ಬಿಎಸ್ವೈ ಬದಲಾವಣೆ, ಮೋದಿಗೆ ವೈರಾಗ್ಯ: ಬ್ರಹ್ಮಾಂಡ ಗುರುಗಳ ಸ್ಪೋಟಕ ಭವಿಷ್ಯ
ಹಾಸನ, ನ 5: ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಮುಂಬರುವ ಆಪತ್ತು ವಿಪತ್ತುಗಳ ಬಗ್ಗೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ, ಎರಡು ವರ್ಷಗಳ ಹಿಂದಿನ ಅತಿವೃಷ್ಟಿಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದೆ. ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ ಎನ್ನುವ ಬ್ರಹ್ಮಾಂಡ ಗುರುಗಳ ಭವಿಷ್ಯ ವ್ಯಾಪಕ ಟೀಕೆಗೆ ಒಳಗಾಗಿತ್ತು.
ಹಾಸನಾಂಬೆಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬ್ರಹ್ಮಾಂಡ ಗುರುಗಳು, "ಮುಂದಿನ ಮೂರು ವರ್ಷಗಳಲ್ಲಿ ಪ್ರಪಂಚ ಸಂಕಷ್ಟ ಸರಮಾಲೆಯನ್ನೇ ಎದುರಿಸಬೇಕಾಗಿದೆ"ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.
ಭೂಕಂಪನದ ಭಯಾನಕ ಅನುಭವಕ್ಕೆ ಅಮೆರಿಕಾ, ಆಸ್ಟ್ರೇಲಿಯಾ ಸಾಕ್ಷಿಯಾಗಲಿದೆ. ಅಮೆರಿಕಾ ಸರ್ವನಾಶವಾಗಲಿದೆ, ಆಸ್ಟ್ರೇಲಿಯಾ ಬಹುಪಾಲು ಸಮುದ್ರ ಪಾಲಾಗಲಿದೆ ಎನ್ನುವ ಭವಿಷ್ಯವನ್ನು ಕಳೆದ ಮೇ ತಿಂಗಳಲ್ಲಿ ಬ್ರಹ್ಮಾಂಡ ಗುರುಗಳು ಹೇಳಿದ್ದರು. ಹಾಸನಾಂಬೆಯ ದರ್ಶನದ ನಂತರ ಬ್ರಹ್ಮಾಂಡ ಗುರುಗಳು ಹೇಳಿದ್ದು ಹೀಗೆ:

ಬ್ರಹ್ಮಾಂಡ ಗುರು ಆಲಿಯಾಸ್ ನರೇಂದ್ರ ಬಾಬು ಶರ್ಮಾ ಭವಿಷ್ಯ
ಸ್ತ್ರೀಯರು ಜಗತ್ತನ್ನು ಆಳಲಿದ್ದಾರೆ, ಮುಂದಿನ ಮೂರು ವರ್ಷ ಭರತಖಂಡ ಸೇರಿದಂತೆ ಜಗತ್ತು ಕಷ್ಟವನ್ನು ಎದುರಿಸಬೇಕಿದೆ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಹತ್ತು ಹಲವು ಬದಲಾವಣೆಯಾಗಲಿದ್ದು, ಮಹಿಳೆಯರು ಪಾತ್ರ ನಿರ್ಣಾಯಕವಾಗಲಿದೆ"ಎಂದು ಬ್ರಹ್ಮಾಂಡ ಗುರು ಆಲಿಯಾಸ್ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಮುಖ್ಯಮಂತ್ರಿ ಹುದ್ದೆ, ಯಡಿಯೂರಪ್ಪನವರಿಗೆ ಈ ವರ್ಷಾಂತ್ಯದ ವರೆಗೆ ಮಾತ್ರ
"ಮುಖ್ಯಮಂತ್ರಿ ಹುದ್ದೆ, ಯಡಿಯೂರಪ್ಪನವರಿಗೆ ಈ ವರ್ಷಾಂತ್ಯದ ವರೆಗೆ ಮಾತ್ರ. ಅವರ ಜಾಗದಲ್ಲಿ ಇನ್ನೊಬ್ಬರು ಕೂರಲಿದ್ದಾರೆ. ಬೆಂಗಳೂರಿನಲ್ಲಿ ಜಲಕಂಟಕ ಮುಂದುವರಿಯಲಿದೆ. ಅಖಂಡ ಆಂಧ್ರ ಒಡೆದು ಹೋದಂತೆ, ಕರ್ನಾಟಕ ಎರಡು ಭಾಗವಾಗಲಿದೆ. ಒಂದಕ್ಕೆ ಬೆಳಗಾವಿ, ಇನ್ನೊಂದಕ್ಕೆ ಬೆಂಗಳೂರು ಪ್ರಮುಖ ಕೇಂದ್ರವಾಗಲಿದೆ" - ಬ್ರಹ್ಮಾಂಡ ಗುರುಗಳು.

ಮೋದಿ ವೈರಾಗ್ಯದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ
"ಮುಂದಿನ ಅವಧಿಯಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಪ್ರಧಾನಿಯಾಗಿ ಮೋದಿಯವರು ಮುಂದುವರಿಯುವ ಸಾಧ್ಯತೆ ಕಮ್ಮಿ. ಪಕ್ಷದಲ್ಲೇ ಒಂದು ತಂಡ ಮೋದಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದೆ. ಅದಕ್ಕೇ ಅವರು ಇತ್ತೀಚಿನ ದಿನಗಳಲ್ಲಿ ವೈರಾಗ್ಯದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ"- ಬ್ರಹ್ಮಾಂಡ ಗುರುಗಳು.

ತಿರುಪತಿ ದೇವಾಲಯದಲ್ಲೂ ಬದಲಾವಣೆಯಾಗಲಿದೆ
"ಇಂದಿರಾ ಗಾಂಧಿಯ ಹತ್ಯೆಯ ರೀತಿಯಲ್ಲೇ ಮೋದಿಗೂ ಅಪಾಯ ಕಾದಿದೆ. ಮೋದಿ ತಮ್ಮ ಸುತ್ತಮುತ್ತಲಿನವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಅವರು ತಮ್ಮ ತಾಯಿ, ಮಡದಿ ಜೊತೆಗಿದ್ದರೆ ಕ್ಷೇಮ. ತಿರುಪತಿ ದೇವಾಲಯದಲ್ಲೂ ಬದಲಾವಣೆಯಾಗಲಿದೆ"ಎಂದು ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದಿದ್ದಾರೆ.












Click it and Unblock the Notifications