Shasha Raja Yoga 2024: ದೀಪಾವಳಿ ದಿನದಂದು ಶಶ ರಾಜಯೋಗ: ಈ ರಾಶಿಗೆ ಹಣದಿಂದ ಹಬ್ಬ!
ಗ್ರಹಗಳು ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಯನ್ನು ಬದಲಾಯಿಸುವಾಗ ಗ್ರಹಗಳ ಪರಿಣಾಮ ರಾಶಿಗಳ ಮೇಲೆ ಕೆಟ್ಟದಾಗಿರಬಹುದು ಅಥವಾ ಉತ್ತಮವಾಗಿಯೋ ಇರಬಹುದು. ವಿಶೇಷವಾಗಿ ಶನಿ ಗ್ರಹದ ಸಂಚಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಶನಿ ದೇವ ರಾಶಿಗಳಿಗೆ ಉತ್ತಮ ಫಲ ನೀಡುತ್ತಾನೆ.
ಶನಿ 2 1/2 ವರ್ಷಗಳ ಕಾಲ ಒಂದು ರಾಶಿಯಲ್ಲಿ ಸಂಚರಿಸುತ್ತದೆ. ಇದು ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದೆ. ಶನಿಯು ಪ್ರಸ್ತುತ ತನ್ನ ಮೂಲತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ದೀಪಾವಳಿಯ ದಿನದಂದು 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಶಶ ರಾಜಯೋಗವನ್ನು ಸೃಷ್ಟಿಸಲಿದೆ. ಹಾಗಾದರೆ ಯಾವ ರಾಶಿಯವರಿಗೆ ದೀಪಾವಳಿಯಂದು ಶನಿಯಿಂದ ರೂಪಗೊಳ್ಳುವ ಶಶ ರಾಜಯೋಗ ಶುಭ ತರಲಿದೆ ಎಂದು ಈಗ ತಿಳಿಯೋಣ.

ಮಿಥುನ ರಾಶಿ
ಶಶ ರಾಜಯೋಗ ಮಿಥುನ ರಾಶಿಯವರಿಗೆ ಮಂಗಳಕರ ಫಲ ನೀಡಲಿದೆ. ದೀಪಾವಳಿಯ ಸಮಯದಲ್ಲಿ ಮಿಥುನ ರಾಶಿಯವರ ಜೀವನ ಬೆಳಗಲಿದೆ. ಅಂದುಕೊಂಡಂತೆ ಹಣ ಕೈ ಸೇರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಎಲ್ಲಾ ಕೆಲಸಗಳು ಸುಲಭವಾಗಿ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳಲಿವೆ. ಇಂದು ನೀವು ಖರೀದಿಸುವ ಯಾವುದೇ ಹೊಸ ವಸ್ತು ಮುಂಬರುವ ವರ್ಷ ದುಪ್ಪಟ್ಟಾಗಲಿದೆ.
ಶನಿ ದೇವನ ಕೃಪೆಯಿಂದ ಹಬ್ಬದ ವಾತಾವರಣ ಮನೆಯಲ್ಲಿ ಸುಗಮವಾಗಿರಲಿದೆ. ಉದ್ಯೋಗಿಗಳಿಗೆ ಬಡ್ತಿ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ. ಆರೋಗ್ಯ ಸುಧಾರಿಸಲಿದೆ.

ಕನ್ಯಾ ರಾಶಿ
ಶಶ ರಾಜಯೋಗ ಕನ್ಯಾ ರಾಶಿಯವರಿಗೆ ದೀಪಾವಳಿಗೆ ಸಾಕಷ್ಟು ಶುಭ ಫಲವನ್ನು ನೀಡಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಕೆಲಸ ಬದಲಾಯಿಸುವ ಉದ್ದೇಶವಿದ್ದರೆ ಅದು ನಿಜವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ಆರೋಗ್ಯ ಸುಧಾರಿಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಕುಂಭ ರಾಶಿ
ಶಶ ರಾಜಯೋಗ ಕುಂಭ ರಾಶಿಯವರಿಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಹಬ್ಬದ ಕಳೆ ಹೆಚ್ಚಾಗಲಿದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಉದ್ಯೋಗಿಗಳು ಹಿಂದೆಂದು ಕೇಳಿ ಕಂಡರಿಯದ ಉಡುಗೊರೆ ಕಚೇರಿಯಿಂದ ಪಡೆಯುತ್ತಾರೆ. ನಿಮ್ಮ ಜೀವನ ಸುಖಕರವಾಗಿರುತ್ತದೆ. ಎಲ್ಲೋ ಸಿಕ್ಕಿಕೊಂಡ ಹಣ ಕೈ ಸೇರಲಿದೆ. ಪ್ರಗತಿಗೆ ಅವಕಾಶಗಳು ಇವೆ.
ಮಾನಸಿಕವಾಗಿ ಸದೃಢರಾಗುವಿರಿ. ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುವಿರಿ. ನಿಮ್ಮ ಸ್ನೇಹಿತರ ಬಳಗ ದೊಡ್ಡದಾಗಲಿದೆ. ಇದರಿಂದ ಹೆಚ್ಚು ಅನುಕೂಲವಾಗಲಿದೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications