ಬಾಲ ಜ್ಯೋತಿಷಿ ಅಭಿಗ್ಯಾ ನುಡಿದ ವರ್ಷಾಂತ್ಯದ ಸ್ಪೋಟಕ ಭವಿಷ್ಯ: ಮತ್ತೆ ಗಂಢಾಂತರ
ಕೊರೊನಾ ವೈರಸ್ ಭಾರತದಿಂದ ಮೇ ಮಾಸಾಂತ್ಯಕ್ಕೆ ತೊಲಗುತ್ತದೆ ಎನ್ನುವ ಮಹೂರ್ತವನ್ನು ಹೆಚ್ಚಿನ ಜ್ಯೋತಿಷಿಗಳು ಫಿಕ್ಸ್ ಮಾಡಿದ್ದರು. ಅದರಲ್ಲಿ ಬಾಲ ಜ್ಯೋತಿಷಿ ಎಂದೇ ಹೆಸರು ಪಡೆದಿರುವ ಅಭಿಗ್ಯಾ ಆನಂದ್ ಕೂಡಾ ಒಬ್ಬರು.
Recommended Video
ಆದರೆ, ಕೊರೊನಾ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಾಸ್ತವತೆ. ಎಲ್ಲಿ ಕೊರೊನಾ ಹುಟ್ಟಿತ್ತೋ ಆ ದೇಶದ ಸಾವಿನ ಸಂಖ್ಯೆಯನ್ನೂ ಭಾರತ ಮೀರಿಸಿದ್ದಾಗಿದೆ. ಇವೆಲ್ಲದರ ನಡುವೆ, ಲಾಕ್ ಡೌನ್ ಸಡಿಲಗೊಳ್ಳುತ್ತಾ ಸಾಗುತ್ತಿದೆ.
"ಮೇ 29ರ ನಂತರ ಕೊರೊನಾ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ"ಎಂದು ಅಭಿಗ್ಯಾ ನುಡಿದಿದ್ದರು.
ಈಗ ನಾಲ್ಕು ದಿನಗಳ ಕೆಳಗೆ ಅಂದರೆ ಮೇ 26ಕ್ಕೆ ಅಪ್ಲೋಡ್ ಮಾಡಲಾಗಿರುವ ಹೊಸ ವಿಡಿಯೋದಲ್ಲಿ ಅಭಿಗ್ಯಾ, ಕೊರೊನಾ ತೊಲಗುವ ಹೊಸ ಡೇಟ್ ಅನ್ನು ಕೊಟ್ಟಿದ್ದಾರೆ. ಜೊತೆಗೆ, ವರ್ಷಾಂತ್ಯಕ್ಕೆ ಇನ್ನೊಂದು ಕಂಟಕ ಎದುರಾಗಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದನ್ನು ನಂಬುವುದು, ಬಿಡುವುದು, ಅವರವರ ವಿವೇಚನೆಗೆ ಬಿಟ್ಟ ವಿಚಾರ. ಅಭಿಗ್ಯಾ ನುಡಿದ ಭವಿಷ್ಯ ಹೀಗಿದೆ:

ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್
"ಕಳೆದ ವರ್ಷ ಸೆಪ್ಟಂಬರ್ ನಲ್ಲೇ ನಾನು ಹೇಳಿದ್ದೆ. ಗುರುವು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಗುರು ಮತ್ತು ಶನಿಯ ಸಂಘರ್ಷಕ್ಕೆ ಕಾರಣವಾಗಿರುತ್ತದೆ. ಇದು ಜಗತ್ತಿನಲ್ಲಿ ಹಲವು ಸಂಕಷ್ಟಕ್ಕೆ ಕಾರಣವಾಗುತ್ತದೆ. ಈಗಿನ ಕೊರೊನಾ ಅದರ ಭಾಗವೇ ಎಂದು ಹತ್ತು ತಿಂಗಳ ಹಿಂದೆಯೇ ಹೇಳಿದ್ದೆ" - ಅಭಿಗ್ಯಾ ಆನಂದ್.

ಜೂನ್ ಮಾಸಾಂತ್ಯದಿಂದ ವೈರಸ್ ಪ್ರಭಾವ ಕಮ್ಮಿ
"ಕೃಷಿ ಚಟುವಟಿಕೆಗಳು ಬಂದ್ ಆದರೆ, ಇದರಿಂದ ತುಂಬಾ ದೊಡ್ಡ ಆಪತ್ತು ಎದುರಿಸಬೇಕಾಗುತ್ತದೆ. ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಿದೆ. ಇದಕ್ಕೆ ಮನುಷ್ಯ ಅರಶಿಣ ಮತ್ತು ಅಮೃತವಳ್ಳಿ ಮುಂತಾದವುದನ್ನು ಹೆಚ್ಚಾಗಿ ಸೇವಿಸಬೇಕು. ಜೂನ್ ಮಾಸಾಂತ್ಯದಿಂದ ಕೊರೊನಾ ವೈರಸ್ ಪ್ರಭಾವ ಕಮ್ಮಿಯಾಗುತ್ತಾ ಸಾಗುತ್ತದೆ" ಎನ್ನುವ ಹೊಸ ದಿನಾಂಕವನ್ನು ಅಭಿಗ್ಯಾ ನೀಡಿದ್ದಾರೆ.

ಎರಡು ಗ್ರಹಣಗಳು ಸಂಭವಿಸಲಿವೆ
"ಜುಲೈ ಮೊದಲ ವಾರದಿಂದ ಪ್ರಪಂಚ ಸಾಮಾನ್ಯ ಸ್ಥಿತಿಗೆ ಬರಲು ಆರಂಭವಾಗುತ್ತದೆ. ಆದರೆ, ಜಗತ್ತಿಗೆ ಇನ್ನೊಂದು ಕಂಟಕ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಡಿಸೆಂಬರ್ ಇಪ್ಪತ್ತರಿಂದ ಕೆಟ್ಟ ಸಮಯ ಆರಂಭವಾಗಲಿದೆ. ಈ ಅವಧಿಯ ನಡುವೆ ಎರಡು ಗ್ರಹಣಗಳು ಸಂಭವಿಸಲಿವೆ"ಎಂದು ಅಭಿಗ್ಯಾ ವಿಡಿಯೋದಲ್ಲಿ ಹೇಳಿದ್ದಾರೆ.

ಮತ್ತೆ ಜಗತ್ತು ಕಂಟಕ ಎದುರಿಸಬೇಕಾಗಿದೆ
"ಜೂನ್ ನಂತರ ಗುರು ಮತ್ತು ಶನಿ ರಾಶಿಯ ಸಂಯೋಜನೆಯಾಗಲಿದೆ. ಫೆಬ್ರವರಿ 2021ರಲ್ಲಿ ಆರು ಗ್ರಹಗಳ ಸಂಯೋಜನೆಯಾಗಲಿದೆ. ಡಿಸೆಂಬರ್ ಇಪ್ಪತ್ತರಂದು ಇದೇ ರೀತಿಯ ಪರಿಸ್ಥಿತಿ ಉದ್ಭವವಾಗಲಿದೆ. ಉತ್ತರಾಷಾಡ, ಮಕರ ರಾಶಿಯು ಒಂದೇ ರೇಖೆಯಲ್ಲಿ ಇರುವುದರಿಂದ, ಮತ್ತೆ ಜಗತ್ತು ಕಂಟಕ ಎದುರಿಸಬೇಕಾಗಿದೆ" ಎಂದು ಅಭಿಗ್ಯಾ ಭವಿಷ್ಯ ನುಡಿದಿದ್ದಾರೆ.












Click it and Unblock the Notifications