Daily Horoscope Aug 26: ಮೂರು ರಾಶಿಯವರಿಗೆ ಇಂದು ಒಲಿಯುವಳು ಮಹಾ ಲಕ್ಷ್ಮೀ, ಸುಖ ಸಂಪತ್ತು ಹೆಚ್ಚುವ ದಿನ

Daily Horoscope Aug 26: ದೈನಂದಿನ ಜಾತಕದ ಪ್ರಕಾರ, ಇಂದು ಹಲವು ರಾಶಿಯವರಿಗೆ ವಿಶೇಷ ದಿನವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುವುದು. ಅದೃಷ್ಟ ನಿಮ್ಮ ಜೊತೆ ಇರುವುದು. ಇನ್ನು ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಮೇಷ ರಾಶಿ (Aries)

ಇದು ನಿಮ್ಮ ಪಾಲಿನ ಅದೃಷ್ಟದ ದಿನ. ಹೊಸ ಪ್ರಯತ್ಕ್ಕೆ ಕೈ ಹಾಕುವಿರಿ. ನಿಮ್ಮ ಪ್ರಯತ್ನಕ್ಕೆ ಸಂಗಾತಿಯ ಬೆಂಬಲ ಸಿಗುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಹಣಕಾಸಿನ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಹೊಸ ವ್ಯವಹಾರದಲ್ಲಿ ಲಾಭವಾಗುವುದು.

ವೃಷಭ ರಾಶಿ (Taurus)

ನಿಮ್ಮ ಕನಸುಗಳನ್ನು ನನಸಾಗಿಸಲು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ತೀರ್ಮಾನ ಮಾಡಿ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಗಮನ ಹರಿಸಿ.

Daily Horoscope Aug 26

ಮಿಥುನ ರಾಶಿ (Gemini)

ವಿದ್ಯಾರ್ಥಿಗಳಿಗೆ ಅತ್ಯಂತ ಶುಭ ದಿನ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಮನಸ್ಸಿನ ಶಾಂತಿ ಹೆಚ್ಚಾಗುವುದು. ಸೃಜನಶೀಲ ಕೆಲಸಗಳಲ್ಲಿ ಆಸಕ್ತಿ ಹೆಚ್ಚುವುದು.

ಕರ್ಕಾಟಕ ರಾಶಿ (Cancer)

ಹೊಸ ಕೆಲಸ ಆರಂಭಕ್ಕೆ ಒಳ್ಳೆಯ ದಿನ. ಕಚೇರಿಯಲ್ಲಿ ಎಚ್ಚರಿಕೆ ಅಗತ್ಯ. ಸಣ್ಣ ತಪು ಕೂಡಾ ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು. ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದು.

ಸಿಂಹ ರಾಶಿ (Leo)

ಬಹಳ ದಿನಗಳಿಂದ ಕಾಯುತ್ತಿದ್ದ ಸಿಹಿ ಸುದ್ದಿ ಇಂದು ಸಿಗುವುದು. ಬಾಕಿ ಇರುವ ಕೆಲಸ ಕಾರ್ಯಗಳು ಸರಾಗವಾಗಿ ಮುಗಿಯುವುದು. ಹೊಸ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗುವುದು.

ಕನ್ಯಾ ರಾಶಿ (Virgo)

ನಿಮ್ಮ ಪಾಲಿನ ಸಂತೋಷದಾಯಕ ದಿನವಾಗಿರುವುದು. ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡುವ ಕಂಪನಿಯೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಚೇರಿ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಮಾಧಾನ ಸಿಗುವುದು. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ತುಲಾ ರಾಶಿ (Libra)

ಅದ್ಭುತ ದಿನವಾಗಿರಲಿದೆ. ನೀವು ವಹಿಸಿಕೊಂಡಿರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ.

ವೃಶ್ಚಿಕ ರಾಶಿ (Scorpio)

ಇಂದು ನಿಮಗೆ ಅನುಕೂಲಕರ ದಿನವಾಗಿರಲಿದೆ. ವ್ಯವಹಾರದಲ್ಲಿ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಗುವುದು. ಸಂಬಂಧಿಕರ ಆಗಮನದಿಂದ ಸಂತೋಷ ಹೆಚ್ಚಾಗುವುದು.

ಧನು ರಾಶಿ (Sagitarius)

ಇಂದಿನ ದಿನ ಉತ್ಸಾಹದಿಂದಲೇ ಆರಂಭವಾಗುವುದು. ಉದ್ಯೋಗದ ಹುಡುಕಾಟ ಕೊನೆಯಾಗುವುದು. ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರದಲ್ಲಿ ಲಾಭವಾಗುವುದು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಮಕರ ರಾಶಿ (Capricorn)

ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಿಗುವುದು. ಹೂಡಿಕೆ ಮಾಡುವುದು ಸಾಧ್ಯವಾಗುವುದು. ಆದಾಯ ಹೆಚ್ಚಾಗುವುದು, ಆದರೂ ಖರ್ಚುಗಳ ಮೇಲೆ ನಿಯಂತ್ರಣ ಇರಲಿ. ಆರೋಗ್ಯದ ಬಗ್ಗೆ ಗಮನ ಇರಲಿ.

ಕುಂಭ ರಾಶಿ (Aquarius)

ಆರ್ಥಿಕವಾಗಿ ಸದೃಢರಾಗುವಿರಿ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಎದುರಿಗಿರುವವರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು.

ಮೀನ ರಾಶಿ (Pisces)

ಹೊಸ ಕೆಲಸದ ಆಫರ್ ಸಿಗುವುದು. ಕಚೇರಿ ಕೆಲಸಗಳಲ್ಲಿ ಉತ್ತಮ ಯಶಸ್ಸು ಸಿಗುವುದು. ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ. ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯದ ಕಡೆಗೆ ಗಮನ ಕೊಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+