ಜ್ಯೋತಿಷ್ಯ ಭವಿಷ್ಯ: ಆಗಸ್ಟ್ 15-26ರವರೆಗೆ ಈ ಮೂರು ರಾಶಿಯವರು ಎಚ್ಚರ.. ಎಚ್ಚರ

ಕೊರೊನಾ ವಿಚಾರದಲ್ಲಿ ಈ ಹಿಂದೆ ಹಲವು ಬಾರಿ ಸ್ಪಷ್ಟ ಭವಿಷ್ಯವನ್ನು ನುಡಿದಿದ್ದ ಉತ್ತರ ಭಾರತ ಮೂಲದ ಜ್ಯೋತಿಷಿ ಕೆ.ಎಂ.ಸಿನ್ಹಾ, ಮತ್ತೆ ಜ್ಯೋತಿಷ್ಯ ನುಡಿದಿದ್ದಾರೆ. ಪ್ರಮುಖವಾಗಿ, ಮೂರು ರಾಶಿಯವರು ಮುಂದಿನ ಹತ್ತು ದಿನಗಳಲ್ಲಿ ತೀರಾ ಜಾಗರೂಕತೆಯಿಂದ ಇರಬೇಕೆಂದು ಹೇಳಿದ್ದಾರೆ.

ರಾಶಿಗಳ ಗ್ರಹಗತಿಯಿಂದಾಗಿ ಈ ಬದಲಾವಣೆಯಾಗಲಿದ್ದು, ಆಗಸ್ಟ್ 26ರ ವರೆಗೆ ಸಾಧ್ಯವಾದಷ್ಟು ಧಾರ್ಮಿಕದತ್ತ ಒಲವು ತೋರುವಂತೆ ಸಲಹೆಯನ್ನು ನೀಡಿದ್ದಾರೆ. ಈ ಹಿಂದೆ, ಕೋವಿಡ್ ವಿಚಾರದಲ್ಲೂ ಸಿನ್ಹಾ, ಜೂನ್ ಮೂರರ ನಂತರ ಕೊರೊನಾ ಕೇಸುಗಳು ಕಮ್ಮಿಯಾಗಲಿವೆ ಎನ್ನುವ ಭವಿಷ್ಯವನ್ನು ನುಡಿದಿದ್ದರು.

ರಾಜಕೀಯ ವಿಚಾರದಲ್ಲೂ ಭವಿಷ್ಯ ನುಡಿದಿದ್ದ ಸಿನ್ಹಾ, ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯ ಬಗೆಗಿನ ಅವರ ಜ್ಯೋತಿಷ್ಯ ಬಹುತೇಕ ನಿಜವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಸೋಲಾಗಲಿದೆ ಎನ್ನುವ ಭವಿಷ್ಯವನ್ನೂ ಇವರು ನುಡಿದಿದ್ದರು.

"ಮೇ 6ರಿಂದ 26ರ ಅವಧಿಯಲ್ಲಿ ಕೊರೊನಾ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಎದುರಾಗಲಿವೆ. ಮಳೆ ಹೆಚ್ಚಾಗುವ ಸಾಧ್ಯತೆಯಿದೆ, ಆದರೆ ಈ ಅತಿವೃಷ್ಟಿ ದೇಶದ ಎಲ್ಲಾ ಭಾಗದಲ್ಲೂ ಆಗುವುದಿಲ್ಲ. ಜಲಾಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಬಹುದು"ಎಂದು ಸಿನ್ಹಾ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ. ಆಗಸ್ಟ್ 15-26ರವರೆಗೆ, ಯಾವ ರಾಶಿಯವರು ಜಾಗರೂಕತೆಯಿಂದ ಇರಬೇಕು, ಮುಂದೆ ಓದಿ..

 ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಇವರ ಭವಿಷ್ಯ ನಿಜವಾಗಲಿಲ್ಲ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಇವರ ಭವಿಷ್ಯ ನಿಜವಾಗಲಿಲ್ಲ

ದೇಶಾದ್ಯಂತ ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುತ್ತೆ ಎನ್ನುವ ವಿಚಾರದಲ್ಲೂ ಕೆ.ಎಂ.ಸಿನ್ಹಾ ಜ್ಯೋತಿಷ್ಯ ನುಡಿದಿದ್ದರು. ಆಗಸ್ಟ್ 25ರ ಸುಮಾರಿಗೆ ಶೈಕ್ಷಣಿಕ ಸಂಸ್ಥೆಗಳು ತೆರೆಯಬಹುದು ಎನ್ನುವ ಭವಿಷ್ಯವನ್ನು ಇವರು ನುಡಿದಿದ್ದರು. ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಲಿವೆ ಎನ್ನುವ ಮಾತನ್ನು ಸಿನ್ಹಾ ನುಡಿದಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಇವರ ಭವಿಷ್ಯ ನಿಜವಾಗಿರಲಿಲ್ಲ.

 ತುಲಾ ರಾಶಿಯವರು ಮುಂದಿನ ಹತ್ತು ದಿನ ಜಾಗರೂಕತೆಯಿಂದ ಇರಬೇಕು

ತುಲಾ ರಾಶಿಯವರು ಮುಂದಿನ ಹತ್ತು ದಿನ ಜಾಗರೂಕತೆಯಿಂದ ಇರಬೇಕು

ಕೆ.ಎಂ.ಸಿನ್ಹಾ ನುಡಿದ ಜ್ಯೋತಿಷ್ಯದ ಪ್ರಕಾರ ತುಲಾ ರಾಶಿಯವರು ಮುಂದಿನ 10-12 ದಿನ ಜಾಗರೂಕತೆಯಿಂದ ಇರಬೇಕು. ಜನ್ಮ ನಕ್ಷತ್ರದ ಬಗ್ಗೆ ಗೊತ್ತಿಲ್ಲದಿದ್ದವರಿಗೂ, ಗ್ರಹಗತಿಗಳ ಮುನ್ಸೂಚನೆ ಯಾವುದಾದರು ರೂಪದಲ್ಲಿ ಎದುರಾಗಲಿದೆ. ಈ ರಾಶಿಯ ಲಗ್ನದ ರಾಶಿಯು ನೀಚರಾಶಿಗೆ ಪ್ರವೇಶಿಸುತ್ತಿರುವುದರಿಂದ, ಏನಾದರೂ ಒತ್ತಡ, ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಈ ರಾಶಿಯವರು ಬುಧರಾಶಿಯ ಬೀಜಮಂತ್ರವನ್ನು ಪಠಿಸಿದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಸಿನ್ಹಾ ವ್ಯಕ್ತ ಪಡಿಸಿದ್ದಾರೆ.

 ವೃಷಭ ರಾಶಿ, ಈ ರಾಶಿಯವರೂ ಕೂಡಾ ಆಗಸ್ಟ್ 26ರವರೆಗೆ ಎಚ್ಚರ

ವೃಷಭ ರಾಶಿ, ಈ ರಾಶಿಯವರೂ ಕೂಡಾ ಆಗಸ್ಟ್ 26ರವರೆಗೆ ಎಚ್ಚರ

ಇನ್ನೊದು ರಾಶಿಯೆಂದರೆ ಅದು ವೃಷಭ ರಾಶಿ, ಈ ರಾಶಿಯವರೂ ಕೂಡಾ ಆಗಸ್ಟ್ 26ರವರೆಗೆ ಎಚ್ಚರದಿಂದ ಇರಬೇಕು. ಲಗ್ನ ಶುಕ್ರ ರಾಶಿಯ ನೀಚ ಕುಂಡಲಿಯನ್ನು ಇರುವುದರಿಂದ ತೊಂದರೆಯಾಗಲಿದೆ. ಈ ಸಮಯದಲ್ಲಿ ಅಪಘಾತ, ಕಿಡ್ನಿಗೆ ಸಂಬಂಧ ಪಟ್ಟಂತಹ ಕಾಯಿಲೆಗಳು ಎದುರಾಗಬಹುದು. ಈ ಸಮಯದಲ್ಲಿ ದೇಶಕ್ಕೂ ಯಾವುದಾದರೂ ಸಮಸ್ಯೆ (ಪ್ರಾಕೃತಿಕ ವಿಕೋಪ) ಎದುರಾಗಲಿದೆ. ಈ ರಾಶಿಯವರು ಕೂಡಾ ಬುಧರಾಶಿಯ ಬೀಜಮಂತ್ರವನ್ನು ಪಠಿಸಿದರೆ, ಎದುರಾಗುವ ತೊಂದರೆಯನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.

Recommended Video

    ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada
     ಈ ಸಮಯದಲ್ಲಿ ಸಿಂಹ ರಾಶಿಯವರಿಗೂ ತೊಂದರೆಯಾಗಲಿದೆ

    ಈ ಸಮಯದಲ್ಲಿ ಸಿಂಹ ರಾಶಿಯವರಿಗೂ ತೊಂದರೆಯಾಗಲಿದೆ

    ಇನ್ನು, ಈ ಸಮಯದಲ್ಲಿ ಸಿಂಹ ರಾಶಿಯವರಿಗೂ ತೊಂದರೆಯಾಗಲಿದೆ. ನೌಕರಿಯಲ್ಲಿ ತೊಂದರೆ, ಆಸ್ತಿ ಕರುಗುವುದು, ನಿರಾಶಕ್ತಿ, ಮಾನಸಿಕ ಹಿಂಸೆ ಮುಂತಾದವುಗಳನ್ನು ಎದುರಿಸಬೇಕಾಗಿ ಬರಬಹುದು. ಶುಕ್ರ ನೀಚರಾಶಿ, ಬುಧ ಉಚ್ಚ ಸ್ಥಾನಕ್ಕೆ ಹೋಗಲಿದ್ದಾನೆ. ಹಾಗಾಗಿ, ಈ ರಾಶಿಯವರು ಆದಿತ್ಯ ಹೃದಯ ಮಂತ್ರದ ಜೊತೆಗೆ, ವಿಘ್ನ ನಿವಾರಕ ಗಣೇಶನ ಪ್ರಾರ್ಥನೆಯನ್ನು ಮಾಡಲಿ ಎಂದು ಕೆ.ಎಂ.ಸಿನ್ಹಾ ಸಲಹೆಯನ್ನು ನೀಡಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+