Budha Uday 2024: ಡಿ.11ರಂದು ಬುಧ ಉದಯ- ಈ 3 ರಾಶಿಗಳ ಭವಿಷ್ಯ ಬದಲು- ವೇತನ ಹೆಚ್ಚು, ಒತ್ತಡ ಕಡಿಮೆ
ಗ್ರಹಗಳ ಸಂಚಾರದ ಮೂಲಕ ಹನ್ನೆರಡು ರಾಶಿಗಳ ಮುಂದಿನ ಭವಿಷ್ಯ ಹೇಗಿರಲಿದೆ ಎಂದು ತಿಳಿಯಬಹುದು. ಕೆಲ ಗ್ರಹಗಳು ನಿಧಾನವಾಗಿ ರಾಶಿಯನ್ನು ಬದಲಾಯಿಸುತ್ತವೆ. ಇನ್ನೂ ಕೆಲವು ಗ್ರಹಗಳು ರಾಶಿಯನ್ನು ವೇಗವಾಗಿ ಬದಲಾಯಿಸುತ್ತವೆ. ಇದರ ಪ್ರಭಾವ ಹನ್ನೆರಡು ರಾಶಿಗಳ ಮೇಲೆ ಕಂಡು ಬರಲಿದೆ.
ಅಂದಹಾಗೆ ಗ್ರಹಗಳ ರಾಜಕುಮಾರ ಬುಧನು ಡಿಸೆಂಬರ್ 11ರಂದು ರಾತ್ರಿ 07:44ಕ್ಕೆ ಉದಯಿಸುತ್ತಾನೆ. ಪ್ರಸ್ತುತ ಬುಧ ಗ್ರಹ ವೃಶ್ಚಿಕ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದೆ. ಬುಧದ ಉದಯದಿಂದಾಗಿ 12 ರಾಶಿಗಳಲ್ಲಿ 3 ರಾಶಿಗಳು ಲಾಭ ಪಡೆಯಲಿವೆ. ಇದರ ಶುಭ ಪರಿಣಾಮಗಳು 3 ರಾಶಿಗಳ ಮೇಲೆ ಗೋಚರಿಸುತ್ತವೆ. ಹಾಗಾದರೆ ಯಾವ 3 ರಾಶಿಗಳ ಮೇಲೆ ಬುಧ ಉದಯದ ಧನಾತ್ಮಕ ಪರಿಣಾಮವಾಗಲಿದೆ ಎಂದು ಈಗ ತಿಳಿಯೋಣ.

ತುಲಾ ರಾಶಿ
ಬುದ್ಧ ಉದಯ ತುಲಾ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದ್ದಾನೆ. ತುಲಾ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಂಡು ಜೀವನದಲ್ಲಿ ಹಣಕಾಸಿನ ತೊಂದರೆ ದೂರವಾಗಲಿದೆ. ಅಷ್ಟೇ ಅಲ್ಲ ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ. ವೇತನ ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ.
ಬಡ್ತಿಗೆ ಅವಕಾಶಗಳಿವೆ. ಸ್ಥಳೀಯರಿಗೆ ಸಮಯ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆದರೆ ಈ ಸಮಯದಲ್ಲಿ ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಸಂಬಳಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಈ ಸಮಯದಲ್ಲಿ ನೀವು ಕೇಳ ಬಹುದು.

ಕುಂಭ ರಾಶಿ
ಬುದ್ಧ ಉದಯ ಕುಂಭ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭವನ್ನು ತಂದು ಕೊಡಲಿದೆ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಲಸದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ವ್ಯಾಪಾರವನ್ನು ವಿಸ್ತರಿಸಲು ಹೊಸ ಅವಕಾಶಗಳು ಸಿಗಲಿವೆ. ಪ್ರೀತಿಯ ಜೀವನ ಮೊದಲಿಗಿಂತ ಅದ್ಭುತವಾಗಿರುತ್ತದೆ. ಅಲ್ಲದೆ ಕುಂಭ ರಾಶಿಯವರಿಗೆ ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಾಗಲಿದ್ದು ಗೌರವ ಖ್ಯಾತಿ ದ್ವಿಗುಣವಾಗಲಿದೆ.
ಕುಂಭ ರಾಶಿಯವರಿಗೆ ಸಾಕಷ್ಟು ಹೊಸ ಉದ್ಯೋಗದ ಅವಕಾಶಗಳು ಸಿಗಲಿದೆ. ಎಂದಿಗಿಂತ ನೀವು ಹೆಚ್ಚು ಆಸಕ್ತಿದಾಯಕವಾಗಿ ಕೆಲಸ ಮಾಡುವಿರಿ. ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಎಲ್ಲಾ ಕಾರ್ಯಗಳಲ್ಲಿ ಉತ್ಸಾಹ ಹೆಚ್ಚಾಗಲಿದೆ. ನಿಮ್ಮ ಜೀವನದ ಎಲ್ಲಾ ಆಸೆಗಳು ಈಡೇರುತ್ತವೆ.

ಮೀನ ರಾಶಿ
ಬುಧದ ಉದಯ ಮೀನ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತಂದು ಕೊಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿ ಕಂಡು ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿನ ಚಿಂತೆಗಳು, ತೊಂದರೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ. ಸಂಪತ್ತು ವೃದ್ಧಿಯಾಗಿ ಹೂಡಿಕೆ ಮಾಡಲು ಮುಂದಾಗುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ವೈವಾಹಿಕ ಜೀವನ ಸಂತೋಷದಿಂದ ಇರಲಿದೆ.












Click it and Unblock the Notifications