Shani Transit 2024: ಶನಿದೇವನ ದರ್ಶನ.. 2027ರವರೆಗೆ ಈ ರಾಶಿಗಳಿಗೆ ಅತ್ಯಾದ್ಬುತ ಸಮಯ..!

ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನವಗ್ರಹಗಳ ತೀರ್ಪುಗಾರ ಎಂದು ಕರೆಯಲಾಗುತ್ತದೆ. ಶನಿ ದೇವ ಒಬ್ಬ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಹಾಗೆಯೇ ಶನಿಯು ಒಂದು ರಾಶಿಯ ಮೂಲಕ ಪ್ರಯಾಣಿಸಲು 2 1/2 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಅವನನ್ನು ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ.

ಶನಿದೇವನಿಗೆ ಎಲ್ಲರೂ ಭಯಪಡುತ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ.. ಏಕೆಂದರೆ ಶನಿ ಕರ್ಮಗಳಿಗನುಸಾರವಾಗಿ ಫಲ ಕೊಡುತ್ತಾನೆ.. ಒಳ್ಳೆಯದು ಮಾಡಿದರೆ ಒಳಿತು, ಕೆಡುಕು ಮಾಡಿದರೆ ಕೆಡಕಾಗುತ್ತದೆ. ಒಳ್ಳೆಯ ಕೆಲಸ ಮಾಡುವವರಿಗೆ ಶನಿ ದೇವನ ಆಶೀರ್ವಾದ ಸದಾ ಇರುತ್ತದೆ.

ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಮುಂದಿನ ವರ್ಷ ಮಾರ್ಚ್ 2025ರಲ್ಲಿ ಶನಿಯು ಕುಂಭ ರಾಶಿಯಿಂದ ದೂರ ಸರಿದು ಮೀನ ರಾಶಿಗೆ ಸಾಗುತ್ತದೆ. ಆ ನಂತರ 2025ರ ಮಾರ್ಚ್ 29ರಂದು ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಶನಿಯು ಜೂನ್ 3, 2027 ರವರೆಗೆ ಮೀನ ರಾಶಿಯಲ್ಲಿ ಇರುತ್ತದೆ. ಇದರ ಫಲವಾಗಿ ಕೆಲವು ರಾಶಿಯವರಿಗೆ ಶುಭಫಲಗಳು ಮತ್ತು ಕೆಲವರಿಗೆ ಅಶುಭ ಫಲಗಳು ದೊರೆಯುತ್ತವೆ. ಹಾಗಾದರೆ 2025 ರಿಂದ 2027 ರವರೆಗೆ ಶುಭ ಫಲ ಪಡೆಯವ ರಾಶಿಗಳ ಬಗ್ಗೆ ಈಗ ತಿಳಿಯೋಣ.

Astrology these rasi people will get more income and benefits from sani bhagavan till in kannada

ವೃಷಭ ರಾಶಿ

ವೃಷಭ ರಾಶಿಯ 11ನೇ ಮನೆಯಲ್ಲಿ ಶನಿ ಗ್ರಹ ಸಾಗುತ್ತದೆ. ಇದರಿಂದಾಗಿ ಬಹುಕಾಲದ ನಿಮ್ಮ ಆಸೆ ಈಡೇರುತ್ತದೆ. ಏನೇ ಕೈಗೆತ್ತಿಕೊಂಡರೂ ಯಶಸ್ಸು ನಿಮಗಾಗುತ್ತದೆ. ಕೆಲವೊಮ್ಮೆ ನೀವು ಮಾಡುತ್ತಿರುವ ಕೆಲಸದಿಂದ ಉತ್ತಮ ಬದಲಾವಣೆಯನ್ನು ನೀವು ನೋಡುತ್ತೀರಿ. ಕಠಿಣ ಪರಿಶ್ರಮ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುವರು.

ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿ ಇರಲಿದೆ. ನೀವು ಮಾಡುವ ಉತ್ತಮ ಕಾರ್ಯಗಳಿಗೆ ತಕ್ಕಂಥೆ ಶನಿ ಫಲ ನೀಡಲಿದ್ದಾನೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಹೊಸ ಹೊಸ ಲಾಭದ ಮಾರ್ಗಗಳು ನಿಮ್ಮನ್ನು ಕೈ ಹಿಡಿಯಲಿವೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿವೆ.

Astrology these rasi people will get more income and benefits from sani bhagavan till in kannada

ಮಿಥುನ ರಾಶಿ

ಮಿಥುನ ರಾಶಿಚಕ್ರದ ಹತ್ತನೇ ಮನೆಗೆ ಶನಿಯು 2025 ರಲ್ಲಿ ಪ್ರಯಾಣಿಸಲಿದ್ದಾನೆ. ಇದು ನಿಮಗೆ ಉತ್ತಮ ಜೀವನವನ್ನು ನೀಡುತ್ತದೆ. ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ. ಅನಾವಶ್ಯಕ ಖರ್ಚುಗಳಿಂದ ದೂರವಿರುತ್ತೀರಿ. ಸಂಸಾರದಲ್ಲಿ ಉಂಟಾಗಿದ್ದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಶನಿದೇವನ ಕೃಪೆಯಿಂದ ಪ್ರಗತಿಯನ್ನು ನೀವು ಪಡೆಯುತ್ತೀರಿ.

Astrology these rasi people will get more income and benefits from sani bhagavan till in kannada

ಕುಂಭ ರಾಶಿ

ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ಶನಿ ಸಂಚರಿಸಲಿದೆ. 2025ರಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಸಂಭವಿಸುತ್ತವೆ. ಶನಿಯ ಆಶೀರ್ವಾದಿಂದ ಹೊಸ ಮನೆ, ವಾಹನ ಖರೀದಿಗೆ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಯಾಕೆಂದರೆ ದೈಹಿಕ ಆರೋಗ್ಯದಲ್ಲಿ ಮಾನಸಿಕ ತೊಂದರೆಗಳು ಎದುರಾಗಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+