Kalyana Yoga 2025: ಕಲ್ಯಾಣ ಯೋಗ- ಹೊಸ ವರ್ಷ ಈ ರಾಶಿಗೆ ಕೂಡಿ ಬರಲಿದೆ ಮದುವೆ ಭಾಗ್ಯ
2025ರಲ್ಲಿ ಮದುವೆಯಾಗುವ ಯೋಗ ಯಾವ ರಾಶಿಯವರಿಗೆ ಇದೆ. ಯಾವ ರಾಶಿಯವರಿಗೆ ಮದುವೆಯಾಗುವ ಯೋಗದ ಫಲಗಳು ಯಾವ ತಿಂಗಳಿನಿಂದ ಯಾವ ತಿಂಗಳ ಮಧ್ಯದಲ್ಲಿ ಇದೆ. ಯಾವ ತಿಂಗಳಿನಲ್ಲಿ ವಿವಾಹವಾದರೆ ಉತ್ತಮ ಎನ್ನುವ ಬಗ್ಗೆ ತಿಳಿಯೋಣ. ಮೊದಲಿಗೆ ಗುರು ಬಲ ಯಾವ ರಾಶಿಯವರಿಗೆ ಇದೆ ಎಂದು ನೋಡೋಣ.

ಮೇಷ ರಾಶಿ
2025ರಲ್ಲಿ ಮೇಷ ರಾಶಿ ಗುರು ಬಲ ಕಳೆದುಕೊಳ್ಳುತ್ತದೆ. ಮೇಷ ರಾಶಿಯವರ ಮೂರನೇ ಸ್ಥಾನಕ್ಕೆ ಗುರು ಸಾಗಲಿದ್ದಾನೆ. ಆದರೂ ಕೂಡ ಮೇಷ ರಾಶಿಯವರಿಗೆ ಮದುವೆಯ ಯೋಗವಿದೆ. ಗುರು ಮೇಷ ರಾಶಿಯವರ ಮೂರನೇ ಮನೆಗೆ ಹೋದರೂ ಕೂಡ ತನ್ನ ಪಂಚಮ ದೃಷ್ಟಿಯಿಂದ ತುಲಾ ರಾಶಿಯ ಮೇಲೆ ದೃಷ್ಟಿಯನ್ನು ಬೀರಿದ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಸಪ್ತಮ ಸ್ಥಾನ ಅಂದರೆ ಮೇಷ ರಾಶಿಯ ಏಳನೇ ಮನೆಯ ಮೇಲೆ ಗುರುವಿನ ದೃಷ್ಟಿ ಬೀಳುವುದರಿಂದ ಕಂಕಣ ಬಲದ ಯೋಗ ಸಿಗಲಿದೆ. ಮೇಷದಲ್ಲಿ ಗುರುವಿನ ಸ್ಥಾನ ಬಲವಿಲ್ಲದೇ ಇದ್ದರೂ ಗುರುವಿನ ಶುಭ ದೃಷ್ಟಿಯ ಪ್ರಭಾವದಿಂದಾಗಿ ಮೇಷ ರಾಶಿಯವರಿಗೆ ಹೊಸ ವರ್ಷದಲ್ಲಿ ವಿವಾಹ ಯೋಗ ಕೂಡಿ ಬರಲಿದೆ.

ವೃಷಭ ರಾಶಿ
ವೃಷಭ ರಾಶಿಯ ಎರಡನೇ ಮನೆಯಲ್ಲಿ ಗುರು ಬಲವಿದೆ. ಇದರ ಪ್ರಭಾವದಿಂದ 2025ರಲ್ಲಿ ಮದುವೆಯ ಯೋಗ ಈ ರಾಶಿಗಿದೆ. ಈ ವರ್ಷ ಅದ್ಭುತವಾದ ಫಲವನ್ನು ವೃಷಭ ರಾಶಿಯವರು ಪಡೆಯಲಿದ್ದಾರೆ. ಹನ್ನೆರೆಡು ರಾಶಿಗಳಲ್ಲಿ ಅತ್ಯಂತ ಶುಭ ಫಲವನ್ನು 2025ರಲ್ಲಿ ವೃಷಭ ರಾಶಿಯವರು ಪಡೆಯಲಿದ್ದಾರೆ. ಶನಿ ಹಾಗೂ ಗುರು ಸ್ಥಾನ ಜಾತಕದಲ್ಲಿ ಉತ್ತಮವಾಗಿದ್ದು, ಈ ಎರಡೂ ಗ್ರಹಗಳ ಆಶೀರ್ವಾದಿಂದ ವರ್ಷವಿಡೀ ವೃಷಭ ರಾಶಿಯವರು ಜೀವನದಲ್ಲಿ ಆರ್ಥಿಕ ಸಮೃದ್ಧಿ ಕಾಣಲಿದ್ದಾರೆ.

ಮಿಥುನ ರಾಶಿ
ಮಿಥುನ ರಾಶಿಯವರ ಜನ್ಮ ಗುರುವಿನ ದೃಷ್ಟಿ ಸಪ್ತಮ ಸ್ಥಾನದಲ್ಲಿ ಬೀಳುವುದರಿಂದ 2025ರಲ್ಲಿ ಮದುವೆಯಾಗುವ ಯೋಗ ಇದೆ. ಆದರೆ ಅವಸರ ಮಾಡಬೇಡಿ. ತಳ ಶೋಧ ಮಾಡಿ ನಂತರವಷ್ಟೇ ಸಂಗಾತಿಯನ್ನು ಆಯ್ಕೆ ಮಾಡಿ. ಎಲ್ಲವನ್ನೂ ವಿಚಾರಿಸಿ ಸಂಗಾತಿಯನ್ನು ಆಯ್ಕೆ ಮಾಡಿ ಮದುವೆಯಾಗುವುದು ಉತ್ತಮ.
ಉಳಿದಂತೆ ಯಾವ ರಾಶಿಗೆ ಕಂಕಣ ಭಾಗ್ಯ ಇದೆ?
ಉಳಿದಂತೆ 2025ರಲ್ಲಿ ಯಾವೆಲ್ಲಾ ರಾಶಿಯವರಿಗೆ ಮದುವೆಯಾಗುವ ಯೋಗವಿದೆ ಎಂದು ತಿಳಿಯೋಣ. 2025ರಲ್ಲಿ ಮದುವೆಗೆ ತುಂಬಾ ಯೋಗ ಫಲಗಳನ್ನು ಸಿಂಹ ರಾಶಿಯವರು ಹೊಂದಿದ್ದಾರೆ. ಜೊತೆಗೆ ಕನ್ಯಾ ರಾಶಿಯವರಿಗೂ ಸಹ ತುಂಬಾ ಒಳ್ಳೆಯ ಮದುವೆಯ ಯೋಗ ಇದೆ. ಮದುವೆ ನಿಧಾನವಾದರೂ ಪ್ರಧಾನವಾಗಲಿದೆ.
ಹಾಗೇ ತುಲಾ ರಾಶಿಯವರಿಗೆ ಶನಿ ಬಲವಿದೆ. ಹೀಗಾಗಿ ಮದುವೆಗೆ ತುಂಬಾ ಶುಭ ಫಲ ಸಿಗಲಿದೆ. ಹೊಸ ವರ್ಷ ಮದುವೆಗೆ ಒಳ್ಳೆಯ ಸಮಯ ತುಲಾ ರಾಶಿಯವರಿಗೆ ಇದೆ. ಮುಂದಿನ ರಾಶಿ ಧನು ರಾಶಿ, ಹನ್ನೆರಡು ವರ್ಷಕ್ಕೊಮ್ಮೆ ಶುಭ ಯೋಗ ಧನು ರಾಶಿಯವರಿಗೆ ಬಂದಿದೆ. ಇವರಿಗೂ ಮದುವೆಗೆ ಶುಭ ಯೋಗವಿದೆ. ಇನ್ನೂ ಕುಂಭ ರಾಶಿಗೂ ಸಹ ಮದುವೆಗೆ ಒಳ್ಳೆಯ ಸಮಯ 2025ರಲ್ಲಿದೆ. ಕೊನೆಯದಾಗಿ ಮೀನ ರಾಶಿಯವರಿಗೂ ಕಲ್ಯಾಣದ ಯೋಗ ಇದೆ. ಆದರೆ ಕೆಲ ರಾಶಿಯವರು ಮದುವೆಯಾಗುವಾಗ ಜಾಗರೂಕರಾಗಿರಬೇಕು.

ಯಾವ ರಾಶಿಗೆ ಯಾವಾಗ ಮದುವೆ ಮಾಡಬಹುದು?
ಕಟಕ, ವೃಶ್ಚಿಕ, ಮಕರ ರಾಶಿಯವರಿಗೆ ಮದುವೆಗೆ ಶುಭ ಯೋಗ ಇಲ್ಲ. ಆದರೆ ಇವರಿಗೆ ಗುರು ಬಲ ಇಲ್ಲದೇ ಇದ್ದರೂ ಸಹ ಸೂರ್ಯ ಹಾಗೂ ಶುಕ್ರ ಬಲವಿದ್ದಾಗಲೂ ಮದುವೆ ಮಾಡಬಹುದು. ಹೀಗಾಗಿ ಗುರು ಬಲ ಇದ್ದರೆ ಮಾತ್ರ ಮದುವೆ ಮಾಡಬೇಕು ಎಂದು ಅರ್ಥವಲ್ಲ. ಗುರು ಬಲ ವರ್ಷವಿಡೀ ಇರುತ್ತದೆ. ಆದರೆ ಸೂರ್ಯ ಹಾಗೂ ಶುಕ್ರ ಬಲ ಆಗಾಗ ಬಂದು ಹೋಗುವುದರಿಂದ ಅದನ್ನು ಸರಿಯಾಗಿ ನೋಡಿಕೊಂಡು ಮದುವೆ ಮಾಡಿಕೊಳ್ಳುವುದು ಉತ್ತಮ.












Click it and Unblock the Notifications