Shani Sun Conjunction 2025: ಸೂರ್ಯ ಶನಿ ಸಂಯೋಗ 2025- ಈ ರಾಶಿ ಬಯಸಿದ್ದೆಲ್ಲಾ ಸಿಗುವ ಸಮಯ
ಎರಡು ಗ್ರಹಗಳು ಒಂದು ರಾಶಿಯಲ್ಲಿ ಒಟ್ಟಿಗೆ ನೆಲೆಗೊಂಡಾಗ ಹಲವಾರು ರೀತಿಯ ಪರಿಣಾಮ ಬೀರುತ್ತವೆ. ಪ್ರಸ್ತುತ ಪರಸ್ಪರ ಶತ್ರು ಗ್ರಹಗಳಾದ ಸೂರ್ಯ ಮತ್ತು ಶನಿ ಗ್ರಹಗಳು ಕುಂಭ ರಾಶಿಯಲ್ಲಿ ಒಟ್ಟಿಗೆ ಸಂಯೋಗಗೊಳ್ಳುತ್ತಿವೆ. ಹೋಳಿ ಹಬ್ಬದ ದಿನದಂದು ಅಂದರೆ ಮಾರ್ಚ್ 14ರಂದು ಸೂರ್ಯನು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
ಮಾರ್ಚ್ 14 ಶುಕ್ರವಾರ ಸಂಜೆ 6:58 ಕ್ಕೆ ಸೂರ್ಯ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ ಮಾರ್ಚ್ 29ರ ಶನಿವಾರ ರಾತ್ರಿ 11:01ಕ್ಕೆ ಶನಿಯು ಮೀನ ರಾಶಿಯಲ್ಲಿ ಸಾಗುತ್ತಾನೆ. ಹೀಗೆ ಸೂರ್ಯ ಮತ್ತು ಶನಿಯ ಸಂಯೋಗ ಸಂಭವಿಸುತ್ತದೆ. ಇದು ಕೆಲವು ರಾಶಿಗಳಿಗೆ ಪ್ರಯೋಜನಕಾರಿಯಾಗಿದೆ.

ಕರ್ಕಾಟಕ ರಾಶಿ
ಕರ್ಕ ರಾಶಿಯ ಜನರಿಗೆ ಸೂರ್ಯ ಮತ್ತು ಶನಿಯ ಸಂಯೋಗ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಕಟಕ ರಾಶಿಯವರ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿದೆ. ಇದು ನಿಮ್ಮ ಹದಗೆಟ್ಟಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯವಾಗಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮನಸ್ಸು ಮೊದಲಿಗಿಂತ ಹೆಚ್ಚು ಸಂತೋಷವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಸಂಬಂಧವನ್ನು ಸುಧಾರಿಸಬಹುದು. ಯಾರಾದರೂ ಪ್ರಸ್ತಾಪಿಸಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅಂದುಕೊಮಡ ಕಾರ್ಯಗಳು ಈಡೇರಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಶನಿ ಮತ್ತು ಸೂರ್ಯನ ಸಂಯೋಗ ಫಲಪ್ರದವಾಗಿರುತ್ತದೆ. ಬಾಕಿ ಇರುವ ಕೆಲಸವನ್ನು ನೀವು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಸಂಬಂಧಿಕರ ಆಗಮನ ನಿಮ್ಮನ್ನು ಖುಷಿ ಪಡಿಸುತ್ತದೆ. ಮದುವೆಯ ಬಗ್ಗೆ ಮಾತುಕತೆ ನಡೆಯಲಿದೆ. ನಿಮ್ಮ ಆತ್ಮವಿಶ್ವಾಸ ಮೊದಲಿಗಿಂತ ಹೆಚ್ಚಾಗುತ್ತದೆ.
ನಿಮ್ಮ ಮಾತುಗಳಿಂದ ನೀವು ಜನರ ಹೃದಯಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ನೀವು ವಾದಗಳಿಂದ ದೂರವಿರುವುದು ಉತ್ತಮ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜನರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಕಳೆದುಕೊಮಡ ಹಣವನ್ನು ನೀವು ಪತ್ತೆ ಪಡೆಯುವಿರಿ.

ಮೀನ ರಾಶಿ
ಮೀನ ರಾಶಿಯವರಿಗೆ ಸೂರ್ಯ ಮತ್ತು ಶನಿಯ ಸಂಯೋಗ ಫಲಪ್ರದವಾಗಿರುತ್ತದೆ. ಎರಡೂ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಇರುತ್ತವೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಹೊಸ ಹೆಸರು ಮಾಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಂಪತ್ತನ್ನು ಹೆಚ್ಚಿಸಲು ನೀವು ಮಾಡುವ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ವೃತ್ತಿ, ವ್ಯವಹಾರ ಮತ್ತು ಉದ್ಯೋಗ ಮಾಡುವ ಜನರು ಯಶಸ್ಸನ್ನು ಪಡೆಯುತ್ತಾರೆ. ತಾಳ್ಮೆಯಿಂದ ಕೆಲಸ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications