Surya Shani Transit 2025: ಕುಂಭ ರಾಶಿಯಲ್ಲಿ ಸೂರ್ಯ ಶನಿ ಸಂಯೋಗ- ಈ ರಾಶಿಗೆ ಸಂತಸದ ಕಾಲ ಶುರು
ನವಗ್ರಹಗಳಲ್ಲಿ ಕೆಲ ಗ್ರಹಗಳು ಬಹುಬೇಗ ರಾಶಿಯನ್ನು ಬದಲಾಯಿಸುತ್ತವೆ. ಇನ್ನೂ ಕೆಲವು ನಿಧಾನವಾಗಿ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ರಾಶಿಯವನ್ನು ಬದಲಾಯಿಸಿದಾಗ ಅದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಉಂಟಾಗುತ್ತದೆ. ಹೀಗೆ ಶನಿ ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ರಾಶಿಯನ್ನು ಬದಲಾಯಿಸುವ ಗ್ರಹವಾಗಿದೆ. ಜೊತೆಗೆ ಸೂರ್ಯನು ಕೆಲವೇ ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ಎರಡು ಗ್ರಹಗಳು ಸಂಯೋಗವಾಗಲಿದ್ದು ಕೆಲ ರಾಶಿಗಳಿಗೆ ಸಂಪತ್ತು ಹೆಚ್ಚಿಸಲಿವೆ.
ಫೆಬ್ರವರಿ 12 ಬುಧವಾರದಂದು ಸೂರ್ಯನು ಕುಂಭ ರಾಶಿಯಲ್ಲಿ ಸಾಗುತ್ತಾನೆ. ಈ ರಾಶಿಯಲ್ಲಿ ಶನಿ ಈಗಾಗಲೇ ಇರುವುದರಿಂದ ಎರಡು ಗ್ರಹಗಳ ಸಂಯೋಗ ಉಂಟಾಗುತ್ತದೆ. ಫೆಬ್ರವರಿ 12 ರಂದು ಸೂರ್ಯ ಸಂಚಾರದಿಂದ 3 ರಾಶಿಗಳಿಗೆ ಅದೃಷ್ಟ ಸಿಗಲಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಆಳುವ ಗ್ರಹ ಮಂಗಳ ಮತ್ತು ಈ ರಾಶಿಯವರಿಗೆ ಸೂರ್ಯನ ಸಂಚಾರ ಫಲಪ್ರದವಾಗಿರುತ್ತದೆ. ಸೂರ್ಯನು ಶತ್ರು ಗ್ರಹವಾದ ಶನಿಯೊಂದಿಗೆ ಸಂಯೋಗವಾಗುತ್ತಿದ್ದು, ಇದು ಮೇಷ ರಾಶಿಯವರಿಗೆ ಸಾಕಷ್ಟು ಪ್ರಯೋಜನ ನೀಡಲಿದೆ. ಈ ರಾಶಿಯ ಜನರ ಅದೃಷ್ಟ ಬೆಳಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ ಮತ್ತು ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭವಾಗಲಿದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಸಂಪತ್ತು ಕೂಡ ಹೆಚ್ಚಾಗಲಿದೆ.
ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ನಿಮ್ಮ ಕೈ ಹಿಡಿಯಲಿದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ. ಸಂಗಾತಿಯೊಂದಿಗಿನ ಮನಸ್ತಾಪ ದೂರವಾಗುತ್ತವೆ. ಅಲ್ಲದೆ ಶತ್ರುಗಳು ಸ್ನೇಹಿತರಾಗುವ ಸುಸಂದರ್ಭವಿದಾಗಿದೆ. ಯಾವುದೇ ಕೆಲಸಗಳನ್ನು ಮಾಡುವಾಗ ಮನೆ ದೇವರನ್ನು ಪೂಜಿಸುವುದು ಉತ್ತಮ.

ಸಿಂಹ ರಾಶಿ
ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ ಮತ್ತು ಕುಂಭ ರಾಶಿಗೆ ಸೂರ್ಯನ ಪ್ರವೇಶ ಮೇಷ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ಉದ್ಯೋಗದಲ್ಲಿದ್ದರೆ ಸಮಯ ಚೆನ್ನಾಗಿದೆ. ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ನಿಮ್ಮ ಮನಸ್ಸಿನಲ್ಲಿ ವಿಭಿನ್ನವಾದ ಉತ್ಸಾಹವಿರುತ್ತದೆ. ಅದು ನಿಮಗೆ ಯಶಸ್ಸನ್ನು ತರುತ್ತದೆ. ಉದ್ಯೋಗಿಗಳಿಗೆ ಬಡ್ತಿಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಯಶಸ್ಸಿನ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ.

ಕುಂಭ ರಾಶಿ
ಶನಿಯು ಈಗಾಗಲೇ ಕುಂಭ ರಾಶಿಯಲ್ಲಿದ್ದು, ಸೂರ್ಯನು ಈ ರಾಶಿಚಕ್ರವನ್ನು ಪ್ರವೇಶಿಸಲಿದ್ದಾನೆ. ಎರಡೂ ಗ್ರಹಗಳ ಸಂಯೋಗವು ಕುಂಭ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೆಚ್ಚಾಗುವುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಮನಸ್ಸು ಪ್ರಸನ್ನವಾಗಿರುತ್ತದೆ. ಉದ್ಯೋಗಿಗಳಿಗೆ ಸಮಯ ಉತ್ತಮವಾಗಿರುತ್ತದೆ. ವ್ಯಾಪಾರಿಗಳು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications