Horoscope Today: ದಿನ ಭವಿಷ್ಯ ಮಾರ್ಚ್ 27- ಈ ರಾಶಿಗೆ ವಿಷ್ಣು ದೆಸೆಯಿಂದ ಶುಭ ಫಲ

ಮಾರ್ಚ್ 27 ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿದೆ. ಈ ದಿನ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ. ಯಶಸ್ಸಿನ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ನೀವು ಉದ್ಯೋಗ, ವ್ಯವಹಾರ, ಹಣ ಮತ್ತು ಸಂಬಂಧಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವರಿಗೆ ಬಡ್ತಿ ಅಥವಾ ಆರ್ಥಿಕ ಲಾಭಗಳು ಸಿಗುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮಾರ್ಚ್ 27 ಮೇಷ ರಾಶಿಯವರಿಗೆ ತುಂಬಾ ಶುಭ ದಿನವಾಗಿದೆ. ಈ ದಿನ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭಗಳನ್ನು ಪಡೆಯುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಲಿವೆ. ನೀವು ಹೊಸ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ದಿನ ಗುರುರಾಯರನ್ನು ಪೂಜಿಸಿದರೆ ತುಂಬಾ ಒಳ್ಳೆಯ ಫಲವನ್ನು ನೀವು ಪಡೆಯುವಿರಿ.

astrology dina bhavishya march 27 12 zodiac signs today prediction

ವೃಷಭ ರಾಶಿ

ಮಾರ್ಚ್ 27 ರಂದು ವೃಷಭ ರಾಶಿಯವರು ನಿಮ್ಮ ಕೆಲಸದ ಸ್ಥಳದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮಗಾಗಿ ಪ್ರಗತಿಯ ಹೊಸ ಹಾದಿಯೂ ತೆರೆದುಕೊಳ್ಳುತ್ತದೆ. ನಿಮ್ಮ ಕೆಲಸದಲ್ಲಿ ಅನುಭವಿ ವ್ಯಕ್ತಿಯ ಸಹಾಯದಿಂದ ನೀವು ಪ್ರಯೋಜನ ಪಡೆಯುತ್ತೀರಿ. ವ್ಯವಹಾರದಲ್ಲಿನ ಯಾವುದೇ ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗಬಹುದು.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಆಧ್ಯಾತ್ಮಿಕ ಪ್ರಗತಿ ಹೆಚ್ಚಾಗಲಿದೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ನಿಮ್ಮವರು ನಿಮ್ಮನ್ನು ಬೆಂಬಲಿಸುತ್ತಾರೆ ಪ್ರೀತಿಸುತ್ತಾರೆ. ಆದರೆ ಎಲ್ಲಾ ವಿಚಾರದಲ್ಲೂ ಎಲ್ಲರನ್ನು ನಂಬಬೇಡಿ. ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕರ್ಕಾಟಕ ರಾಶಿ

ಕಟಕ ರಾಶಿಯವರಿಗೆ ಈ ದಿನ ಹೇಳಿಕೊಳ್ಳುವ ಮಟ್ಟಕ್ಕೆ ಉತ್ತಮವಾಗಿಲ್ಲ. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ. ನಿಮ್ಮ ಮೇಲೆ ಹಲ್ಲಿ ಬಿದ್ದರೆ, ಕಾಗೆ ಕಂಡುಬಂದರೆ, ಬೆಕ್ಕು ಅಡ್ಡ ಬಂದರೆ ಮನೆಯಿಂದ ಹೊರಗಡೆ ಹೋಗುವುದನ್ನು ತಪ್ಪಿಸುವುದು ಉತ್ತಮ. ತಲೆಗೆ ಗಾಯವಾಗುವ ಭಯವಿದೆ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಬದಲಾವಣೆಯಾಗಬಹುದು. ಸಂಭಾಷಣೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನ ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಲಾಭದ ಸಾಧ್ಯತೆ ಇದೆ. ನಿಮ್ಮ ಮನೆ ಬಾಗಿಲಿದೆ ಹಣ ಹುಡುಕಿಕೊಂಡು ಬರಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುವ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ.

ಕನ್ಯಾ ರಾಶಿ

ನಿಮ್ಮ ಕೆಲಸದ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಎಲ್ಲಾ ಕೆಲಸದಲ್ಲೂ ನಿಮಗೆ ಸಹಾಯ ಸಹಕಾರ ಇರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಈ ದಿನ ಆನಂದಿಸುವಿರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಈ ದಿನ ನಿಮಗೆ ಸಿಗಲಿದೆ. ಇಂದು ನಿಮ್ಮ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ಪ್ರಾರ್ಥನೆ ಮಾಡುವುದು ಒಳ್ಳೆಯದು.

Take a Poll

ತುಲಾ ರಾಶಿ

ಈ ದಿನ ತುಲಾ ರಾಶಿಯವರಿಗೆ ಹೆಚ್ಚು ಪ್ರಯಾಣ ಮಾಡುವ ಸಾಧ್ಯತೆ ಇರಬಹುದು. ನಿಮ್ಮ ದಾಂಪತ್ಯ ಸಂಬಂಧಗಳಲ್ಲಿ ಅನ್ಯೋನ್ಯತೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಜಗಳ ಹುಟ್ಟಿಸುವ ಮೂರನೇ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು. ನಿಮ್ಮ ದಾಂಪತ್ಯ ಜೀವನವನ್ನು ಹಾಳು ಮಾಡುವ ವ್ಯಕ್ತಿಗಳು ಇರುತ್ತಾರೆ ಎಚ್ಚರ. ಈ ದಿನ ನಿಮಗೆ ಹಣಕಾಸಿನ ಲಾಭದ ಲಕ್ಷಣಗಳಿವೆ, ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಮಾರ್ಚ್ 27 ವೃತ್ತಿಜೀವನದ ದೃಷ್ಟಿಯಿಂದ ಬಹಳ ಒಳ್ಳೆಯ ದಿನವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರಿಗಳು ಲಾಭ ಗಳಿಸುವ ಸಾಧ್ಯತೆ ಇದೆ. ನೀವು ಪ್ರಯಾಣಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಗುರಿಯತ್ತ ಸಾಗುವುದು ಉತ್ತಮ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಯಶಸ್ಸು ಮತ್ತು ಪ್ರಗತಿಯನ್ನು ತರುವುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಉದ್ಯೋಗಿಗಳು ಹೊಸ ಸಾಧನೆಗಳನ್ನು ಮಾಡುವರು. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಹೂಡಿಕೆಗಳಿಂದ ಲಾಭ ಪಡೆಯುವಿರಿ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.

ಮಕರ ರಾಶಿ

ಈ ದಿನ ಮಕರ ರಾಶಿಯವರಿಗೆ ಕನಸ್ಸಿನಲ್ಲೂ ಉತ್ತಮ ಫಲ ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಡಳಿತ ಪಕ್ಷದಿಂದ ಬೆಂಬಲ ಸಿಗುವುದು. ನೀವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಸ್ನೇಹಿತರ ಸಹಾಯದಿಂದ ವ್ಯವಹಾರ ಪ್ರಗತಿ ಹೊಂದುತ್ತದೆ.

ಕುಂಭ ರಾಶಿ

ನಿಮ್ಮ ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ವ್ಯವಹಾರ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮನ್ನು ಮೆಚ್ಚುತ್ತಾರೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ನಿಮ್ಮ ಮಗುವಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ ಮತ್ತು ವ್ಯವಹಾರದಲ್ಲಿ ವಿಸ್ತರಣೆ ಸಾಧ್ಯ.

ಮೀನ ರಾಶಿ

ಮಾರ್ಚ್ 27 ಮೀನ ರಾಶಿಯವರಿಗೆ ವಿಶೇಷವಾದ ದಿನವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರೀತಿ ಮತ್ತು ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುವುದು. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿ ನೀಡುವುದು ಮಾತ್ರ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+