• search

ಆಗಸ್ಟ್ 11ಕ್ಕೆ ಭಾಗಶಃ ಸೂರ್ಯ ಗ್ರಹಣ: ಎಲ್ಲಿ ಗೋಚರ, ಯಾರಿಗೆ ಗ್ರಹಚಾರ?

By ಒನ್ಇಂಡಿಯಾ ಡೆಸ್ಕ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಆಗಸ್ಟ್ 11 ಸೂರ್ಯ ಗ್ರಹಣ | ಎಲ್ಲೆಲ್ಲಿ ಗೋಚರ? ಯಾರಿಗೆ ಯಾವ ಫಲ? | Oneindia Kannada

    ಇದೇ ತಿಂಗಳು, ಅಂದರೆ ಆಗಸ್ಟ್ 11ನೇ ತಾರೀಕು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಉತ್ತರ ಹಾಗೂ ಪೂರ್ವ ಯುರೋಪ್, ಉತ್ತರ ಅಮೆರಿಕಾದ ಉತ್ತರ ಭಾಗ, ಏಷ್ಯಾದ ಉತ್ತರ ಮತ್ತು ಪಶ್ಚಿಮದ ಕೆಲವು ಭಾಗದಲ್ಲಿ ಮಾತ್ರ ಗೋಚರಿಸಲಿದೆ. ವಾತಾವರಣ ಪೂರಕವಾಗಿದ್ದರೆ ಈ ಗ್ರಹಣವನ್ನು ನೋಡಬಹುದು.

    ಆಯಾ ಸ್ಥಳೀಯ ಕಾಲಮಾನವನ್ನು ಗಮನಿಸಿ, ಸೂರ್ಯ ಗ್ರಹಣ ಸಂಭವಿಸುವ ವೇಳೆಯನ್ನು ಗುರುತಿಟ್ಟುಕೊಳ್ಳಬೇಕು. ಇನ್ನು ಆಚರಣೆಗೆ ಸಂಬಂಧಿಸಿದಂತೆ ನಂಬಿಕೆ ಇರುವವರು ಯಥಾಪ್ರಕಾರ ಗ್ರಹಣದ ಆರಂಭ ಹಾಗೂ ಅಂತ್ಯ ಕಾಲದಲ್ಲಿ ಉಟ್ಟ ಬಟ್ಟೆ ಸಹಿತ ಸ್ನಾನ ಮಾಡಬೇಕು. ಜತೆಗೆ ಯಾವ ರಾಶಿಯವರಿಗೆ ಈ ಗ್ರಹಣದ ಪರಿಣಾಮ ಏನು ಎಂಬುದನ್ನು ತಿಳಿದುಕೊಳ್ಳಬೇಕು.

    ಜುಲೈ ಇಪ್ಪತ್ತೇಳನೇ ತಾರೀಕು ಖಗ್ರಾಸ ಚಂದ್ರಗ್ರಹಣ ಸಂಭವಿಸಿತ್ತು. ಅದಾಗಿ ಹದಿನೈದು ದಿನಕ್ಕೆ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತಿದೆ. ಭಾರತದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ. ಆದರೆ ಜಗತ್ತಿನಾದ್ಯಂತ ಈ ಗ್ರಹಣದ ಪ್ರಭಾವ ಇದ್ದೇ ಇರುತ್ತದೆ. ಇನ್ನು ಎಲ್ಲೆಲ್ಲಿ ಗೋಚರ ಆಗುತ್ತದೋ ಅಲ್ಲಿ ಯಾವ ರಾಶಿಯವರಿಗೆ ಏನು ಫಲ ಎಂಬುದರ ವಿವರ ಕೂಡ ಇಲ್ಲಿದೆ.

    ಗ್ರಹಣ ಗೋಚರ ಆಗುವ ದೇಶಗಳು ಯಾವುವು?

    ಗ್ರಹಣ ಗೋಚರ ಆಗುವ ದೇಶಗಳು ಯಾವುವು?

    ಕೆನಡಾ

    ಗ್ರೀನ್ ಲ್ಯಾಂಡ್

    ಸ್ಕಾಟ್ಲೆಂಡ್

    ಐಸ್ ಲ್ಯಾಂಡ್

    ನಾರ್ವೆ

    ಸ್ವೀಡನ್

    ಫಿನ್ ಲ್ಯಾಂಡ್

    ಈಸ್ಟೋನಿಯಾ

    ಲಾಟ್ವಿಯಾ

    ರಷ್ಯಾ

    ಕಜಕಿಸ್ತಾನ್

    ಕೈರ್ಗಿಸ್ತಾನ್

    ಮಂಗೋಲಿಯಾ

    ಚೀನಾ

    ಉತ್ತರ ಕೊರಿಯಾ

    ದಕ್ಷಿಣ ಕೊರಿಯಾ

    ಪೂರ್ವ ಸೈಬಿರಿಯಾ ಸಮದ್ರ

    ರಾಂಗಲ್ ದ್ವೀಪ

    ಈ ಗ್ರಹಣದಿಂದ ಶುಭ, ಮಿಶ್ರ ಹಾಗೂ ಅಶುಭ ಫಲಗಳು ಯಾವ ರಾಶಿಗೆ?

    ಈ ಗ್ರಹಣದಿಂದ ಶುಭ, ಮಿಶ್ರ ಹಾಗೂ ಅಶುಭ ಫಲಗಳು ಯಾವ ರಾಶಿಗೆ?

    ಶುಭ ಫಲ ಪಡೆಯುವ ರಾಶಿಗಳು: ವೃಷಭ, ತುಲಾ, ಕುಂಭ, ಕನ್ಯಾ

    ಮಿಶ್ರ ಫಲ ಪಡೆಯುವ ರಾಶಿಗಳು: ಮೀನ, ಮಿಥುನ, ಮಕರ, ವೃಶ್ಚಿಕ

    ಅಶುಭ ಫಲ: ಮೇಷ, ಸಿಂಹ, ಕರ್ಕಾಟಕ, ಧನು

    ರಾಹು ಹಾಗೂ ರವಿಯ ಸ್ತೋತ್ರವನ್ನು ಪಠಿಸಿ

    ರಾಹು ಹಾಗೂ ರವಿಯ ಸ್ತೋತ್ರವನ್ನು ಪಠಿಸಿ

    ಇನ್ನು ಕರ್ಕಾಟಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿದೆ. ಯಾರಿಗೆ ಅಶುಭ ಫಲ ಇದೆಯೋ ಅಂಥವರು ಗ್ರಹಣ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಗೋಧಿ, ಇನ್ನೊಂದು ಪಾತ್ರೆಯಲ್ಲಿ ಉದ್ದು ತೆಗೆದುಕೊಳ್ಳಬೇಕು. ಎರಡನ್ನೂ ದೇವರ ಮುಂದೆ ಇಟ್ಟು, ರಾಹು ಹಾಗೂ ರವಿಯ ಸ್ತೋತ್ರವನ್ನು ಮಾಡಬೇಕು.

    ರವಿ ಶ್ಲೋಕ

    ಜಪಾಕುಸುಮ ಸಂಕಾಶಂ ಕಾಶಪೇಯಂ ಮಹಾದ್ಯುತಿಂ ತಮೋರಿಂ ಸರ್ವಪಾಪಜ್ಞಂ ಪ್ರಣತೋಸ್ಮಿ ದಿವಾಕರಂ

    ರಾಹು ಶ್ಲೋಕ

    ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ

    ಮಾರನೇ ದಿನ ದಾನ ಮಾಡಿ

    ಮಾರನೇ ದಿನ ದಾನ ಮಾಡಿ

    ಮಾರನೇ ದಿನ ಅಂದರೆ ಆಗಸ್ಟ್ ಹನ್ನೆರಡರಂದು ಸಮೀಪದ ದೇವಸ್ಥಾನದಲ್ಲಿ ಪುರೋಹಿತರಿಗೆ ನೀಡಬೇಕು. ಒಂದು ವೇಳೆ ಪುರೋಹಿತರು ಪಡೆದುಕೊಳ್ಳದಿದ್ದಲ್ಲಿ ದೇವರಿಗೆ ಸಮರ್ಪಣೆ ಮಾಡಬಹುದು. ಇನ್ನು ಗರ್ಭಿಣಿಯರು ಹೆಚ್ಚು ಓಡಾಟ ಮಾಡಬಾರದು. ಆಸ್ಪತ್ರೆಗೆ ಹೋಗುವ ಅನಿವಾರ್ಯ ಇದ್ದಲ್ಲಿ ಏನೂ ಮಾಡಲು ಆಗುವುದಿಲ್ಲ. ಮನೆಯಲ್ಲೇ ಇರಬಹುದಾದಲ್ಲಿ ಆರಾಮವಾಗಿ ಇದ್ದುಬಿಡಿ.

    ಆಹಾರ ಸೇವನೆ ವಿಚಾರದಲ್ಲಿ ಮಕ್ಕಳಿಗೆ, ಅಶಕ್ತರಿಗೆ, ವೃದ್ಧರಿಗೆ, ಅನಾರೋಗ್ಯದವರಿಗೆ ಧರ್ಮ ಶಾಸ್ತ್ರದಲ್ಲಿ ವಿನಾಯಿತಿ ಇದೆ. ಆದ್ದರಿಂದ ಪರಿಸ್ಥಿತಿ ನೋಡಿಕೊಂಡು ಉಪವಾಸ ಆಚರಣೆ ಮಾಡಬಹುದು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    August 11th partial Solar eclipse won’t be visible in India. But it will have a planetary impact on people across the world, including India as per the solar eclipse and its astrological effects. Here is the details of effects of partial solar eclipse on the 12 Moon Signs.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more