Ugadi Horoscope 2025: ಮಕರ ರಾಶಿಯ ಯುಗಾದಿ ಜಾತಕ- ಶನಿ ಗುರು ಬಲದಿಂದ ಒಳ್ಳೆಯ ಫಲ ಖಚಿತ
ಮಾರ್ಚ್ 30, 2025ಕ್ಕೆ ವಿಶ್ವವಾಸು ನಾಮ ಸಂವತ್ಸರ ಆರಂಭವಾಗುತ್ತದೆ. ಕ್ರೋಧಿ ನಾಮ ಸಂವತ್ಸರವನ್ನು ದಾಟಿ ಮುಂದಕ್ಕೆ ಹೋಗುತ್ತೇವೆ. ಈ ಸಮಯದಲ್ಲಿ ತುಂಬಾ ಜನರಿಗೆ ತಮ್ಮ ರಾಶಿಗೆ ಯುಗಾದಿ ನಂತರದ ದಿನಗಳು ಹೇಗಿರುತ್ತವೆ ಎಂದು ತಿಳಿಯುವ ಕುತೂಹಲ ಇರುತ್ತದೆ. ಈಗಾಗಲೇ ನಾವು ಮೇಷ ರಾಶಿಯಿಂದ ಹಿಡಿದು ಧನು ರಾಶಿಯವರೆಗೆ ದ್ವಾದಶಿ ರಾಶಿಗಳ ಗೋಚಾರ ಫಲವನ್ನು ತಿಳಿಸಿದ್ದೇವೆ. ಇದೀಗ ಮಕರ ರಾಶಿ ಯುಗಾದಿ ಭವಿಷ್ಯವನ್ನು ತಿಳಿಯೋಣ.
ಮಾರ್ಚ್ 30 ಯುಗಾದಿ ಹಬ್ಬದೊಂದಿಗೆ ಶನಿ ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶ ಮಾಡಲಿದೆ. ಗುರು ಗ್ರಹ ಮೇ ತಿಂಗಳಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದೆ. ಹಾಗೇ ರಾಹು-ಕೇತುಗಳು ಸಹ ಮೇ ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಈ ನಾಲ್ಕು ಪ್ರಮುಖ ಗ್ರಹಗಳ ಸ್ಥಾನದಿಂದ ಮಕರ ರಾಶಿಯವರ ಯುಗಾದಿ ಫಲಾನುಫಲವನ್ನು ತಿಳಿಯಬಹುದು.

ಗ್ರಹಗಳ ಸ್ಥಾನಪಲ್ಲಟ
ಶನಿ ಮಕರ ರಾಶಿಯ ಎರಡನೇ ಮನೆಯಲ್ಲಿ ಸಂಚರಿಸುತ್ತಿದೆ. ರಾಹು ನಾಲ್ಕನೇ ಮನೆಗೆ ಸಾಗುತ್ತಿದೆ. ಕೇತು ಹತ್ತನೇ ಮನೆಯಲ್ಲಿ ಸಂಚರಿಸುತ್ತಿದೆ. ವಿಶ್ವವಾಸು ನಾಮ ಸಂವತ್ಸರದಲ್ಲಿ ಮಕರ ರಾಶಿಯ ನಾಲ್ಕನೇ ಮನೆಯಲ್ಲಿ ಗುರು ಸಂಚರಿಸುತ್ತಿರುವುದರಿಂದ ಮಕರ ರಾಶಿಯ ಜನರಿಗೆ ಮಧ್ಯಮ ಫಲಿತಾಂಶಗಳು ದೊರೆಯುತ್ತಿವೆ.
ಮಕರ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ
ಮಕರ ರಾಶಿಯವರಿಗೆ ವ್ಯಾಪಾರ, ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಲಾಭವಿದೆ. ಯಾವುದೇ ಕೆಲಸ ಮಾಡಿದರೂ ಉತ್ತಮ ಆದಾಯ ಪಡೆಯುವಿರಿ. ಹೀಗಾಗಿ ಯುಗಾದಿ ನಂತರ ನಿಮ್ಮ ಆರ್ಥಿಕ ಜೀವನ ಅತ್ಯಾದ್ಭುತವಾಗಿರುತ್ತದೆ. ಶನಿ ನಿಮಗೆ ಉತ್ತಮ ಫಲ ನೀಡಲಿದ್ದು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಮನೆಯಲ್ಲಿ ಸಂಪತ್ತು ನೆಲೆಸಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

ಮಕರ ರಾಶಿಯ ಯುಗಾದಿ ಕೌಟುಂಬಿಕ ಜಾತಕ
ಕೌಟುಂಬಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ಒಬ್ಬರಿಗೊಬ್ಬರು ಪರಸ್ಪರ ಸ್ನೇಹ, ಪ್ರೀತಿಯಿಂದ ಇರುವಿರಿ. ಹೊಂದಾಣಿಕ ಇರುತ್ತದೆ. ಯಾವುದೇ ಮನಸ್ತಾಪ ಜಗಳ ಬರುವುದಿಲ್ಲ. ನಿಮ್ಮೊಂದಿಗೆ ಸಂಬಂಧಿಕರು ಅನ್ಯೂನ್ಯವಾಗಿ ಇರುತ್ತಾರೆ. ಮನೆಯಲ್ಲಿ ಶಾಂತ ವಾತಾವರಣ ಇರುತ್ತದೆ.
ಮಕರ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ
ಮಕರ ರಾಶಿಯವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ಯಾವುದೇ ಕೋರ್ಸ್‌ಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಶಿಕ್ಷಣದಲ್ಲಿ ಮೆಚ್ಚುಗೆ ಪಡೆಯುವಿರಿ. ಕಷ್ಟಪಟ್ಟು ಅಧ್ಯಯನ ಮಾಡಿದ ಫಲವನ್ನು ನೀವು ಪಡೆಯುವಿರಿ. ಶಿಕ್ಷಣದಲ್ಲಿನ ಯಾವುದೇ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ.

ಮಕರ ರಾಶಿಯ ಯುಗಾದಿ ವೃತ್ತಿ ಭವಿಷ್ಯ
ನಾಲ್ಕನೇ ಮನೆಯಲ್ಲಿ ರಾಹುವಿನ ಪ್ರಭಾವದಿಂದಾಗಿ, ವ್ಯಾಪಾರ ಚಟುವಟಿಕೆಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆದರೂ ಉದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಧನಲಾಭವಾಗಲಿದೆ. ಯಾವುದೇ ಹೊಸ ಪ್ರಯತ್ನಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ನ್ಯಾಯಾಲಯ ಪ್ರಕರಣಗಳಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಈ ವರ್ಷ ಮಕರ ರಾಶಿಯವರಿಗೆ ಒಟ್ಟಾರೆ ಸರಾಸರಿ ಫಲಿತಾಂಶಗಳು ಹೆಚ್ಚಿರುತ್ತವೆ.
ಮಕರ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ
ಮಕರ ರಾಶಿಯವರಿಗೆ ಗುರುವಿನ ಪ್ರಭಾವ ಚೆನ್ನಾಗಿದೆ. ಯುಗಾದಿ ನಂತರ ಮಕರ ರಾಶಿಯವರಿಗೆ ಶುಭಕಾರಕ ಫಲ ಗುರುವಿನಿಂದ ಸಿಗುತ್ತವೆ. ದೇಹದಲ್ಲಿ ಆರೋಗ್ಯದ ಬದಲಾವಣೆಗಳು ಆಗುತ್ತವೆ. ದೀರ್ಘಕಾಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೊಸ ಕೆಲಸಗಳಲ್ಲಿ ಉತ್ಸಾಹ ಹೆಚ್ಚಾಗಲಿದೆ. ನೀವು ಒಂದೇ ಕಡೆ ಕುಳಿತುಕೊಳ್ಳುವುದಿಲ್ಲ. ಯಾವುದಾದರೂ ಹೊಸ ಕೆಲಸಗಳನ್ನು ಮಾಡುತ್ತಲೇ ಇರುತ್ತೀರಿ. ಹೊಸ ಆಲೋಚನೆಗಳು ಬರುತ್ತವೆ. ಪುಜ್ಯರ ಪುಣ್ಯ ಕ್ಷೇತ್ರಗಳ ದರ್ಶನ ಮಾಡುವಿರಿ. ಈ ಸಮಯದಲ್ಲಿ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಉತ್ತಮ.
ಮಕರ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ
ಪ್ರೇಮಿಗಳಲ್ಲಿ ಹೊಂದಾಣಿಕೆ ಕಂಡುಬರುವುದು. ವಿವಾಹಿತರ ನಡುವೆ ತಾಳ್ಮೆ ಪ್ರೀತಿ ಹೆಚ್ಚಾಗಲಿದೆ. ಮಾತಿನ ಸ್ಥಾನದಲ್ಲಿ ಶನಿಯ ಚಲನೆಯು ಜಗಳಗಳು ಮತ್ತು ಕೋಪದ ಮಾತುಗಳನ್ನು ಹೆಚ್ಚಿಸಬಹುದು. ಜಗಳಗಳು ಮತ್ತು ರಾಜಕೀಯದಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಬಂಧು ಬಾಂಧವರೊಂದಿಗೆ ಪ್ರೀತಿ ವಿಶ್ವಾಸದಿಂದ ಕಾಲ ಕಳೆಯುವಿರಿ. ಒಟ್ಟಾರೆಯಾಗಿ ನೆಮ್ಮದಿಯ ಜೀವನವನ್ನು ನಡೆಸುವಿರಿ.
ಮಕರ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ
ಮಕರ ರಾಶಿಯವರು ಯುಗಾದಿಯ ನಂತರ ನೂತನ ವಸ್ತು, ವಾಹನ, ಸೈಟ್, ಮನೆ ಹೀಗೆ ಬೆಲೆಬಾಳುವ ವಸ್ತುಗಳನ್ನು ಕೊಂಡುಕೊಳ್ಳಬಹುದು. ಮನೆ ಕಟ್ಟಬಹುದು, ಒಡವೆಗಳನ್ನು ತೆಗೆದುಕೊಳ್ಳಬಹುದು. ಯುಗಾದಿ ನಂತರ ನಿಮ್ಮ ಎಲ್ಲಾ ಇಷ್ಟಾರ್ಥ ಸಿದ್ಧಿಯಾಗುತ್ತವೆ. ಶತ್ರುಗಳು ಸೋಲು ಒಪ್ಪಿಕೊಳ್ಳುತ್ತಾರೆ. ವಾದ ವಿವಾದಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಬಂಧು ಮಿತ್ರರು ಬೆಂಗಾವಲಾಗಿ ನಿಲ್ಲುತ್ತಾರೆ. ಶನಿಯಿಂದ ತುಂಬಾ ಉತ್ತಮ ಫಲಗಳು ಸಿಗುತ್ತವೆ.












Click it and Unblock the Notifications