Bhadrapada Maas: ಭಾದ್ರಪದ ಮಾಸದಲ್ಲಿ ಈ 4 ಕೆಲಸ ಮಾಡಿ: ವರ್ಷಪೂರ್ತಿ ಸುಖ-ಸಮೃದ್ಧಿ, ಶತ್ರುಬಾಧೆಯಿಂದ ಮುಕ್ತಿ!
Bhadrapada Maas: ಭಾದ್ರಪದ ಮಾಸಕ್ಕೆ ಸನಾತನ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಗಣೇಶ ಚತುರ್ಥಿ ಹಬ್ಬ ಇದೇ ಮಾಸದಲ್ಲಿ ಬರುವುದು. ಈ ತಿಂಗಳಲ್ಲಿ ಜಪ, ತಪಸ್ಸು, ದಾನ ಮತ್ತು ಕೆಲವು ವಿಶೇಷ ನಿಯಮಗಳನ್ನು ಪಾಲಿಸುವುದರಿಂದ ಮನಸ್ಸಿನ ಆಸೆಗಳು ಈಡೇರುತ್ತದೆ ಎನ್ನುವುದು ಧಾರ್ಮಿಕ ನಂಬಿಕೆ. ಈ ವರ್ಷ, ಭಾದ್ರಪದ ಮಾಸ ಸೆಪ್ಟೆಂಬರ್ 12 ರಿಂದ ಶುರುವಾಗುತ್ತದೆ.
ಸೆಪ್ಟೆಂಬರ್ 12 ರಿಂದ ಅಕ್ಟೋಬರ್ 10 ರವರೆಗೆ ಭಾದ್ರಪದ ಮಾಸ ಇರುತ್ತದೆ. ಭಾದ್ರಪದ ಮಾಸವನ್ನು ಸಾಮಾನ್ಯವಾಗಿ ಭಾದೋ ಮಾಸ ಎಂದು ಕರೆಯಲಾಗುತ್ತದೆ. ಭಾದ್ರಪದ ಮಾಸದಲ್ಲಿ ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಸಂತೋಷ ಹೆಚ್ಚುವುದಂತೆ. ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗಿ ಅದೃಷ್ಟ ಕೈ ಹಿಡಿಯುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಲ್ಲಿ ನಾಲ್ಕು ಮುಖ್ಯ ಕೆಲಸಗಳನ್ನು ಮಾಡಿದರೆ ಜೀವನ ಪರ್ಯಂತ ಸುಖ ಸಮೃದ್ಧಿ ಒಲಿದು ಬರುತ್ತದೆ ಎನ್ನುವುದು ನಂಬಿಕೆ. ಹಾಗಿದ್ದರೆ ಈ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ನೋಡೋಣ.

ಭಾದ್ರಪದ ಮಾಸದಲ್ಲಿ ಮಾಡಬೇಕಾದ ನಾಲ್ಕು ಮುಖ್ಯ ಕೆಲಸಗಳು
ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ
ಜ್ಯೋತಿಷ್ಯದ ಪ್ರಕಾರ, ಭಾದ್ರಪದ ಮಾಸದಲ್ಲಿ ಗೋಶಾಲೆಗೆ ಹಸಿರು ಹುಲ್ಲು ದಾನ ಮಾಡಬೇಕು. ನಿಯಮಿತವಾಗಿ ಗೋವುಗಳ ಸೇವೆ ಮಾಡಬೇಕು. ಕೃಷ್ಣನ ದೇವಾಲಯಕ್ಕೆ ಹೀಗಿ ಅಲ್ಲಿನ ಗೋವುಗಳನ್ನು ಪೂಜಿಸಿ. ಸಾಧ್ಯವಾದರೆ, ಈ ಮಾಸದಲ್ಲಿ ವೃಂದಾವನ ಅಥವಾ ಗೋವರ್ಧನಕ್ಕೆ ಪ್ರದಕ್ಷಿಣೆ ಹಾಕಬೇಕು. ಒಂದು ವೇಳೆ ನೀವು ಈ ತಿಂಗಳಲ್ಲಿ ಈ ಕೆಲಸ ಮಾಡಿದರೆ ನಿಂತು ಹೋಗಿರುವ ಕೆಲಸಗಳು ಪೂರ್ತಿಯಾಗುವುದು. ಕೆಲಸಕ್ಕೆ ಎದುರಾಗಿರುವ ಅಡೆತಡೆಗಳು ಕೂಡಾ ನಿವಾರಣೆಯಾಗುವುದು.
ಶ್ರೀಕೃಷ್ಣನಿಗೆ ಸಿಹಿ ಅರ್ಪಿಸಿ
ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಬೇಕಾದರೆ ಭಾದ್ರಪದ ಮಾಸದಲ್ಲಿ ಈ ಪರಿಹಾರ ಕೆಲಸವನ್ನು ಒಮ್ಮೆ ಮಾಡಿ ನೋಡಿ. ಶ್ರೀಕೃಷ್ಣನಿಗೆ ಅಕ್ಕಿ ಪಾಯಸ ಅರ್ಪಿಸಿ. ನಂತರ ಅದನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ನೈವೇದ್ಯಕ್ಕೆ ತುಳಸಿ ಎಲೆಗಳನ್ನು ಸೇರಿಸಲು ಮರೆಯಬೇಡಿ. ಪೂಜೆಯ ಸಮಯದಲ್ಲಿ, ಶ್ರೀಕೃಷ್ಣನಿಗೆ ಬಿಳಿ ದಾರವನ್ನು ಕೂಡಾ ಅರ್ಪಿಸಿ ಪೂಜೆ ಮಾಡಿ. ನಂತರ ಆ ದಾರವನ್ನು ತೆಗೆದು ನಿಮ್ಮ ಕುತ್ತಿಗೆಗೆ ಹಾಕಿಕೊಳ್ಳಿ. ಈ ಪರಿಹಾರವನ್ನು ಅನುಸರಿಸಿದರೆ, ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು.
ಅದೃಷ್ಟ ಕೈ ಹಿಡಿಯಬೇಕಾದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ
ಭಾದ್ರಪದ ಮಾಸದಲ್ಲಿ ಪ್ರತಿದಿನ ಶ್ರೀಕೃಷ್ಣನಿಗೆ ಸಮರ್ಪಿತವಾದ ದೇವಸ್ಥಾನಕ್ಕೆ ಭೇಟಿ ನೀಡಿ. ಪೂಜೆಯ ಸಮಯದಲ್ಲಿ ಬಿಳಿ ಹೂವುಗಳನ್ನು ಅರ್ಪಿಸಿ. ನಂತರ ಭಗವಂತನಿಗೆ ಅರ್ಪಿಸಿದ ಹೂವುಗಳನ್ನು ತೆಗದುಕೊಂಡು ನಿಮ್ಮ ಜೇಬಿನಲ್ಲಿ ಇರಿಸಿ. ಪ್ರತಿದಿನ ನಿಯಮಿತವಾಗಿ ಈ ಆಚರಣೆಯನ್ನು ಮಾಡುವುದರಿಂದ ದುರಾದೃಷ್ಟ ದೂರವಾಗುತ್ತಾ ಹೋಗುವುದು. ಅದೃಷ್ಟ ಹೆಚ್ಚಾಗುವುದು. ಅದೃಷ್ಟ ಕೈ ಹಿಡಿದರೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು. ಭಾದ್ರಪದ ಮಾಸ
ಮಂಗಳವಾರ ಮತ್ತು ಶನಿವಾರ ಹೀಗೆ ಮಾಡಿದರೆ ಸಿಗುವುದು ಪರಿಹಾರ
ಶತ್ರುಗಳಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಭಾದ್ರಪದ ಮಾಸದ ಮಂಗಳವಾರ ಮತ್ತು ಶನಿವಾರದಂದು ಹನುಮಂತನಿಗೆ ಸಿಂಧೂರ ಹಚ್ಚಿದ ನವಿಲು ಗರಿಯನ್ನು ಅರ್ಪಿಸಿ. ನಂತರ ಶತ್ರುವಿನ ಹೆಸರನ್ನು ಹೇಳಿ. ಮರುದಿನ ಹರಿಯುವ ನೀರಿನಲ್ಲಿ ನವಿಲು ಗರಿಯನ್ನು ಮುಳುಗಿಸಿ. ಹೀಗೆ ಮಾಡುವುದರಿಂದ, ಶತ್ರು ಬಾಧೆಯಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುತ್ತದೆ. ನಿಮ್ಮ ಕೆಲಸದಲ್ಲಿನ ಅಡೆತಡೆಗಳು ಕೂಡಾ ನಿವಾರಣೆಯಾಗುವುದು.


Click it and Unblock the Notifications
