Horoscope Today: ದಿನ ಭವಿಷ್ಯ ಏಪ್ರಿಲ್ 2- ಈ ರಾಶಿಯ ವಿದ್ಯಾರ್ಥಿಗಳಿಗೆ ವಿಘ್ನವಿನಾಯಕನ ಆಶೀರ್ವಾದಿಂದ ಸಿಹಿ ಸುದ್ದಿ
ಏಪ್ರಿಲ್ 2 ಬುಧವಾರ ಕೆಲ ರಾಶಿಯವರಿಗೆ ಅದ್ಭುತವಾಗಿದೆ. ಈ ದಿನ ವಿಘ್ನವಿನಾಯಕನನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ದಿನ ಅನೇಕ ಶುಭ ಯೋಗಗಳು ರೂಪಗೊಳ್ಳಲಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತರಲಿವೆ. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಮದು ಈಗ ತಿಳಿಯೋಣ.
ಮೇಷ ರಾಶಿ
ಏಪ್ರಿಲ್ 2 ನಿಮಗೆ ಹೊಸ ಉತ್ಸಾಹವನ್ನು ತರಲಿದೆ. ದೀರ್ಘಕಾಲದವರೆಗೆ ಯಾವುದಾದರೂ ವಿಷಯದಿಂದ ತೊಂದರೆ ಅನುಭವಿಸುತ್ತಿರುವ ಜನರು ಇಂದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಜನರ ಆಲೋಚನೆಗಳು ಮತ್ತು ನಿಮ್ಮ ಬಗ್ಗೆ ಅವರು ಹೇಳುವ ವಿಷಯಗಳಿಂದ ನೀವು ನಿಮ್ಮ ಮನಸ್ಸಿನಲ್ಲಿ ಗೊಂದಲಕ್ಕೊಳಗಾಗುತ್ತೀರಿ. ಆದರೆ ಈ ಬಗ್ಗೆ ಚಿಂತೆ ಮಾಡಬೇಡಿ. ಈ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಉತ್ಸುಕರಾಗಿರುತ್ತಾರೆ. ಅಧ್ಯಯನದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ನಿಮ್ಮ ಕುಟುಂಬ ಇದನ್ನು ನೋಡಿ ಸಂತೋಷಪಡುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ವೃಷಭ ರಾಶಿ
ಇಂದು ನಿಮಗೆ ಒಳ್ಳೆಯ ದಿನ. ನಿಮ್ಮ ಕಠಿಣ ಪರಿಶ್ರಮದಿಂದ ವ್ಯವಹಾರದಲ್ಲಿ ಮುನ್ನಡೆಯುವಿರಿ. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಬಹಳ ದಿನಗಳಿಂದ ಮಾತು ನಡೆಯುತ್ತಿದ್ದರೆ, ಶೀಘ್ರದಲ್ಲೇ ಅದು ಅಂತಿಮಗೊಳ್ಳಲಿದೆ. ನಿಮ್ಮ ಯೋಜಿತ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ. ಜೊತೆಗೆ ಕೆಲವು ಕೆಲಸಗಳು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುವುದರಿಂದ ನೀವು ಸಂತೋಷವಾಗಿರುತ್ತೀರಿ. ಸಾಧ್ಯವಾದಷ್ಟು ಹೊರಗೆ ಊಟ ಮಾಡುವುದನ್ನು ತಪ್ಪಿಸಿ. ನೀವು ಸ್ನೇಹಿತರೊಂದಿಗೆ ಸಿನಿಮಾ ನೋಡಲು ಪ್ಲಾನ್ ಮಾಡಬಹುದು.
ಮಿಥುನ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನೀವು ನಿಮ್ಮ ವೈಯಕ್ತಿಕ ಜೀವನದ ಜವಾಬ್ದಾರಿಗಳನ್ನು ಪೂರೈಸುವಿರಿ. ಈ ರಾಶಿಯ ರಾಜಕಾರಣಿಗಳಿಗೆ ಜನರಿಂದ ಬೆಂಬಲ ಸಿಗುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಮಾರಾಟ ಹೆಚ್ಚಾಗಲಿದ್ದು, ಉತ್ತಮ ಆದಾಯ ಬರಲಿದೆ. ಜೊತೆಗೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನೀವು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಪ್ರೇಮಿಗಳು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಕುಟುಂಬಸ್ಥರು ಹೇಳಿದಂತೆ ನಡೆಯುತ್ತಾರೆ.
ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ದಿನ ಸಂತೋಷದಿಂದ ಕೂಡಿರುತ್ತದೆ. ಈ ದಿನ ನಿಮ್ಮ ಕೆಲಸದ ವೇಗ ನಿಧಾನವಾಗಿರುತ್ತದೆ. ಸ್ನೇಹಿತರೊಂದಿಗಿನ ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ. ನೀವು ಕುಟುಂಬದ ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನಿಸುವುದರಲ್ಲಿ ನಿರತರಾಗಿರುತ್ತೀರಿ. ಅದು ನಿಮಗೆ ಇಷ್ಟವಾಗುತ್ತದೆ. ನಿಮ್ಮಲ್ಲಿ ತ್ಯಾಗ ಮತ್ತು ಸಹಕಾರದ ಭಾವನೆ ಮೂಡುತ್ತದೆ. ಮಗಳ ಪರೀಕ್ಷೆಯ ಉತ್ತಮ ಫಲಿತಾಂಶದಿಂದ ಕುಟುಂಬದ ವಾತಾವರಣ ಸಂತೋಷವಾಗುತ್ತದೆ. ನಿಮ್ಮ ತೊಡಕುಗಳು ಕಡಿಮೆಯಾಗುತ್ತವೆ.
ಸಿಂಹ ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರುದೆ. ಎಲೆಕ್ಟ್ರಾನಿಕ್ಸ್ ಉದ್ಯಮಿಗಳಿಗೆ ಲಾಭದ ಸಾಧ್ಯತೆಗಳಿವೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ಸಂಜೆ ನೀವು ಹೊರಗೆ ಊಟಕ್ಕೆ ಹೋಗುವಿರಿ. ಇದರಿಂದ ನಿಮ್ಮ ಮಕ್ಕಳೊಂದಿಗೆ ಪರಸ್ಪರ ಬಾಂಧವ್ಯ ಹೆಚ್ಚಾಗುತ್ತದೆ.
ಇನ್ನೂ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ನಿಮಗೆ ವ್ಯವಹಾರದಲ್ಲಿ ಯಶಸ್ಸಿಗೆ ಹಲವು ಅವಕಾಶಗಳು ಸಿಗುತ್ತವೆ. ಈ ರಾಶಿಯ ಪ್ರೇಮಿಗಳ ತಪ್ಪು ತಿಳುವಳಿಕೆಗಳು ಕೊನೆಗೊಳ್ಳುತ್ತವೆ. ಆರೋಗ್ಯದ ದೃಷ್ಟಿಯಿಂದ ಇಂದುಉತ್ತಮ ದಿನವಾಗಿದೆ.
ಕನ್ಯಾ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಮಾತು ಕಠಿಣವಾಗಿರುತ್ತದೆ. ಇತರರ ಬಗ್ಗೆ ಪ್ರೀತಿಯನ್ನು ಕಾಪಾಡಿಕೊಳ್ಳಿ. ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ನಿಮ್ಮ ಮಕ್ಕಳಿಂದ ನಿಮಗೆ ಆಹ್ಲಾದಕರ ಅನುಭವ ದೊರೆಯುತ್ತದೆ. ನಿಮಗೆ ಹೊಸ ಆದಾಯದ ಮೂಲಗಳು ಸಿಗುತ್ತವೆ. ನೀವು ದಾಂಪತ್ಯ ಜೀವನ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀರಿ. ಅದು ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚಿಸುತ್ತದೆ. ನೀವು ಹಿರಿಯರಿಂದ ಸಲಹೆ ಪಡೆಯುತ್ತೀರಿ. ಉತ್ತಮ ಸಂಪರ್ಕಗಳನ್ನು ಸಹ ಮಾಡಿಕೊಳ್ಳುತ್ತೀರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಒಳ್ಳೆಯಯದಾಗಿ. ಇಂದು ನೀವು ಎಚ್ಚರಿಕೆಯಿಂದ ಯೋಚಿಸಿದ ನಂತರ ಕೆಲಸ ಮಾಡಬೇಕು. ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಿರುತ್ತವೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಆ ಪ್ರವಾಸ ಯಶಸ್ವಿಯಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಸಡ್ಡೆ ತೋರಬಾರದು.
ವೃಶ್ಚಿಕ ರಾಶಿ
ಇಂದು ನಿಮ್ಮ ದಿನ ಮಿಶ್ರವಾಗಿರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯೋಜಿಸಲಾದ ಕೆಲಸ ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸಗಳು ವೇಗವಾಗಿ ಮುಂದುವರಿಯುತ್ತವೆ. ಕುಟುಂಬದ ಕೆಲವು ಆಸ್ತಿ ಸಂಬಂಧಿತ ಸಮಸ್ಯೆ ಬಗೆಹರಿಯುತ್ತವೆ. ದೊಡ್ಡ ಕಂಪನಿಯೊಂದಿಗೆ ನಿಮ್ಮ ಒಪ್ಪಂದ ಸ್ಥಿರವಾಗುವ ಸಾಧ್ಯತೆಯಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಂತೋಷವನ್ನು ಅನುಭವಿಸುವಿರಿ.
ಧನು ರಾಶಿ
ಈ ದಿನ ನಿಮಗೆ ಸಂತೋಷ ಮತ್ತು ಶಾಂತಿಯಿಂದ ಕೂಡಿರುತ್ತದೆ. ಕುಟುಂಬ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಸಮಾಜದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಜನರ ಪ್ರಭಾವ ಹೆಚ್ಚಾಗುತ್ತದೆ. ಜನರು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ನೀವು ಬಡ್ತಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯುವಿರಿ. ಕಚೇರಿಯಲ್ಲಿ ದಾಖಲೆಯನ್ನು ಕಾಪಾಡಿಕೊಳ್ಳಿ. ದಾಂಪತ್ಯ ಜೀವನದಲ್ಲಿ ನಡೆಯುತ್ತಿರುವ ವಿವಾದ ಕೊನೆಗೊಳ್ಳುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಹೊಂದಾಣಿಕೆ ಸುಧಾರಿಸುತ್ತದೆ.
ಮಕರ ರಾಶಿ
ಈ ದಿನ ನಿಮಗೆ ಒಳ್ಳೆಯದಾಗಿರುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೂ ಅದರಲ್ಲಿ ಪ್ರಗತಿ ಸಾಧಿಸುವಿರಿ. ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಯಶಸ್ಸಿನ ಹೊಸ ಕಿರಣ ಕಾಣಿಸುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಸಾಧ್ಯತೆಗಳಿವೆ. ನೀವು ಬಹಳ ದಿನಗಳಿಂದ ವಾಹನ ಖರೀದಿಸಲು ಯೋಜಿಸುತ್ತಿದ್ದರೆ, ವಾಹನ ಖರೀದಿಸಲು ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಅಧ್ಯಯನದಲ್ಲಿ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅವರೊಂದಿಗಿನ ನಿಮ್ಮ ಆಪ್ತತೆ ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮಹಿಳೆಯರು ಇಂದು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ.
ಕುಂಭ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗುತ್ತದೆ. ನಿಮ್ಮ ಯೋಜಿತ ಕಾರ್ಯಗಳು ಒಂದೊಂದಾಗಿ ಪೂರ್ಣಗೊಳ್ಳುತ್ತವೆ. ಅದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ನಿಮ್ಮ ವ್ಯವಹಾರದಲ್ಲಿ ಲಾಭದಾಯಕ ಬದಲಾವಣೆ ಕಂಡುಬರಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಈ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ತಯಾರಿ ನಡೆಸಬೇಕು. ಪ್ರೇಮ ಸಂಗಾತಿಗಳು ಬಹಳ ಸಮಯದ ನಂತರ ಕರೆಯಲ್ಲಿ ಮಾತನಾಡುತ್ತಾರೆ. ಹಠಾತ್ ಆರ್ಥಿಕ ಲಾಭದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.
ಮೀನ ರಾಶಿ
ಈ ದಿನ ನಿಮಗೆ ಒಳ್ಳೆಯ ದಿನವಾಗುತ್ತದೆ. ಕುಟುಂಬಕ್ಕೆ ಕೆಲವು ವಿಶೇಷ ಜನರ ಆಗಮನವಾಗಬಹುದು. ನೀವು ಇದಕ್ಕಾಗಿ ತಯಾರಿಯಲ್ಲಿ ನಿರತರಾಗಿರುತ್ತೀರಿ. ಕವಿತೆ ಬರೆಯಲು ಇಷ್ಟಪಡುವ ಜನರಿಗೆ ಸ್ನೇಹಿತರ ಸಹಾಯದಿಂದ ಮುಂದುವರಿಯಲು ವೇದಿಕೆ ಸಿಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಬಹಳಷ್ಟು ಸಂತೋಷ ಇರುತ್ತದೆ. ಸರ್ಕಾರಿ ಇಲಾಖೆಗಳ ನೌಕರರ ವೇತನದಲ್ಲಿ ಹೆಚ್ಚಳವಾಗಬಹುದು. ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುತ್ತದೆ. ನಿಮ್ಮ ಆರೋಗ್ಯ ಸರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಯಾವುದೇ ಪರೀಕ್ಷೆಯ ಫಲಿತಾಂಶವು ನಿಮ್ಮ ಪರವಾಗಿ ಇರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications