Sun Nakshatra Transit 2024: ಒಂದೇ ನಕ್ಷತ್ರದಲ್ಲಿ ಸೂರ್ಯ, ಶುಕ್ರ ಸಂಚಾರ: 4 ರಾಶಿಯವರು ವ್ಯವಹಾರದಲ್ಲಿ ಸಕ್ಸಸ್
ಸೌರವ್ಯೂಹದಲ್ಲಿ ಗ್ರಹಗಳು 12 ರಾಶಿಗಳು ಮತ್ತು ನಕ್ಷತ್ರಗಳ ಮೂಲಕ ಚಲಿಸುತ್ತವೆ. ಸೂರ್ಯ ಗ್ರಹ ಪ್ರತಿ ತಿಂಗಳು ತನ್ನ ನಕ್ಷತ್ರದೊಂದಿಗೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಅಂತೆಯೇ ಸೆಪ್ಟೆಂಬರ್ 30, 2024 ರಂದು ಸೂರ್ಯ ಗ್ರಹ ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಸಾಗುಲಿದೆ. ಈ ನಕ್ಷತ್ರದ ಅಧಿಪತಿಯಾದ ಶುಕ್ರ ಗ್ರಹ ಇದೇ ನಕ್ಷತ್ರದಲ್ಲಿ ಇರುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶುಕ್ರ ಸುಗಮ ಸಂಬಂಧವನ್ನು ಹೊಂದಿಲ್ಲ. ಆದರೂ ಸೂರ್ಯನು ಶುಕ್ರನ ನಕ್ಷತ್ರದಲ್ಲಿ ಸಂಕ್ರಮಿಸುವುದರಿಂದ ಈ ಅವಧಿಯಲ್ಲಿ ಕೆಲವು ರಾಶಿಗಳ ಅದೃಷ್ಟ ಹೆಚ್ಚಾಗಲಿದೆ. ಸೂರ್ಯ ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದಾಗ ಕೆಲವು ಸ್ಥಳೀಯರು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಹಾಗಾದರೆ ಸೂರ್ಯನ ಈ ಸಂಕ್ರಮಣದಿಂದ ಯಾವ ರಾಶಿಯ ಜನರು ಅದೃಷ್ಟಶಾಲಿಯಾಗುತ್ತಾರೆ ಎಂಬುದನ್ನು ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಈ ಸೂರ್ಯನ ನಕ್ಷತ್ರ ಸಂಕ್ರಮಣದಿಂದ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಐಷಾರಾಮಿ ಮತ್ತು ಸಂತೋಷಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಪದಾಧಿಕಾರಿಗಳು ಹೊಸ ಕೆಲಸದ ಜವಾಬ್ದಾರಿಗಳನ್ನು ಪಡೆಯಬಹುದು.
ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಅಂದುಕೊಂಡ ಉದ್ಯೋಗಾವಕಾಶಗಳನ್ನು ಸಿಗುತ್ತವೆ. ಅವರ ಸಂಬಳ ಹೆಚ್ಚಾಗಬಹುದು. ಈ ಸಂಕ್ರಮಣದಲ್ಲಿ ಮೇಷ ರಾಶಿ ಅವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಈ ಅವಧಿಯಲ್ಲಿ ಪ್ರಗತಿ ಸಾಧಿಸುತ್ತಾರೆ. ಮೇಷ ರಾಶಿ ಅವರ ಲಾಭ ಹೆಚ್ಚಾಗುತ್ತದೆ. ವ್ಯವಹಾರ ಮಾಡುವಂತವರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಜಿಸಬಹುದು. ಅವರ ಕುಟುಂಬದ ಸಮಸ್ಯೆಗಳು ಈಗ ಕೊನೆಗೊಳ್ಳತ್ತವೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ಸಿಂಹ ರಾಶಿ
ಸೂರ್ಯನು ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಸಿಂಹ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ಅವರ ಜೀವನ ಉತ್ಸಾಹ ಮತ್ತು ಶಕ್ತಿಯಿಂದ ಕೂಡಿರುತ್ತದೆ. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಗಳಿಸುವರು. ನಿಮ್ಮ ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಅವರ ಮಾತನಾಡುವ ಕೌಶಲ್ಯ ಬಹಳಷ್ಟು ಸುಧಾರಿಸುತ್ತದೆ.
ಈ ಸಾಗಣೆಯಿಂದಾಗಿ ಆದಾಯದ ಹೊಸ ಮೂಲಗಳು ಉದ್ಭವಿಸುತ್ತವೆ. ವ್ಯಾಪಾರದಲ್ಲಿ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಿಂಹ ರಾಶಿಯ ವ್ಯಾಪಾರಿಗಳು ವ್ಯಾಪಾರ ಕ್ಷೇತ್ರದಲ್ಲಿ ಲಾಭ ಗಳಿಸಲು ಅವಕಾಶಗಳನ್ನು ಪಡೆಯುತ್ತಾರೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯವಾಗಿದೆ. ಸಿಂಹ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.

ಕನ್ಯಾ ರಾಶಿ
ಸೂರ್ಯ ಗ್ರಹ ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಸಂಚರಿಸುವುದರಿಂದ ಕನ್ಯಾ ರಾಶಿಯವರ ಜೀವನ ಸುಖಮಯವಾಗಿರುತ್ತದೆ. ಈ ಅವಧಿಯಲ್ಲಿ ಕನ್ಯಾ ರಾಶಿಯವರ ಎಲ್ಲಾ ಆಸೆಗಳು ಈಡೇರುತ್ತವೆ. ಕೆಲಸದಲ್ಲಿ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಕೆಲಸದಲ್ಲಿರುವವರಿಗೆ ಗೌರವ ಹೆಚ್ಚಾಗುತ್ತದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ನಿರೀಕ್ಷಿಸಬಹುದು.
ಕನ್ಯಾರಾಶಿ ಸ್ಥಳೀಯರು ಪ್ರಭಾವಿ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಅದು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ. ಸಮಾಜದಲ್ಲಿ ತಮಗೊಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಳ್ಳುವಲ್ಲಿ ಕನ್ಯಾ ರಾಶಿಯವರು ಯಶಸ್ವಿಯಾಗುತ್ತಾರೆ. ತಮ್ಮ ನೆಚ್ಚಿನ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವನ್ನು ಪಡೆಯುತ್ತಾರೆ. ಕೆಲವು ಸರ್ಕಾರಿ ಸಂಸ್ಥೆಗಳಿಂದ ಅವಕಾಶ ಸಿಗುವ ಲಕ್ಷಣಗಳಿವೆ.

ತುಲಾ ರಾಶಿ
ಸೂರ್ಯ ಗ್ರಹ ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುವುದರಿಂದ ತುಲಾ ರಾಶಿಯವರಿಗೆ ಅಪಾರ ಲಾಭವಾಗುತ್ತದೆ. ತುಲಾ ರಾಶಿಯವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸಬಹುದು. ಅದಲ್ಲದೆ ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ.
ಈ ಅವಧಿಯಲ್ಲಿ ಅವರು ಉತ್ತಮ ಖ್ಯಾತಿಯನ್ನು ಪಡೆಯುತ್ತಾರೆ. ಅವರು ಹಿಂದೆ ಒತ್ತಡದ ಸಮಸ್ಯೆಗಳನ್ನು ಹೊಂದಿದ್ದರೆ ಅವರು ಈಗ ಅದರಿಂದ ಮುಕ್ತರಾಗಬಹುದು. ಜೊತೆಗೆ ತುಲಾ ರಾಶಿಯವರು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ. ವ್ಯಾಪಾರಿಗಳ ಆದಾಯದಲ್ಲಿ ಹೆಚ್ಚಳವಿದೆ. ತುಲಾ ರಾಶಿಯವರು ತಮ್ಮ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿರುತ್ತಾರೆ. ಸಂಗಾತಿಯೊಂದಿಗೆ ಅವರ ಸಂಬಂಧ ಬಲಗೊಳ್ಳುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಟಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications