Shadashtak Yoga 2025: ಷಡಾಷ್ಟಕ ಯೋಗ- ಜನವರಿ 21ರವರೆಗೆ ಈ ರಾಶಿಗಳ ಮೇಲೆ ಮಂಗಳ-ಶನಿಯ ಅಶುಭ ಪರಿಣಾಮ
ನವಗ್ರಹಗಳಲ್ಲಿ ಶನಿಯವನ್ನು ಕರ್ಮಕ್ಕೆ ತಕ್ಕ ಫಲ ನೀಡುವ ದೇವರು ಎಂದು ಕರೆಯಲಾಗುತ್ತದೆ. ಒಮ್ಮೆ ಶನಿಯ ಕೆಟ್ಟ ದೃಷ್ಟಿಗೆ ಒಳಗಾದರೆ ಅದರಿಂದ ಪಾರಾಗುವುದು ತುಂಬಾ ಕಷ್ಟ. ಹೀಗಾಗಿ ಕೆಟ್ಟ ಕಾರ್ಯಗಳನ್ನು ಮಾಡಲು ಜನ ನೂರು ಬಾರಿ ಯೋಚನೆ ಮಾಡುತ್ತಾರೆ.
ಶನಿ ಹಾಗೂ ಮಂಗಳ ಗ್ರಹಗಳ ಸಂಯೋಗದಿಂದಾಗಿ ಷಡಷ್ಟಕ ಯೋಗ ರೂಪಗೊಳ್ಳಲಿದೆ. ಈ ಯೋಗ ಕೆಲ ರಾಶಿಗಳ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಲಿದೆ.
ಹೌದು.. ಪ್ರಸ್ತುತ ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾದ ಮಂಗಳ ಗ್ರಹ ಕರ್ಕಾಟಕದಲ್ಲಿ ನೆಲೆಸಿದೆ. ಇದು ಆರನೇ ಮನೆಯಲ್ಲಿದೆ. ಇತ್ತ ಕುಂಭ ರಾಶಿಯ ಎಂಟನೇ ಮನೆಯಲ್ಲಿ ಕರ್ಮದ ಫಲ ನೀಡುವ ಶನಿ ದೇವನು ಸ್ಥಿತರಾಗಿದ್ದಾನೆ. ಮಂಗಳ ಮತ್ತು ಶನಿ ಪರಸ್ಪರರ ಆರನೇ ಮತ್ತು ಎಂಟನೇ ಮನೆಯಲ್ಲಿರುವುದರಿಂದ ಷಡಷ್ಟಕ ಯೋಗ ರೂಪುಗೊಳ್ಳುತ್ತಿದೆ. ಇದು ಜನವರಿ 20ರವರೆಗೆ ಇರುತ್ತದೆ.
ಶನಿ ಮತ್ತು ಮಂಗಳನ ಈ ಸಂಯೋಜನೆಯು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಅಪಘಾತ, ನಷ್ಟ ಇತ್ಯಾದಿ ಸಮಸ್ಯೆಗಳಿಗೆ ಒಳಗಾಗುತ್ತಾನೆ. ಮಂಗಳ ಗ್ರಹವು ಜನವರಿ 21, 2025 ರಂದು ಮಿಥುನ ರಾಶಿಯಲ್ಲಿ ಸಾಗಲಿದೆ. ಆದರೆ ಅದಕ್ಕೂ ಮೊದಲು ಯಾವ 3 ರಾಶಿಗಳು ಮಂಗಳ-ಶನಿಯಿಂದ ಅಪಾಯದಲ್ಲಿದೆ? ಎಂದು ಈಗ ತಿಳಿಯೋಣ.

ಕಟಕ ರಾಶಿ
ಮಂಗಳ ಮತ್ತು ಶನಿಯಿಂದ ರೂಪುಗೊಂಡ ಷಡಷ್ಟಕ ಯೋಗ ಕಟಕ ರಾಶಿಯವರಿಗೆ ಅಶುಭ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಕರ್ಕಾಟಕ ರಾಶಿಯ ಜನರು ಸ್ವಲ್ಪ ಎಚ್ಚರಿಕೆ ವಹಿಸುವುದು ಮುಖ್ಯ. ಈ ಸಮಯದಲ್ಲಿ ಖರ್ಚು ಹೆಚ್ಚಾಗಬಹುದು. ಕೆಲಸ ಮಾಡುವವರು ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ಕೆಲಸದಲ್ಲಿ ಯಾವುದೇ ಕಾರಣವಿಲ್ಲದೆ ವಿನಾಕಾರಣ ಸಮಸ್ಯೆಗಳು ಎದುರಾಗಬಹುದು. ಯಾವುದೇ ಕಾರಣವಿಲ್ಲದೆ ಮನಸ್ಸು ತೊಂದರೆಗೊಳಗಾಗುತ್ತದೆ. ಬೇರೆ ಬೇರೆ ರೀತಿಯ ಭಯ ಕಾಡಬಹುದು. ಆದಷ್ಟೂ ತಾಳ್ಮೆಯಿಂದ ವರ್ತಿಸಿ. ಹನುಮಾನ್ ಚಾಲೀಸಾ ಪಠಿಸುವುದರಿಂದ ಸಮಸ್ಯೆಗಳು ದೂರವಾಗುತ್ತವೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಷಡಷ್ಟಕ ಯೋಗ ಕಷ್ಟವಾಗಲಿದೆ. ನೀವು ಚರ್ಚೆಯಿಂದ ದೂರವಿದ್ದರೆ ಉತ್ತಮ. ಪ್ರಯಾಣ ಮನಸ್ಸಿಗೆ ಸಂತೋಷವಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಷ್ಟ ಉಂಟಾಗಬಹುದು. ಮಾನಸಿಕ ಸ್ಥಿತಿ ಉತ್ತಮವಾಗಿರುವುದಿಲ್ಲ. ಒತ್ತಡದಿಂದ ದೂರವಿರುವುದು ನಿಮಗೆ ಒಳ್ಳೆಯದು. ಕೆಲವು ದಿನಗಳವರೆಗೆ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.

ಮಕರ ರಾಶಿ
ಮಕರ ರಾಶಿಯ ಜನರು ಜನವರಿ 21ರವರೆಗೂ ತುಂಬಾ ಜಾಗರೂಕರಾಗಿರಬೇಕು. ಯಾವುದೇ ರೀತಿಯ ಅಜಾಗರೂಕತೆಯು ನಿಮಗೆ ಸಂಕಷ್ಟ ತಂದೊಡ್ಡಬಹುದು. ಮಂಗಳ ಮತ್ತು ಶನಿಯಿಂದ ಷಡಷ್ಟಕ ಯೋಗ ಅಶುಭ ಫಲಿತಾಂಶಗಳನ್ನು ನೀಡಲಿದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಆರ್ಥಿಕ ನಷ್ಟ ಉಂಟಾಗಬಹುದು.
ಜೊತೆಗೆ ಪ್ರಯಾಣಿಸುವ ಮುನ್ನ ಜಾಗರೂಕರಾಗಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳಿರುವ ಸಾಧ್ಯತೆ ಇದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಲಿದೆ. ಶನಿದೇವನ ಆರಾಧನೆಯಿಂದ ಫಲ ದೊರೆಯುತ್ತದೆ. ಆಲದ ಮರದ ಬಳಿ ಪ್ರತಿದಿನ ಎಣ್ಣೆ ದೀಪವನ್ನು ಬೆಳಗಿಸಿ. ಇದರಿಂದ ಶುಭ ಫಲ ದೊರೆಯಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯ ಇರುವ ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications