Samsaptak Rajyoga 2024: ಗುರು ಶುಕ್ರನಿಂದ ರೂಪುಗೊಂಡ ಸಮಾಸಪ್ತ ರಾಜಯೋಗ: ಅಕ್ಟೋಬರ್‌ನಲ್ಲಿ ಈ 3 ರಾಶಿಗೆ ಸಂಪತ್ತು ದುಪ್ಪಟ್ಟು
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ದೇವರ ಗ್ರಹ ಎಂದು ಪರಿಗಣಿಸಲಾಗುತ್ತದೆ. ಗುರುವನ್ನು ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಈ ಗುರು ಗ್ರಹ ಸಂಚಾರದ ವೇಳೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಅದು ಒಂದು ರಾಶಿಯನ್ನು ಪೂರ್ಣಗೊಳಿಸಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸದ್ಯ ಗುರು ವೃಷಭ ರಾಶಿಯಲ್ಲಿ ಸಂಚರಿಸುತ್ತಿದೆ.
ಈ ಸಂದರ್ಭದಲ್ಲಿ ಅಕ್ಟೋಬರ್ 9 ರಂದು ಗುರು ವೃಷಭ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಸಂಚರಿಸಲಿದೆ. ಅದೇ ಸಮಯದಲ್ಲಿ ರಾಕ್ಷಸರ ಗುರು ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹ ಅಕ್ಟೋಬರ್ 13 ರಂದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ. ಹೀಗೆ ಗುರು ಮತ್ತು ಶುಕ್ರರ ಸ್ಥಾನದಿಂದಾಗಿ ಸಮಾಸಪ್ತ ರಾಜಯೋಗ ಉಂಟಾಗುವುದು.
ಈ ಎರಡು ಗ್ರಹಗಳಿಂದ ರೂಪುಗೊಂಡಿರುವ ಸಮಾಸಪ್ತ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಕೆಲ ರಾಶಿಗಳವರಿಗೆ ಅದೃಷ್ಟ ಖುಲಾಯಿಸಲಿದೆ. ಈ ರಾಜಯೋಗ ನವೆಂಬರ್ 07 ರವರೆಗೆ ಇರುವುದರಿಂದ ಈ ಅವಧಿಯಲ್ಲಿ ದುಪ್ಪಟ್ಟು ಲಾಭಗಳು ದೊರೆಯುತ್ತವೆ. ಹಾಗಾದರೆ ಈಗ ಸಮಾಸಪ್ತ ರಾಜಯೋಗದಿಂದ ಅದೃಷ್ಟ ಪಡೆಯುವ ರಾಶಿಯವರು ಯಾರೆಂದು ನೋಡೋಣ.

ವೃಷಭ ರಾಶಿ
ಅಕ್ಟೋಬರ್ 9 ರಂದು ಗುರು ವೃಷಭ ರಾಶಿಯಲ್ಲಿ ವಕ್ರ ಸ್ಥಾನದಿಂದ ರೂಪಗೊಳ್ಳುವ ಸಮಾಸಪ್ತ ರಾಜಯೋಗ ವೃಷಭ ರಾಶಿಯವರಿಗೆ ಪ್ರಗತಿಯ ಅವಕಾಶಗಳನ್ನು ನೀಡುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಆಸೆ ಇದ್ದರೆ ಅದು ಈಡೇರುತ್ತದೆ. ಇದಲ್ಲದೇ ಇನ್ನೂ ಅನೇಕ ಇಷ್ಟಾರ್ಥಗಳು ನೆರವೇರುತ್ತವೆ.
ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಈ ಅವಧಿಯಲ್ಲಿ ಕೊನೆಗೊಳ್ಳುತ್ತದೆ. ಪ್ರೇಮ ಜೀವನ ಸುಖಮಯವಾಗಿರುತ್ತದೆ. ನೀವು ಇಲ್ಲಿಯವರೆಗೆ ಶತ್ರುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಅಂತ್ಯಗೊಳ್ಳುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಶನಿ ಕಾಟದಿಂದ ಮುಕ್ತಿ ಸಿಗಲಿದೆ.

ವೃಶ್ಚಿಕ ರಾಶಿ
ಸಮಾಸಪ್ತ ರಾಜಯೋಗ ವೃಶ್ಚಿಕ ರಾಶಿಯವರಿಗೆ ಅದ್ಭುತ ಫಲ ನೀಡಲಿದೆ. ಬಹಳ ದಿನಗಳಿಂದ ಮುಗಿಯದೇ ಇದ್ದ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವೃಶ್ಚಿಕ ರಾಶಿಯವರ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಉದ್ಯೋಗಿಗಳು ಕಚೇರಿಯಲ್ಲಿ ಪ್ರಗತಿಯನ್ನು ಕಾಣುವರು. ವ್ಯಾಪಾರಿಗಳಿಗೆ ದುಪ್ಪಟ್ಟು ಧನಲಾಭ ಸಿಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಬಹಳ ಲಾಭದಾಯಕವಾಗಿರುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವ ಅವಕಾಶವೂ ಇರುತ್ತದೆ. ನೀವು ಹೆಚ್ಚು ಹೂಡಿಕೆ ಮಾಡಿದ್ದರೆ, ಅದರಿಂದ ನಿಮಗೆ ಅಧಿಕ ಲಾಭ ಸಿಗುತ್ತದೆ. ನೀವು ಅನುಭವಿಸಿದ ಸಮಸ್ಯೆಗಳು ಈ ಸಮಯದಲ್ಲಿ ಕೊನೆಗೊಳ್ಳುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಆಹ್ಲಾದಕರವಾಗಿರುತ್ತದೆ.

ಧನು ರಾಶಿ
ಧನು ರಾಶಿಯವರಿಗೆ ಸಮಾಸಪ್ತ ರಾಜಯೋಗ ಮಂಗಳಕರವಾಗಿದೆ. ಮುಖ್ಯವಾಗಿ ಧನು ರಾಶಿಯವರ ಜೀವನ ಸುಖಮಯವಾಗಿರುತ್ತದೆ. ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ನೀವು ಅದನ್ನು ಪರಿಣಾಮಕಾರಿಯಾಗಿ ಬಳಸಿದರೆ ಜೀವನದಲ್ಲಿ ಅನಿರೀಕ್ಷಿತ ಸುಧಾರಣೆಯನ್ನು ಕಾಣುತ್ತೀರಿ.
ವ್ಯಾಪಾರಿಗಳಿಗೆ ಕೆಲವು ಹೊಸ ಹೊಸ ಆದಾಯದ ಮಾರ್ಗಗಳು ಸಿಗಲಿವೆ. ಅಂತಹ ಮಾರ್ಗಗಳಲ್ಲಿ ನಡೆದರೆ ಅಧಿಕ ಲಾಭ ಲಭಿಸುವುದು ಪಕ್ಕಾ. ಇನ್ನೂ ಉದ್ಯೋಗಿಗಳಿಗೆ ಬಡ್ತಿಯ ಅವಕಾಶವಿದೆ. ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಬಯಕೆ ಇದ್ದರೆ, ಅದು ಈಡೇರುತ್ತದೆ. ವಾಣಿಜ್ಯೋದ್ಯಮಿಗಳು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ದಾಂಪತ್ಯ ಜೀವನ ಮಧುರವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications