Shukra Shani Transit 2025: ಶನಿ ಶುಕ್ರನಿಂದ ಧನಾಧ್ಯ ಯೋಗ- ಈ ರಾಶಿಗಳ ವೃತ್ತಿಜೀವನದಲ್ಲಿ ಯಶಸ್ಸು, ಹಣ
ಶುಕ್ರಗ್ರಹ ಯಾವುದೇ ಒಂದು ರಾಶಿಯಲ್ಲಿ ಸುಮಾರು 30 ದಿನಗಳವರೆಗೆ ಇರುತ್ತಾನೆ. ಪ್ರಸ್ತುತ ಶುಕ್ರ ಮತ್ತು ಶನಿ ಎರಡೂ ಗ್ರಹಗಳು ಕುಂಭ ರಾಶಿಯಲ್ಲಿವೆ. ಎರಡೂ ಗ್ರಹಗಳ ಸಂಯೋಗ 12 ರಾಶಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದರಿಂದ ಧನಾಧ್ಯ ಯೋಗ ರೂಪುಗೊಳ್ಳುತ್ತದೆ.
ಈ ವಿಶೇಷ ಯೋಗದ ರಚನೆಯು 3 ರಾಶಿಗಳ ಮೇಲೆ ಮಂಗಳಕರ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ 3 ರಾಶಿಗಳು ವೃತ್ತಿ, ವ್ಯವಹಾರ, ಪ್ರೀತಿ ಮತ್ತು ಸಂಬಂಧಗಳ ವಿಷಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಾಗಾದರೆ ಆ 3 ಅದೃಷ್ಟದ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

ಕಟಕ ರಾಶಿ
ಪ್ರೀತಿ ಮತ್ತು ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗೆ ಬಹಳ ದಿನಗಳಿಂದ ನಡೆಯುತ್ತಿದ್ದ ಜಗಳ ಶೀಘ್ರದಲ್ಲೇ ಬಗೆಹರಿಯಲಿದೆ. ಜನವರಿ 28ರ ಮೊದಲು ನೀವು ಒಳ್ಳೆಯ ಸುದ್ದಿ ಕೇಳಬಹುದು. ಶನಿ ಮತ್ತು ಶುಕ್ರ ನಿಮಗೆ ವಿಶೇಷವಾಗಿ ದಯೆ ತೋರಲಿದ್ದಾರೆ. ಇದರಿಂದ ಉದ್ಯೋಗ ರಂಗದಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ವಿದೇಶದಲ್ಲಿ ಇರುವವರು ಸಂಬಂಧಿಕರನ್ನು ಭೇಟಿ ಮಾಡುವರು. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ.
ಅಂದುಕೊಂಡ ಕಾರ್ಯಗಳು ಸರಿಯಾದ ಸಮಯಕ್ಕೆ ಪೂರಣಗೊಳ್ಳಲಿದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗಲಿದೆ. ಸಂಬಂಧಿಕರಲ್ಲಿ ನಿಮ್ಮ ಮಾತನ್ನು ಎಲ್ಲರೂ ಆಲಿಸುತ್ತಾರೆ. ಪ್ರವಾಸ ಕೈಗೊಳ್ಳಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಬಹುದು.

ವೃಶ್ಚಿಕ ರಾಶಿ
ಶುಕ್ರ ಮತ್ತು ಶನಿಯ ಸಂಯೋಗ ವೃಶ್ಚಿಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಮನಸ್ಸು ಸಂತೋಷವಾಗಿರುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಸಂಬಂಧಿಕರಲ್ಲೂ ಸಂಬಂಧ ಸುಧಾರಿಸುತ್ತದೆ. ಪ್ರೀತಿಯ ವಿಷಯಗಳಲ್ಲಿ ನೀವು ಪ್ರಗತಿಯನ್ನು ಪಡೆಯಬಹುದು. ಜನವರಿ 28ರ ಮೊದಲು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.
ವೃತ್ತಿಯಲ್ಲಿ ನಿಮ್ಮ ಮಾತು ಅಂತಿಮವಾಗಿರುತ್ತದೆ. ಕೆಲಸದಲ್ಲಿ ಜವಬ್ದಾರಿಗಳು ಹೆಚ್ಚಾಗಲಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಏಕಾಂಗಿಯಾಗಿರುವವರಿಗೆ ಮದುವೆ ಯೋಗವಿದೆ. ಅಂದುಕೊಂಡ ಸಂಗಾತಿಯನ್ನು ನೀವು ಕೈ ಹಿಡಿಯುವಿರಿ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ಇದ್ದು ಮನಸ್ತಾಪಗಳು ದೂರವಾಗುತ್ತವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಶುಕ್ರ ಮತ್ತು ಶನಿಯ ಸಂಯೋಗವು ಮಂಗಳಕರವಾಗಿರುತ್ತದೆ. ಎರಡೂ ಗ್ರಹಗಳು ಈ ರಾಶಿಯಲ್ಲಿ ಸ್ಥಿತರಿದ್ದು ಅದೃಷ್ಟವನ್ನು ತರುತ್ತವೆ. ಹೀಗಾಗಿ ಕುಂಭ ರಾಶಿಯವರಿಗೆ ಸಮಯ ಉತ್ತಮವಾಗಿರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ಪ್ರೀತಿಯ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಶುಕ್ರದೇವನ ಕೃಪೆಯಿಂದ ಜನಮಾನಸದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಜನರನ್ನು ನಿಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications