ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಶಿ ಭವಿಷ್ಯ

By: ಸೀತಾರಾಮ್ ಉಪಾಧ್ಯ
Subscribe to Oneindia Kannada

ಡೊನಾಲ್ಡ್ ಟ್ರಂಪ್-ಅಮೆರಿಕಾದ ಅಧ್ಯಕ್ಷ ಸ್ಥಾನ ಏರಲಿರುವ ಈ ವ್ಯಕ್ತಿಯ ಹೆಸರೇ ಈಗ ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಗೆಲುವು, ಅವರ ಭವಿಷ್ಯ ಏನು ಎಂಬುದನ್ನು ತಿಳಿದುಕೊಳ್ಳೋಣ. ಟ್ರಂಪ್ ಅವರದು ಜ್ಯೇಷ್ಠಾ ನಕ್ಷತ್ರ ನಾಲ್ಕನೇ ಪಾದ ವೃಶ್ಚಿಕ ರಾಶಿ. ಸದ್ಯಕ್ಕೆ ರಾಹು ದಶೆಯು ಕೊನೆ ಹಂತದಲ್ಲಿದೆ. ಅಂದರೆ ನವೆಂಬರ್ 17ನೇ ತಾರೀಕಿಗೆ ರಾಹು ದಶೆ ಮುಗಿದು ಗುರು ದಶೆ ಆರಂಭವಾಗುತ್ತದೆ.

ಯಡಿಯೂರಪ್ಪನವರು ಹಾಗೂ ಟ್ರಂಪ್ ದು ಒಂದೇ ರಾಶಿ. ಅವರಿಗೀಗ ಸಾಡೇ ಸಾತ್ ಶನಿ ನಡೆಯುತ್ತಿದೆ. ಜತೆಗೆ ಗೋಚಾರದಲ್ಲಿರುವ ಹನ್ನೊಂದನೇ ಮನೆ ಗುರು ಶುಭ ಫಲ ನೀಡುತ್ತಿದ್ದಾನೆ. ಟ್ರಂಪ್ ನ ಈಗಿನ ಯಶಸ್ಸಿಗೆ ಕಾರಣವಾಗಿರುವುದು ಅವರ ಜಾತಕದಲ್ಲಿ ಉಚ್ಚನಾಗಿರುವ ರಾಹು. ಆದರೆ ನವೆಂಬರ್ ಹದಿನೇಳರ ನಂತರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಅವರದೇ ಮಾತು ಹಾಗೂ ಸುತ್ತಲಿನ ಜನರ ಕಾರಣಗಳಿಗಾಗಿ ವರ್ಚಸ್ಸಿಗೆ ಧಕ್ಕೆ ಆಗುತ್ತದೆ.[ಶನಿ ಕಾಟದ ಮಧ್ಯೆಯೂ ಯಡಿಯೂರಪ್ಪನವರ ಕೈ ಹಿಡಿದ ಗುರು]

Trump

ಇನ್ನು ಜನವರಿ ಇಪ್ಪತ್ತಾರರ ನಂತರ ಆರೋಗ್ಯದ ಕಾರಣಗಳಿಗಾಗಿ ಚಿಂತೆ ಎದುರಾಗುತ್ತದೆ. ಮುಂದಿನ ಸೆಪ್ಟೆಂಬರ್ 17ರವರೆಗೆ ಗುರು ಬಲ ಇರುವುದರಿಂದ ಹೇಗೋ ಸುಧಾರಿಸಿಕೊಂಡು ಹೋಗುತ್ತದೆ. ಆದರೆ ಆ ನಂತರ ದೊಡ್ಡ ತೀರ್ಮಾನಗಳಲ್ಲಿ, ಯೋಜನೆಗಳಲ್ಲಿ ತೆಗೆದುಕೊಂಡ ನಿರ್ಧಾರ ಉಲ್ಟಾ ಹೊಡೆಯುತ್ತದೆ. 2020ರವರೆಗೆ ಪದೇಪದೇ ಕೆಟ್ಟ ಹೆಸರು ಬರುವಂತಾಗುತ್ತದೆ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ವೈಯಕ್ತಿಕ ಆರೋಗ್ಯ ಕೈಕೊಟ್ಟು, ಆಸ್ಪತ್ರೆ ಸೇರುವಂಥ ಸ್ಥಿತಿ ಎದುರಾಗುತ್ತದೆ. ಟ್ರಂಪ್ ಜಾತಕದಲ್ಲಿ ಮೇಲ್ನೋಟಕ್ಕೆ ಕಾಳಸರ್ಪ ದೋಷ ಇರುವುದು ಕಂಡುಬರುತ್ತಿರುವುದರಿಂದ ಈ ಜಾತಕರು ಎಷ್ಟೇ ಎತ್ತರಕ್ಕೆ ಏರಿದರೂ ಆ ನಂತರ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಶನಿಯು ಮಕರ ರಾಶಿಗೆ ಬಂದ ನಂತರ ಅಂದುಕೊಂಡಿದ್ದಕಿಂತ ಹೆಚ್ಚಿನ ಯಶಸ್ಸು ದೊರಕುತ್ತದೆ. ಆದರೆ ಇನ್ನೂ ಎರಡೂವರೆ ವರ್ಷ ಶನಿ ದ್ವಿತೀಯದಲ್ಲಿದ್ದು, ಸಾಡೇಸಾತ್ ಪ್ರಭಾವ ಎದುರಿಸಬೇಕಾಗುತ್ತದೆ. ಜತೆಗೆ ಗುರು ದಶೆ ನಡೆಯುತ್ತದೆ. ಟ್ರಂಪ್ ಗೆ ಗುರು ಯೋಗಕಾರಕನಲ್ಲ. ಅವರ ಜಾತಕದಲ್ಲಿ ಗುರು ದುಃಸ್ಥಾನದಲ್ಲಿ ಇರುವುದರಿಂದ ಆಡಳಿತದಲ್ಲೂ ಕೆಲವು ವಿರೋಧ ಎದುರಿಸಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What the Planets are saying about Worlds most powerful man, Scorpion Donald Trump? Astrological predictions by Seetarama Upadhya, according to Vedic Astrology, Moon Sign.
Please Wait while comments are loading...