Guru Margi 2025: ಮಿಥುನ ರಾಶಿಯಲ್ಲಿ ಗುರು ನೇರ- ಈ ರಾಶಿಗೆ ಸಂಪತ್ತು ದುಪ್ಪಟ್ಟು!
ನವಗ್ರಹಗಳಲ್ಲಿ ಗುರುವಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಇದು ಬೆಳವಣಿಗೆ, ಸಂಪತ್ತು, ಶಿಕ್ಷಣ, ಕೆಲಸ, ದಾನ ಮತ್ತು ಪುಣ್ಯ ಇತ್ಯಾದಿಗಳನ್ನು ಆಳುವ ಗ್ರಹವಾಗಿದೆ. ಅಂದಹಾಗೆ ಗುರು 12 ವರ್ಷಗಳ ನಂತರ ನೇರವಾಗಿ ಸಂಚಾರ ಮಾಡುತ್ತಿದೆ. ಹಾಗಾದರೆ ಗುರು ನೇರ ಸಂಚಾರ ಮಾಡುವ ದಿನಾಂಕ ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿಯೋಣ.
2025 ಮೇ 14ರಂದು ಗುರು ವೃಷಭ ರಾಶಿಯಿಂದ ಬುಧದ ಮಾಲೀಕತ್ವದ ರಾಶಿಯಾದ ಮಿಥುನಕ್ಕೆ ಸಾಗುತ್ತದೆ. ಈ ವೇಳೆ ಗುರು ನೇರವಾಗಿ ಸಂಚಾರ ಮಾಡುತ್ತದೆ. ಸುಮಾರು 12 ವರ್ಷಗಳ ನಂತರ ಈ ಬದಲಾವಣೆ ಆಗಲಿದೆ. ಇದರಿಂದ 5 ರಾಶಿಗಳು ಪ್ರಯೋಜನ ಪಡೆಯಲಿವೆ. ಜಾತಕದಲ್ಲಿ ಗುರು ದುರ್ಬಲವಾಗಿರುವವರು ಗುರುವಾರದಂದು ಪೂಜೆ ಮಾಡುವುದಲ್ಲದೆ, ಹಳದಿ ಬಣ್ಣದ ಬಟ್ಟೆ ಧರಿಸಿ ಗುರು ಹಿರಿಯರನ್ನು ಗೌರವಿಸುವ ಮೂಲಕ ಗುರುವಿನ ಅನುಗ್ರಹವನ್ನು ಪಡೆಯಬಹುದು.
ವಿಶೇಷವಾಗಿ ಬಿಳಿ ಗಡ್ಡ ಹೊಂದಿರುವವರನ್ನು ಎಂದಿಗೂ ಅವಮಾನಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ವಯಸ್ಸಾದವರು, ನಿರ್ಗತಿಕರು, ಅಂಗವಿಕಲರು ಹಾಗೂ ಬುದ್ಧಿಹೀನರನ್ನು ಅವಮಾನಿಸುವುದು ಗುರು ಗ್ರಹವನ್ನು ಅವಮಾನಿಸಿದಂತೆ. ಅಂಥವರು ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಇನ್ನೂ ಗುರು ಮಿಥುನ ರಾಶಿಯಲ್ಲಿ ನೇರ ಸಂಚಾರ ಮಾಡುವುದರಿಂದ ಅನೇಕ ರಾಶಿಗಳಿಗೆ ಉತ್ತಮ ಫಲವನ್ನು ನೀಡಲಿದ್ದಾರೆ. ಹಾಗಾದರೆ ಆ ರಾಶಿಗಳ ಬಗ್ಗೆ ಈ ತಿಳಿಯೋಣ.

ಮೇಷ ರಾಶಿ
ದೇವಗುರು ಬೃಹಸ್ಪತಿ ಪ್ರತ್ಯಕ್ಷವಾಗಿರುವುದು ಮೇಷ ರಾಶಿಯವರಿಗೆ ಲಾಭದಾಯಕವಾಗಿದೆ. ವ್ಯಾಪಾರದಲ್ಲಿ ಪ್ರಗತಿಯೊಂದಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಕೆಲಸಗಳು ಶೀಘ್ರ ಪೂರ್ಣಗೊಳ್ಳಲಿದೆ. ಹಿರಿಯರನ್ನು ಗೌರವಿಸಿದರೆ ಮಾತ್ರ ನೀವು ಯಶಸ್ಸನ್ನು ಸಾಧಿಸುವಿರಿ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಮಾಡಿದ ಕೆಲಸವು ನಿಮಗೆ ಯಶಸ್ವಿಯಾಗಲು ಸಹಾಯ ಮಾಡುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಜನರು 2025 ರಲ್ಲಿ ಗುರುವಿನ ಸಂಚಾರದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸಂಪತ್ತು ಅಧಿಕವಾಗುವ ಜೊತೆಗೆ ವ್ಯಾಪಾರವೂ ಹೆಚ್ಚುತ್ತದೆ. ಪ್ರೇಮವಿವಾಹಕ್ಕೆ ಅವಕಾಶವಿರುತ್ತದೆ. ಹೊಸ ಜನರ ಭೇಟಿಯಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಕಟಕ ರಾಶಿ
ಗುರುವಿನ ಸಂಚಾರ ಕರ್ಕ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಆದಾಯದಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಎಚ್ಚರಿಕೆಯಿಂದ ಯೋಚಿಸಿದ ನಂತರವೇ ನೀವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ವೃಶ್ಚಿಕ ರಾಶಿ
ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಈ ಸಮಯ ನಿಮಗೆ ಮಿಶ್ರವಾಗಿರುತ್ತದೆ. ನಿಮ್ಮ ಮನಸ್ಸು ಚಿಂತೆ ಮುಕ್ತವಾಗಿರಲಿದ್ದು ಸಂತೋಷದಿಂದ ಕೂಡಿರುತ್ತದೆ. ಹಿರಿಯರನ್ನು ಗೌರವಿಸುವುದರಿಂದ ಅನುಕೂಲವಾಗುತ್ತದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳಿಗೂ ಇದು ಉತ್ತಮ ಸಮಯವಾಗಿರುತ್ತದೆ. ಗುರುವಿನ ಕೃಪೆಯಿಂದ ನೆಮ್ಮದಿ ಸಿಗಲಿದೆ.

ಮೀನ ರಾಶಿ
ಮೀನ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಯಶಸ್ಸಿನತ್ತ ಸಾಗಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿದೇಶಕ್ಕೆ ಹೋಗುವ ಸಂಭವವಿದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಲಿದೆ. ಸಮಾಜಸೇವೆ ಮಾಡುವವರಿಗೆ ಅನುಕೂಲವಾಗುತ್ತದೆ. ಪ್ರಗತಿಯ ಹೊಸ ಮೆಟ್ಟಿಲುಗಳನ್ನು ಏರುವಿರಿ.












Click it and Unblock the Notifications