Shani Dosha Parihara: ಶನಿ ದೋಷ ಕಡಿಮೆ ಮಾಡಲು ಬ್ರಹ್ಮಾಂಡ ಗುರೂಜಿ ನೀಡಿದ ಪರಿಹಾರಗಳು
ನವಗ್ರಹಗಳಲ್ಲಿ ಶನಿ ದೇವನನ್ನು ಅತ್ಯಂತ ಕೆಟ್ಟ ಗ್ರಹ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಸಾಡೇಸಾತ್ ವೇಳೆ ಶನಿ ಪ್ರಭಾವ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಶನಿಯ ಕೆಟ್ಟ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದರೆ ಆತ ಶ್ರೀಮಂತನಾಗಿದ್ದರೂ ಬಡವನಾಗಿ ಬಿಡುತ್ತಾನೆ. ಹೀಗಾಗಿ ಶನಿ ದೇವನ ಕೋಪಕ್ಕೆ ಗುರಿಯಾಗದೇ ಇರುವುದು ತುಂಬಾ ಮುಖ್ಯ. ಹಾಗಾದರೆ ಶನಿ ಕಾಟದಿಂದ ದೂರವಿರಲು ಯಾವ ಪರಿಹಾರಗಳನ್ನು ಅನುಸರಿಸಬೇಕು, ಇದಕ್ಕೆ ಬ್ರಹ್ಮಾಂಡ ಗುರೂಜಿ ಕೊಡುವ ಪರಿಹಾರಗಳೇನು ಎಂದು ತಿಳಿಯೋಣ.
ಬ್ರಹ್ಮಾಂಡ ಗುರೂಜಿ ಅವರ ಪ್ರಕಾರ ಶನಿ ದೋಷವಿದ್ದರೆ, ಜಾತಕದಲ್ಲಿ ಸಾಡೇಸಾತ್ ನಡೆಯುತ್ತಿದ್ದರೆ ಹಾಗೂ ಶನಿ ಪ್ರಭಾವದಿಂದ ದೂರವಿರಲು ಬಯಸಿದರೆ ಕೆಲ ಪರಿಹಾರಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಅವುಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ವಿವರವಾಗಿ ವಿವರಿಸಿದ್ದಾರೆ. ಈಗ ಅದರ ಬಗ್ಗೆ ತಿಳಿಯೋಣ.

ಯಾರ ಭಕ್ತರಿಗೆ ಶನಿಕಾಟವಿರುವುದಿಲ್ಲ...
ಶನಿ ಗಣೇಶ ಹಾಗೂ ಹನುಮಂತನನ್ನು ಮುಟ್ಟಲ್ಲ. ಜೊತೆಗೆ ಶನಿ ದೇವ ಕಾಲಬೈರವನನ್ನು ಸ್ಮರಣೆ ಮಾಡುತ್ತಾನೆ. ಹೀಗಾಗಿ ಗಣೇಶ, ಹನುಮಂತ ಹಾಗೂ ಕಾಳಭೈರವನ ಭಕ್ತರಿಗೆ ಶನಿಕಾಟವಿರುವುದಿಲ್ಲ. ಯಾರು ಶ್ರದ್ಧಾ, ಭಕ್ತಿಯಿಂದ ಈ ಮೂರು ದೇವರನ್ನು ಪೂಜಿಸುತ್ತಾರೋ ಅಂಥವರಿಗೆ ಶನಿ ದೋಷದಿಂದ ಪರಿಹಾರ ಸಿಗುತ್ತದೆ. ಇವರನ್ನು ಯಾವುದೇ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ. ಹೆಚ್ಚು ಸಮಸ್ಯೆಗಳನ್ನು ಇವರು ಅನುಭವಿಸುವುದಿಲ್ಲ. ಶನಿಕಾಟದಿಂದ ದೂರ ಉಳಿಯುತ್ತಾರೆ.
ಶನೈ ಅಂದರೆ ಮೆತ್ತಗೆ, ಚರ ಅಂದರೆ ನಿಧಾನ. ಶನೇಶ್ಚರ ಅಂದರೆ ನಿಧಾನವಾಗಿ ಸಾಗುವ ಗ್ರಹವಾಗಿದೆ. ಹೀಗಾಗಿ ಸಾಡೇಸಾತ್, ಪಂಚಮ್‌ಶನಿ, ಅಷ್ಟಮ್ ಶನಿ, ಏಕಾದಶಿ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಸಾಡೇಸಾತ್ ಏಳುವರೆ ವರ್ಷ, ಪಂಚಮ್‌ಶನಿ ಎರಡುವರೆ ವರ್ಷ, ಅಷ್ಟಮ ಶನಿ ಐದುವರೆ ವರ್ಷ, ಪಂಚಮಶನಿ ಒಂದುವರೆ ವರ್ಷ, ಏಕಾದಶ ಶನಿ ಒಂಬತ್ತು ವರ್ಷಗಳ ಕಾಲ ಜಾಗರೂಕರಾಗಿರಬೇಕು.

ಮಾಂಸಾಹಾರ ಈ ದಿನ ತಿನ್ನಬಾರದು..
ಶನಿಕಾಟದಿಂದ ಮುಕ್ತರಾಗಲು ಹಾಗೂ ಸಾಡೇಸಾತ್ ಇರುವವರು ಅಮವಾಸ್ಯೆ, ಪೌರ್ಣಮಿ, ಶ್ರಷ್ಟಿ, ಏಕಾದಶಿ ಈ ನಾಲ್ಕು ದಿನ ಮಾಂಸಾಹಾರವನ್ನು ಸೇವಿಸಬಾರದು. ಜೊತೆಗೆ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಈ ದಿನಗಳಲ್ಲಿ ಮಾಂಸಾಹಾರವನ್ನು ಬಿಡುವುದು ತುಂಬಾ ಒಳ್ಳೆಯದು. ಕದ್ದುಮುಚ್ಚಿ ಮಾಂಸಾಹಾರವನ್ನು ತಿನ್ನುವುದು, ತಿಳಿದು ಕೂಡ ಮಾಂಸಾಹಾರವನ್ನು ಸೇವಿಸುವುದು ಒಳ್ಳೆಯದಲ್ಲ. ಇದನ್ನು ಪಾಲಿಸುವವರನ್ನ ಶನಿ ಕಾಪಾಡುತ್ತಾನೆ. ದೊಡ್ಡ ಪರಿಣಾಮ ಉಂಟು ಮಾಡದೆ ಸಣ್ಣದರಲ್ಲಿ ಸಮಸ್ಯೆಗಳನ್ನು ದೂರ ಮಾಡುತ್ತಾನೆ.
ಶನಿಗೆ ಇಷ್ಟವಿರದೇ ಇರುವುದು ಯಾವುದು?
ಸಾಡೇಸಾತ್ ವೇಳೆ ಕೆಲ ವಿಷಯಗಳಿಂದ ದೂರವಿರಬೇಕು. ಮದ್ಯಮಾಪ, ಧೂಮಪಾನ ಮಾಡುವುದು, ಮಾಂಸಾಹಾರ ಸೇವನೆ ಶನಿದೇವನಿಗೆ ಇಷ್ಟವಾಗುವುದಿಲ್ಲ. ಶನಿ ಕಾಟವಿದ್ದಾಗ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದರಿಂದ ನಿಮ್ಮ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಲಿದೆ. ದೊಡ್ಡ ಮಟ್ಟದಲ್ಲಾಗುವ ಸಮಸ್ಯೆಗಳು ಸಣ್ಣದರಲ್ಲಿ ದೂರವಾಗುತ್ತವೆ. ಹೀಗಾಗಿ ಸಾಡೇಸಾತ್ ವೇಳೆ ಜಾಗರೂಕರಾಗಿರಬೇಕು.
ಯಾವ ಬಣ್ಣದ ಬಟ್ಟೆಗಳು ಹಾಕಬಾರದು
ಅಲ್ಲದೆ ಶನಿ ದೇವನಿಗೆ ಕೆಲ ಬಣ್ಣಗಳು ಇಷ್ಟವಾಗುವುದಿಲ್ಲ. ಅವುಗಳೆಂದರೆ ಕಪ್ಪು, ನೀಲಿ, ಕೆಂಪು. ಈ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಕಪ್ಪು ತುಂಬಾ ಅಪಾಯಕಾರಿ ಬಣ್ಣವಾಗಿದೆ. ನೀಲಿ ಮಂದಸ್ಮಿತ, ಕೆಂಪು ಬಣ್ಣ ದಾರಿದ್ರ್ಯ ಬಣ್ಣವಾಗಿದೆ. ಈ ಮೂರು ಬಣ್ಣಗಳು ಶನಿ ದೇವನಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಶನಿವಾರ ಆತನಿಗೆ ಇಷ್ಟವಾದ ಕೆಲಸಗಳನ್ನು ಮಾಡಿ. ಶನಿಗೆ ಇಷ್ಟವಾದ ಕೆಲಸ ಮಾಡುವವರು ಸಾಡೇಸಾತ್ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು.
ಶನಿಗೆ ಇಷ್ಟವಾದ ಕೆಲಸಗಳು ಯಾವುವು?
*ಶಿವನ ಆರಾಧನೆ ಮಾಡಬೇಕು.
*ಪ್ರತಿ ದಿನ ಸೂರ್ಯೋದಯದಲ್ಲಿ ಏಳುವುದು (ಈ ಸಮಯದಲ್ಲಿ ಮಲಗಿದ್ದರೆ ರೋಗಗಳು ಮೈಗಂಟಿಕೊಳ್ಳುತ್ತವೆ)
*ಆರು ಪ್ರಾಣಿಗಳಿಗೆ ಊಟ ಹಾಕುವುದು. (ಬೆಕ್ಕು, ಕುದುರೆ, ಕೋತಿ, ಹಸು, ಕಾಗೆ, ಮೀನು)
*ಹೆಂಗಸರಿಗೆ ಯಾವ ಕಾಲಕ್ಕೂ ಅಗೌರವ ತೋರಬಾರದು. ಯಾಕೆಂದರೆ ಹೆಣ್ಮಕ್ಕಳಿಗೆ ಗಂಡಸರಿಗಿಂತ 7 ಪಟ್ಟು ಪವರ್ ಇರುತ್ತದೆ. ಕಾಳಿಗೆ ಹೋಲಿಸಲಾಗುತ್ತದೆ. ದೇವತೆ ಹೋಲಿಸಲಾಗುತ್ತದೆ. ಅವರಿಗೆ ಅಗೌರವ ತೋರಿದ್ರೆ ಸಾಡೇಸಾತ್ ಪ್ರಭಾವ ಹೆಚ್ಚಾಗುತ್ತದೆ.
*ಊಟವನ್ನು ಮಾಡುವಾಗ ಮೊದಲನೇ ತುತ್ತು ತೆಗೆದಿಡಿ. ಈ ಎಲ್ಲಾ ಪರಿಹಾರಗಳಿಂದ ನಿಮ್ಮ ಮೇಲೆ ಸಾಡೇಸಾತ್ ಪ್ರಭಾವ ಕಡಿಮೆಯಾಗುತ್ತದೆ. ಶನಿ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಶನಿಕಾಟವಿರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.












Click it and Unblock the Notifications