ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡುತ್ತಾರಾ: ಬ್ರಹ್ಮಾಂಡ ಗುರೂಜಿ ಭವಿಷ್ಯ

ಮುಖ್ಯಮಂತ್ರಿ ಯಡಿಯೂರಪ್ಪನವರ ಬಾಡಿ ಲಾಂಗ್ವೇಜ್, ನೀಡುತ್ತಿರುವ ಹೇಳಿಕೆಯನ್ನು ಗಮನಿಸಿದರೆ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಬಹುದಾಗಿದೆ.

ಇಂತಹ ರಾಜಕೀಯ ಸಂದಿಗ್ದತೆಯಲ್ಲೂ ನೆರೆ ಪೀಡಿತ ಬೆಳಗಾವಿ ಜಿಲ್ಲೆ ಪ್ರವಾಸದಲ್ಲಿರುವ ಯಡಿಯೂರಪ್ಪನವರಿಗೆ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಾರೆ.

ಇಂದು (ಜುಲೈ 25) ಸಂಜೆ ವರಿಷ್ಥರಿಂದ ಸಂದೇಶ ಬರಲಿದೆ ಎಂದು ಹೇಳಿರುವ ಯಡಿಯೂರಪ್ಪನವರು, ಮಾಧ್ಯಮದವರ ಮುಂದೆ ಗರಂ ಆದ ಪ್ರಸಂಗವೂ ನಡೆದಿದೆ. ಸಂಜೆಯವರೆಗೆ ತಾಳ್ಮೆಯಿಂದ ಇರಿ, ಎಲ್ಲವೂ ಗೊತ್ತಾಗಲಿದೆ ಎಂದು ಬಿಎಸ್ವೈ ಹೇಳಿದ್ದಾರೆ.

ಈ ನಡುವೆ, ವಿವಿಧ ಮಠಾಧೀಶರ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಲು ಆಗಮಿಸಿರುವ ಬ್ರಹ್ಮಾಂಡ ಗುರೂಜಿಗಳು, ಬಿಎಸ್ವೈ ಗ್ರಹಗತಿಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

 ನನ್ನ ಹೆಸರು ಹೇಳಿದರೆ ನಾನೆಲ್ಲಾದರೂ ಜನಪ್ರಿಯಗೊಂಡರೆ ಎನ್ನುವ ಭಯ

ನನ್ನ ಹೆಸರು ಹೇಳಿದರೆ ನಾನೆಲ್ಲಾದರೂ ಜನಪ್ರಿಯಗೊಂಡರೆ ಎನ್ನುವ ಭಯ

"ಕಳೆದ ಒಂದು ವರ್ಷದಿಂದ ವಿವಿಧ ಮುಖಂಡರು ಮತ್ತು ಸಚಿವರುಗಳ ಮೂಲಕ ಯಡಿಯೂರಪ್ಪನವರಿಗೆ ಸಂದೇಶ ಕಳುಹಿಸಿದ್ದೆ. ಆದರೆ, ನನ್ನ ಹೆಸರು ಹೇಳಿದರೆ ನಾನೆಲ್ಲಾದರೂ ಜನಪ್ರಿಯಗೊಂಡರೆ ಎನ್ನುವ ಭಯಕ್ಕಾಗಿ ನನ್ನ ಹೆಸರನ್ನು ಯಡಿಯೂರಪ್ಪನವರ ಮುಂದೆ ಪ್ರಸ್ತಾವಿಸಿರಲಿಲ್ಲ"ಎಂದು ಬ್ರಹ್ಮಾಂಡ ಗುರುಗಳು ಹೇಳಿದರು.

 ಗ್ರಹಗತಿಗಳನ್ನು ಆಧರಿಸಿ ಸಿಎಂ ಕುರ್ಚಿ ಉಳಿಯುತ್ತೋ ಎಂದು ಹೇಳಬಹುದು

ಗ್ರಹಗತಿಗಳನ್ನು ಆಧರಿಸಿ ಸಿಎಂ ಕುರ್ಚಿ ಉಳಿಯುತ್ತೋ ಎಂದು ಹೇಳಬಹುದು

"ನಮ್ಮ ಸಂದೇಶ ಯಡಿಯೂರಪ್ಪನವರಿಗೆ ಸರಿಯಾದ ತಲುಪದ ಹಿನ್ನಲೆಯಲ್ಲಿ ನಾವೆಲ್ಲಾ ಮಠಾಧಿಪತಿಗಳು ಇಲ್ಲಿಗೆ ಬಂದಿದ್ದೇವೆ. ಅವರವರ ಗ್ರಹಗತಿಗಳನ್ನು ಆಧರಿಸಿ ಸಿಎಂ ಕುರ್ಚಿ ಯಡಿಯೂರಪ್ಪನವರಿಗೆ ಉಳಿಯುತ್ತೋ, ಇಲ್ಲವೋ ಎಂದು ಹೇಳಬಹುದು"ಎಂದು ಬ್ರಹ್ಮಾಂಡ ಗುರುಗಳು ಹೇಳಿದರು.

 ಹೋದ ವರ್ಷದ ಸೆಪ್ಟಂಬರ್ ನಿಂದ ಬಿಎಸ್ವೈಗೆ ರಾಹು-ಶನಿ ಕಾಟ

ಹೋದ ವರ್ಷದ ಸೆಪ್ಟಂಬರ್ ನಿಂದ ಬಿಎಸ್ವೈಗೆ ರಾಹು-ಶನಿ ಕಾಟ

"ಮಾಧ್ಯಮದವರು ನೀವು ನಾನು ಗ್ರಹಗತಿಯ ಬಗ್ಗೆ ಹೇಳಿಲ್ಲವಂದರೂ ಸುದ್ದಿ ಮಾಡುತ್ತೀರಾ, ಹೋದ ವರ್ಷದ ಸೆಪ್ಟಂಬರ್ ನಿಂದ ಬಿಎಸ್ವೈಗೆ ರಾಹು-ಶನಿ ಕಾಟವಿದೆ. ಸೆಪ್ಟಂಬರ್ ತಿಂಗಳ ತನಕ ಯಡಿಯೂರಪ್ಪನವರು ಏನಾದರೂ ದಾಟಿ ಬಿಟ್ಟರೆ, ಮುಂದಿನ ಅವಧಿ ಅವರಿಗೆ ನಿರಾಂತಕವಾಗಲಿದೆ"ಎಂದು ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದಿದ್ದಾರೆ.

 ಸಿಎಂ ನನ್ನ ಮಾತನ್ನು ಕೇಳಿದರೆ ಎಲ್ಲಾ ವ್ಯವಸ್ಥೆಯನ್ನು ನಾನೇ ಮಾಡಬಹುದು

ಸಿಎಂ ನನ್ನ ಮಾತನ್ನು ಕೇಳಿದರೆ ಎಲ್ಲಾ ವ್ಯವಸ್ಥೆಯನ್ನು ನಾನೇ ಮಾಡಬಹುದು

ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅಥವಾ ತಿದ್ದುಪಡಿಯನ್ನು ಮಾಡಲು ಅವಕಾಶವಿದ್ದರೆ, ಮುಖ್ಯಮಂತ್ರಿಗಳು ನನ್ನ ಮಾತನ್ನು ಕೇಳಿದರೆ ಎಲ್ಲಾ ವ್ಯವಸ್ಥೆಯನ್ನು ನಾನೇ ಮಾಡಬಹುದು"ಎಂದು ಹೇಳುವ ಮೂಲಕ, ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಮುಂದುವರಿಯುವುದು ಕಷ್ಟ"ಬ್ರಹ್ಮಾಂಡ ಗುರುಗಳು ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+