Get Updates
Get notified of breaking news, exclusive insights, and must-see stories!

Budhaditya Yoga 2021: ವೃಶ್ಚಿಕ ರಾಶಿಯಲ್ಲಿರುವ ಸೂರ್ಯನೊಂದಿಗೆ ಬುಧ ಸಂಯೋಗ: ಯಾವ ರಾಶಿಯವರಿಗೆ ಶುಭವಾಗುತ್ತೆ?

ಜ್ಯೋತಿಷ್ಯದಲ್ಲಿ ಬುಧ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಎಲ್ಲಾ ಗ್ರಹಗಳಲ್ಲಿ ಬುಧ ಗ್ರಹಕ್ಕೆ ರಾಜಕುಮಾರ ಎಂಬ ಬಿರುದನ್ನು ನೀಡಲಾಗಿದೆ. ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿದೆ. ನವೆಂಬರ್ 21 ರಂದು ಬುಧ ಗ್ರಹವು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಇದರ ವಿಶೇಷವೆಂದರೆ ಸೂರ್ಯದೇವನು ಈಗಾಗಲೇ ವೃಶ್ಚಿಕ ರಾಶಿಯಲ್ಲಿದ್ದು, ಬುಧಗ್ರಹದ ಆಗಮನದಿಂದ ಬುಧಾದಿತ್ಯ ಯೋಗವು ರೂಪುಗೊಂಡಿದೆ. ಡಿಸೆಂಬರ್ 10 ರವರೆಗೆ ಬುಧ ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಬುಧದ ರಾಶಿ ಬದಲಾವಣೆಯಿಂದ ರೂಪುಗೊಂಡ ಬುಧಾದಿತ್ಯ ಯೋಗ ಎಲ್ಲಾ 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಮೇಷ ರಾಶಿ : ಈ ಬುಧ ಸಂಕ್ರಮಣವು ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ನಿಮ್ಮ ಮಾತಿನ ಸಹಾಯದಿಂದ ಹಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಜೊತೆಗೆ ಪೂರ್ವಜರ ಆಸ್ತಿಯಿಂದ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಮಾನಸಿಕವಾಗಿ ನೀವು ಸ್ವಲ್ಪ ದುರ್ಬಲರಾಗಬಹುದು. ಮಿಕ್ಕ ರಾಶಿಗಳ ಮೇಲಿನ ಪರಿಣಾಮಗಳನ್ನು ತಿಳಿಯಲು ಮುಂದೆ ಓದಿರಿ...

 ವೃಷಭ ರಾಶಿಯವರಿಗೆ ಶುಭ ಸೂಚನೆ

ವೃಷಭ ರಾಶಿಯವರಿಗೆ ಶುಭ ಸೂಚನೆ

ವೃಷಭ: ಇದು ವೃಷಭ ರಾಶಿಯವರಿಗೆ ಶುಭ ಸೂಚನೆಗಳನ್ನು ನೀಡುತ್ತಿದೆ. ನಿಮ್ಮ ವ್ಯಕ್ತಿತ್ವ ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಬೌದ್ಧಿಕ ಕೆಲಸದ ಸಹಾಯದಿಂದ ಯಾವುದೇ ದೊಡ್ಡ ಯಶಸ್ಸನ್ನು ಸಾಧಿಸಬಹುದು.

 ಮಿಥುನ ರಾಶಿಯವರಿಗೆ ಈ ಸಮಯವು ಹಿತಕರ

ಮಿಥುನ ರಾಶಿಯವರಿಗೆ ಈ ಸಮಯವು ಹಿತಕರ

ಮಿಥುನ: ಮಿಥುನ ರಾಶಿಯವರಿಗೆ ಈ ಸಮಯವು ಹಿತಕರವಾಗಿರುತ್ತದೆ. ಜೊತೆಗೆ ಆರೋಗ್ಯ ಚೆನ್ನಾಗಿರುತ್ತದೆ. ನೀವು ಮಾನಸಿಕವಾಗಿಯೂ ಉತ್ತಮವಾಗುತ್ತೀರಿ. ನಿಮ್ಮ ಖರ್ಚುಗಳು ಕಡಿಮೆಯಾಗುತ್ತವೆ ಮತ್ತು ಆದಾಯದ ಮೂಲಗಳು ಹೆಚ್ಚಾಗುತ್ತವೆ. ಇದರೊಂದಿಗೆ ನೀವು ಉಳಿತಾಯದಲ್ಲೂ ಯಶಸ್ವಿಯಾಗುತ್ತೀರಿ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸುದ್ದಿ ಪಡೆಯಬಹುದು.

 ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ

ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ

ಕರ್ಕ ರಾಶಿ: ಕರ್ಕ ರಾಶಿಯವರಿಗೆ ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. ಮತ್ತೊಂದೆಡೆ, ಮಕ್ಕಳನ್ನು ಪಡೆಯಲು ದೀರ್ಘಕಾಲ ಪ್ರಯತ್ನಿಸುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದ್ಯಾಭ್ಯಾಸದ ವಿಷಯದಲ್ಲಿ ಸಮಯ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗುವ ಸಾಧ್ಯತೆ ಇದೆ.

 ಅನೇಕರು ಬಡ್ತಿ ಪಡೆಯಬಹುದು

ಅನೇಕರು ಬಡ್ತಿ ಪಡೆಯಬಹುದು

ಸಿಂಹ : ಬುಧ ಮತ್ತು ಸೂರ್ಯನ ಸಂಯೋಗದಿಂದ ಸಿಂಹ ರಾಶಿಯವರ ಜೀವನದಲ್ಲಿ ಸಾಂಸಾರಿಕ ಸೌಕರ್ಯಗಳು ಹೆಚ್ಚಾಗುವುದು. ನೀವು ಕೆಲಸದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅನೇಕರು ಬಡ್ತಿ ಪಡೆಯಬಹುದು. ಜೊತೆಗೆ ಬಹುತೇಕರು ಲಾಭ ಪಡೆಯುವ ನಿರೀಕ್ಷೆ ಇದೆ. ಹೂಡಿಕೆಗೆ ಸರಿಯಾದ ಸಮಯ, ಆದರೆ ತಜ್ಞರಿಂದ ಸಲಹೆ ಪಡೆಯಿರಿ. ಈ ಅವಧಿಯಲ್ಲಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ.

 ನೀವು ಲಾಭವನ್ನು ಗಳಿಸಲು ಸಾಧ್ಯ

ನೀವು ಲಾಭವನ್ನು ಗಳಿಸಲು ಸಾಧ್ಯ

ಕನ್ಯಾ: ಈ ಸಂಚಾರದ ಪ್ರಭಾವದಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯಗಳು ಹೆಚ್ಚಾಗುತ್ತವೆ. ನಿಮ್ಮ ಕೆಲಸವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

 ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ

ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ

ತುಲಾ: ತುಲಾ ರಾಶಿಯ ಜನರು ಕೆಲವು ದೊಡ್ಡ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಾತಿನ ಮಾಧುರ್ಯ ಜನರನ್ನು ಮೆಚ್ಚಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಭವಿಷ್ಯಕ್ಕಾಗಿ ಯೋಜನೆಗಳನ್ನು ಮಾಡಲು ಸಮಯ ಸೂಕ್ತವಾಗಿದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಲಹೆ ನೀಡಲಾಗುತ್ತದೆ.

 ದಾಂಪತ್ಯ ಜೀವನ ಸುಖಮಯ

ದಾಂಪತ್ಯ ಜೀವನ ಸುಖಮಯ

ವೃಶ್ಚಿಕ: ಬುಧನು ಈ ರಾಶಿಗೆ ಪ್ರವೇಶಿಸಿದ್ದು ಅದರ ಪರಿಣಾಮ ಈ ರಾಶಿಯವರ ಮೇಲೂ ಬೀಳಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಅದ್ಭುತವಾದ ಹೊಳಪು ಇರುತ್ತದೆ. ಇದರಿಂದಾಗಿ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ.

 ನಿಮ್ಮ ಖರ್ಚುಗಳು ಹೆಚ್ಚಾಗಬಹುದು

ನಿಮ್ಮ ಖರ್ಚುಗಳು ಹೆಚ್ಚಾಗಬಹುದು

ಧನು ರಾಶಿ : ಈ ಬುಧ ಸಂಕ್ರಮಣ ಧನು ರಾಶಿಯವರಿಗೆ ವಿಶೇಷವಾಗುವುದಿಲ್ಲ. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಉಳಿಸಲು ನಿಮಗೆ ತುಂಬಾ ಕಷ್ಟವಾಗುತ್ತದೆ. ನೀವು ಹಣವನ್ನು ಸಹ ಮತ್ತೊಬ್ಬರಿಂದ ಪಡೆಯಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಕ್ಷೀಣಿಸಬಹುದು.

 ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲ

ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲ

ಮಕರ: ಮಕರ ರಾಶಿಯವರಿಗೆ ಮಕ್ಕಳ ಕಡೆಯಿಂದ ಸ್ವಲ್ಪ ಲಾಭ ಸಿಗಬಹುದು.ಇದು ಶಿಕ್ಷಣದಲ್ಲಿ ತೊಡಗಿರುವವರಿಗೆ ಉತ್ತಮ ಸಮಯ. ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಹೂಡಿಕೆಗೆ ಉತ್ತಮ ಸಮಯ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಆದಾಯದ ಹೊಸ ಮೂಲಗಳನ್ನು ಪಡೆಯುವ ಮೂಲಕ, ನೀವು ಹಣ ಉಳಿಸಲು ಸಹ ಸಾಧ್ಯವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಸಮಯ ಉತ್ತಮವಾಗಿರುತ್ತದೆ.

 ವ್ಯಾಪಾರ ವೃದ್ಧಿಯಾಗಲಿದೆ

ವ್ಯಾಪಾರ ವೃದ್ಧಿಯಾಗಲಿದೆ

ಕುಂಭ: ಕುಂಭ ರಾಶಿಯ ಉದ್ಯೋಗಸ್ಥರಿಗೆ ಸಮಯವು ತುಂಬಾ ಉತ್ತಮವಾಗಿರುತ್ತದೆ. ನೀವು ಹಿರಿಯರು ಹಾಗೂ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ತಾಯಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ತಾಯಿಯಿಂದ ಕೆಲವು ರೀತಿಯ ಲಾಭ ಪಡೆಯುವ ಸಾಧ್ಯತೆ ಕೂಡ ಇದೆ.

Recommended Video

    ಹಲಾಲ್' ಮಾಂಸ ಅಂದರೆ ಏನು ? | Oneindia Kannada
     ಬುಧ ಸಂಕ್ರಮಣದಿಂದ ಶುಭ ಫಲ

    ಬುಧ ಸಂಕ್ರಮಣದಿಂದ ಶುಭ ಫಲ

    ಮೀನ: ಮೀನ ರಾಶಿಯವರಿಗೆ ಈ ಬುಧ ಸಂಕ್ರಮಣದಿಂದ ಶುಭ ಫಲಗಳು ದೊರೆಯುತ್ತವೆ. ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಜೊತೆಗೆ ನಿಮ್ಮ ಮೇಲೆ ಜನಪ್ರಿಯತೆ ಹೆಚ್ಚಾಗುತ್ತದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+