• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರ

By ರಮಾಕಾಂತ್
|

ಯಾವ ರಾಶಿಯವರು ಹೇಗೆ ನಿದ್ದೆ ಮಾಡುತ್ತಾರೆ ಹಾಗೂ ಹೇಗೆ ನಿದ್ದೆ ಮಾಡಬೇಕು ಅನ್ನೋದನ್ನೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಬಹಳ ಮಂದಿಗೆ ನಿದ್ದೆಯ ವಿಚಾರದಲ್ಲಿ ತಾವೇನು ತಪ್ಪು ಮಾಡುತ್ತಿದ್ದೇವೆ ಎಂಬ ಬಗ್ಗೆಯೇ ಅರಿವು ಇರುವುದಿಲ್ಲ. ಇನ್ನೂ ಕೆಲವರಿಗೆ ನನಗೇ ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಇದ್ದರೂ ಇರುತ್ತದೆ.

ಇನ್ನು ಆರೋಗ್ಯಕ್ಕೂ ಹಾಗೂ ಆರೋಗ್ಯಪೂರ್ಣ ನಿದ್ದೆಗೂ ಇರುವ ಅವಿನಾಭಾವ ಸಂಬಂಧವನ್ನು ಯಾರು ಅಲ್ಲಗಳೆಯಲಾಗುತ್ತದೆ? ಆದ್ದರಿಂದಲೇ ಇಂದಿನ ಲೇಖನ ಬಹಳ ಮುಖ್ಯವಾದದ್ದು. ಸದಾ ಒಂದಿಲ್ಲೊಂದು ಯೋಚನೆ ಮಾಡುತ್ತಾ ಅರಬರೆ ನಿದ್ದೆ ಮಾಡುವ ಮಿಥುನ ರಾಶಿಯವರ ಕುತೂಹಲ ಕಡಿಮೆ ಆಗಲಿಲ್ಲ ಅಂದರೆ ಹೇಗೆ?

ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ

ರಾತ್ರಿ ವೇಳೆ ಗೂಬೆ ರೀತಿಯಲ್ಲಿ ಎದ್ದು ಕುಳಿತು, ಬೆಳಗ್ಗೆ ಘೂಕರಿಸುವ ವೃಶ್ಚಿಕ ರಾಶಿಯವರು ಏನು ಮಾಡಬೇಕು? ಎಲ್ಲ ರಾಶಿಯವರಿಗಿಂತ ಹೆಚ್ಚು ನಿದ್ದೆ ಮಾಡುವ ಕುಂಭದವರಿಗೆ ಹಾಗೆ ಮಾಡುವುದು ಸರಿಯೇ ಅಥವಾ ತಪ್ಪೆ ಎಂದು ಗೊಂದಲ ಬಗೆಹರಿಸುವವರು ಯಾರು? ತಮ್ಮ ಸುತ್ತ ಪ್ರೀತಿಸುವವರೇ ಇದ್ದರೆ ಸುಖವಾಗಿ ನಿದ್ರಿಸುವ ಸಿಂಹ ರಾಶಿಯವರು...

ಹೀಗೆ ದ್ವಾದಶ ರಾಶಿಯವರ ನಿದ್ದೆ ಬಗ್ಗೆಯೇ ಇಲ್ಲಿದೆ ಲೇಖನ. ಓದಿದ ಮೇಲೆ ನಿಮಗೆ ಏನನಿಸುತ್ತದೆ ಎಂದು ಒಂದು ಸಾಲು ಕಾಮೆಂಟ್ ಹಾಕಿ.

ಮೇಷ: ಕಿವಿಗೆ ಇಂಪಾದ- ಮನಸಿಗೆ ಮುದ ಎನಿಸುವ ಸಂಗೀತ ಕೇಳುತ್ತಾ ಮಲಗಿ

ಮೇಷ: ಕಿವಿಗೆ ಇಂಪಾದ- ಮನಸಿಗೆ ಮುದ ಎನಿಸುವ ಸಂಗೀತ ಕೇಳುತ್ತಾ ಮಲಗಿ

ಈ ರಾಶಿಯವರಿಗೆ ತಲೆಗೆ ಸಂಬಂಧಿಸಿದ ಅಥವಾ ಮಾನಸಿಕ ಸಮಸ್ಯೆಯೊಂದು ಸದಾ ಕಾಡುತ್ತಿರುತ್ತದೆ. ಈ ರಾಶಿಯ ಚಿಹ್ನೆಯಾದ ಆಡಿನಂತೆ ಇವರು ಸದಾ ರೇಸಿನ ಬಗ್ಗೆ, ಇತರರಿಗಿಂತ ಮುಂದಿರಬೇಕು ಅನ್ನೋ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಸಾಮರ್ಥ್ಯದ ವಿಚಾರದಲ್ಲಿ ಇವರ ಬಗ್ಗೆ ಬೆರಳು ಮಡಚುವಂತಿಲ್ಲ. ಆ ಕಾರಣಕ್ಕೇ ಇವರಿಗೆ ನಿದ್ದೆಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿರುತ್ತವೆ. ಈ ರಾಶಿಯವರಲ್ಲಿ ಬಹುತೇಕರು ನಿದ್ದೆ ಮಾಡುವುದೇ ನಾಲ್ಕೈದು ಗಂಟೆ ಮಾತ್ರ. ಏಕೆಂದರೆ ಇವರ ಬುದ್ಧಿ ಈ ಆಸಾಮಿಗಳ ಮಾತೇ ಕೇಳದೇ ಮುಂದೆ ಓಡುತ್ತಾ ಇರುತ್ತದೆ. ಆದ್ದರಿಂದ ಇವರು ತಂಪಾಗಿರುವ ಕೋಣೆಯಲ್ಲಿ, ಕಿವಿಗೆ ಇಂಪಾದ- ಮನಸಿಗೆ ಮುದ ಎನಿಸುವ ಸಂಗೀತ ಕೇಳುತ್ತಾ ನಿದ್ರಿಸುವುದಕ್ಕೆ ಪ್ರಯತ್ನಿಸಬೇಕು.

ವೃಷಭ: ಸುಂದರ ಅಥವಾ ಸ್ವಚ್ಛವಾದ ಪರಿಸರ ಇರಬೇಕು

ವೃಷಭ: ಸುಂದರ ಅಥವಾ ಸ್ವಚ್ಛವಾದ ಪರಿಸರ ಇರಬೇಕು

ನಿಮ್ಮ ರಾಶಿಯ ಅಧಿಪತಿ ಶುಕ್ರ. ಈ ಗ್ರಹವು ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಇವರು ಮಲಗುವ ಸ್ಥಳ ಸುಂದರವಾಗಿರಬೇಕು. ಒಂದು ವೇಳೆ ಹಾಗೆ ತುಂಬ ಸುಂದರವಾಗಿರಬೇಕು. ಹಾಗಿಲ್ಲದಿದ್ದರೂ ಅವರ ಅಭಿರುಚಿಗೆ ತಕ್ಕನಾದ, ಶುದ್ಧ- ಸ್ವಚ್ಛವಾದ ಪರಿಸರವಿದ್ದರೆ ಆರಾಮವಾದ ನಿದ್ದೆ ಬರುತ್ತದೆ. ಸ್ವಚ್ಛವಾದ ಬೆಡ್ ಶೀಟ್- ಹೊದಿಕೆ, ಮೆತ್ತನೆಯ ದಿಂಬು ಇವೆಲ್ಲ ಇದ್ದರೆ ರಾತ್ರಿ ಒಳ್ಳೆ ನಿದ್ದೆ ಬರುತ್ತದೆ. ಇನ್ನು ವೃಷಭ ಸ್ಥಿರ ರಾಶಿಯಾದ್ದರಿಂದ ಇವರು ಮಲಗುವ ಸ್ಥಳದಲ್ಲಿ ಬದಲಾವಣೆಗಳನ್ನು ಮಾಡಿದರೆ ನಿದ್ದೆ ಬರುವುದಿಲ್ಲ. ಮಲಗುವ ವೇಳೆಯಲ್ಲಿ ಇವರ ಜತೆಗೆ ವಾದ ಮಾಡುವುದೋ ಜಗಳ ಮಾಡುವುದೋ ಉಪಯೋಗವಿಲ್ಲ. ಅದು ಇವರ ತಲೆಗೆ ಹೋಗಲ್ಲ. ಮಲಗುವ ಮುನ್ನ ಇವರಿಗಿರುವ ಅಭ್ಯಾಸ ತಪ್ಪಿಹೋದರೂ ಚಡಪಡಿಕೆ ಪಡುತ್ತಾರೆ.

ಮಿಥುನ: ವಿಪರೀತ ಆಲೋಚನೆ ಬಿಟ್ಟು ಪ್ರಶಾಂತವಾಗಿರಬೇಕು

ಮಿಥುನ: ವಿಪರೀತ ಆಲೋಚನೆ ಬಿಟ್ಟು ಪ್ರಶಾಂತವಾಗಿರಬೇಕು

ಈ ರಾಶಿಯವರ ಮನಸು ಸದಾ ಪ್ರಕ್ಷುಬ್ಧವಾಗಿರುತ್ತದೆ. ಭಾವನಾತ್ಮಕ ವಿಚಾರಗಳು ಅಥವಾ ಕುತೂಹಲ ಇವರ ಜತೆಗೇ ಇರುತ್ತವೆ. ಎಲ್ಲ ರಾಶಿಗಳ ಪೈಕಿ ಹೇಳಿಬೇಕು ಅಂದರೆ, ಮಿಥುನ ಒಳ್ಳೆ ಕಮ್ಯುನಿಕೇಟರ್. ಎಲ್ಲದರ ಬಗ್ಗೆ ಹಾಗೂ ಎಲ್ಲರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮತ್ತು ಪ್ರೀತಿ ಸದಾ ಇರುತ್ತದೆ. ಈ ರೀತಿ ಎಲ್ಲದರ ಹಾಗೂ ಎಲ್ಲರ ಮಾಹಿತಿಯನ್ನು ಕಲೆ ಹಾಕಿಕೊಂಡು ಅದರ ಭಾರದಲ್ಲೇ ಒದ್ದಾಡುತ್ತಾ ಇರುತ್ತಾರೆ. ಒಂದೋ ವಿಪರೀತ ಮಾತನಾಡುತ್ತಾ ಇರುತ್ತಾರೆ ಅಥವಾ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವ ಬಗೆ ಗೊತ್ತಾಗದೆ ಅಗತ್ಯ ಪ್ರಮಾಣದ ನಿದ್ದೆ ಇಲ್ಲದೆ ಒದ್ದಾಡುತ್ತಾರೆ. ಕೆಲಸ-ಕಾರ್ಯ, ಇ ಮೇಲ್ ಇತರ ಆಲೋಚನೆ ಮಾಡದೆ ಪ್ರಶಾಂತವಾಗಿ ಮಲಗಿದರೆ ಉತ್ತಮ. ಜತೆಗೆ ಧ್ಯಾನವನ್ನು ರೂಢಿಸಿಕೊಂಡರೆ ಮತ್ತೂ ಒಳ್ಳೆಯದು.

ಕರ್ಕಾಟಕ: ವಿಪರೀತ ನಿದ್ದೆ ಅಥವಾ ನಿದ್ದೆ ಕೊರತೆ ಸಮಸ್ಯೆ

ಕರ್ಕಾಟಕ: ವಿಪರೀತ ನಿದ್ದೆ ಅಥವಾ ನಿದ್ದೆ ಕೊರತೆ ಸಮಸ್ಯೆ

ಈ ರಾಶಿಯವರನ್ನು ಕುಟುಂಬ ವತ್ಸಲ ಅಥವಾ ವತ್ಸಲೆ ಅಂತಲೇ ಗುರುತಿಸಲಾಗುತ್ತದೆ. ಯಾವುದೇ ಮನೆ/ಕುಟುಂಬಕ್ಕೆ ಇವರು ಹೆಮ್ಮೆಯ ಪ್ರತೀಕ. ತಮ್ಮ ಕುಟುಂಬ ನೆಮ್ಮದಿಯಿಂದ ಇರುವ ಸಲುವಾಗಿ ಎಂಥ ಸವಾಲನ್ನು ಹಾಗೂ ಜವಾಬ್ದಾರಿಯನ್ನು ಕೂಡ ಇವರು ತೆಗೆದುಕೊಳ್ಳಬಲ್ಲರು. ಆದರೆ ಜ್ಞಾನ ಬಂದ ಗಿರಾಕಿಗಳು ಅಂತಾರಲ್ಲ ಹಾಗೆ. ಜತೆಗೆ ಸೂಕ್ಷ್ಮ ಸ್ವಭಾವ. ಇವರ ರಾಶ್ಯಾಧಿಪತಿ ಚಂದ್ರ. ಇದು ನಿದ್ರೆಯನ್ನೇ ಪ್ರತಿನಿಧಿಸುತ್ತದೆ. ಇವರು ಒಂದೋ ವಿಪರೀತ ನಿದ್ದೆ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ ಅಥವಾ ನಿದ್ದೆ ಕೊರತೆಯಂಥ ನ್ಯೂನತೆಯೇ ಎದುರಿಸುತ್ತಾರೆ. ಈ ರಾಶಿಯವರು ಚೆನ್ನಾಗಿ ನಿದ್ದೆ ಮಾಡುವುದಕ್ಕೆ ಬೆಚ್ಚನೆ ಹೊದಿಕೆ ಇರಲೇಬೇಕು. ಹೆಚ್ಚು ಪ್ರಯಾಣ ಮಾಡುವ ಕರ್ಕಾಟಕ ರಾಶಿಯವರಿಗೆ ಒಳ್ಳೆ ನಿದ್ದೆ ಸಾಧ್ಯವಾಗುವುದೇ ಇಲ್ಲ. ಜತೆಗೆ ಕೆಟ್ಟ ಕನಸು ಬೀಳುತ್ತಿರುತ್ತದೆ.

ಸಿಂಹ: ಎಲ್ಲ ಚಿಂತೆ, ಗೊಂದಲ ಮರೆತು ನೆಮ್ಮದಿಯಿಂದ ನಿದ್ದೆ

ಸಿಂಹ: ಎಲ್ಲ ಚಿಂತೆ, ಗೊಂದಲ ಮರೆತು ನೆಮ್ಮದಿಯಿಂದ ನಿದ್ದೆ

ಇವರಿಗೆ ನಿದ್ದೆ ಅಂದರೆ ಬಲು ಪ್ರಿಯ. ಈ ರಾಶಿಯ ಅಧಿಪತಿ ರವಿ. ಸುತ್ತಲೂ ಇವರನ್ನು ಪ್ರೀತಿಸುವವರು ಇದ್ದಾಗ ಸಿಂಹ ಒಳ್ಳೆ ನಿದ್ದೆ ಮಾಡುತ್ತದೆ. ಕಾಡಿನ ರಾಜ ಸಿಂಹದಂತೆಯೇ ಇವರಿಗೆ ಆರಾಮದಾಯಕ ಆಗಿರಬೇಕು ಹಾಗೂ ವಿರಮಿಸುವುದಕ್ಕೆ ಅವರದೇ ಒಂದಿಷ್ಟು ಸ್ಥಳ ಬೇಕು. ನಿದ್ದೆಗೆ ಮುನ್ನ ಒಂದಿಷ್ಟು ಮುದ್ದಾಡುವಂತಹವರಿದ್ದರೆ ಸಿಂಹ ರಾಶಿಯವರಿಗೂ ಮತ್ತೂ ಇಷ್ಟವಾಗುತ್ತದೆ. ನಿದ್ದೆ ಮಾಡುವಾಗ ಮನಸಿನ ಎಲ್ಲ ಗೊಂದಲ, ಚಿಂತೆಗಳನ್ನೆಲ್ಲ ಮರೆತು ನೆಮ್ಮದಿಯಾಗಿರುತ್ತಾರೆ. ಸಿಂಹ ರಾಶಿಯವರು ನಿದ್ದೆ ಮಾಡುವುದನ್ನು ನೋಡಿದರೆ ಎಂಥವರೂ ಹೊಟ್ಟೆ ಉರಿದುಕೊಳ್ಳುತ್ತಾರೆ. ಏಕೆಂದರೆ ಮನಸಿನ ಯಾವುದೇ ಚಿಂತೆ ಮಾಡದೆ, ಪ್ರಶಾಂತವಾಗಿ ನಿದ್ರಿಸುವ ರಾಶಿ ಇದು.

ಕನ್ಯಾ: ವೇಳಾಪಟ್ಟಿ ಹಾಕಿಕೊಂಡು ಕೆಲಸ ಮಾಡಿದರೆ ಒಳ್ಳೆ ನಿದ್ದೆ

ಕನ್ಯಾ: ವೇಳಾಪಟ್ಟಿ ಹಾಕಿಕೊಂಡು ಕೆಲಸ ಮಾಡಿದರೆ ಒಳ್ಳೆ ನಿದ್ದೆ

ಈ ರಾಶಿಯವರಿಗೆ ಎಲ್ಲವೂ ಹೀಗಂದರೆ ಹೀಗೇ ಇರಬೇಕು. ಶಿಸ್ತಿನ ಆಸಾಮಿಗಳು ಹಾಗೂ ಬದಲಾವಣೆ ಇಷ್ಟಪಡದ ಮಂದಿ. ಏಕೆಂದರೆ ಇವರು ವಾಸವಿರುವ ಮನೆಯಲ್ಲೇ ಇಟ್ಟ ವಸ್ತುಗಳೆಲ್ಲ ಇಟ್ಟಲ್ಲಿಯೇ ವರ್ಷಗಟ್ಟಲೆ ಹಾಗೇ ಇರುತ್ತದೆ. ಅದರರ್ಥ ತುಂಬ ಚೆನ್ನಾಗಿ ಯೋಜಿಸಿ, ಆಲೋಚಿಸಿ ನಡೆದುಕೊಳ್ಳುತ್ತಾರೆ. ಇನ್ನು ಇವರ ಬುದ್ಧಿಯನ್ನು ನಿರ್ದೇಶಿಸುವುದು ಬುಧ. ಆ ಕಾರಣಕ್ಕೆ ಒಂದೇ ಸಲಕ್ಕೆ ನಾನಾ ವಿಚಾರಗಳನ್ನು ಆಲೋಚಿಸುತ್ತಾರೆ. ಚಿಂತೆ ಮಾಡುತ್ತಾರೆ. ಮನೆಯ ಸಮಾಚಾರ, ಉದ್ಯೋಗ ಸ್ಥಳದ ವಿಚಾರ ಅದೂ ಇದು ಹೀಗೆ ನಾನಾ ಬಗೆಯ ಚಿಂತೆಗಳಿಂದ ಮನಸು ಸದಾ ಹೌಸ್ ಫುಲ್ ಆಗಿರುತ್ತದೆ. ಒಂದು ವೇಳಾಪಟ್ಟಿ ಹಾಕಿಕೊಂಡು, ಅದಕ್ಕೆ ತಕ್ಕಂತೆ ಕೆಲಸ ಮಾಡಿದರೆ ಮನಸು ಪ್ರಶಾಂತವಾಗಿ, ಒಳ್ಳೆ ನಿದ್ದೆ ಸಾಧ್ಯವಾಗುತ್ತದೆ.

ತುಲಾ: ನಿದ್ರೆ ಸಮಯದಲ್ಲೂ ಸಮತೋಲನ ಬೇಕು

ತುಲಾ: ನಿದ್ರೆ ಸಮಯದಲ್ಲೂ ಸಮತೋಲನ ಬೇಕು

ಈ ರಾಶಿಯವರಿಗೆ ಎಲ್ಲದರಲ್ಲೂ ಸಮತೋಲನ ಇರಬೇಕು. ತಮ್ಮ ಸುತ್ತಲೂ ಸೌಂದರ್ಯ ಮತ್ತು ಪ್ರಶಾಂತವಾಗಿರಬೇಕು. ಸ್ವಲ್ಪ ಅಧ್ಯಾತ್ಮ, ಸ್ವಲ್ಪ ವಾಸ್ತವ, ಒಂದು ಮುಟಿಗೆ ಸಾಹಸ ಹಾಗೂ ಅದೇ ರೀತಿ ಹೋಮ್ಲಿ ಆಗಿರುವ ಸ್ವಭಾವದವರು ಇವರು. ವಾಸವಿರುವ ಮನೆ ಈ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಈ ಎಲ್ಲವೂ ಇದ್ದರೂ ತಮ್ಮ ಬಳಿ ಇರುವುದರ ಬಗ್ಗೆ ಹಾಗೂ ಧೋರಣೆ ಕುರಿತು ಪ್ರೀತಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲದರ ಬಗ್ಗೆ ಕೂಡ ಇವರು ಬಹಳ ಬೇಗ ಬೇಸರ ಮೂಡಿಸಿಕೊಳ್ಳುತ್ತಾರೆ. ಅವರ ಚಿಹ್ನೆಯಾದ ತಕ್ಕಡಿಯಂತೆಯೇ ಅವರು ಮಲಗುವ ಸಮಯದ ವಿಚಾರದಲ್ಲೂ ಸಮತೋಲನ ಇರಬೇಕು.

ವೃಶ್ಚಿಕ: ನಿದ್ದೆಯಿಲ್ಲದ ಗೂಬೆಯ ಜೀವನ ಕ್ರಮ

ವೃಶ್ಚಿಕ: ನಿದ್ದೆಯಿಲ್ಲದ ಗೂಬೆಯ ಜೀವನ ಕ್ರಮ

ಈ ರಾಶಿಯವರು ಹಾಗೆಯೇ. ಯಾರೂ ತುಳಿಯದ ಹಾದಿಯಲ್ಲಿ ಸಾಗುವ ಧೈರ್ಯವನ್ನು ಮಾಡುತ್ತಾರೆ. ಏಕೆಂದರೆ ಇವರ ರಾಶ್ಯಾಧಿಪತಿ ಕುಜ. ಆದ್ದರಿಂದ ತುಂಬ ಆಳವಾದ, ಸುಪ್ತವಾದ ಆಲೋಚನಾ ಕ್ರಮ ಇವರದು. ಆದ್ದರಿಂದಲೇ ನಿದ್ದೆಯಿಲ್ಲದೇ ರಾತ್ರಿ ಕಳೆಯುವ ಗೂಬೆಯ ಜೀವನ ಕ್ರಮವನ್ನು ನೆನಪಿಸುತ್ತಾರೆ. ಈ ರಾಶಿಯವರಿಗೆ ಯಾವುದೂ ಮತ್ತು ಎಲ್ಲವೂ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ರೀತಿಯ ರಾತ್ರಿ ಮನಸ್ಥಿತಿಯಿಂದಾಗಿ ಗೀಳು ಸ್ವಭಾವವಾಗುತ್ತದೆ. ಈ ಅಭ್ಯಾಸ ಹೋಗಬೇಕು ಹಾಗೂ ಒಳ್ಳೆ ನಿದ್ದೆ ಬರಬೇಕು ಅಂದರೆ ಕಡ್ಡಾಯವಾಗಿ ಧ್ಯಾನವನ್ನು ರೂಢಿಸಿಕೊಳ್ಳಬೇಕು.

ಧನು: ಹಗಲುಗನಸು ಕಾಣುವ ಆಶಾವಾದಿಗಳು

ಧನು: ಹಗಲುಗನಸು ಕಾಣುವ ಆಶಾವಾದಿಗಳು

ಸದಾ ಆಶಾವಾದಿಗಳಾಗಿ ಚಿಂತಿಸುವ ಮತ್ತು ತತ್ ಕ್ಷಣಕ್ಕೆ ಪ್ರತಿಕ್ರಿಯಿಸುವ ಆಸಾಮಿಗಳು ಇವರು. ಪ್ರಯಾಣ ಮಾಡುವ ಬಗ್ಗೆ ಕನಸು ಕಾಣುವುದನ್ನು ಪ್ರೀತಿಸುತ್ತಾರೆ ಧನುಸ್ಸು ರಾಶಿಯವರು. ಸ್ವಲ್ಪ ಸಮಯ ವಿಶ್ರಾಂತಿ ಸಿಕ್ಕರೂ ಸಾಕು ಅಥವಾ ಅದು ಸಿಗದಿದ್ದರೂ ಪರವಾಗಿಲ್ಲ ಅಂತಲೇ ಯೋಚಿಸುತ್ತಾರೆ. ಈ ರೀತಿ ಆಲೋಚನೆ ಮಾಡುವುದರಿಂದಲೇ ಇವರ ದೇಹ ಹಾಗೂ ಮನಸು ಅದಕ್ಕೆ ತಕ್ಕಂತೆ ಬೆಲೆ ತೆರಬೇಕಾಗುತ್ತದೆ. ಆದರೂ ಇಂಥ ವಿಚಾರಗಳೆಲ್ಲ ಪ್ರಯಾಣದ ಆಸಕ್ತಿ ಹಾಗೂ ಪ್ರೀತಿಯನ್ನು ತಡೆಯಲಾರವು. ಕೆಲವು ಹಾಗೂ ದೂರದ ಮಧ್ಯೆ ವ್ಯತ್ಯಾಸವನ್ನು ತಿಳಿದು, ಅದಕ್ಕೆ ತಕ್ಕಂತೆ ತಮ್ಮ ನಿದ್ರೆಯ ಸಮಯದ ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು.

ಮಕರ: ವಿಶ್ರಾಂತಿಗೆ ಅಗತ್ಯ ಇರುವಷ್ಟು ಮಾತ್ರ ನಿದ್ದೆ

ಮಕರ: ವಿಶ್ರಾಂತಿಗೆ ಅಗತ್ಯ ಇರುವಷ್ಟು ಮಾತ್ರ ನಿದ್ದೆ

ಎಲ್ಲ ವಿಚಾರದಲ್ಲೂ ಪಕ್ಕಾ ಪ್ರಾಕ್ಟಿಕಲ್ ಆಗಿ ಯೋಚಿಸುವ ಮಕರ ರಾಶಿಯವರು ನಿದ್ದೆ ವಿಚಾರದಲ್ಲೂ ಹಾಗೇ. ವಿಶ್ರಾಂತಿಗೆ ಹಾಗೂ ದೇಹಾಯಾಸ ತೀರಲು ಎಷ್ಟು ಅಗತ್ಯವೋ ಅಷ್ಟು ಮಾತ್ರ ನಿದ್ದೆ ಮಾಡುತ್ತಾರೆ. ಈ ರಾಶಿಯವರ ಪೈಕಿ ಹಲವರು ಹಾಗಾದರೂ ಯೋಚಿಸುತ್ತಾರಲ್ಲಾ ಎಂದು ಸಂತಸ ಪಡಬೇಕು. ನಿದ್ದೆ ಇವರಿಗೆ ಅಗತ್ಯದಂತೆ ಮತ್ತು ಯಾವುದೇ ಅಡೆತಡೆ ಇಲ್ಲದೆ ಅದನ್ನು ಅನುಭವಿಸುತ್ತಾರೆ. ಆದರೆ ಕೆಲಸ- ಉದ್ಯೋಗ ಎಂದು ವಿಪರೀತ ತಲೆ ಕೆಡಿಸಿಕೊಳ್ಳುವ ಇವರಿಗೆ ಅಂದುಕೊಂಡ ಪ್ರಮಾಣದಲ್ಲಿ ನಿದ್ದೆ ಆಗುವುದಿಲ್ಲ. ದೀರ್ಘಾವಧಿಯಲ್ಲಿ ಇದರಿಂದ ಸಮಸ್ಯೆಯಾಗುತ್ತದೆ.

ಕುಂಭ: ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಸದಾ ಯೋಚನೆ

ಕುಂಭ: ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಸದಾ ಯೋಚನೆ

ಈ ರಾಶಿಯವರಿಗೆ ಭವಿಷ್ಯದ ಬಗ್ಗೆ ಚಿಂತನೆ ಜಾಸ್ತಿ. ಜತೆಗೆ ಸ್ಥಿರತೆಯನ್ನು ಬಯಸುತ್ತಾರೆ. ಇದರರ್ಥ ಇವರ ಮನಸ್ಸು ವರ್ತಮಾನ ಹಾಗೂ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿರುತ್ತದೆ. ಹನ್ನೆರಡು ರಾಶಿಗಳ ಪೈಕಿ ಹೆಚ್ಚು ನಿದ್ದೆಯ ಅಗತ್ಯ ಇರುವುದು ಕುಂಭ ರಾಶಿಯವರಿಗೇ. ಏನೇ ಹೇಳಿಕೊಂಡರೂ ಭವಿಷ್ಯದ ಬಗ್ಗೆ ಬಹಳ ಚಿಂತೆ ಮಾಡುವುದಂತೂ ದಿಟ. ಹಗಲು ನಿದ್ದೆಗೆ ಕೂಡ ಬಹಳ ಖ್ಯಾತರು ಇವರು. ಹೊಸ ಆನ್ವೇಷಣೆ ಬಗ್ಗೆ ಆಲೋಚನೆ, ಮತ್ತೊಬ್ಬರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಚಿಂತೆ ಮಾಡುತ್ತಲೇ ಇರುತ್ತಾರೆ. ಇವರು ಮಲಗುವ ಸಮಯದಲ್ಲಿ ಗ್ಯಾಜೆಟ್ ಗಳಿಂದ ದೂರ ಇರಬೇಕು. ಇವರ ಮನಸ್ಸಿಗೆ ನೆಮ್ಮದಿ ನೀಡಲು ಯೋಗವು ಅತ್ಯುತ್ತಮ ಮಾರ್ಗ.

ಮೀನ: ಕನಸಿನ ವಿಶ್ಲೇಷಣೆ ಮಾಡಿದರೆ ಭವಿಷ್ಯದ ಸುಳಿವು

ಮೀನ: ಕನಸಿನ ವಿಶ್ಲೇಷಣೆ ಮಾಡಿದರೆ ಭವಿಷ್ಯದ ಸುಳಿವು

ಈ ರಾಶಿಯವರು ವಿಚಿತ್ರ ಜೀವಿಗಳು ಹಾಗೂ ಹಗಲು ಕನಸು ಕಾಣಲು ಬಯಸುವಂಥವರು. ಕನಸು ಕಾಣುವುದೇ ಇವರ ಪಾಲಿಗೆ ಪರಿಹಾರದಂತೆ. ಲೌಕಿಕ ಜಗತ್ತಿನ ಎಲ್ಲ ಗೌಜು- ಗದ್ದಲದಿಂದ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಲು ಈ ರಾಶಿಯವರು ಕಂಡುಕೊಳ್ಳುವ ಮಾರ್ಗವಿದು. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ರಾಶಿಯವರು. ಇವರಿಗೆ ಬೀಳುವ ಕನಸುಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡಿ, ಅದರ ಅನ್ವಯ ನಡೆದುಕೊಂಡರೆ ಅನುಕೂಲ ಆಗುತ್ತದೆ. ನಿದ್ದೆ ಇವರಿಗೆ ಬಹಳ ಮುಖ್ಯ. ಮನಸ್ಸು ಪ್ರಫುಲ್ಲವಾಗಿರಲು ಹಾಗೂ ಮತ್ತೆ ಹೊಸ ಉತ್ಸಾಹ ಮೂಡುವುದಕ್ಕೆ ಒಳ್ಳೆ ನಿದ್ದೆ ಆಗುವುದು ಕಡ್ಡಾಯ ಇವರಿಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Our zodiac signs decide lot of things. Even our preferences decided by that. It is not with one thing, this extends to our sleep patterns too. How zodiac sign affects sleeping pattern?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more