• search
For Quick Alerts
ALLOW NOTIFICATIONS  
For Daily Alerts

  2019ರಲ್ಲಿ ಕಾಂಗ್ರೆಸ್ ಕ್ರಾಂತಿ, ಗಾಂಧಿ ಕುಟುಂಬದ ಹೊರಗೆ ಚುಕ್ಕಾಣಿ

  By ಪ್ರಕಾಶ್ ಅಮ್ಮಣ್ಣಾಯ
  |

  ಈ ಲೇಖನ ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆ ಮಧ್ಯೆಯೇ ನೀವಿದನ್ನು ಓದುತ್ತಿದ್ದೀರಿ. ರಾಜಕೀಯ ಪಲ್ಲಟಗಳು, ನಾಯಕರು, ಮುಖಂಡರು, ರಾಜಕಾರಣಿಗಳ ಜಾತಕ ವಿಮರ್ಶೆ ಇವೆಲ್ಲ ನನ್ನ ಅಧ್ಯಯನ ಆಸಕ್ತಿಗಳು. ಯಾರೊಂದಿಗೋ ವಾದ ಮಾಡುವುದೋ, ನಾನು ಹೇಳಿದ್ದೇ ಸರಿಯಾಯಿತು ಎಂದು ಜಂಭ ಮಾಡುವುದು ನನ್ನ ಗುಣವೂ ಅಲ್ಲ, ಆದ್ಯತೆಯೂ ಅಲ್ಲ.

  ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ: ಜ್ಯೋತಿಷಿ ಏನಂತಾರೆ?

  ಈಚೆಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಏರಿದ ಸಂದರ್ಭದಲ್ಲಿ ಆ ಪಕ್ಷದ ಭವಿಷ್ಯ ಹಾಗೂ ರಾಹುಲ್ ಗಾಂಧಿ ಜಾತಕ ವಿಮರ್ಶೆ ಮಾಡುವ ಪ್ರಸಂಗ ಎದುರಾಯಿತು. ಅದೂ ಟಿವಿ ಮಾಧ್ಯಮದಲ್ಲಿ, ನಾಲ್ಕಾರು ಇತರ ಜ್ಯೋತಿಷಿಗಳ ಸಮ್ಮುಖದಲ್ಲಿ ಭವಿಷ್ಯ ಹೇಳಿದೆ. ಆಗ ರಾಹುಲ್ ಗಾಂಧಿ ಅವರ ಜಾತಕದ ಲಗ್ನವೇ ಅದಲ್ಲ ಎಂಬ ಮಾತು ಮುಂದಿಟ್ಟುಕೊಂಡು ಇತರ ಜ್ಯೋತಿಷಿಗಳು ವಾದ ಮಾಡಿದರು.

  ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ

  ಆದರೆ, ನನಗೆ ಲಭ್ಯವಿದ್ದ ಮಾಹಿತಿಯ ಪ್ರಕಾರ ರಾಹುಲ್ ಗಾಂಧಿ ಜಾತಕ ಹಾಗೂ ಲಗ್ನ ಇತರ ಗ್ರಹಸ್ಥಿತಿ ಸರಿ ಇತ್ತು ಆದ್ದರಿಂದ ಆ ವೇದಿಕೆಯಲ್ಲಿ ವಾದ ಮುಂದುವರಿಸುವುದೋ ಅಥವಾ ನನ್ನದೇ ಸರಿ ಎಂದು ಮುಜುಗರ ಆಗುವ ಮಟ್ಟಿಗೆ ಪಟ್ಟು ಹಿಡಿಯುವುದೋ ಇಷ್ಟ ಆಗಲಿಲ್ಲ. ಆದರೆ ನಾವು ನುಡಿಯುವ ಭವಿಷ್ಯಕ್ಕೆ ನೀವು ಸಾಕ್ಷಿ ಆಗಿರುತ್ತೀರಿ. ಅದು ತಪ್ಪಾದಲ್ಲಿ ಖಂಡಿತಾ ನೀವು ಪ್ರಶ್ನೆ ಮಾಡಿ.

  ಈ ದಿನ ರಾಹುಲ್ ಗಾಂಧಿ ಹಾಗೂ ಅವರ ಪಕ್ಷದ ಭವಿಷ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ.

  ಜ್ಯೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿ

  ಜ್ಯೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿ

  ಕಾಂಗ್ರೆಸ್ ಎಂಬುದು ಈ ದೇಶದ ಪುರಾತನ ಪಕ್ಷ. ಅದರ ಚುಕ್ಕಾಣಿ ಹಿಡಿದಿರುವ ರಾಹುಲ್ ಗಾಂಧಿ ಅವರದು ಜ್ಯೇಷ್ಠಾ ನಕ್ಷತ್ರ, ವೃಶ್ಚಿಕ ರಾಶ್ಸಿ, ಮಕರ ಲಗ್ನ. ಈ ಜಾತಕರಿಗೆ ಶನಿಯು ನೀಚ ಸ್ಥಾನದಲ್ಲಿದ್ದಾನೆ. ಚಂದ್ರನ ಬಲ ಇಲ್ಲ. ಶುಕ್ರನೂ ಚೆನ್ನಾಗಿಲ್ಲ. ಒಟ್ಟಾರೆ ಅನುಕೂಲಕರ ಸ್ಥಿತಿಯಲ್ಲಿ ಇರುವ ಪ್ರಬಲವಾದ ಗ್ರಹ ಯಾವುದು ಎಂದು ಹುಡುಕಬೇಕಿದೆ.

  ವಾಕ್ ಸ್ಥಾನದಲ್ಲಿನ ರಾಹುವಿನಿಂದ ತೊಂದರೆ

  ವಾಕ್ ಸ್ಥಾನದಲ್ಲಿನ ರಾಹುವಿನಿಂದ ತೊಂದರೆ

  ಮಕರ ಲಗ್ನಕ್ಕೆ ದ್ವಿತೀಯ ಸ್ಥಾನ ಅಂದರೆ ವಾಕ್ ಸ್ಥಾನದಲ್ಲಿ ರಾಹು ಇದ್ದಾನೆ. ರಾಹುಲ್ ಗಾಂಧಿ ಅವರ ಎಲ್ಲ ಯಡವಟ್ಟು ಹಾಗೂ ಅನಾನುಕೂಲ ಮಾತಿನಿಂದಲೇ ಆಗುವಂಥದ್ದು ಎಂಬುದಕ್ಕೆ ಕಾರಣ ಆಗಿರುವುದು ರಾಹು. ಇವರು ಮನಸ್ಸಿನಲ್ಲಿರುವ ವಿಚಾರ ಸ್ಪಷ್ಟವಾಗಿ ರೂಪುಗೊಳ್ಳುವುದು ಕಷ್ಟ. ಒಂದು ವೇಳೆ ಆಲೋಚಿಸಿ ಮಾತನಾಡಿದರು ಅಂದರೆ ಯಡವಟ್ಟು ಆಗಿರುತ್ತದೆ.

  ಕಣ್ಣಿಗೆ ಸಂಬಂಧಿಸಿದ ಸಮಸ್ಯೆ

  ಕಣ್ಣಿಗೆ ಸಂಬಂಧಿಸಿದ ಸಮಸ್ಯೆ

  ಇವರಿಗೆ ರವಿಯಿಂದ ಆರನೇ ಮನೆಯಲ್ಲಿ ಚಂದ್ರ ಹಾಗೂ ಚಂದ್ರನಿಂದ ಎಂಟನೇ ಸ್ಥಾನದಲ್ಲಿ ರವಿ ಇರುವುದರಿಂದ ಕಣ್ಣಿಗೆ ಸಂಬಂಧಿಸಿದಂತೆ ತೊಂದರೆ ಇರುತ್ತದೆ. ಎರಡೂ ಕಣ್ಣಿನ ದೃಷ್ಟಿ ಸಾಮರ್ಥ್ಯ ಒಂದೇ ಥರ ಇರುವುದಿಲ್ಲ. ಇನ್ನು ಈ ಜಾತಕದ ಪ್ರಕಾರ ತಾಯಿಯ ಪ್ರಭಾವ ವಿಪರೀತವಾಗಿರುತ್ತದೆ. ಅಂದರೆ ಮಗನ ವಿಚಾರದಲ್ಲಿ ಕೋಟೆಯಂತೆ ನಿಂತು ಕಾಯುವ ತಾಯಿಯ ದೆಸೆಯಿಂದ ಇವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ಹಿನ್ನಡೆಯಾಗುತ್ತದೆ.

  ಪಕ್ಷದ ಮೇಲಿನ ಹಿಡಿತ ಮುಗಿಯುವ ಸೂಚನೆ

  ಪಕ್ಷದ ಮೇಲಿನ ಹಿಡಿತ ಮುಗಿಯುವ ಸೂಚನೆ

  ಇನ್ನು ಮುಂದಿನ ಲೋಕಸಭೆ ಚುನಾವಣೆಯ ನಂತರ ಇಷ್ಟು ಕಾಲ ಇದ್ದ ನೆಹರೂ- ಗಾಂಧಿ ಕುಟುಂಬದ ಕಾಂಗ್ರೆಸ್ ಮೇಲಿನ ಹಿಡಿತ ಮುಗಿಯುವ ಲಕ್ಷಣ ಗೋಚರಿಸುತ್ತಿವೆ. ನಾಯಕತ್ವದಿಂದ ರಾಹುಲ್ ಗಾಂಧಿ ಹಿಂದೆ ಸರಿದು, ಆ ಕುಟುಂಬದ ಹೊರತಾದ ನಾಯಕತ್ವವೊಂದು ಆ ಪಕ್ಷಕ್ಕೆ ದೊರೆಯುವ ಸನ್ನಿವೇಶ ಸೃಷ್ಟಿಯಾಗುತ್ತದೆ.

  ಕಾಂಗ್ರೆಸ್ ನಲ್ಲಿ ಕ್ರಾಂತಿ ಸಾಧ್ಯತೆ

  ಕಾಂಗ್ರೆಸ್ ನಲ್ಲಿ ಕ್ರಾಂತಿ ಸಾಧ್ಯತೆ

  2019ರಲ್ಲಿ ಕಾಂಗ್ರೆಸ್ ನಲ್ಲಿ ವಿಪ್ಲವ ಅಥವಾ ಕ್ರಾಂತಿ ಆಗುವ ಸೂಚನೆಗಳಿವೆ. ರಾಹುಲ್ ಗಾಂಧಿ ಅವರ ಜಾತಕದ ಪ್ರಕಾರ ವಂಶಕ್ಷಯ ದೋಷವಿದೆ. ಇದನ್ನು ಜ್ಯೋತಿಷ್ಯ ರೀತ್ಯಾ ವಿವಿಧ ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ಆದರೆ ಪಕ್ಷವೊಂದನ್ನು ಗಮನದಲ್ಲಿಟ್ಟು ಹೇಳುವುದಾದರೆ ಕಾಂಗ್ರೆಸ್ ನ ಸ್ಥಿತಿ ಮತ್ತೂ ಕೆಳ ಮಟ್ಟಕ್ಕೆ ಹೋಗುವುದನ್ನು ಸೂಚಿಸುತ್ತದೆ. ಆ ಪಕ್ಷದ ಅಸ್ತಿತ್ವಕ್ಕೆ ತೊಂದರೆ ಎದುರಾಗುವುದರ ಸಂಕೇತವಿದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  India's oldest political party Congress and It's president Rahul Gandhi's future prediction according to vedic astrology by well known astrologer Prakash Ammannaya, Kapu, Udupi.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more