಸಿಗುತ್ತದೆ.

ಮೀನ ರಾಶಿ (Pisces)

ಇಂದು ಅನುಕೂಲಕರ ದಿನವಾಗಿರುತ್ತದೆ. ತಂತ್ರಜ್ಞಾನದಲ್ಲಿ ತೊಡಗಿರುವವರಿಗೆ ಹೊಸ ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+