Daily Horoscope Aug 12: ಈ ರಾಶಿಯವರ ಅದೃಷ್ಟ ಇಂದು ಹೊಳೆಯುವುದು, ಆದಾಯ ಹೆಚ್ಚಾಗುವ ಅವಕಾಶ, ಸಮಸ್ಯೆಗಳೆಲ್ಲವೂ ಪರಿಹಾರ
Daily Horoscope Aug 12: ಇಂದು ಕೃಷ್ಣ ಪಕ್ಷದ ಅಮವಾಸ್ಯೆ ದಿನ. ಅಮವಾಸ್ಯೆ ತಿಥಿ ರಾತ್ರಿ 11.06 ರವರೆಗೆ ಮುಂದುವರೆಯುತ್ತದೆ. ಪಕ್ಷ, ತಿಥಿ, ನಕ್ಷತ್ರ ಇದು ನಮ್ಮ ನಿತ್ಯ ಜಾತಕದ ಮೇಲೆ ಪ್ರಭಾವ ಬೀರುತ್ತದೆ. ರಾಶಿಗನುಗುಣವಾಗಿ ಆಗಸ್ಟ್ 12ರ ಬುಧವಾರದಂದು ಯಾವ ಜಾತಕ ಹೇಗಿದೆ ಎನ್ನುವುದನ್ನು ನೋಡೋಣ. 12 ರಾಶಿಗಳ ಇಂದಿನ ದಿನ ಭವಿಷ್ಯ ಇಲ್ಲಿದೆ.
ಮೇಷ ರಾಶಿ (Aries)
ಮನದ ಆಸೆ ಈಡೇರುವುದು. ತುಂಬಾ ಸಮಯದಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಇಂದು ಕೈಗೂಡುವುದು. ಮನಸ್ಸಿನಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು.
ವೃಷಭ ರಾಶಿ (Taurus)
ಇಂದು ಸಂತೋಷದಿಂದ ತುಂಬಿದ ದಿನವಾಗಿರುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಕೆಲಸದ ಬಗ್ಗೆ ಗೊಂದಲ ಮೂಡಬಹುದು. ಶಾಂತವಾಗಿದ್ದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುವುದು.

ಮಿಥುನ ರಾಶಿ (Gemini)
ನಿಮಗೆ ಅನುಕೂಲಕರ ದಿನವಾಗಿರುವುದು. ಹೊಸ ಉದ್ಯಮವನ್ನು ಪ್ರಾರಂಭಿಸಬಹುದು. ಹೊಸ ಕೆಲಸದಲ್ಲಿ ಹೆಚ್ಚಿನ ಲಾಭವಾಗುವುದು. ಆಸ್ತಿ ವ್ಯವಹಾರಗಳು ಲಾಭದಾಯಕವಾಗಿರುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.
ಕರ್ಕಾಟಕ ರಾಶಿ (Cancer)
ಇಂದು ನಿಮಗೆ ಉತ್ತಮ ದಿನವಾಗಿರುವುದು. ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಿರಿ. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಕುಟುಂಬದ ಎಲ್ಲಾ ಸದಸ್ಯರು ಸಂತೋಷವಾಗಿರುವರು. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಒಳ್ಳೆಯ ದಿನ.
ಸಿಂಹ ರಾಶಿ (Leo)
ವೈವಾಹಿಕ ಜೀವನ ಉತ್ತಮವಾಗಿರುವುದು. ಮನೆಯಲ್ಲಿ ಮಾಧುರ್ಯ ಮತ್ತು ಸಾಮರಸ್ಯ ಇರುವುದು. ಆರೋಗ್ಯದತ್ತ ಗಮನ ಹರಿಸುವುದು ಒಳ್ಳೆಯದು. ಕೈ ಹಾಕಿದ ಕೆಲಸವನ್ನು ಸೋಮಾರಿತನವಿಲ್ಲದೆ ಮಾಡಿ ಮುಗಿಸಿದರೆ ಯಶಸ್ಸು ಸಿಗುವುದು.
ಕನ್ಯಾ ರಾಶಿ (Virgo)
ನಿಮಗೆ ಇಂದು ಒಳ್ಳೆಯ ದಿನವಾಗಿರಲಿದೆ. ಸಂಗಾತಿ ಮತ್ತು ಕುಟುಂಬದವರ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವಿವೇಚನೆಯಿಂದ ಕೆಲಸ ಮಾಡಿ.
ತುಲಾ ರಾಶಿ (Libra)
ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ಸಾಲ ನೀಡಿದ್ದ ಹಣ ವಾಪಸ್ ಬರುವುದು. ಆರ್ಥಿಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಬೇರೆ ಬೇರೆ ಮೂಲಗಳಿಂದ ಆದಾಯ ಬರುವುದು.
ವೃಶ್ಚಿಕ ರಾಶಿ (Scorpio)
ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯತ್ತ ಮನಸ್ಸು ವಾಲುವುದು. ಗುರಿಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಿದರೆ, ಯಶಸ್ಸು ಸಿಗುವುದು. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚನೆ ಮಾಡಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು.
ಧನು ರಾಶಿ (Sagitarius)
ಮನೆ ಬದಲಾಯಿಸುವ ಮೊದಲು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ. ಹೊಸ ಹೂಡಿಕೆಗೆ ಇವತ್ತು ಕೈ ಹಾಕದಿರುವುದು ಒಳ್ಳೆಯದು. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುವುದು. ಕೆಲಸದ ಜೊತೆಗೆ ವ್ಯವಹಾರವನ್ನು ಕೂಡಾ ಪ್ರಾರಂಭಿಸಬಹುದು.
ಮಕರ ರಾಶಿ (Capricorn)
ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಪರಿಹಾರ ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಕುಂಭ ರಾಶಿ (Aquarius)
ಕೆಲಸದಲ್ಲಿ ಯಶಸ್ಸು ಸಿಗುವುದು. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುವುದು. ವಹಿಸಿರುವ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುವುದು.
ಮೀನ ರಾಶಿ (Pisces)
ಇಂದು ನಿಮಗೆ ಒಳ್ಳೆಯ ದಿನವಾಗಿರುವುದು. ಕಠಿಣ ಪರಿಶ್ರಮದ ಮೂಲಕ ಕೆಲಸ ಮಾಡಿದರೆ ಗೆಲುವು ನಿಮ್ಮದೇ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಬಹಳ ಸಮಯದ ನಂತರ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗುವುದು.


Click it and Unblock the Notifications
