• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

5 ವರ್ಷ ಜಗನ್ ಕುರ್ಚಿ ಮೇಲೆ ಕೂರಲು ಗ್ರಹಗತಿ ತೊಡಕು ; ಆಂಧ್ರದಲ್ಲಿ ರೆಸಾರ್ಟ್ ರಾಜಕೀಯ!

By ಅನಿಲ್ ಆಚಾರ್
|
   ವೈ.ಎಸ್.ಜಗನ್ ಮೋಹನ್ ರೆಡ್ಡಿ ಜಾತಕ ವಿಶ್ಲೇಷಣೆ ಮಾಡಿದ ಪ್ರಕಾಶ್ ಅಮ್ಮಣ್ಣಾಯ

   ಪಕ್ಕದ ಆಂಧ್ರಪ್ರದೇಶದಲ್ಲಿ ಬಿರುಗಾಳಿಯಂಥ ಜಯ ಸಾಧಿಸಿದ್ದಾರೆ ವೈ.ಎಸ್.ಜಗನ್ ಮೋಹನ್ ರೆಡ್ಡಿ. ವೈಎಸ್ ಆರ್ ಪಕ್ಷದ ಗೆಲುವಿನ ಬಗ್ಗೆ ಭಾರೀ ಹೊಗಳಿಕೆ ಕೇಳಿಬರುತ್ತಿದೆ. ಕರ್ನಾಟಕಕ್ಕೆ ಪಕ್ಕದ ರಾಜ್ಯ ಆಂಧ್ರಪ್ರದೇಶದ ಬೆಳವಣಿಗೆ ಬಗ್ಗೆ ಕುತೂಹಲ ಸಹಜ. ಅಲ್ಲಿನ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಜಯ ಚರಿತ್ರಾರ್ಹ ಎಂಬಂತೆ ಇದೆ.

   ಜಗನ್ ಮೋಹನ್ ರೆಡ್ಡಿ ಜಾತಕ ಫಲ ಹೇಗಿದೆ? ಈ ಬಗ್ಗೆ ಪ್ರಕಾಶ್ ಅಮ್ಮಣ್ಣಾಯರ ಅಭಿಪ್ರಾಯ ಕೇಳಿದಾಗ ಹೇಳಿದ ಮಾತಿದು. ನಮಗೆ ಲಭಿಸಿದ ಜಾತಕದ ಆಧಾರದಲ್ಲಿ ಉಡುಪಿ ಜಿಲ್ಲೆ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ನೀಡಿದ ಮೂಲದ ವಿವರಣೆಯಷ್ಟೆ. ಅದು ಹೀಗಿದೆ.

   ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ದೇವರು ಕೊಟ್ಟ ಅದೃಷ್ಟ ಸಂಖ್ಯೆ '23'!

   ಸ್ವತಃ ಜಗನ್ ಮೋಹನ್ ರೆಡ್ಡಿ ಅವರ ಜಾತಕದಲ್ಲಿ ರಾಜ ಯೋಗಗಳು ಕಂಡು ಬರುತ್ತಿಲ್ಲ. ಇರುವ ಯೋಗಗಳು ಅವರನ್ನು ದೀರ್ಘ ಕಾಲ ಕುರ್ಚಿಯಲ್ಲಿ ಕೂರಲು ಬಿಡುವುದಿಲ್ಲ. ಹೇಗೆ ಯಡಿಯೂರಪ್ಪ ಅವರಿಗೆ ಪೂರ್ಣ ಅಧಿಕಾರ ನಡೆಸಲು ಆಗಲಿಲ್ಲವೋ ಅದೇ ಸನ್ನಿವೇಶವನ್ನು ಜಗನ್ ಎದುರಿಸುವ ಸಾಧ್ಯತೆಗಳಿವೆ.

   ಲಭ್ಯ ಮಾಹಿತಿಯ ಪ್ರಕಾರ ಜಗನ್ ಮೋಹನ್ ರೆಡ್ಡಿ ಅವರದು ಆರಿದ್ರಾ ನಕ್ಷತ್ರ ಮಿಥುನ ರಾಶಿ. ಮುಂದಿನ ವರ್ಷದ ಶುರುವಿನ ತನಕ ಉಸಿರಾಡುವುದಕ್ಕೆ ಕಷ್ಟ ಎನಿಸುವಂಥ ನಾನಾ ಬಗೆಯ ಸವಾಲುಗಳನ್ನು ಅವರು ಎದುರಿಸುತ್ತಾರೆ. ಆ ನಂತರ ಯಾವಾಗ ಶನಿಯು ಅಷ್ಟಮಕ್ಕೆ ಪ್ರವೇಶಿಸುತ್ತಾನೋ ಆಗ ನಾನಾ ಅಪವಾದಗಳು ಬೆನ್ನಟ್ಟಿ ಬರುತ್ತವೆ.

   ಮತ್ತೊಬ್ಬರನ್ನು ಗದ್ದುಗೆ ಮೇಲೆ ಕೂರಿಸುವ ಸಂದರ್ಭ ಎದುರಾಗುತ್ತದೆ

   ಮತ್ತೊಬ್ಬರನ್ನು ಗದ್ದುಗೆ ಮೇಲೆ ಕೂರಿಸುವ ಸಂದರ್ಭ ಎದುರಾಗುತ್ತದೆ

   ಹೆಣ್ಣುಮಕ್ಕಳ ವಿಚಾರವಾಗಿ ಗಂಭೀರವಾದ ಆರೋಪವೊಂದನ್ನು ಜಗನ್ ಮೋಹನ್ ರೆಡ್ಡಿ ಎದುರಿಸುತ್ತಾರೆ. ಈ ಹಿಂದಿನ ಹಗರಣಗಳನ್ನು ವಿರೋಧಿಗಳು ಮತ್ತೆ ಎಳೆದು ತರುತ್ತಾರೆ. ಆರೋಪಗಳು, ಸಂಕಷ್ಟ ಎದುರಿಸುವುದು ಅನಿವಾರ್ಯ ಎಂಬಂತಾಗುತ್ತದೆ. ಒಂದು ಹಂತದಲ್ಲಿ ತಮ್ಮ ಬದಲಿಗೆ ಮತ್ತೊಬ್ಬರನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸುವಂಥ ಸಂದರ್ಭ ಸೃಷ್ಟಿ ಆಗುತ್ತದೆ.

   ಅವಮಾನಗಳ ಪಾಲಾಗುವುದನ್ನು ತಪ್ಪಿಸುವುದು ಕಷ್ಟ

   ಅವಮಾನಗಳ ಪಾಲಾಗುವುದನ್ನು ತಪ್ಪಿಸುವುದು ಕಷ್ಟ

   ಜಗನ್ ಮೋಹನ್ ರೆಡ್ಡಿ ಅವಮಾನದ ಪಾಲಾಗುವುದನ್ನು ತಪ್ಪಿಸಲು ಬಹಳ ಕಷ್ಟ ಇದೆ. ಅವರ ಬದಲಿಗೆ ಬೇರೊಬ್ಬರನ್ನು ಕುರ್ಚಿಯ ಮೇಲೆ ಕೂರಿಸುವುದು ಅಷ್ಟರ ಮಟ್ಟಿಗೆ ಕ್ಷೇಮಕರ. ಇನ್ನೊಂದು ಸಾಧ್ಯತೆ ಏನೆಂದರೆ, ಜಗನ್ ವಿರುದ್ಧ ಪಕ್ಷದೊಳಗೇ ಆಂತರಿಕವಾದ ದಂಗೆ ಸೃಷ್ಟಿ ಆಗುತ್ತದೆ. ನೆಮ್ಮದಿ- ತಾಳ್ಮೆ ಕಳೆದುಕೊಳ್ಳುವಂಥ ಬೆಳವಣಿಗೆಗಳು ನಡೆಯುತ್ತವೆ.

   ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್; ಇದು ಆಂಧ್ರ ಪಾಲಿಟಿಕ್ಸ್

   ಜಾತಕದಲ್ಲಿ ರಾಜಯೋಗಗಳು ಅಂತಿಲ್ಲ

   ಜಾತಕದಲ್ಲಿ ರಾಜಯೋಗಗಳು ಅಂತಿಲ್ಲ

   ಜಗನ್ ಮೋಹನ್ ರೆಡ್ಡಿಯ ಜಾತಕದಲ್ಲಿ ಮುಖ್ಯವಾಗಿ ರಾಜಯೋಗಗಳು ಅಂತಿಲ್ಲ. ಲಗ್ನ ಕುಂಡಲಿಯಲ್ಲಾಗಲೀ ಅಥವಾ ನವಾಂಶ ಕುಂಡಲಿಯಲ್ಲಾಗಲೀ ಸವಾಲುಗಳಿಂದ ರಕ್ಷಣೆ ನೀಡುವಂಥ ಯಾವುದೇ ದೊಡ್ಡ ಯೋಗಗಳು ಅಂತಿಲ್ಲ. ಇದನ್ನು ಅಧಿಕಾರಿ ಯೋಗ ಅಂತ ಕರೆಯಬಹುದು ಅಷ್ಟೇ.

   ರೆಸಾರ್ಟ್ ರಾಜಕೀಯಕ್ಕೆ ಸಾಕ್ಷಿ ಆಗಬೇಕಾಗುತ್ತದೆ

   ರೆಸಾರ್ಟ್ ರಾಜಕೀಯಕ್ಕೆ ಸಾಕ್ಷಿ ಆಗಬೇಕಾಗುತ್ತದೆ

   ದೊಡ್ಡ ಸಂಖ್ಯೆಯ ಶಾಸಕರು ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಇದ್ದರೂ ರೆಸಾರ್ಟ್ ರಾಜಕೀಯಕ್ಕೆ ಆಂಧ್ರಪ್ರದೇಶ ಸಾಕ್ಷಿ ಅಗಬೇಕಾಗುತ್ತದೆ. ಮುಖ್ಯಮಂತ್ರಿ ಆಗದ ತನಕ ಮಾತ್ರ ಜಗನ್ ಗೆ ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಇರುವುದಿಲ್ಲ. ಆದರೆ ಒಮ್ಮೆ ಸಿಎಂ ಕುರ್ಚಿ ಏರಿದ ಮೇಲೆ ಬಹಳ ಕಷ್ಟ, ಸವಾಲು, ಆರೋಪಗಳನ್ನು ಎದುರಿಸಬೇಕಾಗುತ್ತದೆ.

   ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ನರೇಂದ್ರ ಮೋದಿ ಪ್ರಮಾಣ ವಚನದ ಮುಹೂರ್ತ ವಿಶ್ಲೇಷಣೆ

   English summary
   Planets will not let Jagan Mohan Reddy to complete 5 year tenure in AP as CM, said by well known astrologer Prakash Ammannaya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more