Get Updates
Get notified of breaking news, exclusive insights, and must-see stories!

Horoscope: ಜನವರಿ 2ರಂದು ಈ ರಾಶಿಗೆ ವಿಷ್ಣುವಿನ ಕೃಪೆ, ರಾಯರ ಆಶೀರ್ವಾದದಿಂದ ಹೆಜ್ಜೆ ಹೆಜ್ಜೆಗೂ ಯಶಸ್ಸು

ಜನವರಿ 2 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಲ್ಲಿ ಬದಲಾವಣೆಯಿಂದಾಗಿ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ. ಅಲ್ಲದೆ ಗುರುರಾಯರ ಆಶೀರ್ವಾದದಿಂದಾಗಿ ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ಈ ದಿನ ಹೊಸ ಅವಕಾಶಗಳು, ಆರ್ಥಿಕ ಲಾಭ ಮತ್ತು ಪ್ರಗತಿಯ ಮಾರ್ಗಗಳು ಕಾಣಿಸಲಿವೆ. ಅಲ್ಲದೆ ಸಂತೋಷ ಜೀವನವನ್ನು ಪ್ರವೇಶಿಸುವಿರಿ. ಹಾಗಾದರೆ ಹೊಸ ವರ್ಷವನ್ನು ಶುಭ ದಿನದೊಂದಿಗೆ ಪ್ರಾರಂಭಿಸಲು ಸಿದ್ಧರಾಗಿ. ಜನವರಿ 2ರಂದು ಅದೃಷ್ಟ ಬದಲಾಗಲಿರುವ 5 ರಾಶಿಗಳ ಬಗ್ಗೆ ಈಗ ತಿಳಿಯೋಣ.

Astrology january 2 lucky zodiac signs this zodiac signs get success every step with the grace of vishnu

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ವಿಶೇಷವಾಗಿರುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿದೆ. ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತವೆ. ಬಹಳ ದಿನಗಳಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದವರಿಗೆ ಆರ್ಥಿಕ ಲಾಭ ಸಿಗಲಿದೆ. ಇದಲ್ಲದೇ ಈ ದಿನ ಕೌಟುಂಬಿಕ ಕಲಹಗಳು ದೂರವಾಗುತ್ತವೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತಸ ಹೆಚ್ಚಾಗಲಿದೆ.

ಗುರುರಾಯರ ಆಶೀರ್ವಾದ ನಿಮ್ಮ ಮೇಲೆ ಇರಲಿದ್ದು ಹೆಜ್ಜೆ ಹೆಜ್ಜೆಗೂ ಯಶಸ್ಸು ನಿಮ್ಮದಾಗಲಿದೆ. ಅಲ್ಲದೆ ಮೇಷ ರಾಶಿಯವರ ಮೇಲೆ ವಿಷ್ಣುವಿನ ಆಶೀರ್ವಾದವೂ ಇರಲಿದೆ. ಇದರಿಂದ ನೀವಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಲಾಭದಾಯಕ ಹುದ್ದೆಯನ್ನು ಮಾಡುವ ಅವಕಾಶ ನಿಮಗೆ ಸಿಗಲಿದೆ.

Astrology january 2 lucky zodiac signs this zodiac signs get success every step with the grace of vishnu

ವೃಷಭ ರಾಶಿ

ಜನವರಿ 2 ವೃಷಭ ರಾಶಿಯ ಜನರಿಗೆ ಮಂಗಳಕರ ದಿನವಾಗಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಸಾಧ್ಯತೆಯಿದೆ. ಉದ್ಯೋಗಿಗಳು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಸಂಬಂಧಗಳು ಸುಧಾರಿಸುತ್ತವೆ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆಗೆ ನೀವು ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಈ ದಿನದಂದು ಕೈಗೊಂಡ ಪ್ರಯಾಣ ಲಾಭದಾಯಕವಾಗಿರುತ್ತದೆ.

ವೃಷಭ ರಾಶಿಯವರಿಗೆ ಈ ದಿನ ತುಂಬಾ ವಿಶೇಷವಾಗಿದೆ. ನಿಮ್ಮ ಎಲ್ಲಾ ಕಾರ್ಯಗಳಲ್ಲಿ ದೇವರ ಆಶೀರ್ವಾದ ಇರಲಿದ್ದು ಮೇಲಾಧಿಕಾರಿಗಳು ನಿಮ್ಮ ಕಾರ್ಯಗಳನ್ನು ಮೆಚ್ಚುತ್ತಾರೆ. ಶತ್ರುಗಳು ಮಿತ್ರರಾಗುವ ಸಮಯ ಬಂದಿದೆ. ನಿಮ್ಮವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಎಲ್ಲಾ ಕಾರ್ಯಗಳಲ್ಲೂ ಕುಟುಂಬಸ್ಥರ ಸಹಕಾರ ಇರುತ್ತದೆ.

Astrology january 2 lucky zodiac signs this zodiac signs get success every step with the grace of vishnu

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿದೆ. ಯಾವುದಾದರೂ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅದರಿಂದ ದೂರವಾಗುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಹೊಸ ಜವಾಬ್ದಾರಿ ಪಡೆಯುವ ಸಾಧ್ಯತೆ ಇದೆ. ಈ ಸಮಯ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಅಲ್ಲದೆ ನಿಮ್ಮ ಕಾರ್ಯ ವಿಧಾನ ಬದಲಾಗಲಿದೆ.

ಸಿಂಹ ರಾಶಿಯವರ ಮೇಲೆ ವಿಷ್ಣುವಿನ ಆಶೀರ್ವಾದ ಇರಲಿದೆ. ಹೀಗಾಗಿ ಅವರು ಮಾಡುವ ಕಾರ್ಯದಲ್ಲಿನ ಗೊತ್ತಿಲ್ಲದೇ ಆಗುವ ತಪ್ಪುಗಳು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ. ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯನ್ನು ನೀಡುವುದಿಲ್ಲ. ಗುರು ರಾಯರ ಆಶೀರ್ವಾದಿಂದ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ.

Astrology january 2 lucky zodiac signs this zodiac signs get success every step with the grace of vishnu

ಧನು ರಾಶಿ

ಜನವರಿ 2ರಂದು ಧನು ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹೂಡಿಕೆಯು ಲಾಭವನ್ನು ನೀಡುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗಲಿದೆ. ಇದು ಮನಸ್ಸನ್ನು ಸಂತೋಷವಾಗಿರಿಸುವುದು ಮಾತ್ರವಲ್ಲದೆ ಕೆಲಸದಲ್ಲಿನ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ದಿನ ಪ್ರಾರಂಭಿಸಿದ ಯೋಜನೆಗಳು ಯಶಸ್ವಿಯಾಗುತ್ತವೆ. ಇದರಿಂದ ದೀರ್ಘಾವಧಿಯ ಪ್ರಯೋಜನಗಳನ್ನು ನೀವು ಪಡೆಯುವಿರಿ.

Astrology january 2 lucky zodiac signs this zodiac signs get success every step with the grace of vishnu

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಹೊಸ ಅವಕಾಶಗಳಿಂದ ತುಂಬಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ದಿಕ್ಕನ್ನು ಕಂಡುಕೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಹೊಸ ಧನಾತ್ಮಕ ಶಕ್ತಿ ತುಂಬುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+